ಸಂಧ್ಯಾ ರವೀಂದ್ರನಾಥ್‌ಹಗಲು ಇರುಳ ಮಿಲನದಲಿಬೆಳಕು ನೆರಳಿನಾಟದಲಿಬಾನಂಚಲಿ ಮುಗಿಲ ಸರವರಂಗೇರಿಸಿತ್ತು ..... ಸಂಜೆಹಕ್ಕಿ ಹಾಡ ಚಿಲಿಪಿಲಿಯಲಿತಂಗಾಳಿಯ ಜೋಗುಳದಲಿಇಣುಕಿ ಕೆಣಕುವ ತಾರೆಗಳಮಿನುಮಿನುಗಿಸಿತ್ತು..... ಸಂಜೆಮಿಂಚುವ ಕಣ್ಣಂಚಿನಲಿಮುಂಗುರುಳ ಕಚಗುಳಿಯಲಿಪ್ರಿಯತಮೆಯ ಕೆನ್ನೆಗಳನುಕೆಂಪೇರಿಸಿತ್ತು..... ಸಂಜೆನಲ್ಲನ ಸಾನಿಧ್ಯದಲಿನಲ್ಮೆಯ ಪಿಸುಮಾತಿನಲಿನವನವೀನ ಭಾವನೆಗಳಮತ್ತೇರಿಸಿತ್ತು..... ಸಂಜೆಮರೆಯಲಾರದ ಆ ಸಂಜೆ
- ಸಂಧ್ಯಾ ರವೀಂದ್ರನಾಥ್
ಬೆಳಕು ನೆರಳಿನಾಟದಲಿ
ಬಾನಂಚಲಿ ಮುಗಿಲ ಸರವ
ರಂಗೇರಿಸಿತ್ತು ..... ಸಂಜೆ
ಹಕ್ಕಿ ಹಾಡ ಚಿಲಿಪಿಲಿಯಲಿ
ತಂಗಾಳಿಯ ಜೋಗುಳದಲಿ
ಇಣುಕಿ ಕೆಣಕುವ ತಾರೆಗಳ
ಮಿನುಮಿನುಗಿಸಿತ್ತು..... ಸಂಜೆ
ಮಿಂಚುವ ಕಣ್ಣಂಚಿನಲಿ
ಮುಂಗುರುಳ ಕಚಗುಳಿಯಲಿ
ಪ್ರಿಯತಮೆಯ ಕೆನ್ನೆಗಳನು
ಕೆಂಪೇರಿಸಿತ್ತು..... ಸಂಜೆ
ನಲ್ಲನ ಸಾನಿಧ್ಯದಲಿ
ನಲ್ಮೆಯ ಪಿಸುಮಾತಿನಲಿ
ನವನವೀನ ಭಾವನೆಗಳ
ಮತ್ತೇರಿಸಿತ್ತು..... ಸಂಜೆ
ಮರೆಯಲಾರದ ಆ ಸಂಜೆ












Click it and Unblock the Notifications