ನವ ಯುಗ ಬೇವು ಬೆಲ್ಲದ ಸಿಹಿಯ ಸವಿಯೆ ಬಂತು ಉಗಾದಿ

kannada poem by Vani Aravind
ಬೇವು ಬೆಲ್ಲದ ಸಿಹಿಯ ಸವಿಯೆ ಬಂತು ಉಗಾದಿ
ನವ ವರುಷದ ಹರುಷ ಮನೆಗೆ ತಂತು ಉಗಾದಿ
ನವ ವರುಷ ಹೊಸ ಹರುಷ ತಂತು ಉಗಾದಿ
ಬನ್ನಿ ನಮಗಾಗಿ ಕಾದಿದೆ ಹೊಸ ಹಾದಿ

ಮಾಮರದಿ ಕುಳಿತು ಉಲಿವ ಕೋಗಿಲೆಯ ದನಿಯು
ಅದಕಿಲ್ಲ ಸಕ್ಕರೆಯ ಸಿಹಿಯು ಕೂಡ ಸಾಟಿಯು
ಕುಹೂ ಕುಹೂ ಸ್ವರ ಮಾಧುರ್ಯಕೆ ಸೋತ ಮನವು
ನಕ್ಕಿತೊಮ್ಮೆ, ಮನದಾಳದ ದುಗುಡವಾಯ್ತು ಮಾಯವು

ಪ್ರೀತಿಯೆಂಬ ಬೆಲ್ಲವ ಎಲ್ಲರಿಗೂ ಹಂಚುವ
ದ್ವೇಷವೆಂಬ ಕಹಿಯ ಇಂದೇ ಕಿತ್ತು ಒಗೆಯುವ
‘‘ಬಾಳ ದಾರಿಯಲ್ಲಿ ಕಲ್ಲು ಮುಳ್ಳುಗಳಿವೆ'' ಅರಿಯುವ
ಎಲ್ಲವನ್ನು ಧೈರ್ಯ-ಸ್ಥೈರ್ಯದಿಂದ ಸ್ವೀಕರಿಸುವ

ಪರರಿಗೆ ನಮಗಾದಷ್ಟು ಮಾಡುವ ಸಹಾಯ
ಅದಕಿಂತ ಮಿಗಿಲಾದುದಿಲ್ಲ ಬೇರೆ ಕಾಯ
ಪ್ರತಿಫಲದ ನಿರೀಕ್ಷೆಯು ಎಂದಿಗೂ ಅನ್ಯಾಯ
ಈ ಸತ್ಯವನರಿಯೆ ಎಲ್ಲ ಚಿಂತೆಯೂ ಮಾಯ
ದಿ ಈ ಪಣವ ತೊಡುವುದೇ ನ್ಯಾಯ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+