‘ಕಾವೇರಿ’ಯಲ್ಲಿ ಯುಗಾದಿ ಕಾರ್ಯಕ್ರಮ ಏಪ್ರಿಲ್‌ 8ಕ್ಕೆ

ವಾಷಿಂಗ್ಟನ್‌ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘದ ಯುಗಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ಏಪ್ರಿಲ್‌ 8ರಂದು ಸಂಜೆ ನಡೆಯಲಿವೆ. ಮಾದೇಶ್‌ ಬಸವರಾಜು ನೇತೃತ್ವದ ಹೊಸ ಸಮಿತಿಯು ಸಂಕ್ರಾಂತಿ ಹಬ್ಬದ ಅಭೂತಪೂರ್ವ ಯಶಸ್ಸಿನ ಕಾರ್ಯಕ್ರಮದ ನಂತರ ಇದೀಗ ಇನ್ನೊಂದು ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಲು ಸರ್ವಸಿದ್ಧತೆಗಳನ್ನು ನಡೆಸಿದೆ.

ಸಾಂಪ್ರದಾಯಿಕ ಬೇವುಬೆಲ್ಲ ವಿತರಣೆಯಾಂದಿಗೆ ಆರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ಸಂಗೀತ, ನೃತ್ಯ ಕಾರ್ಯಕ್ರಮಗಳು, ಯಕ್ಷಗಾನ, ಭರತನಾಟ್ಯ, ಕೋಲಾಟ, ಮಕ್ಕಳಿಂದ ವಿವಿಧ ವಿನೋದಾವಳಿ ಕಾರ್ಯಕ್ರಮಗಳಷ್ಟೇ ಅಲ್ಲದೆ ಕೊನೆಯಲ್ಲಿ ವಿಶೇಷ ಹಬ್ಬದೂಟದ ಆಕರ್ಷಣೆಗಳಿವೆ.

ಯುಗಾದಿ ಕಾರ್ಯಕ್ರಮದಲ್ಲಿ ಈ ಸಲ ಮಕ್ಕಳಿಗೆ ಮತ್ತು ಹಿರಿಯರಿಗೆ ಸಹ ಪ್ರತಿಭಾಪ್ರದರ್ಶನದ ಸ್ಪರ್ಧೆಗಳಿರುವುದು ಒಂದು ವಿಶೇಷ. ಎಲಿಮೆಂಟರಿ, ಮಿಡ್ಲ್‌ಸ್ಕೂಲ್‌ ಮತ್ತು ಹೈಸ್ಕೂಲ್‌ ವಯೋಮಾನವರ್ಗದಲ್ಲಿ ಮಕ್ಕಳಿಗೆ ಚಿತ್ರಕಲೆ, ಕವನರಚನೆ ಮತ್ತು ಪ್ರಬಂಧ ಸ್ಪರ್ಧೆಗಳಿವೆ. ಹಿರಿಯರಿಗೆ ‘ಆಶುಭಾಷಣ’ ಸ್ಪರ್ಧೆ ಇದ್ದು ಇದೊಂದರಿಂದಲೇ ಕಾರ್ಯಕ್ರಮದಲ್ಲಿನ ಮನರಂಜನೆ ದುಪ್ಪಟ್ಟುಗೊಳ್ಳುವ ನಿರೀಕ್ಷೆಯಿದೆ!

ಕಾರ್ಯಕ್ರಮದಲ್ಲಿ ಭಾಗವಹಿಸಿ ಯುಗಾದಿ ಸಡಗರವನ್ನು ಹೆಚ್ಚಿಸಿಕೊಳ್ಳುವ ಸಭಿಕರಿಗೆ ಅದೃಷ್ಟ ಬಹುಮಾನ ಯೋಜನೆಯೂ ಇದೆ. ರ್ಯಾಫ‚ಲ್‌ ಟಿಕೆಟ್‌ ವಿಜೇತರಾದ ಮೊದಲ ಇಬ್ಬರಿಗೆ ಮುಂಬರುವ ಸಪ್ಟೆಂಬರ್‌ ನಲ್ಲಿ ಜರುಗಲಿರುವ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ದ ನೋಂದಣಿ ಉಚಿತ! ರ್ಯಾಫ‚ಲ್‌ ಟಿಕೆಟ್‌ ಡ್ರಾದಲ್ಲಿ 3ನೇ ಮತ್ತು 4ನೇ ವಿಜೇತರಿಗೆ ಫ‚ಾ್ಯಮಿಲಿ ಬುಫ‚ೆ ಲಂಚ್‌ ಕೂಪನ್‌ ಬಹುಮಾನವೂ ಇದೆ! ಅಂತೂ ವ್ಯಯ ನಾಮ ಸಂವತ್ಸರ ಯುಗಾದಿಹಬ್ಬವು ಈ ಅದೃಷ್ಟಶಾಲಿಗಳಿಗೆ ಲಾಭದಾಯಕವಾಗಲಿದೆ.

ಕಾರ್ಯಕ್ರಮ ನಡೆವ ಸ್ಥಳ, ಸಮಯ ಇತ್ಯಾದಿಯನ್ನು ಗಮನಿಸಿಟ್ಟುಕೊಳ್ಳಿ. ನೀವೆಲ್ಲರೂ ಬನ್ನಿ, ನಿಮ್ಮ ಮಿತ್ರರೆಲ್ಲರನ್ನೂ ಕರೆದುಕೊಂಡುಬನ್ನಿ.

ಸ್ಥಳ : Blair High School; 51 University Blvd East, Silver Spring MD 20901

ಸಮಯ : ಸಂಜೆ 4ರಿಂದ ರಾತ್ರೆ 9ರವರೆಗೆ

ಪ್ರವೇಶಶುಲ್ಕ :
ಸದಸ್ಯರಾಗಿರುವವರಿಗೆ : ವಯಸ್ಕರಿಗೆ ತಲಾ 10 ಡಾಲರ್‌; ಮಕ್ಕಳಿಗೆ ತಲಾ 6 ಡಾಲರ್‌
ಸದಸ್ಯರಾಗಿಲ್ಲದವರಿಗೆ : ವಯಸ್ಕರಿಗೆ ತಲಾ 15 ಡಾಲರ್‌; ಮಕ್ಕಳಿಗೆ ತಲಾ 10 ಡಾಲರ್‌

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :

ಮಾದೇಶ್‌ ಬಸವರಾಜು (ಅಧ್ಯಕ್ಷರು); ದೂರವಾಣಿ: 703-542-8595
ಅನಿತಾ ಕುಲಕರ್ಣಿ (ಕಾರ್ಯದರ್ಶಿ ಮತ್ತು ಕಾರ್ಯಕ್ರಮ ಪ್ರಬಂಧಕರು); ದೂರವಾಣಿ: 301-251-0344
ಶ್ರೀನಿವಾಸ ಗೌಡ (ಕಾರ್ಯಕ್ರಮಪ್ರಬಂಧಕರು); ದೂರವಾಣಿ: 301-694-0758

ಅಂತರ್ಜಾಲ ತಾಣ : http://www.kaveri-usa.org/

ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+