ಯುಗಾದಿ : ಬರಿಯ ಹಾದಿಯಲ್ಲವಿದು!

ಹೊಸ ಯುಗಾದಿ ಬಂದಿತ್ತು
ಗೊಂಚಲು ಗೊಂಚಲು
ಬೇವಿನ ಹೂವಲಿ
ಕುಸುರನು ಒಡೆದಿತ್ತು
ಘಮ ಘಮ ಕಂಪನು ಸೂಸಿತ್ತು !
ಹೊಸ ಯುಗಾದಿ ಬಂದಿತ್ತು !
ಬಣ್ಣ ಬಣ್ಣದ
ಮಾಮರದೊಡಲಲಿ
ತಳಿರು ಚಿಗುರಿತ್ತು
ಹಚ್ಚನೆ ಹಸಿರನು ಸುರಿದಿತ್ತು!
ಹೊಸ ಯುಗಾದಿ ಬಂದಿತ್ತು !
ಕೋಗಿಲೆ ಕಂಠಕೆ
ಪಂಚಮ ಸ್ವರದ
ಇಂಚರ ತುಂಬಿತ್ತು
ಗಾನದ ಇಂಪನು ಹೊಮ್ಮಿತ್ತು !

Yugadi : Bariya Hadiyallavidu Poem by Chandra Gowda

ಹೊಸ ಯುಗಾದಿ ಬಂದಿತ್ತು !
ಮೆಲ್ಲುಲಿ ಮಾತಿನ
ಗಿಳಿಗಳ ಬಳಗಕೆ
ಮಧುವನು ಸವರಿತ್ತು
ಸವಿನುಡಿ ಜೇನನು ಸುರಿಸಿತ್ತು !
ಹೊಸ ಯುಗಾದಿ ಬಂದಿತ್ತು !
ಗುಂಯ್‌ ಗುಂಯ್‌ ಗುಡುವ
ಭೃಂಗ ನಿನಾದಕೆ
ಅಮೃತ ಬೆರಸಿತ್ತು
ಬೆಡಗಿನ ಸುಧೆಯನು ಹರಸಿತ್ತು !
ಹೊಸ ಯುಗಾದಿ ಬಂದಿತ್ತು !
ಪ್ರಕೃತಿ ಪುರುಷ
ಪ್ರೇಮಿಗಳೆದೆಯಲಿ
ಪ್ರೀತಿಯ ಬೆಸೆದಿತ್ತು
ಭಾವೋನ್ಮಾದವ ಚಿಮ್ಮಿತ್ತು!
ಹೊಸ ಯುಗಾದಿ ಬಂದಿತ್ತು !
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+