Video: ಹೊಗೆ ಅಂಟಿದ ಗೋಡೆಗೆ ಹಾಕಿ ಸೋನ್‌ಪಾಪಡಿ ತಯಾರಿ... ಸ್ವೀಟ್ ಖರೀದಿ ಮಾಡೋ ಸರದಾರರೇ ಈ ವಿಡಿಯೋ ನೋಡಿ...

ಹಬ್ಬ ಬಂತು ಮನೆ ಕೆಲಸಗಳು ಜಾಸ್ತಿ. ಅಡುಗೆ ಮಾಡೋದು ಕಷ್ಟ. ಹಬ್ಬದ ಸಿಹಿ ತಯಾರಿಸುವುದಂತೂ ಇನ್ನೂ ದೊಡ್ಡ ಕಷ್ಟ. ಹೀಗಾಗಿ ಹೊರಗಡೆ ಸಿಹಿ ತಿಂಡಿಗಳನ್ನು ಖರೀದಿ ಮಾಡಿ ತಂದ್ರೆ ಆಯ್ತು ಅಂತ ಯಾರೆಲ್ಲಾ ಅಂದುಕೊಂಡಿದಿರೋ ಅವರೆಲ್ಲಾ ಈ ವಿಡಿಯೋವನ್ನ ನೋಡಲೇಬೇಕು. ಯಾಕೆಂದರೆ ನೀವು ಹೊರಗಡೆ ಖರೀದಿ ಮಾಡಿ ತರುವ ಸಿಹಿ ತಿಂಡಿಗಳ ಗುಣಮಟ್ಟ ಹಾಗೂ ಅದನ್ನು ತಯಾರಿಸುವ ರೀತಿ ನೋಡಿಬಿಟ್ಟರೆ, ಗೃಹಿಣಿಯರು ಹಬ್ಬ ಮಾಡದೇ ಇದ್ದರೂ ಪರವಾಗಿಲ್ಲ, ಹೊರಗಡೆ ತಿಂಡಿಗಳು ಬೇಡವೇ ಬೇಡ ಅಂದುಬಿಡ್ತೀರಾ...

ಹೌದು... ದೀಪಾವಳಿ ಹಬ್ಬಕ್ಕಾಗಿ ಮಾರುಕಟ್ಟೆಗಳಲ್ಲಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಬಗೆ ಬಗೆಯ ಬಣ್ಣ ಹಾಗೂ ಆಕಾರದ ಸಿಹಿ ಖಾದ್ಯಗಳು ಮಾರುಕಟ್ಟೆಯಲ್ಲಿ ನೋಡುಗರನ್ನು ಆಕರ್ಷಿಸುತ್ತಿವೆ. ಹೀಗೆ ನೋಡುಗರ ಗಮನ ಸೆಳೆಯುತ್ತಿರುವ ಸಿಹಿ ಖಾದ್ಯಗಳನ್ನು ಹೇಗೆ ತಯಾರಿಸುತ್ತಾರೆ ಅನ್ನೋದನ್ನು ನೀವು ಎಂದಾದರೂ ಯೋಚನೆ ಮಾಡಿದ್ದೀರಾ? ಮಾಡಿಲ್ಲ ಅಂತಾದರೆ ಈ ವಿಡಿಯೋವನ್ನು ನೀವು ನೋಡಲೇಬೇಕು.

Soan Papdi making video goes viral in social media watch this video before purchase diwali sweets

ಸಾಮಾಜಿಕ ಜಾಲತಾಣದಲ್ಲಿ ಸೋನ್‌ಪಾಪಡಿ ತಯಾರಿಸುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನ ದಂಗಾಗಿ ಹೋಗಿದ್ದಾರೆ. ಹೀಗೆಲ್ಲಾ ಸೋನ್‌ಪಾಪಡಿ ತಯಾರಿಸುತ್ತಾರಾ ಅಂತ ಬೆರಗಾಗಿ ಅಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ಆ ವೈರಲ್ ವಿಡಿಯೋದಲ್ಲಿ ಏನಿದೆ ಅನ್ನೋದನ್ನು ನೀವು ಒಂದು ಬಾರಿ ನೋಡಿಬಿಡಿ.

ಸೋನ್ ಪಾಪ್ಡಿ ಮೇಕಿಂಗ್ ವಿಡಿಯೋ...

ವೀಡಿಯೊ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ದೃಢಪಟ್ಟಿಲ್ಲ. ಆದರೆ ಇದು ಸೋನ್ ಪಾಪ್ಡಿ ಮೇಕಿಂಗ್ ವಿಡಿಯೋ ಎಂಬುದು ಕ್ಲಿಪ್ ನಿಂದ ಸ್ಪಷ್ಟವಾಗಿದೆ. ಈ ಸೋನ್‌ಪಾಪಡಿ ತಯಾರಿಸುವವರನ್ನು ಒಮ್ಮೆ ನೋಡಿ. ಜೊತೆಗೆ ಆ ಸ್ಥಳವನ್ನೂ ಕೂಡ ಒಮ್ಮೆ ಗಮನಿಸಿ. ಯಾಕೆಂದರೆ ಇವರು ಸೋನ್‌ಪಾಪಡಿ ತಯಾರಿಸಲು ಅದ್ಯಾವ ವಸ್ತು ಬಳಕೆ ಮಾಡ್ತಾರೋ ಗೊತ್ತಿಲ್ಲ. ಆದರೆ ಈ ವಿಡಿಯೋದಲ್ಲಿ ಮಾತ್ರ ದೊಡ್ಡ ಹೆಂಚಿನಲ್ಲಿ ಯಾವುದೋ ಮಿಶ್ರಣ ಕಲಿಸುವುದರಿಂದ ವಿಡಿಯೋ ಆರಂಭವಾಗುತ್ತದೆ. ನಂತರ ಅದಕ್ಕೆ ಎಣ್ಣೆಯಂತಹ ಪದಾರ್ಥ ಹಾಕಲಾಗುತ್ತದೆ.

ಇದಾದ ಬಳಿಕ ಕ್ಲಿಪ್‌ನಲ್ಲಿ ನಮಗೆ ಕಾಣಿಸುವುದು ಒಬ್ಬ ವ್ಯಕ್ತಿ ಹೊಗೆ ಅಂಟಿದ ಗೋಡೆಗೆ ಆ ಮಿಶ್ರಣವನ್ನು ಹಾಕಿ ಮಡಚಿ ಮಡಚಿ ಎಳೆಯುತ್ತಾನೆ. ನಂತರ ನಾಲ್ಕು ಜನರು ಅದನ್ನು ಸರಿಯಾಗಿ ಬೆರೆಸುತ್ತಾರೆ. ತಯಾರಾದ ಹಿಟ್ಟನ್ನು ಕಬ್ಬಿಣದ ತಟ್ಟೆಯಲ್ಲಿ ಹಾಕಲಾಗುತ್ತದೆ. ಅದು ಸೋನ್‌ಪಾಪಡಿಯ ಆಕಾರವನ್ನು ನೀಡುತ್ತದೆ.

ನಂತರ ಆ ತಟ್ಟೆಯ ಮೇಲೆ ಒಂದು ಹಾಳೆಯನ್ನು ಹರಡಿ ಅದರ ಮೇಲೆ ಇನ್ನೊಂದು ತಟ್ಟೆಯನ್ನು ಇಡಲಾಗುತ್ತದೆ. ಇಬ್ಬರು ಅದರ ಮೇಲೆ ಹತ್ತಿ ನಿಂತು ಕಾಲಿನಿಂದ ತುಳಿಯುತ್ತಾರೆ. ಸೋನ್‌ಪಾಪಡಿ ಸಂಪೂರ್ಣವಾಗಿ ಸಾದಾ ಆಕಾರದಲ್ಲಿ ಬಂದಾಗ, ಅದನ್ನು ಕತ್ತರಿಸಿ ತುಂಡುಗಳಾಗಿ ಬೇರ್ಪಡಿಸಲಾಗುತ್ತದೆ. ಬಳಿಕ ಅದನ್ನು ನೈಸರ್ಗಿಕವಾಗಿ ಮಾರಾಟ ಮಾಡಲು ಮಾರುಕಟ್ಟೆಗೆ ಕಳುಹಿಸಲಾಗುತ್ತದೆ.

ದೀಪಾವಳಿಯ ನೆಚ್ಚಿನ ಸಿಹಿ...

@avijeet_writes ಎಂಬ ಬಳಕೆದಾರರು X ಪ್ಲಾಟ್‌ಫಾರ್ಮ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. 'ದೀಪಾವಳಿಯ ನೆಚ್ಚಿನ ಸಿಹಿ ಮತ್ತು ಪ್ರತಿ ಕಚೇರಿಯಲ್ಲಿ ಇದನ್ನು ನೀಡಲಾಗಿದೆ' ಎಂದು ಅವರು ಬರೆದಿದ್ದಾರೆ. ಈ ವೀಡಿಯೊ 6.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2.5 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಕಾಮೆಂಟ್ ವಿಭಾಗದಲ್ಲಿ ನೂರಾರು ಜನರು ಈ ವೀಡಿಯೊಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ನೆಟ್ಟಿಗರ ಕಾಮೆಂಟ್ ಹೀಗಿದೆ...

''ಇದರಲ್ಲಿ ತಪ್ಪೇನು...'' ಕೆಲವು ಬಳಕೆದಾರರಿಗೆ ಈ ವೀಡಿಯೊದಲ್ಲಿ ಆಕ್ಷೇಪಾರ್ಹವಾದುದೇನೂ ಕಂಡುಬರುವುದಿಲ್ಲ. ಇನ್ನೂ ಕೆಲವರು ಸೋನ್ ಪಾಪಡಿಯನ್ನು ಅತ್ಯಂತ ಅನೈರ್ಮಲ್ಯದಿಂದ ತಯಾರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ಕೆಲವರು ನಾವು ಸೋನ್‌ಪಾಪಡಿಯನ್ನು ತಿನ್ನುವುದೇ ಇಲ್ಲ ಎಂದಿದ್ದಾರೆ.

ಒಬ್ಬರು ಕಾಮೆಂಟ್ ಹೀಗಿದೆ - 'ಇದನ್ನು ನೋಡಿದ ನಂತರ, ಈ ವರ್ಷ ದೀಪಾವಳಿಯಲ್ಲಿ ಸೋನ್‌ಪಾಪಡಿ ಮಾರಾಟ ಕಡಿಮೆಯಾಗುತ್ತದೆ. ನೀನು ಹೀಗೆ ಮಾಡಬಾರದಿತ್ತು' ಎಂದು ಕಾಮಿಡಿ ಕಾಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+