2022: ಶ್ರಾವಣ, ಭಾದ್ರಪದ, ಕಾರ್ತಿಕದ ಹಬ್ಬಗಳ ಪಟ್ಟಿ
ಸತತ ಎರಡು ವರ್ಷಗಳ ಕೋವಿಡ್ ಹಾವಳಿಯ ನಂತರ, ಜನಜೀವನ ಮತ್ತೆ ಹಳಿಗೆ ಬರುತ್ತಿದೆ. ಸರಕಾರದ ನಿರ್ಬಂಧದಿಂದಾಗಿ ಯಾವುದೇ ಹಬ್ಬಗಳಾಗಲಿ, ಜಾತ್ರೆಯಾಗಲಿ ಹಿಂದಿನಂತೆ ಈ ಎರಡು ವರ್ಷಗಳಲ್ಲಿ ಕಳೆಕಟ್ಟಿರಲಿಲ್ಲ.
ಈಗ, ಯಾವುದೇ ನಿರ್ಬಂಧ (ಮಾಸ್ಕ್ ಹೊರತು ಪಡಿಸಿ) ಇಲ್ಲದೇ ಇರುವುದರಿಂದ ಹಬ್ಬಗಳು ಜೋರಾಗಿಯೇ ನಡೆಯುವುದು ನಿಸ್ಸಂಸಯ. ಇದೇ ಬರುವ ಗುರುವಾರ (ಜುಲೈ 28) ಭೀಮನ ಅಮಾವಾಸ್ಯೆ. ಇದರ ಮರುದಿನದಿಂದ ಶ್ರಾವಣ ಮಾಸಾರಂಭ.
ಶ್ರಾವಣ ಮಾಸ ಆರಂಭವಾಯಿತು ಎಂದರೆ, ಸಾಲುಸಾಲು ಹಬ್ಬಗಳ ಸರಮಾಲೆಯೇ ಆರಂಭವಾಗುತ್ತದೆ. ಕೊರೊನಾದಿಂದ ಜರ್ಝರಿತಗೊಂಡಿರುವ ಕೆಲವು ಉದ್ಯಮಗಳು ಹಬ್ಬದ ಸೀಸನ್ ಗಳಿಂದ ಮತ್ತೆ ವಹಿವಾಟು ಹೆಚ್ಚುವ ಲೆಕ್ಕಾಚಾರದಲ್ಲಿದೆ.

2022ರ ಶ್ರಾವಣ, ಭಾದ್ರಪದ ಮತ್ತು ಕಾರ್ತಿಕ ಮಾಸದಲ್ಲಿ ಬರುವ ಹಬ್ಬ, ಹರಿದಿನ, ರಜಾ ಪಟ್ಟಿ ಈ ಕೆಳಗಿನಂತಿದೆ, ಓದಿ, ಬುಕ್ ಮಾರ್ಕ್ ಮಾಡಿಕೊಳ್ಳಿ. ಎಲ್ಲಾ ಹಬ್ಬಕ್ಕೂ ಮುಂಗಡ ಶುಭಾಶಯಗಳು ಮತ್ತು ಹ್ಯಾಪಿ ಹಾಲಿಡೇಸ್.
| ಶ್ರಾವಣ-ಭಾದ್ರಪದ ಮಾಸದ ರಜೆ ದಿನಗಳು-2022 | |||
|---|---|---|---|
| ದಿನಾಂಕ | ದಿನ | ಹಬ್ಬ | ಯಾವ ರೀತಿ ರಜೆ |
| ಜುಲೈ 28 | ಗುರುವಾರ | ಭೀಮನ ಅಮಾವಾಸ್ಯೆ, ಆಟಿ ಅಮಾವಾಸ್ಯೆ | -- |
| ಜುಲೈ 29 | ಶುಕ್ರವಾರ | ಸಂಪತ್ ಶುಕ್ರವಾರ | -- |
| ಜುಲೈ 30, ಆಗಸ್ಟ್ 6, 13, 20 | ಶನಿವಾರ | ಶ್ರಾವಣ ಶನಿವಾರ | -- |
| ಜುಲೈ 31 | ಭಾನುವಾರ | ಮೊಹರಂ ಆರಂಭ, ಇಸ್ಲಾಮಿಕ್ ಹೊಸವರ್ಷಾರಂಭ | -- |
| ಆಗಸ್ಟ್ 2 | ಮಂಗಳವಾರ | ನಾಗರಪಂಚಮಿ, ಮಂಗಳಗೌರೀ ವ್ರತ | -- |
| ಆಗಸ್ಟ್ 3 | ಬುಧವಾರ | ಕಲ್ಕಿ ಜಯಂತಿ, ಯಗುಪಾಕರ್ಮ | -- |
| ಆಗಸ್ಟ್ 4 | ಗುರುವಾರ | ತುಲಸೀದಾಸ ಜಯಂತಿ | -- |
| ಆಗಸ್ಟ್ 5 | ಶುಕ್ರವಾರ | ವರಮಹಾಲಕ್ಷ್ಮೀ ವ್ರತ | ನಿರ್ಬಂಧಿತ ರಜೆ |
| ಆಗಸ್ಟ್ 9 | ಮಂಗಳವಾರ | ಮೊಹರಂ | ಸರಕಾರಿ ರಜೆ |
| ಆಗಸ್ಟ್ 11 | ಗುರುವಾರ | ರಕ್ಷಾ ಬಂಧನ, ಯಜುರುಪಾಕರ್ಮ, ಹಯಗ್ರೀವ ಜಯಂತಿ | -- |
| ಆಗಸ್ಟ್ 13 | ಶನಿವಾರ | ಗುರು ಶ್ರೀರಾಘವೇಂದ್ರರ ಮಧ್ಯಾರಾಧನೆ | -- |
| ಆಗಸ್ಟ್ 15 | ಸೋಮವಾರ | ಸ್ವಾತಂತ್ರ್ಯ ದಿನಾಚರಣೆ | ಸಾರ್ವತ್ರಿಕ ರಜೆ |
| ಆಗಸ್ಟ್ 18 | ಗುರುವಾರ | ಶ್ರೀಕೃಷ್ಣ ಜನ್ಮಾಷ್ಟಮಿ | ನಿರ್ಬಂಧಿತ ರಜೆ |
| ಆಗಸ್ಟ್ 20 | ಶನಿವಾರ | ಉಡುಪಿ ವಿಟ್ಲಪಿಂಡಿ ಉತ್ಸವ | -- |
| ಆಗಸ್ಟ್ 30 | ಮಂಗಳವಾರ | ಗೌರೀತೃತೀಯಾ | ನಿರ್ಬಂಧಿತ ರಜೆ |
| ಆಗಸ್ಟ್ 31 | ಬುಧವಾರ | ಗಣೇಶ ಚತುರ್ಥಿ | ಸರಕಾರಿ ರಜೆ |
| ಸೆಪ್ಟಂಬರ್ 8 | ಗುರುವಾರ | ತಿರು ಓಣಂ, ಖುಗುಪಾಕರ್ಮ | -- |
| ಸೆಪ್ಟಂಬರ್ 9 | ಶುಕ್ರವಾರ | ಅನಂತ ಚತುರ್ದಶೀ, ನೋಂಪು, ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನ | -- |
| ಸೆಪ್ಟಂಬರ್ 25 | ಭಾನುವಾರ | ಸರ್ವಪಿತೃ ಅಮಾವಾಸ್ಯೆ, ಮಹಾಲಯ ಅಮಾವಾಸ್ಯೆ | -- |
| ಅಕ್ಟೋಬರ್ 2 | ಭಾನುವಾರ | ಗಾಂಧಿ ಜಯಂತಿ | -- |
| ಅಕ್ಟೋಬರ್ 4 | ಮಂಗಳವಾರ | ಮಹಾನವಮಿ, ಆಯುಧಪೂಜೆ | ಸರಕಾರಿ ರಜೆ |
| ಅಕ್ಟೋಬರ್ 5 | ಬುಧವಾರ | ವಿಜಯದಶಮಿ, ಮಧ್ವ ಜಯಂತಿ | ಸರಕಾರಿ ರಜೆ |
| ಅಕ್ಟೋಬರ್ 9 | ಭಾನುವಾರ | ವಾಲ್ಮೀಕಿ ಜಯಂತಿ, ಪ್ರವಾದಿ ಪೈಗಂಬರರ ಜನ್ಮದಿನ | -- |
| ಅಕ್ಟೋಬರ್ 24 | ಸೋಮವಾರ | ನರಕ ಚತುರ್ದಶಿ | ಸರಕಾರಿ ರಜೆ |
| ಅಕ್ಟೋಬರ್ 25 | ಮಂಗಳವಾರ | ದೀಪಾವಳಿ | -- |
| ಅಕ್ಟೋಬರ್ 26 | ಬುಧವಾರ | ಬಲಿಪಾಡ್ಯಮಿ, ಗೋಪೂಜೆ | ಸರಕಾರಿ ರಜೆ |
| ನವೆಂಬರ್ 1 | ಮಂಗಳವಾರ | ಕರ್ನಾಟಕ ರಾಜ್ಯೋತ್ಸವ | ಸಾರ್ವತ್ರಿಕ ರಜೆ |
| ನವೆಂಬರ್ 5 | ಶನಿವಾರ | ಉತ್ಠಾನ ದ್ವಾದಶಿ, ಉಡುಪಿ ಲಕ್ಷದೀಪೋತ್ಸವ ಆರಂಭ | -- |
| ನವೆಂಬರ್ 11 | ಶುಕ್ರವಾರ | ಕನಕದಾಸ ಜಯಂತಿ | ಸರಕಾರಿ ರಜೆ |
| ನವೆಂಬರ್ 14 | ಸೋಮವಾರ | ಮಕ್ಕಳ ದಿನಾಚರಣೆ, ನೆಹರೂ ಜಯಂತಿ | -- |












Click it and Unblock the Notifications