Get Updates
Get notified of breaking news, exclusive insights, and must-see stories!

Sharadiya Navratri 2023: ಒಂಬತ್ತು ದಿನ ದುರ್ಗೆಗೆ ಈ ನೈವೇದ್ಯಗಳನ್ನು ಮಾಡಿ

ಶಾರದೀಯ ನವರಾತ್ರಿ ಅಕ್ಟೋಬರ್ 15 ರಿಂದ ಪ್ರಾರಂಭವಾಗಲಿದೆ. ಹೀಗಾಗಿ ನವರಾತ್ರಿ ಹಬ್ಬದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ಬಾರಿ ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹೊಸತನವನ್ನು ತಂದಿದೆ. ಶಾರದೀಯ ನವರಾತ್ರಿಯು ಅಶ್ವಿನ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಈ ವರ್ಷ ಶಾರದೀಯ ನವರಾತ್ರಿಯು 15 ಅಕ್ಟೋಬರ್ ರಿಂದ 24 ಅಕ್ಟೋಬರ್ ರವರೆಗೆ ಆಚರಿಸಲಾಗುತ್ತದೆ.

ಈ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ನಾನಾ ರೂಪಗಳನ್ನು ಪೂಜಿಸಲಾಗುತ್ತದೆ. ಜೊತೆಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಹಾಗಾದರೆ ಈ ವಿಶೇಷ ದಿನಗಳಲ್ಲಿ ಯಾವ ದಿನ ಯಾವ ಪ್ರಸಾದ ಅಥವಾ ನೈವೇದ್ಯವನ್ನು ಮಾಡಿದರೆ ತುಂಬಾ ಒಳ್ಳೆಯದು ಎಂದು ತಿಳಿಯೋಣ.

sharadiya-navratri-2023

ಶಾರದೀಯ ನವರಾತ್ರಿ 2023: ಮೊದಲ ದಿನ

ಶಾರದೀಯ ನವರಾತ್ರಿ 15 ಅಕ್ಟೋಬರ್ 2023 ಭಾನುವಾರದಿಂದ ಆರಂಭವಾಗುತ್ತದೆ. ಈ ದಿನ ಘಟಸ್ಥಾಪನೆ ಮತ್ತು ದೇವಿ ಶೈಲಪುತ್ರಿ ಪೂಜೆ (Ghatasthapana and Maa Shailputri Puja) ಮಾಡಲಾಗುತ್ತದೆ. ದೇವಿಯು ತ್ರಿಶುಲ ಮತ್ತು ಕಮಲವನ್ನು ತನ್ನ ಕೈಯಲ್ಲಿ ಹಿಡಿದಿರುತ್ತಾಳೆ. ನಂದಿ ಎಂಬ ಗೂಳಿಯ ಮೇಲೆ ಸವಾರಿ ಮಾಡುತ್ತಾಳೆ. ಈ ದಿನ ಮಲ್ಲಿಗೆ ಹೂವುಗಳಿಂದ ಪೂಜಿಗೆ ಬಳಸಲಾಗುತ್ತದೆ. ಆಧುನಿಕ ರೀತಿಯಲ್ಲಿ ಶುದ್ಧ ದೇಸಿ ತುಪ್ಪದಿಂದ ಮಾಡಿದ ಸಕ್ಕರೆ ಪೊಂಗಲ್ ನೈವೇದ್ಯಕ್ಕೆ ತಯಾರಿಸಲಾಗುತ್ತದೆ.

sharadiya-navratri-2023

ಶಾರದೀಯ ನವರಾತ್ರಿ 2023: ಎರಡನೇ ದಿನ

ಅಕ್ಟೋಬರ್ 16 ಸೋಮವಾರ ಶಾರದೀಯ ನವರಾತ್ರಿಯ ಎರಡನೇ ದಿನವಾಗಿದೆ. ಈ ದಿನ ದೇವಿ ಬ್ರಹ್ಮಚಾರಿಣಿ ಪೂಜೆ (Brahmacharini Puja) ಯನ್ನು ಮಾಡಲಾಗುತ್ತದೆ. ಈ ದುರ್ಗ ದೇವಿಯನ್ನು ರಕ್ಷಣಾತ್ಮಕ ದೇವತೆಯೆಂದು ಸಹ ಪ್ರಶಂಸಿಸಲಾಗುತ್ತದೆ. ಈ ದಿನ ನಾನಾ ಬಗೆಯ ಹೂವಿಗಳಿಂದ ದೇವಿಗೆ ಪೂಜಿಸಿ ಮಾವು ಮತ್ತು ಹುಣಸೆ ಅನ್ನವನ್ನು ಸಾಂಪ್ರದಾಯಿಕವಾಗಿ ನೀಡಲಾಗುತ್ತದೆ. ಈ ರೀತಿ ಪೂಜಿಸುವುದರಿಂದ ಧಾನ್ಯಗಳು ವೃದ್ಧಿಯಾಗುತ್ತವೆ ಎಂಬ ನಂಬಿಕೆ ಇದೆ. ಈ ದೇವತೆ ತಪಸ್ಸು, ತ್ಯಾಗ ಮತ್ತು ಉದಾತ್ತತೆಯ ಸಂಕೇತವಾಗಿದ್ದಾಳೆ.

sharadiya-navratri-2023

ಶಾರದೀಯ ನವರಾತ್ರಿ 2023: ಮೂರನೇ ದಿನ

ಅಕ್ಟೋಬರ್ 17 ಮಂಗಳವಾರ ಶಾರದೀಯ ನವರಾತ್ರಿಯ ಮೂರನೇ ದಿನವಾಗಿದೆ ಈ ದಿನ ದೇವಿ ಚಂದ್ರಘಂಟಾ ದೇವಿಯ ಪೂಜೆ ( Chandraghanta Puja)ಯನ್ನು ಮಾಡಲಾಗುತ್ತದೆ. ಈ ದಿನ ಸಂಪಂಗಿ ಹೂವು ಮತ್ತು ತುಳಸಿ ಎಲೆಯಿಂದ ಪೂಜಿಸಲಾಗುತ್ತದೆ. ಹಲಸಿನ ಹಣ್ಣಿನಿಂದ ಅಥವಾ ಹಣ್ಣಿನಿಂದ ಮಾಡಿದ ಸಿಹಿ ತಿಂಡಿ, ಪಾಯಿಸ ಪ್ರಸಾಧವನ್ನು ಆಧುನಿಕ ರೀತಿಯಲ್ಲಿ ಅರ್ಪಿಸಲಾಗುತ್ತದೆ. ಈ ದೇವಿ ಉಗ್ರ ರೂಪ, ಹತ್ತು ತೋಳುಗಳ ದೇವಿಯಾಗಿದ್ದಾಳೆ.

ಶಾರದೀಯ ನವರಾತ್ರಿ 2023: ನಾಲ್ಕನೇ ದಿನ

ಅಕ್ಟೋಬರ್ 18 ಬುಧವಾರ ಶಾರದೀಯ ನವರಾತ್ರಿಯ ನಾಲ್ಕನೇ ದಿನವಾಗಿದೆ. ಈ ದಿನ ಕೂಷ್ಮಾಂಡ ದೇವಿಯ ಪೂಜೆ (Kushmanda Puja)ಯನ್ನು ಮಾಡಲಾಗುತ್ತದೆ. ಈ ದಿನ ದೇವಿಯನ್ನು ಜಾಜಿ ಮಲ್ಲಿಗೆ ಹೂವಿನಿಂದ ಪೂಜಿಸಲಾಗುತ್ತದೆ. ಅನ್ನದೊಂದಿಗೆ ಪೇರಲ ಹಣ್ಣನ್ನು ಸಾಂಪ್ರದಾಯಿಕವಾಗಿ ಅರ್ಪಿಸಲಾಗುತ್ತದೆ. ಈ ದೇವಿಯು ಶಕ್ತಿಯ ಸಂಕೇತವಾಗಿದ್ದಾಳೆ. ಉಗ್ರತೆಯ ಪ್ರತಿರೂಪ ಮತ್ತು ಆರ್ಧಯಾತ್ಮಿಕ ಶಕ್ತಿಯನ್ನು ಸೃಷ್ಟಿಸುತ್ತಾಳೆ. ಈ ದಿನ ಉಪವಾಸ ಮಾಡುವ ಮೂಲಕ ಜನ ದೇವಿಯನ್ನು ಪೂಜಿಸುತ್ತಾರೆ.

sharadiya-navratri-2023

ಶಾರದೀಯ ನವರಾತ್ರಿ 2023: ಐದನೇ ದಿನ

ಅಕ್ಟೋಬರ್ 19 ಗುರುವಾರ ಶಾರದೀಯ ನವರಾತ್ರಿಯ ಐದನೇ ದಿನವಾಗಿದೆ. ಈ ದಿನ ದೇವಿ ಸ್ಕಂದಮಾತೆಯ ಪೂಜೆ (Skandamata Puja) ಯನ್ನು ಮಾಡಲಾಗುತ್ತದೆ. ಈ ದೇವಿ ಒಂದು ಕೈಯಲ್ಲಿ ಕಮಲ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲು ಮತ್ತು ಗಂಟೆಯನ್ನು ಹೊಂದಿರುವ ನಾಲ್ಕು ತೋಳುಗಳ ದೇವತೆಯಾಗಿದ್ದಾಳೆ. ಈ ಪ್ರಶಾಂತ ದೇವತೆಗೆ ಪ್ರಸಾದವಾಗಿ ಬಾಳೆಯನ್ನು ನೀಡಲಾಗುತ್ತದೆ. ಮೊಸರು, ದಾಳಿಂಬೆ ಹಣ್ಣನ್ನು ಸಾಂಪ್ರದಾಯಿಕವಾಗಿ ನೈವೇದ್ಯ ನೀಡಲಾಗುತ್ತದೆ. ಈ ದಿನದಂದು ಸ್ಕಂದಮಾತೆಯಯನ್ನು ಭಕ್ತಿಯಿಂದ ಪೂಜಿಸಿದರೆ ಐಶ್ವರ್ಯವನ್ನು ನೀಡುತ್ತಾಳೆ ಎಂಬ ನಂಬಿಕೆಯಿದೆ.

ಶಾರದೀಯ ನವರಾತ್ರಿ 2023: ಆರನೇ ದಿನ

ಅಕ್ಟೋಬರ್ 20 ಶುಕ್ರವಾರ ಶಾರದೀಯ ನವರಾತ್ರಿಯ ಆರನೇ ದಿನವಾಗಿದೆ. ಈ ದಿನ ದೇವಿ ಕಾತ್ಯಾಯನಿ ಪೂಜೆ (Katyayani Puja)ಯನ್ನು ಮಾಡಲಾಗುತ್ತದೆ. ಈಕೆಯನ್ನು ಕೆಂಪು ಹೂವುಗಳು ಮತ್ತು ಶ್ರೀಗಂಧದ ಎಲೆಗಳಿಂದ ಪೂಜಿಸಲಾಗುತ್ತದೆ. ಅನ್ನ ಮತ್ತು ತೆಂಗಿನಕಾಯಿಯಿಂದ ಮಾಡಿದ ಪ್ರಸಾದವನ್ನು ನೀಡಲಾಗುತ್ತದೆ. ಕಾತ್ಯಾಯನಿಯನ್ನು ಮನಸ್ಸಿಟ್ಟು ಪೂಜಿಸುವುದರಿಂದ ಕೊನೆಯಿಲ್ಲದ ಚಿಂತೆಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ. ಜೊತೆಗೆ ಜನರಿಗೆ ಸಿಹಿಯಾದ ಜೀವನ ಅನುಗ್ರಹಿಸುತ್ತಾಳೆ.

sharadiya-navratri-2023

ಶಾರದೀಯ ನವರಾತ್ರಿ 2023: ಏಳನೇ ದಿನ

ಅಕ್ಟೋಬರ್ 21 ಶನಿವಾರ ಶಾರದೀಯ ನವರಾತ್ರಿಯ ಏಳನೇ ದಿನವಾಗಿದೆ. ಈ ದಿನ ಕಾಲರಾತ್ರಿ ದೇವಿಯ ಪೂಜೆ (Kalratri Puja)ಯನ್ನು ಮಾಡಲಾಗುತ್ತದೆ. ಕಾಲರಾತ್ರಿ ದೇವಿಯ ಭಕ್ತರನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಏಳನೇ ದಿನದಂದು ದೇವಿಯನ್ನು ತುಂಬೆ ಹೂವು ಗಳಿಂದ ಪೂಜಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಖರ್ಜೂರದಿಂದ ಮಾಡಿದ ಜೇನು ತುಪ್ಪದಿಂದ ಮಾಡಿದ ಪ್ರಸಾದವನ್ನು ನೀಡಲಾಗುತ್ತದೆ.

ಶಾರದೀಯ ನವರಾತ್ರಿ 2023: ಎಂಟನೇ ದಿನ

ಅಕ್ಟೋಬರ್ 22 ಭಾನುವಾರ ಶಾರದೀಯ ನವರಾತ್ರಿಯ ಎಂಟನೇ ದಿನವಾಗಿದೆ. ಈ ದಿನ ಮಹಾಗೌರಿ ಪೂಜೆ ಮತ್ತು ದುರ್ಗಾಷ್ಟಮಿ (Mahagauri Puja and Durgashtami)ಯನ್ನು ಮಾಡಲಾಗುತ್ತದೆ. ಆನೆ ಮೇಲೆ ಸವಾರಿ ಮಾಡುವ ಈ ಮಹಾಗೌರಿಯು ತಪಸ್ಸು ಹಾಗೂ ಪರಿಶ್ರಮದ ಸಂಕೇತವಾಗಿದ್ದಾಳೆ. ಇಂದು ಮಹಾಗೌರಿಯನ್ನು ಗುಲಾಬಿ ಹೂಗಳಿಂದ ಪೂಜಿಸಲಾಗುತ್ತದೆ. ಹಾಲು ಅನ್ನ ಮತ್ತು ದ್ರಾಕ್ಷಿಯನ್ನು ನೈವೇದಿಯಾಗಿ ಬಡಿಸಲಾಗುತ್ತದೆ.

sharadiya-navratri-2023

ಶಾರದೀಯ ನವರಾತ್ರಿ 2023: ಒಂಬತ್ತನೇ ದಿನ

ಅಕ್ಟೋಬರ್ 23 ಸೋಮವಾರ ಶಾರದೀಯ ನವರಾತ್ರಿಯ ಒಂಬತ್ತನೇ ದಿನವಾಗಿದೆ. ಈ ದಿನ ಮಹಾನವಮಿ (Mahanavami) ಸಿದ್ಧಿಧಾತ್ರಿ ದೇವಿ ಪೂಜೆಯನ್ನು ಮಾಡಲಾಗುತ್ತದೆ. ಜ್ಞಾನದ ಮೂಲವೆಂದು ಪರಿಗಣಿಸಲಾಗುವ ಈ ದೇವಿಯನ್ನು ಪುಸ್ತಕಗಳೊಂದಿಗೆ ಪೂಜಿಸಲಾಗುತ್ತದೆ. ಈ ದಿನ ಪ್ರಸಾದವಾಗಿ ಎಳ್ಳನ್ನು ಅಥವಾ ಅದರಿಂದ ಮಾಡಿದ ಸಿಹಿ ತಿನಿಸುಗಳನ್ನು ನಿಡಲಾಗುತ್ತದೆ.

ಅಕ್ಟೋಬರ್ 24 ಮಂಗಳವಾರ ಶಾರದೀಯ ನವರಾತ್ರಿಯ ಹತ್ತನೇ ದಿನವಾಗಿದ್ದು. ಇದನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಈ ದಿನ ದುರ್ಗಾ ವಿಸರ್ಜನ (Durga immersion or Visarjan) ಮಾಡಲಾಗುತ್ತದೆ. ಹೀಗೆ ಪ್ರತಿದಿನ ದುರ್ಗಾ ದೇವಿಯ ನಾನಾ ರೂಪಗಳನ್ನು ಪೂಜಿಸುವುದರಿಂದ ಐಶ್ವರ್ಯ, ಸೌಖ್ಯ, ದೀರ್ಘ ಮತ್ತು ಸಮೃದ್ಧ ಜೀವನ ಲಭಿಸುತ್ತದೆ ಎಂಬ ನಂಬಿಕೆ ಇದೆ. ನೀವು ಕೂಡ ನವರಾತ್ರಿ ಹಬ್ಬವನ್ನು ಆಚರಣೆ ಮಾಡುತ್ತಿದ್ದರೆ ಚಾಚು ತಪ್ಪದೆ ಇದೆಲ್ಲವನ್ನು ಪಾಲಿಸಿ ದೇವಿಯ ಕೃಪೆಗೆ ಪಾತ್ರರಾಗಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+