Ramadan 2026: ಫೆಬ್ರವರಿ 18ರಿಂದ ಪವಿತ್ರ ಉಪವಾಸ ಆರಂಭವೇ ? ರಂಜಾನ್ ಹಬ್ಬದ ಮಾಹಿತಿ ಇಲ್ಲಿದೆ
Ramadan 2026: ಮುಸ್ಲಿಂ ಸಮುದಾಯದವರು ಸಂತೋಷ ಮತ್ತು ಸಂಭ್ರಮದಲ್ಲಿ ಆಚರಿಸುವ ಹಬ್ಬಗಳಲ್ಲಿ ಈದ್ ಉಲ್ ಫಿತರ್ ಅಥವಾ ರಂಜಾನ್ ಹಬ್ಬ ಪ್ರಮುಖವಾದದ್ದು. ಮುಸ್ಲಿಂ ಬಾಂಧವರ ಪಾಲಿಗೆ ಅತ್ಯಂತ ಪವಿತ್ರವಾದ ರಂಜಾನ್ ಮಾಸವು ಸಮೀಪಿಸುತ್ತಿದೆ. 2026ನೇ ಸಾಲಿನ ರಂಜಾನ್ ಉಪವಾಸಕ್ಕೆ ದಿನಗಣನೆ ಆರಂಭವಾಗಿದ್ದು, ಖಗೋಳಶಾಸ್ತ್ರದ ಲೆಕ್ಕಾಚಾರಗಳು ಮತ್ತು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಈ ಬಾರಿ ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ಪವಿತ್ರ ಮಾಸ ಆರಂಭವಾಗುವ ನಿರೀಕ್ಷೆಯಿದೆ.
ರಂಜಾನ್ ಆರಂಭದ ದಿನಾಂಕ
ಲಭ್ಯವಿರುವ ಮಾಹಿತಿಯ ಪ್ರಕಾರ, 2026ರ ರಂಜಾನ್ ಮಾಸವು ಫೆಬ್ರವರಿ 18, ಬುಧವಾರದಂದು ಸಂಜೆ ಆರಂಭವಾಗುವ ಸಾಧ್ಯತೆಯಿದೆ. ಅಂದು ಸಂಜೆ ಚಂದ್ರದರ್ಶನವಾದರೆ (Moon Sighting), ಅಂದಿನಿಂದಲೇ ವಿಶೇಷ ತರಾವೀಹ್ ನಮಾಜ್ (ವಿಶೇಷ ರಾತ್ರಿ ಪ್ರಾರ್ಥನೆ) ಆರಂಭಗೊಳ್ಳಲಿದ್ದು, ಮರುದಿನ ಬೆಳ್ಳಿಗೆ ಜಾವದಿಂದ ಅಂದರೆ ಫೆಬ್ರವರಿ 19, ಗುರುವಾರದಿಂದ ಮೊದಲ ರೋಜಾ (ಉಪವಾಸ) ಆರಂಭವಾಗಲಿದೆ. ಒಂದು ವೇಳೆ ಫೆಬ್ರವರಿ 18 ರಂದು ಚಂದ್ರ ಕಾಣಿಸದಿದ್ದರೆ, ಶಬಾನ್ ತಿಂಗಳು 30 ದಿನ ಪೂರೈಸಲಿದ್ದು, ಫೆಬ್ರವರಿ 20 ರಿಂದ ಉಪವಾಸ ಆರಂಭವಾಗುವ ಸಾಧ್ಯತೆಯಿರುತ್ತದೆ. ಆದರೆ, ಸದ್ಯದ ಲೆಕ್ಕಾಚಾರದ ಪ್ರಕಾರ ಫೆಬ್ರವರಿ 18 ಪ್ರಮುಖ ದಿನಾಂಕವಾಗಿದೆ.

ಲೈಲತುಲ್ ಕದ್ರ್ (ಶಕ್ತಿಯ ರಾತ್ರಿ)
ರಂಜಾನ್‌ನ ಕೊನೆಯ ಹತ್ತು ದಿನಗಳಲ್ಲಿ ಬರುವ ಅತ್ಯಂತ ಪವಿತ್ರವಾದ ರಾತ್ರಿಯಾಗಿದೆ. ಈ ರಾತ್ರಿಯಲ್ಲಿ ಪವಿತ್ರ ಕುರಾನ್ ಮೊದಲ ಬಾರಿಗೆ ಅವತರಿಸಿತು. ಪವಿತ್ರ ಕುರಾನ್ ಅವತರಿಸಿರುವ ಈ ಒಂದು ರಾತ್ರಿಯು ಸಾವಿರ ತಿಂಗಳುಗಳಿಗಿಂತಲೂ ಶ್ರೇಷ್ಠ ಎಂದು ನಂಬಲಾಗಿದೆ. 2026ರ ಸಾಲಿನಲ್ಲಿ ಇದು ಮಾರ್ಚ್ 16, ಸೋಮವಾರದಂದು ಸಂಜೆ (ರಂಜಾನ್‌ನ 27ನೇ ರಾತ್ರಿ) ಬರುವ ನಿರೀಕ್ಷೆಯಿದೆ. ಈ ರಾತ್ರಿಯಂದು ಮುಸ್ಲಿಮರು ಜಾಗರಣೆ ಇದ್ದು, ಅಲ್ಲಾಹನಲ್ಲಿ ಪ್ರಾರ್ಥನೆ ಮತ್ತು ಕ್ಷಮೆ ಕೋರುತ್ತಾರೆ.
ಈದ್ ಅಲ್-ಫಿತರ್ ಆಚರಣೆ ಯಾವಾಗ?
ತಿಂಗಳ ಪೂರ್ತಿ ಕಠಿಣ ಉಪವಾಸ ಆಚರಿಸಿದ ನಂತರ ಬರುವ ಹಬ್ಬವೇ ಈದ್ ಅಲ್-ಫಿತರ್. 2026ರಲ್ಲಿ ರಂಜಾನ್ ಮಾಸವು ಮಾರ್ಚ್ 19 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಮಾರ್ಚ್ 19, ಗುರುವಾರ ಸಂಜೆ ಶವ್ವಾಲ್ ತಿಂಗಳ (ಇಸ್ಲಾಮಿಕ್ ಕ್ಯಾಲೆಂಡರ್‌ನ 10ನೇ ತಿಂಗಳು) ಚಂದ್ರದರ್ಶನವಾಗುವ ನಿರೀಕ್ಷೆಯಿದ್ದು, ಅಂದು ರಂಜಾನ್ ಮಾಸ ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ. ಹೀಗಾಗಿ, ಮಾರ್ಚ್ 20, ಶುಕ್ರವಾರದಂದು ವಿಶ್ವಾದ್ಯಂತ ಈದ್ ಅಲ್-ಫಿತರ್ ಸಡಗರ ಮನೆಮಾಡುವ ಸಾಧ್ಯತೆಯಿದೆ.
ಹವಾಮಾನ ಮತ್ತು ಸಿದ್ಧತೆ
ಕಳೆದ ಕೆಲವು ವರ್ಷಗಳಿಂದ ರಂಜಾನ್ ಬೇಸಿಗೆಯಲ್ಲಿ ಬರುತ್ತಿತ್ತು, ಆದರೆ ಈ ಬಾರಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬರುತ್ತಿರುವುದರಿಂದ ಹವಾಮಾನ ತುಸು ಹಿತಕರವಾಗಿರಲಿದೆ. ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭದ ಈ ಅವಧಿಯಲ್ಲಿ ಹಗಲುಗಳು ಚಿಕ್ಕದಾಗಿರುವುದರಿಂದ ಉಪವಾಸ ಆಚರಿಸುವವರಿಗೆ ದೈಹಿಕ ಶ್ರಮ ಕಡಿಮೆಯಾಗಲಿದೆ. ಈಗಾಗಲೇ ಮಸೀದಿಗಳಲ್ಲಿ ಮತ್ತು ಮುಸ್ಲಿಂ ಬಾಂಧವರ ಮನೆಗಳಲ್ಲಿ ರಂಜಾನ್ ಸ್ವಾಗತಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಾರುಕಟ್ಟೆಗಳಲ್ಲಿ ಖರ್ಜೂರ, ಹಣ್ಣುಗಳು ಮತ್ತು ಇಫ್ತಾರ್ ಸಾಮಗ್ರಿಗಳ ಮಾರಾಟ ಚುರುಕುಗೊಂಡಿದೆ.
ಅಂತಿಮ ನಿರ್ಧಾರಕ್ಕೆ ಚಂದ್ರದರ್ಶನವೇ ಆಧಾರ
ಇಲ್ಲಿ ನೀಡಲಾದ ದಿನಾಂಕಗಳು ಖಗೋಳ ಲೆಕ್ಕಾಚಾರಗಳನ್ನು ಆಧರಿಸಿವೆ. ಇಸ್ಲಾಮಿಕ್ ಸಂಪ್ರದಾಯದಂತೆ, ರಂಜಾನ್ ಆರಂಭ ಮತ್ತು ಈದ್ ಆಚರಣೆಯು ಅಧಿಕೃತವಾಗಿ ಚಂದ್ರದರ್ಶನ ಸಮಿತಿಯ (Moon Sighting Committee) ಘೋಷಣೆಯ ಮೇಲೆ ಅವಲಂಬಿತವಾಗಿರುತ್ತದೆ. ಫೆಬ್ರವರಿ 18ರ ಸಂಜೆ ಮಸೀದಿಗಳ ಮಿನಾರಗಳಿಂದ ಅಥವಾ ಅಧಿಕೃತ ಸಮಿತಿಗಳಿಂದ ಬರುವ ಘೋಷಣೆಯೇ ಅಂತಿಮವಾಗಿರುತ್ತದೆ.
ಒಟ್ಟಾರೆಯಾಗಿ, 2026ರ ರಂಜಾನ್ ಮಾಸವು ಶಾಂತಿ, ಸಹಬಾಳ್ವೆ ಮತ್ತು ದಾನ ಧರ್ಮದ ಸಂದೇಶವನ್ನು ಸಾರಲು ಸಜ್ಜಾಗಿದೆ. ಆಧ್ಯಾತ್ಮಿಕ ಚಿಂತನೆ ಮತ್ತು ದೇವಾರಾಧನೆಯಲ್ಲಿ ತೊಡಗಿಸಿಕೊಳ್ಳಲು ಭಕ್ತಾದಿಗಳು ಕಾತುರದಿಂದ ಕಾಯುತ್ತಿದ್ದಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications