Ramadan 2025: ರಂಜಾನ್ ತಿಂಗಳು ಇಂದಿನಿಂದ ಪ್ರಾರಂಭ: ಆಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ಪವಿತ್ರ ರಂಜಾನ್ ತಿಂಗಳು ಇಂದಿನಿಂದ ಅಂದರೆ ಮಾರ್ಚ್ 02 ರಿಂದ ಪ್ರಾರಂಭವಾಗುತ್ತಿದೆ. ಇಸ್ಲಾಂನಲ್ಲಿ ರಂಜಾನ್ ಮಾಸವನ್ನು ಅತ್ಯಂತ ಪವಿತ್ರ ಮತ್ತು ವಿಶೇಷವೆಂದು ಪರಿಗಣಿಸಲಾಗಿದೆ. ರಂಜಾನ್ ತಿಂಗಳಾದ್ಯಂತ ಮುಸ್ಲಿಂ ಧರ್ಮದ ಜನರು ದೇವರನ್ನು ಪೂಜಿಸುತ್ತಾರೆ ಮತ್ತು ಉಪವಾಸ ಮಾಡುತ್ತಾರೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ರಂಜಾನ್ ವರ್ಷದ ಒಂಬತ್ತನೇ ತಿಂಗಳು. ರಂಜಾನ್ ದಿನಗಳಲ್ಲಿ ಜನರು ಪ್ರತಿದಿನ ಉಪವಾಸ ಆಚರಿಸುತ್ತಾರೆ ಮತ್ತು ಕೊನೆಯ ದಿನದಂದು ದೇವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಈದ್-ಉಲ್-ಫಿತರ್ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ.

ಇಸ್ಲಾಮಿಕ್ ತಜ್ಞರು ಮತ್ತು ಧಾರ್ಮಿಕ ನಾಯಕರ ಪ್ರಕಾರ ರಂಜಾನ್‌ನ ಮೊದಲ ದಿನ ಮಾರ್ಚ್ 02ರಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಮೊದಲ ಉಪವಾಸವನ್ನು ಆಚರಿಸಲಾಗುತ್ತದೆ. ಪವಿತ್ರ ರಂಜಾನ್ ತಿಂಗಳು ಶಬ್-ಎ-ಬರಾತ್ 14 ನೇ ದಿನದಂದು ಪ್ರಾರಂಭವಾಗುತ್ತದೆ. ವಾಸ್ತವವಾಗಿ ಭಾರತದಲ್ಲಿ ರಂಜಾನ್ ತಿಂಗಳು ಪ್ರಾರಂಭವಾಗುವ ದಿನವು ಮೆಕ್ಕಾದಲ್ಲಿ ಚಂದ್ರನ ಗೋಚರತೆಯನ್ನು ಅವಲಂಬಿಸಿರುತ್ತದೆ. ಸೌದಿ ಅರೇಬಿಯಾದಲ್ಲಿ ಚಂದ್ರನನ್ನು ನೋಡಿದ ಮರುದಿನ, ಭಾರತದಲ್ಲಿ ಮೊದಲ ಉಪವಾಸವನ್ನು ಆಚರಿಸಲಾಗುತ್ತದೆ ಮತ್ತು ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗುತ್ತದೆ.
ರಂಜಾನ್ ಸಮಯದಲ್ಲಿ ಉಪವಾಸ ಏಕೆ ಮಾಡಲಾಗುತ್ತದೆ?
ರಂಜಾನ್ ತಿಂಗಳಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ರಂಜಾನ್ ಸಮಯದಲ್ಲಿ ಉಪವಾಸದ ಜೊತೆಗೆ, ಐದು ಬಾರಿ ಪ್ರಾರ್ಥನೆ ಮತ್ತು ತರಾವಿಹ್ ವಿಶೇಷ ಪ್ರಾರ್ಥನೆಯ ಮಹತ್ವವಿದೆ. ಪವಿತ್ರ ರಂಜಾನ್ ಮಾಸವು ಉಪವಾಸದ ಜೊತೆಗೆ, ಸ್ವಯಂ ನಿಯಂತ್ರಣ, ಪೂಜೆ ಮತ್ತು ಸಹಾಯ, ನಿರ್ಗತಿಕರ ಸೇವೆ ಮಾಡಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, 610 ರಲ್ಲಿ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ, ಮುಹಮ್ಮದ್ ಸಾಹಿಬ್ ಪವಿತ್ರ ಕುರಾನ್‌ನ ಜ್ಞಾನವನ್ನು ಪಡೆದರು. ಅಂದಿನಿಂದ ಇಂದಿನವರೆಗೆ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರತಿ ವರ್ಷ ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತಾರೆ ಮತ್ತು ಅಂತಿಮವಾಗಿ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸುತ್ತಾರೆ.

ಉಪವಾಸದ ನಿಯಮಗಳು ಯಾವುವು?
ಮುಸ್ಲಿಂ ಸಮುದಾಯದ ಜನರು ಪವಿತ್ರ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ಉಪವಾಸ ಆಚರಿಸಲು, ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಸೆಹ್ರಿ ಆಚರಿಸುತ್ತಾರೆ. ಅಂದರೆ ಸೂರ್ಯೋದಯಕ್ಕೆ ಮೊದಲು ಏನಾದರೂ ತಿನ್ನುತ್ತಾರೆ, ನಂತರ ಇಡೀ ದಿನ ಏನನ್ನೂ ತಿನ್ನುವುದಿಲ್ಲ. ಸಂಜೆ ಸೂರ್ಯಾಸ್ತದ ಸಮಯದಲ್ಲಿ ಇಫ್ತಾರ್ ಮಾಡುವ ಮೂಲಕ ಉಪವಾಸವನ್ನು ಮುರಿಯುತ್ತಾರೆ. ಈ ರೀತಿಯಾಗಿ ಉಪವಾಸ ಮಾಡುವ ವ್ಯಕ್ತಿಯು ಇಡೀ ದಿನ ಏನನ್ನೂ ತಿನ್ನದೆ ಅಥವಾ ಕುಡಿಯದೆ ಇರುತ್ತಾನೆ.
ಇಡೀ ರಂಜಾನ್ ತಿಂಗಳನ್ನು 30 ಉಪವಾಸಗಳಾಗಿ ವಿಂಗಡಿಸಲಾಗಿದೆ. ಇದು ಮೂರು ಪ್ರಮುಖ ಭಾಗಗಳನ್ನು ಹೊಂದಿದೆ. ಮೊದಲಯದು 10 ದಿನಗಳು, ಎರಡನೇಯದು 10 ದಿನಗಳು ಮತ್ತು ಮೂರನೇಯದು 10 ದಿನಗಳು. ಮೊದಲ 'ರಹಮತ್' ನ 10 ದಿನಗಳದ್ದಾಗಿದೆ, ಎರಡನೇಯದ್ದು 'ಬರ್ಕತ್' ನ 10 ದಿನಗಳದ್ದಾಗಿದೆ, ಮೂರನೇಯದ್ದು 'ಮಗ್ಫಿರತ್' ನ 10 ದಿನಗಳದ್ದಾಗಿದೆ.
ದೆಹಲಿ ಮಾರ್ಚ್ 2
ಸೆಹ್ರಿ ಸಮಯ - ಬೆಳಿಗ್ಗೆ 05:40
ಇಫ್ತಾರ್ ಸಮಯ: ಸಂಜೆ 6:22
ಲಕ್ನೋ 02 ಮಾರ್ಚ್
ಸೆಹ್ರಿ ಸಮಯ - ಬೆಳಿಗ್ಗೆ 05:11
ಇಫ್ತಾರ್ ಸಮಯ: ಸಂಜೆ 6:09
ಮುಂಬೈ ಮಾರ್ಚ್ 02
ಸೆಹ್ರಿ ಸಮಯ - ಬೆಳಿಗ್ಗೆ 05:44
ಇಫ್ತಾರ್ ಸಮಯ: ಸಂಜೆ 6:45
ಹೈದರಾಬಾದ್ ಮಾರ್ಚ್ 02
ಸೆಹ್ರಿ ಸಮಯ - ಬೆಳಿಗ್ಗೆ 05:22
ಇಫ್ತಾರ್ ಸಮಯ: ಸಂಜೆ 6:23
ಬೆಂಗಳೂರು ಮಾರ್ಚ್ 02
ಸೆಹ್ರಿ ಸಮಯ - ಬೆಳಿಗ್ಗೆ 05:24
ಇಫ್ತಾರ್ ಸಮಯ: ಸಂಜೆ 6:29
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications