Shivratri 2024: ಮನೆಯ ಈ ದಿಕ್ಕು ಶಿವ ಮತ್ತು ಲಕ್ಷ್ಮಿ ನೆಲೆ- ಈ ಸ್ಥಳದಲ್ಲಿ ಹೀಗೆ ಮಾಡಿಬೇಡಿ...

ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕೆಂದು ಬಯಸುತ್ತಾನೆ. ಈ ಕಾರಣಕ್ಕಾಗಿ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುವಂತೆ ಕೆಲ ಕ್ರಮಗಳನ್ನು ನಾವೆಲ್ಲರೂ ತೆಗೆದುಕೊಳ್ಳುತ್ತೇವೆ. ಸಕಾರಾತ್ಮಕ ಶಕ್ತಿಯು ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ಇದು ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ನಮ್ಮ ಅದೃಷ್ಟವನ್ನು ಚುರುಕುಗೊಳಿಸುತ್ತದೆ.

ಈ ಧನಾತ್ಮಕ ಶಕ್ತಿಯ ಕ್ರಮಗಳನ್ನು ತೆಗೆದುಕೊಳ್ಳುವುದರ ಹೊರತಾಗಿ ಮನೆಯಲ್ಲಿ ಶಿವ ಮತ್ತು ಲಕ್ಷ್ಮಿ ದೇವಿ ನೆಲೆಸಿದ್ದಾರೆ ಎಂಬುದನ್ನು ತಿಳಿದಿರಬೇಕು. ಮನೆಯ ಒಂದು ದಿಕ್ಕನ್ನು ಶಿವ ಮತ್ತು ಲಕ್ಷ್ಮಿ ದೇವಿ ನೆಲೆ ಎಂದು ಪರಿಗಣಿಸಲಾಗಿದೆ.

Lord shiva and mata laxmi directions at home follow these vastu tips in kannada

ಹೀಗಾಗಿ ಆ ದಿಕ್ಕಿನಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಮಾತ್ರವಲ್ಲದೆ ಭಯ ಮತ್ತು ಹಠಾತ್ ಸಾವಿನಂತಹ ಘಟನೆಗಳು ಸಹ ದೂರವಾಗುತ್ತವೆ. ಲಕ್ಷ್ಮಿ ದೇವಿಯ ಕೃಪೆಯಿಂದ ಅದೃಷ್ಟ, ಸೌಕರ್ಯ ಮತ್ತು ಅಪಾರ ಸಂಪತ್ತಿನ ಲಾಭವನ್ನು ಪಡೆಯಬಹುದು. ಹಾಗಾದರೆ ಮನೆಯ ಯಾವ ದಿಕ್ಕಿನಲ್ಲಿ ಶಿವ ಮತ್ತು ಮಾತಾ ಲಕ್ಷ್ಮಿ ವಾಸಿಸುತ್ತಾರೆ ಮತ್ತು ಅವರನ್ನು ಮೆಚ್ಚಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಮನೆಯ ಈಶಾನ್ಯ ದಿಕ್ಕು ಶಿವನ ನೆಲೆ

ಶಿವನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಲೆಸಿದ್ದಾನೆ. ಶಿವನನ್ನು ಮೆಚ್ಚಿಸಲು ಮನೆಯ ಈ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿಕ್ಕಿನಲ್ಲಿ ಯಾವುದೇ ಮುರಿದ ವಸ್ತುಗಳು ಅಥವಾ ಪಾತ್ರೆಗಳು ಇರಬಾರದು. ಶಿವನಿಗೆ ಹಸಿರು ಬಣ್ಣ ತುಂಬಾ ಇಷ್ಟ. ಆದ್ದರಿಂದ ಈ ದಿಕ್ಕಿನಲ್ಲಿ ಈ ಹಸಿರು ಬಣ್ಣಕ್ಕೆ ಪ್ರಮುಖ ಸ್ಥಾನವನ್ನು ನೀಡಬೇಕು. ಜೊತೆಗೆ ಈ ದಿಕ್ಕಿನಲ್ಲಿ ಕಪ್ಪು ಬಣ್ಣದ ವಸ್ತುಗಳನ್ನು ಇಡಬಾರದು.

ಮನೆಯ ಉತ್ತರ ದಿಕ್ಕು ಲಕ್ಷ್ಮಿಯ ನೆಲೆ

ಲಕ್ಷ್ಮಿ ದೇವಿಯು ಮನೆಯ ಉತ್ತರ ದಿಕ್ಕಿನಲ್ಲಿ ನೆಲೆಸಿದ್ದಾಳೆ. ಜೊತೆಗೆ ಪಶ್ಚಿಮ ದಿಕ್ಕಿನಲ್ಲೂ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹಲವರು ನಂಬುತ್ತಾರೆ. ಈ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇರಿಸಿದರೆ ಅದೃಷ್ಟವನ್ನು ಪಡೆಯಬಹುದು. ಅಲ್ಲದೆ ಹಣಕಾಸಿನ ಅಡಚಣೆಗಳಿಂದ ತೊಂದರೆಗೊಳಗಾಗಿದ್ದರೆ ಇದರಿಂದ ಪರಿಹಾರವನ್ನು ಪಡೆಯಬಹುದು. ಈ ದಿಕ್ಕಿನಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಬೆಳ್ಳಿಯ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಈ ದಿಕ್ಕಿನಲ್ಲಿ ಇರಿಸಿ. ಇದು ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಲಕ್ಷ್ಮಿ ಮತ್ತು ಶಿವನನ್ನು ಮೆಚ್ಚಿಸುವ ಮಾರ್ಗಗಳು-

*ಶಿವನನ್ನು ಮೆಚ್ಚಿಸಲು ಮನೆಯಲ್ಲಿ ಶ್ರೀಗಂಧವನ್ನು ಇರಿಸಿ. ವಿಶೇಷವಾಗಿ ನೀವು ಈಶಾನ್ಯ ದಿಕ್ಕಿನಲ್ಲಿ ಶ್ರೀಗಂಧದ ಸುವಾಸನೆಯೊಂದಿಗೆ ಏನನ್ನಾದರೂ ಇಡಬೇಕು. ಇದು ಶಿವನನ್ನು ಮೆಚ್ಚಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹರಡುತ್ತದೆ.

*ಈ ದಿಕ್ಕಿಗೆ ಗಂಗಾಜಲವನ್ನೂ ಚಿಮುಕಿಸಿ. ಇದು ಮನೆಯಲ್ಲಿ ಪರಿಶುದ್ಧತೆಯನ್ನು ಕಾಪಾಡುತ್ತದೆ ಮತ್ತು ಮಹಾದೇವನ ಆಶೀರ್ವಾದವೂ ನಿಮಗೆ ಸಿಗುತ್ತದೆ.

*ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮನೆಯ ಬಾಗಿಲು ಉತ್ತರ ಈ ದಿಕ್ಕಿನಲ್ಲಿದ್ದರೆ ಸಂಜೆ ದೀಪವನ್ನು ಹಚ್ಚಿ. ಇದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಿಮಗೆ ಪ್ರಗತಿಯನ್ನು ನೀಡುತ್ತದೆ.

*ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮನೆಯಲ್ಲಿ ಕೆಂಪು ಬಣ್ಣದ ಪರದೆಗಳನ್ನು ಅಳವಡಿಸಿ. ಇದು ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಅದೃಷ್ಟದ ಬೆಂಬಲವೂ ನಿಮಗೆ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+