Kartika Masa 2023: ಕಾರ್ತಿಕ ಮಾಸದ ಆಹಾರ ನಿಯಮಗಳು: ತಪ್ಪಾಗಿಯೂ ಇವುಗಳನ್ನು ತಿನ್ನಬೇಡಿ..
ಕಾರ್ತಿಕ ಮಾಸ ಅಕ್ಟೋಬರ್ 29ರಂದು ಪ್ರಾರಂಭವಾಗಿದೆ. ಧಾರ್ಮಿಕ ದೃಷ್ಟಿಯಿಂದ ಕಾರ್ತಿಕ ಮಾಸ ಬಹಳ ಮುಖ್ಯ. ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕಾರ್ತಿಕ ಮಾಸದ ಆರಂಭವನ್ನು ಚಳಿಗಾಲದ ಆರಂಭವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳ ಧಾರ್ಮಿಕ ಗ್ರಂಥಗಳಲ್ಲಿ ಆಹಾರ ಪದ್ಧತಿಯ ಬಗ್ಗೆ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸುವುದು ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಈ ತಿಂಗಳು ವಿಷ್ಣುವಿನ ಆರಾಧನೆಗೆ ಮೀಸಲಾಗಿದೆ. ಈ ಪುಣ್ಯಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಕೂಡ ವಿಶೇಷ ಮಹತ್ವವನ್ನು ಹೊಂದಿದೆ. ಇದರೊಂದಿಗೆ ಈ ತಿಂಗಳು ತುಳಸಿ ಪೂಜೆಗೆ ಮೀಸಲಾಗಿದೆ. ಹಾಗಾದರೆ ಕಾರ್ತಿಕ ಮಾಸದಲ್ಲಿ ಯಾವ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಯೋಣ.

ಕಾರ್ತಿಕ ಮಾಸದಲ್ಲಿ ಯಾವ ಆಹಾರ ಸೇವನೆ ತಪ್ಪಿಸಬೇಕು?
ಕಾರ್ತಿಕ ಮಾಸದಲ್ಲಿ ಕ್ಯಾರೆಟ್, ಬದನೆ, ಸೋರೆಕಾಯಿ ಮತ್ತು ತುಂಬಾ ಹೊತ್ತು ಇಡಲಾದ ಆಹಾರವನ್ನು ಸೇವಿಸಬಾರದು. ಹೆಚ್ಚಿನ ಬೀಜಗಳನ್ನು ಹೊಂದಿರುವ ಹಣ್ಣುಗಳನ್ನು ಸಹ ತ್ಯಜಿಸಬೇಕು. ಈ ತಿಂಗಳು ಬದನೆಕಾಯಿ ಮತ್ತು ಹಾಗಲಕಾಯಿಯನ್ನು ತಿನ್ನುವುದನ್ನು ಸಹ ನಿಷೇಧಿಸಲಾಗಿದೆ. ಜೊತೆಗೆ ಕಾರ್ತಿಕ ಮಾಸದಲ್ಲಿ ಉದ್ದಿನಬೇಳೆ, ಬಟಾಣಿ ಮತ್ತು ಸಾಸಿವೆ ತಿನ್ನಲಾಗುವುದಿಲ್ಲ. ಪವಿತ್ರ ಕಾರ್ತಿಕ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು.
ಕಾರ್ತಿಕ ಮಾಸದಲ್ಲಿ ಭಗವಾನ್ ವಿಷ್ಣು ನೀರಿನಲ್ಲಿ ನೆಲೆಸುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ ಮೀನು ಅಥವಾ ಇತರ ರೀತಿಯ ಜಲ ಜೀವಿಗಳ ಆಹಾರ ಸೇವನೆಯನ್ನು ತಪ್ಪಾಗಿಯೂ ಸೇವಿಸುವುದನ್ನು ತಪ್ಪಿಸಬೇಕು. ಇದಲ್ಲದೆ ಈ ತಿಂಗಳಲ್ಲಿ ಮಧ್ಯಾಹ್ನ ಮಲಗುವುದನ್ನು ಸಹ ನಿಷೇಧಿಸಲಾಗಿದೆ.
ಕಾರ್ತಿಕ ಮಾಸದಲ್ಲಿ ಈ ಕೆಲಸ ಮಾಡಿ
ಚಳಿಗಾಲ ಕಾರ್ತಿಕ ಮಾಸದಲ್ಲಿ ಆರಂಭವಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಶೀತವಾಗುವ ಆಹಾರವನ್ನು ಸೇವಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಬೆಲ್ಲವನ್ನು ತಿನ್ನಬೇಕು. ಬೆಲ್ಲವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬೆಲ್ಲದ ಸೇವನೆಯಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆಯೂ ದೂರವಾಗುತ್ತದೆ. ಈ ತಿಂಗಳಿನಲ್ಲಿ ದೇಹಕ್ಕೆ ಎಣ್ಣೆ ಹಚ್ಚುವುದನ್ನು ಸಹ ನಿಷೇಧಿಸಲಾಗಿದೆ. ನರಕ ಚತುರ್ದಶಿಯ ದಿನದಂದು ಮಾತ್ರ ದೇಹಕ್ಕೆ ಎಣ್ಣೆಯನ್ನು ಹಚ್ಚಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸ್ನಾನ ಮಾಡಬೇಕು.

ತುಳಸಿಗೆ ದೀಪ
ಕಾರ್ತಿಕ ಮಾಸದಲ್ಲಿ ತುಳಸಿಯ ಸೇವೆಗೆ ವಿಶೇಷ ಮಹತ್ವವಿದೆ. ಆದ್ದರಿಂದ ಈ ಮಾಸದಲ್ಲಿ ಪ್ರತಿದಿನ ತುಳಸಿಗೆ ದೀಪವನ್ನು ಹಚ್ಚಬೇಕು. ಪ್ರತಿದಿನ ರಾತ್ರಿಯಲ್ಲಿ ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯನ್ನು ಧ್ಯಾನಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ತುಳಸಿ ಮದುವೆ ಮಾಡುವುದರಿಂದ ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ.
ಕಾರ್ತಿಕ ಮಾಸ 2023
ಈ ವರ್ಷ ಕಾರ್ತಿಕ ಮಾಸ ಅಕ್ಟೋಬರ್ 29 ರಿಂದ ನವೆಂಬರ್ 27ರವರೆಗೆ ಇರುತ್ತದೆ.
ಕಾರ್ತಿಕ ಮಾಸ 2023 ವ್ರತ, ಹಬ್ಬಗಳು, ಜಯಂತಿ ಮತ್ತು ಉತ್ಸವಗಳು ಹೀಗಿವೆ:-
01 ಬುಧವಾರ, ನವೆಂಬರ್, 2023 - ಕರ್ವಾ ಚೌತ್, ವಕ್ರತುಂಡ ಸಂಕಷ್ಟಿ ಚತುರ್ಥಿ
05 ಭಾನುವಾರ, ನವೆಂಬರ್ 2023 - ಅಹೋಯಿ ಅಷ್ಟಮಿ, ರಾಧಾ ಕುಂಡ ಸ್ನಾನ
09 ಗುರುವಾರ, ನವೆಂಬರ್ 2023 - ಗೋವತ್ಸ್ ದ್ವಾದಶಿ, ರಾಮ ಏಕಾದಶಿ
10 ಶುಕ್ರವಾರ, ನವೆಂಬರ್ 2023 - ಧನ್ತೇರಸ್, ಪ್ರದೋಷ ವ್ರತ
11 ಶನಿವಾರ, ನವೆಂಬರ್ 2023 - ಕಾಳಿ ಚೌದಾಸ್
12 ಭಾನುವಾರ, ನವೆಂಬರ್ 2023 - ಲಕ್ಷ್ಮೀ ಪೂಜೆ, ನರಕ ಚತುರ್ದಶಿ, ದೀಪಾವಳಿ
13 ಸೋಮವಾರ, ನವೆಂಬರ್ 2023 - ದರ್ಶ ಅಮವಾಸ್ಯೆ, ಅನ್ವಧಾನ, ಕಾರ್ತಿಕ ಅಮವಾಸ್ಯೆ
14 ಮಂಗಳವಾರ, ನವೆಂಬರ್ 2023 - ಗೋವರ್ಧನ ಪೂಜೆ, ಚಂದ್ರ ದರ್ಶನ
17 ಶುಕ್ರವಾರ, ನವೆಂಬರ್ 2023 - ವೃಶ್ಚಿಕ ಸಂಕ್ರಾಂತಿ
18 ಶನಿವಾರ, ನವೆಂಬರ್ 2023 - ಲಾಭ ಪಂಚಮಿ
19 ಭಾನುವಾರ, ನವೆಂಬರ್ 2023 - ಭಾನು ಸಪ್ತಮಿ, ಛತ್ ಪೂಜೆ
20 ಸೋಮವಾರ, ನವೆಂಬರ್ 2023 - ಗೋಪಾಷ್ಟಮಿ
21 ಮಂಗಳವಾರ, ನವೆಂಬರ್ 2023 - ಅಕ್ಷಯ ನವಮಿ
22 ಬುಧವಾರ, ನವೆಂಬರ್ 2023 - ಕಂಸ ವಧ
23 ಗುರುವಾರ, ನವೆಂಬರ್ 2023 - ಭೀಷ್ಮ ಪಂಚಕ ಪ್ರಾರಂಭ, ದೇವುತ್ಥಾನ ಏಕಾದಶಿ
24 ಶುಕ್ರವಾರ, ನವೆಂಬರ್ 2023 - ತುಳಸಿ ವಿವಾಹ, ಪ್ರದೋಷ ವ್ರತ
25 ಶನಿವಾರ, ನವೆಂಬರ್ 2023 - ವೈಕುಂಠ ಚತುರ್ದಶಿ, ವಿಶ್ವೇಶ್ವರ ವ್ರತ
26 ಭಾನುವಾರ, ನವೆಂಬರ್ 2023 - ಮಣಿಕರ್ಣಿಕಾ ಸ್ನಾನ, ದೇವ್ ದೀಪಾವಳಿ
27 ಸೋಮವಾರ, ನವೆಂಬರ್ 2023 - ಕಾರ್ತಿಕ ಪೂರ್ಣಿಮಾ, ಅನ್ವಧಾನ












Click it and Unblock the Notifications