Get Updates
Get notified of breaking news, exclusive insights, and must-see stories!

Bengaluru Holi Celebration: ನೀವು ಬೆಂಗಳೂರಿನಲ್ಲಿದ್ದೀರಾ? ಈ ಸ್ಥಳಗಳಲ್ಲಿ ಹೋಳಿ ಹಬ್ಬ ಆಚರಿಸಿ

ಬೆಂಗಳೂರು ಮಾರ್ಚ್ 24: ಬಣ್ಣಗಳ ಹಬ್ಬ ಹೋಳಿ. ಇದನ್ನು ಭಾರತದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇದು ಸಂತೋಷ, ಉತ್ಸಾಹ ಮತ್ತು ಏಕತೆಯ ವಾತಾವರಣವನ್ನು ಸೃಷ್ಟಿಸುವ ಹಬ್ಬ. ಬೆಂಗಳೂರಿನಲ್ಲಿ ಈ ಹೋಳಿ ಹಬ್ಬದ ತಯಾರಿ ಜೋರಾಗಿದೆ. ಸಾಕಷ್ಟು ಯುವಜನತೆ ಈ ಹಬ್ಬದ ತಯಾರಿಯಲ್ಲಿದ್ದಾರೆ.

ಅಂದಹಾಗೆ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯಂಗಳದಲ್ಲಿ, ಬೀದಿ, ಮೈದಾನ, ರೆಸಾರ್ಟ್, ರೆಸ್ಟೋರೆಂಟ್ ಮಾತ್ರವಲ್ಲದೆ ಪ್ರತ್ಯೇಕ ಸ್ಥಳಗಳಲ್ಲಿ ಬಣ್ಣದ ಹಬ್ಬವನ್ನು ಆಯೋಜಿಸಿ ಸಂಭ್ರಮಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರು ಬಣ್ಣದ ಹಬ್ಬವನ್ನು ಆಡಲು ಬಯಸುತ್ತಾರೆ.

Holi 2024 Are you in Bengaluru Celebrate Holi at these places

ಆದರೆ ಇತರ ಕಾರಣಗಳಿಂದಾಗಿ ಅವರಿಗೆ ಆಡುವ ಸ್ಥಳವಾಗಲಿ ಅಥವಾ ಸಂಬಂಧಿಕರಾಗಲಿ, ಸ್ನೇಹಿತರಾಗಲಿ ಸಿಕ್ಕಿರುವುದಿಲ್ಲ. ಹೀಗಿರುವಾಗ ಈ ಬಣ್ಣದ ಹಬ್ಬವನ್ನು ಮಿಸ್ ಮಾಡಿಕೊಳ್ಳುವ ಬೇಸರವಾಗಬಹುದು. ಹೀಗಾದಲ್ಲಿ ಹೋಳಿ ಹಬ್ಬವನ್ನು ಮಿಸ್ ಮಾಡಿಕೊಳ್ಳದೇ ಇರಲು ಕೆಲ ಸಲಹೆಗಳು ಇಲ್ಲಿದೆ. ಹಾಗಾದರೆ ಬೆಂಗಳೂರಿನ ಯಾವ ಸ್ಥಳದಲ್ಲಿ ನೀವು ಹೋಳಿಯನ್ನು ಆಚರಿಸಬಹುದು.

1.ಮೊಮೊ ಕೆಫೆ ಹೋಳಿ ಆಚರಣೆ (Marriott Bengaluru Outer Ring Road)

ಮ್ಯಾರಿಯಟ್ ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿರುವ ಮೊಮೊ ಕೆಫೆಯ ಅಂಗಳದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ರೋಮಾಂಚಕ ಅನುಭವಗಳು ಮತ್ತು ಸ್ಮರಣೀಯ ಕ್ಷಣಗಳನ್ನು ನೀವು ಆನಂದಿಸಬಹುದು. ಮೊಮೊ ಕೆಫೆಯ ಕಾರ್ಯನಿರ್ವಾಹಕ ಬಾಣಸಿಗ ವಿಜಯ್ ಭಂಡಾರಿ ಮತ್ತು ಅವರ ಪಾಕಶಾಲೆಯ ತಂಡವು ಬಗೆ ಬಗೆಯ ಖಾದ್ಯಗಳೊಂದಿಗೆ ಹಬ್ಬಕ್ಕೆ ಆಹ್ವಾನಿಸಿದೆ.

ಎಲ್ಲಿ: ಮೊಮೊ ಕೆಫೆ, ಮ್ಯಾರಿಯಟ್ ಬೆಂಗಳೂರು ಹೊರ ವರ್ತುಲ ರಸ್ತೆಯ ಅಂಗಳ

ಬೆಲೆ: INR 2200 ಜೊತೆಗೆ ತೆರಿಗೆ

ಯಾವಾಗ: ಮಾರ್ಚ್ 24, 2024

ಸಮಯ: ಮಧ್ಯಾಹ್ನ 12:30 ರಿಂದ ಸಂಜೆ 4:00 ರವರೆಗೆ

2.ಹೋಳಿ ಬ್ರಂಚ್ (Sheraton Grand Bengaluru Whitefield Hotel)

ಶೆರಟನ್ ಗ್ರ್ಯಾಂಡ್ ಬೆಂಗಳೂರು ವೈಟ್‌ಫೀಲ್ಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್ನಲ್ಲಿ ವಿಶೇಷ ಪ್ಯಾಕೇಜ್‌ನೊಂದಿಗೆ ಹೋಳಿಯ ರೋಮಾಂಚಕ ಉತ್ಸಾಹವನ್ನು ನೀವು ಅನುಭವಿಸಬಹುದು. ಹೋಳಿ ಹಬ್ಬವು ವಸಂತ ಮತ್ತು ಹೊಸ ಆರಂಭದ ಆಗಮನವನ್ನು ಸೂಚಿಸುತ್ತದೆ. ಇದು ಕೇವಲ ಬಣ್ಣದ ಹಬ್ಬವಲ್ಲ ಅಸಂಖ್ಯಾತ ಅನುಭವಗಳನ್ನು ನೀಡುತ್ತದೆ. ಈ ಅದ್ಬುತ ಅನುಭವವನ್ನು ಶೆರಟನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನೀವು ಪಡೆಯಬಹುದು. ಇಡೀ ದಿನ ಊಟ, ಅನೇಕ ತಿನಿಸುಗಳು ಲಭ್ಯವಿರುತ್ತವೆ.

ಏನು: ಹೋಳಿ ಬ್ರಂಚ್

ಎಲ್ಲಿ: ಫೀಸ್ಟ್, ಶೆರಟನ್ ಗ್ರ್ಯಾಂಡ್ ಬೆಂಗಳೂರು ವೈಟ್‌ಫೀಲ್ಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್

ಯಾವಾಗ: ಮಾರ್ಚ್ 25, 2024

ಸಮಯ: ಊಟ- ಮಧ್ಯಾಹ್ನ 12:30-3:00

ಬೆಲೆ: INR 2399 + ತೆರಿಗೆಗಳು, ಅನಿಯಮಿತ ಪಾನೀಯ ಪ್ಯಾಕೇಜ್ - INR 1199

Holi 2024 Are you in Bengaluru Celebrate Holi at these places

3.ಒನ್8 ಕಮ್ಯೂನ್ ಹೋಳಿ ಥ್ರಿಲ್ (one8 Commune Bangalore )

ಒನ್8 ಕಮ್ಯೂನ್ ಬೆಂಗಳೂರು ಹೋಳಿ ಥ್ರಿಲ್ ನೀಡಲು ನಿರ್ಧರಿಸಿದೆ. ಬೆಂಗಳೂರಿನ ಅತಿದೊಡ್ಡ ರೂಫ್‌ಟಾಪ್ ಅಲ್ಲಿ ಹೋಳಿ ಪಾರ್ಟಿ ಆಯೋಜಿಸಲಾಗಿದೆ. ಈ ರೋಮಾಂಚಕ ಹಬ್ಬದ ಉತ್ಸಾಹದಲ್ಲಿ ನೀವು ಪಾಲ್ಗೊಳ್ಳಬಹುದು. ಹಾಡು, ನೃತ್ಯ, ರೇನ್ ಡ್ಯಾನ್ಸ್ ಎಲ್ಲವೂ ಇಲ್ಲಿ ಇರುತ್ತವೆ.

ಅದ್ಬುತ ಹೋಳಿ ಅನುಭವವನ್ನು ಪಡೆಯಲು ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ one8 ಕಮ್ಯೂನ್‌ನ ಹೋಳಿ ಆಚರಣೆಗಳಲ್ಲಿ ನೀವು ಸೇರಿಕೊಳ್ಳಬಹುದು. ಒಟ್ಟಿಗೆ ನೃತ್ಯ ಮಾಡಿ, ನಗಿಸಿ, ನಕ್ಕು ಆನಂದಿಸಿ. ಟಿಕೆಟ್ ಬುಕಿಂಗ್ ಮತ್ತು ಹೆಚ್ಚಿನ ಮಾಹಿತಿಗಾಗಿ, https://insider.in/holi-rush-one8-commune-holi-2024/event ಗೆ ಭೇಟಿ ನೀಡಿ

ದಿನಾಂಕ: 24 ಮಾರ್ಚ್, ಭಾನುವಾರ

ಸಮಯ: ಮಧ್ಯಾಹ್ನ 1 ಗಂಟೆಯಿಂದ

ಸ್ಥಳ: ಒನ್8 ಕಮ್ಯೂನ್ ಬೆಂಗಳೂರು (one8 Commune Bangalore )

4.ಹೋಲಿ ಬ್ರಂಚ್ ಅಲೋಫ್ಟ್ ಬೆಂಗಳೂರು (NOOK, at Aloft Bengaluru Outer Ring Road )

ಅಲೋಫ್ಟ್ ಔಟರ್ ರಿಂಗ್ ರೋಡ್‌ನಲ್ಲಿ ಹೋಳಿ ಆಚರಣೆ ಆಯೋಜಿಸಲಾಗಿದೆ. ಸುಪ್ರಸಿದ್ಧ ವಿಶ್ವ ಪಾಕಪದ್ಧತಿಗಳೊಂದಿಗೆ, ಸಾಂಪ್ರದಾಯಿಕ ಭಾರತೀಯ ಆಹಾರಗಳು ಈ ವೇಳೆ ಲಭ್ಯವಿರಲಿದೆ. ರುಚಿಕರವಾದ ಔತಣವನ್ನು ಇಲ್ಲಿ ನೀವು ಸವಿಯಬಹುದು.

ನೂಕ್ ಹೋಟೆಲ್‌ನಲ್ಲಿ ಈ ಹೋಳಿ ಆಚರಣೆಯನ್ನು ಆಯೋಜಿಸಲಾಗಿದೆ. ಈ ವೇಳೆ ಇಲ್ಲಿ ಕಚೋರಿ, ದಹಿ ವಡಾ, ಪಾಪ್ರಿ ಚಾಟ್, ಗುಲಾಬ್ ಜಾಮೂನ್, ಖೀರ್, ಮತ್ತು ರುಚಿಕರವಾದ ಭಕ್ಷ್ಯಗಳನ್ನು ಸವಿದು ಆಂದಿಸಬಹುದು. ಲೈವ್ ಸಂಗೀತ ಮತ್ತು ವರ್ಣರಂಜಿತ ಅಲಂಕಾರಗಳನ್ನೂ ನೀವು ಆನಂದಿಸಬಹುದು. ಇದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಶೇಷ ಆಚರಣೆಗೆ ಸೂಕ್ತವಾದ ಸ್ಥಳವಾಗಿದೆ.

ಏನು: ಹೋಲಿ ಬ್ರಂಚ್

ಎಲ್ಲಿ: NOOK ನಲ್ಲಿ, ಅಲೋಫ್ಟ್ ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ (At NOOK, at Aloft Bengaluru Outer Ring Road)

ಯಾವಾಗ: 25ನೇ ಮಾರ್ಚ್, 2024

ಸಮಯ: ಮಧ್ಯಾಹ್ನ 12.30 ರಿಂದ 3.30

ಬೆಲೆ: INR 1799++

ಸೇವೆ: ಬಫೆ

Holi 2024 Are you in Bengaluru Celebrate Holi at these places

5.ಲೀಲಾ ಹೋಳಿ (Leela Bhartiya City)

ಲೀಲಾ ಭಾರತೀಯ ನಗರ (Leela Bhartiya City)ವು ತಮ್ಮ ಲಾಂಗ್ ವೀಕೆಂಡ್ ಸ್ಟೇ ಆಫರ್‌ನೊಂದಿಗೆ ಹೋಳಿಯನ್ನು ಆಚರಿಸುತ್ತಿದೆ. ಈ ಆಫರ್ ಮಾರ್ಚ್ 23 ರಿಂದ ಮಾರ್ಚ್ 25 ರವರೆಗೆ ಲಭ್ಯವಿದೆ. ಇದು ಪ್ರಮುಖ ಆತಿಥ್ಯ ಸೌಲಭ್ಯಗಳನ್ನು ಒಳಗೊಂಡಿದೆ.

ಈ ರೆಸ್ಟೋರೆಂಟ್ ನಲ್ಲಿ ಅತಿಥಿಗಳು ಲೋಟಸ್ ಓರಿಯೆಂಟಲ್‌ನಲ್ಲಿ ಸುಂದರವಾದ ಸನ್‌ಡೌನರ್ ಅನ್ನು ಆನಂದಿಸಬಹುದು. ಐಷಾರಾಮಿ ಮತ್ತು ವಿಶ್ವದರ್ಜೆಯ ಅಮರೀಸ್ ಸ್ಪಾ ಪಡೆಯಬಹುದು. ಹೋಳಿ ಮೆನುಗಳು ಮತ್ತು ಉನ್ನತ ಮಟ್ಟದ ಸಂಗೀತದಂತಹ ಚಟುವಟಿಕೆಗಳು ನಡೆಯಲಿವೆ.

ಏನು: ಹೋಳಿ ಆಚರಣೆ ಮತ್ತು ಲಾಂಗ್ ಸ್ಟೇ ಪ್ಯಾಕೇಜ್

ಎಲ್ಲಿ: ಲೀಲಾ ಭಾರತೀಯ ನಗರ

ಯಾವಾಗ: 23ನೇ ಮಾರ್ಚ್ ನಿಂದ 25ನೇ ಮಾರ್ಚ್ 2024 ರ ನಡುವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+