Gowri Habba 2023: ಗೌರಿ ಹಬ್ಬದ ದಿನಾಂಕ, ಪೂಜೆ ಸಮಯ, ಮಹತ್ವ, ಇತಿಹಾಸ, ಪೂಜಾ ವಿಧಿ
ಗೌರಿ ಹಬ್ಬ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವನ್ನು ಗಣೇಶ ಚತುರ್ಥಿಯ ಹಿಂದಿನ ದಿನ ಆಚರಿಸಲಾಗುತ್ತದೆ. ಗೌರಿ ಹಬ್ಬವು ಪಾರ್ವತಿ ದೇವಿಯ ಗೌರಿ ಅವತಾರಕ್ಕೆ ಸಮರ್ಪಿತವಾಗಿದೆ. ಇದನ್ನು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಗೌರಿ ಹಬ್ಬ ದಿನದಂದು ಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಪವಿತ್ರ ಹಬ್ಬದಂದು ಸಂತೋಷದ ವೈವಾಹಿಕ ಜೀವನಕ್ಕಾಗಿ ಗೌರಿ ದೇವಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ಸ್ವರ್ಣ ಗೌರಿ ವ್ರತವನ್ನು ಆಚರಿಸುತ್ತಾರೆ. ಮನೆಗೆ ಸ್ವರ್ಣಗೌರಿಯನ್ನು ಕರೆತಂದು ಪೂಜೆಯನ್ನು ಮಾಡುತ್ತಾರೆ.

ಜೊತೆಗೆ ಈ ದಿನ ಇತರ ಸಾಮಾನ್ಯ ವಿವಾಹಿತ ಮಹಿಳೆ ತನ್ನ ಹೆತ್ತವರ ಮನೆಗೆ ಭೇಟಿ ನೀಡುವಂತೆ ಗೌರಿ ದೇವಿಯು ಮನೆಗೆ ಬರುತ್ತಾಳೆ ಎಂದು ನಂಬಲಾಗಿದೆ. ಮರುದಿನ ಮಾತೆಯ ಗೌರಿಯನ್ನು ಕೈಲಾಸ ಪರ್ವತಕ್ಕೆ ಕರೆದುಕೊಂಡು ಹೋಗುವಂತೆ ಅವಳ ಮಗ ಗಣೇಶನು ಬರುತ್ತಾನೆ. ಗೌರಿ ಹಬ್ಬವನ್ನು ಮಹಾರಾಷ್ಟ್ರ ಮತ್ತು ಇತರ ಉತ್ತರ ಭಾರತದ ರಾಜ್ಯಗಳಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಗೌರಿ ಹಬ್ಬ 2023 ದಿನಾಂಕ ಮತ್ತು ಪೂಜೆ ಸಮಯ
ಗೌರಿ ಹಬ್ಬ = ಸೋಮವಾರ 18ನೇ ಸೆಪ್ಟೆಂಬರ್ 2023
2023 ಪ್ರಾತಃಕಾಲ ಗೌರಿ ಪೂಜೆ ಮುಹೂರ್ತ/ಸಮಯ = ಬೆಳಿಗ್ಗೆ 5:27 ರಿಂದ ಬೆಳಿಗ್ಗೆ 7:52ರವರೆಗೆ
ಅವಧಿ = 2 ಗಂಟೆಗಳು 25 ನಿಮಿಷಗಳು
ತೃತೀಯಾ ತಿಥಿ ಪ್ರಾರಂಭವಾಗುತ್ತದೆ = 17 ಸೆಪ್ಟೆಂಬರ್ 2023 ರಂದು ಬೆಳಿಗ್ಗೆ 11:08
18 ಸೆಪ್ಟೆಂಬರ್ 2023 ರಂದು ತೃತೀಯಾ ತಿಥಿ ಮುಕ್ತಾಯ = ಮಧ್ಯಾಹ್ನ 12:38
ಗೌರಿ ಹಬ್ಬದ ಮಹತ್ವ:
ಗೌರಿ ಹಬ್ಬದಂದು ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಹದಿನಾರು ರೀತಿಯ ಶೃಂಗಾರವನ್ನು ಮಾಡಿಕೊಮಡು ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುತ್ತಾರೆ. ಈ ದಿನ, ಮಹಿಳೆಯರು ಪಾರ್ವತಿ ದೇವಿಗೆ ಸುಮಂಗಲಿಯರು ಬಳಸುವ ವಸ್ತುಗಳನ್ನು ಅರ್ಪಿಸುತ್ತಾರೆ. ಅದರಲ್ಲಿ ಕುಂಕುಮ, ಮೆಹಂದಿ, ಬಿಂದಿ, ಸಿಂಧೂರ, ಕಾಲುಂಗುರ, ಕಾಜಲ್, ಬಳೆ ಮತ್ತು ಬಾಚಣಿಗೆ ಸೇರಿದಂತೆ ಹದಿನಾರು ವಸ್ತುಗಳನ್ನು ಅರ್ಪಿಸುತ್ತಾರೆ.

ಗೌರಿ ಹಬ್ಬ ನಿಯಮಗಳು:
ಗೌರಿ ಹಬ್ಬವನ್ನು ನೀರಿಲ್ಲದೆ ಉಪವಾಸ ಮಾಡುವ ಮೂಲಕ ಆಚರಿಸಲಾಗುತ್ತದೆ. ಗೌರಿ ಹಬ್ಬ ಅತ್ಯಂತ ಕಷ್ಟಕರವಾದ ಉಪವಾಸಗಳ ವಿಭಾಗದಲ್ಲಿ ಬರುತ್ತದೆ. ಒಮ್ಮೆ ಉಪವಾಸ ಆರಂಭಿಸಿದರೆ ಭವಿಷ್ಯದಲ್ಲಿ ಯಾವುದೇ ವರ್ಷ ನೀವು ಅದನ್ನು ಬಿಡುವಂತಿಲ್ಲ. ಪ್ರತೀ ಬಾರಿ ಹಬ್ಬದಂದು ಇದನ್ನು ಚಾಚೂತಪ್ಪದೆ ಆಚರಣೆ ಮಾಡಲೇಬೇಕು. ಹಗಲಿನಲ್ಲಿ ಮಲಗಬಾರದು ರಾತ್ರಿ ಹೊತ್ತು ಜಾಗರಣೆ ಮಾಡಬೇಕು.
ಗೌರಿ ಹಬ್ಬ ಪೂಜಾ ವಿಧಿ:
ಗೌರಿ ಹಬ್ಬದಂದು ಮುಂಜಾನೆ ಸ್ನಾನ ಮಾಡಿ ಉಪವಾಸ ಮಾಡಿ.
ಪೂಜಾ ಸ್ಥಳವನ್ನು ಹಣ್ಣುಗಳು ಹಾಗೂ ಹೂವುಗಳಿಂದ ಅಲಂಕರಿಸಿ.
ಒಂದು ಪೀಠವನ್ನು ಹಾಕಿ ಅದರ ಮೇಲೆ ಶಿವ, ಪಾರ್ವತಿ ಮತ್ತು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ.
ಶಿವ ಮತ್ತು ಪಾರ್ವತಿಯ ಮಂಉದೆ ದೀಪವನ್ನು ಬೆಳಗಿಸಿ.
ಇದರ ನಂತರ ಮೇಕಪ್ ಪೆಟ್ಟಿಗೆಯಿಂದ ಸುಮಂಗಲಿಯರು ಬಳಸುವ ಎಲ್ಲಾ ವಸ್ತುಗಳನ್ನು ಇರಿಸಿ ಮತ್ತು ಅದನ್ನು ತಾಯಿ ಪಾರ್ವತಿಗೆ ಅರ್ಪಿಸಿ.












Click it and Unblock the Notifications