ಮಹಿಳೆಯರೇ, ಕಂಟಕ ತರುವ ಕಂಚುಕ ಕಿತ್ತು ಬಿಸಾಡಿ!
ಸ್ವಾತಂತ್ರ್ಯ ಯಾರಿಗೆ ಬೇಡ? ಕಟ್ಟುಪಾಡುಗಳಿಂದ ಬೇಸತ್ತ ಮನಸ್ಸು ಸ್ವಚ್ಛಂದದ ವಾತಾವರಣಕ್ಕೆ ಆಗಾಗ ತಹತಹಿಸುತ್ತಿರುತ್ತದೆ. ರೆಕ್ಕೆಬಿಚ್ಚಿ ಹಾರಾಡುತ್ತಲೇ ಇರುವ ಹಕ್ಕಿಗೆ ಕೂಡ ಗೂಡು ಒಂದೊಂದು ಬಾರಿ ಕಟ್ಟಿಹಾಕಿದಂತಾಗುತ್ತದೆ. ಅಂಥದೊಂದು ಬಿಡುಗಡೆ, ಸ್ವಾತಂತ್ರ್ಯ ಸಿಕ್ಕಾಗ ಆಗುವ ಆನಂದವಿದೆಯಲ್ಲ, ಅದನ್ನು ಪದಗಳಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ.
ಅಂಥದೇ ಅನಿರ್ವಚನೀಯ ಆನಂದವನ್ನು, ಹೆಣ್ಣಿನ ಸೌಂದರ್ಯದ ಪ್ರತೀಕವಾಗಿರುವ ಸ್ತನಗಳನ್ನು ಹಗಲಿರುಳು ಬಂಧಿಸಿ ಕವಚಿಹಾಕುವ ಕಂಚುಕವನ್ನು ಕಿತ್ತಿಬಿಸಾಡಿ, ವಿಶ್ವದಾದ್ಯಂತ ಸಹಸ್ರಾರು 'ಮುಕ್ತ ಚಿಂತನೆ'ಯ ಮಹಿಳೆಯರು ಅನುಭವಿಸಿದ್ದಾರೆ. ಸ್ತನಗಳ ಸೌಂದರ್ಯ ಕಾಪಾಡುವ ಕಂಚುಕ, ಕಂಟಕವನ್ನೂ ತರುತ್ತದೆ. ಕುಚದ್ವಯಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಇದು ಎಷ್ಟೇ ಮುಜುಗರಕ್ಕೆ, ಟೀಕೆಗೆ, ಚರ್ಚೆಗೆ ಆಸ್ಪದ ನೀಡಿದ್ದರೂ ಈ ಆಚರಣೆಯ ಹಿಂದಿನ ಉದ್ದೇಶ ಮಾತ್ರ ಉದಾತ್ತವಾದದ್ದು. ಸ್ತನ ಕ್ಯಾನ್ಸರ್ ಇಂದು ಮಹಿಳೆಯರನ್ನು ಜಬಡಿ ಹಾಕುತ್ತಿದೆ. ವಿಶ್ವದಾದ್ಯಂತ ಸ್ತನ ಕ್ಯಾನ್ಸರಿಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಅಕ್ಟೋಬರ್ 13ರಂದು 'No Bra Day' ಆಚರಿಸಲಾಗುತ್ತಿದೆ. [ವಿದ್ಯಾರ್ಥಿನಿಯರಿಂದ ಹೀಗೊಂದು ಪ್ರತಿಭಟನೆ]

ತಮ್ಮ ಸ್ತನಗಳ ಬಗ್ಗೆ ಯಾರಿಗೆ ಅಭಿಮಾನವಿರುವುದಿಲ್ಲ? ಹೆಣ್ಣಿನ ಸೌಂದರ್ಯ ವರ್ಧನೆಯಲ್ಲಿ ಸ್ತನಗಳ ಪಾತ್ರ ಕೂಡ ಮಹತ್ತರದ್ದು ಎಂಬುದನ್ನು ಯಾರು ಕೂಡ ಅಲ್ಲಗಳೆಯುವುದಿಲ್ಲ. ಛೀ ಇದೆಂಥ ಮಾತು ಎಂದು ಮುಖ ಸಿಂಡರಿಸುವವರು ಕೂಡ ಒಳಗಿಂದೊಳಗೇ ತಮ್ಮ ಸುಂದರ ಸ್ತನಗಳ ಕುರಿತು ಹೆಮ್ಮೆ ಪಡುತ್ತಿರುತ್ತಾರೆ, ಸೌಂದರ್ಯ ಕಾಪಾಡಲು ವಿಫಲರಾದವರು ಮರುಗುತ್ತಿರುತ್ತಾರೆ.
ಇಡೀ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳನ್ನಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ 13 ಸ್ತನಗಳು ಸ್ವಾತಂತ್ರ್ಯ ಅನುಭವಿಸುವ ದಿನ ಮಾತ್ರವಲ್ಲ, ಪ್ರತಿಯೊಬ್ಬ ಮಹಿಳೆ ನಿಯಮಿತವಾಗಿ ಸ್ತನಗಳ ಪರೀಕ್ಷೆ ಮಾಡಿಸಿಕೊಂಡು, ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರವಹಿಸುವುದು ಕೂಡ ಅಷ್ಟೇ ಅಗತ್ಯ. [ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!]
ಮಹಿಳೆಯರೇ, ಹೆಣ್ಣು ಸೌಂದರ್ಯದ ಪ್ರತೀಕ. ಬ್ರಾ ಹಿಂಬದಿಯ ಹುಕ್ಕನ್ನು ಕಿತ್ತಿ ಬಿಸಾಕಿ, 24 ಗಂಟೆಗಳ ಕಾಲ ಸ್ತನಗಳನ್ನು ಕಂಚುಕದಿಂದ ಮುಕ್ತವಾಗಿಸಿ. ಪುರುಷರೇ, ನೀವು ಕೂಡ ಹೆಣ್ಣಿನ ಮೇಲೆ ಗೌರವವುಳ್ಳವರಾಗಿದ್ದರೆ ನೇರಳೆ ಬಣ್ಣದ ಬಟ್ಟೆ ಧರಿಸಿ ಈ ಆಚರಣೆಯನ್ನು ಬೆಂಬಲಿಸಿ ಅಂತ ಆಯೋಜಕರು ಮಹಿಳೆಯರು ಮತ್ತು ಪುರುಷರಿಗೆ ಕರೆ ನೀಡಿದ್ದರು.
Even the dog knows its #NoBraDay Who are you???? pic.twitter.com/bC9BTFzLCD
— KYAMA™ (@Elijahkyama) October 13, 2015 ಸೋಷಿಯಲ್ ಮೀಡಿಯಾದಲ್ಲಿ ಕೂಡ 'ನೋ ಬ್ರಾ ಡೇ'ಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಹಲವಾರು ಮಹಿಳೆಯರು ಕಂಚುಕವಿಲ್ಲದ ಚಿತ್ರಗಳನ್ನು ಅಂತರ್ಜಾಲದಲ್ಲಿ ತೇಲಿಸಿಬಿಟ್ಟು ಮುಕ್ತ ಸ್ವಾತಂತ್ರ್ಯ ಅನುಭವಿಸಿದ್ದಾರೆ. ಪುಟ್ಟ ನಾಯಿಮರಿಯೊಂದು ಸುಂದರಿಯ ಕಂಚುಕದ ಲಾಡಿಯನ್ನು ಹಿಡಿದೆಳೆಯುವ ಚಿತ್ರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕೆಲವರು ಕುಹಕದ ಮಾತುಗಳಾಡಿ ದೇಶಾವರಿ ನಗೆಯನ್ನೂ ನಕ್ಕಿದ್ದಾರೆ.
ಸ್ತನ ಕ್ಯಾನ್ಸರಿಗೆ ತುತ್ತಾಗಿ ಕುಚದ್ವಯಗಳನ್ನು ಕಳೆದುಕೊಂಡ ಮಹಿಳೆಯರು ಅನುಭವಿಸುವ ನೋವು, ಸಂಕಟಗಳನ್ನು ನೆನಪಿಸಿಕೊಳ್ಳಿ. ಸ್ತನಗಳನ್ನು ಕಂಚುಕದಿಂದ ಮುಕ್ತಗೊಳಿಸುವುದು ಪ್ರದರ್ಶಿಸುವುದಕ್ಕಲ್ಲ, ಆ ಸ್ತನಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ, ಕ್ಯಾನ್ಸರ್ ಬರದಂತೆ ಮುನ್ನಚ್ಚರಿಕೆ ವಹಿಸಿಕೊಳ್ಳಿ ಎಂಬ ಸಂದೇಶವೂ ರವಾನೆಯಾಗಿದೆ. [ಅತ್ಯಾಚಾರಿಗೆ ಶಾಕ್ ನೀಡುವ ವಿಶಿಷ್ಟ ಬ್ರಾ ಪ್ರದರ್ಶನ]












Click it and Unblock the Notifications