ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು, ರಂಜಾನ್ ನಿಮಿತ್ತ

ಬಿದಿಗೆಯ ಚಂದ್ರ ದರ್ಶನದಿಂದ ಆರಂಭವಾಗುವ ಮೂವತ್ತು ದಿನಗಳ ರಂಜಾನ್, ಬಿದಿಗೆಯ ಚಂದ್ರ ದರ್ಶನದೊಂದಿಗೆ ಮುಕ್ತಾಯವಾಗುವುದು ನಿಯಮ. ಆ ಪ್ರಕಾರ ಇಂದು ಭಾದ್ರಪದ ಶುಕ್ಲ ಬಿದಿಗೆ ರಂಜಾನ್ ಉಪವಾಸದ ಕೊನೆಯ ದಿನ. ನಾಳೆ ಹಬ್ಬ.
ರಂಜಾನ್ ಹಬ್ಬದ ಪ್ರಯುಕ್ತ ದಟ್ಸ್ ಕನ್ನಡ ನಿತ್ಯ ಓದುವ ಮುಸ್ಲಿಂ ಸ್ನೇಹಿತ ಮಕ್ಸೂದ್ ಅಹಮದ್ ಅವರೊಂದಿಗೆ ನಮ್ಮ ಕಚೇರಿಯಲ್ಲಿ ಮಾತುಕತೆ ಇಟ್ಟುಕೊಳ್ಳಲಾಗಿತ್ತು. ಮಕ್ಸೂದ್ ಬಿಟಿಎಂ ಲೇ ಔಟ್ ನಿವಾಸಿ. ಟ್ರಾವಲ್ಸ್ ಕಂಪನಿಯಲ್ಲಿ ಉದ್ಯೋಗಿ.
ಬಾಲ್ಯದಿಂದ ಬೆಂಗಳೂರಿಲ್ಲೇ ವಿದ್ಯಾಭ್ಯಾಸ ಮಾಡಿದ ಮಕ್ಸೂದ್, ಶಾಲೆಗಳಲ್ಲಿ "ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ" ಪ್ರಾರ್ಥನೆ ಮಾಡುತ್ತಾ ಬೆಳೆದವರು. ಹಿಂದೂ ಸ್ನೇಹಿತರಿಗೆ ಪ್ರಿಯವಾಗುವ ರಾಮಾಯಣ, ಮಹಾಭಾರತ ಮುಂತಾದ ಪೌರಾಣಿಕ ಗ್ರಂಥಗಳ ಸಾರಸಂದೇಶಗಳನ್ನು ತಿಳಿಯುವದರಲ್ಲಿ ಅವರಿಗೆ ಅಪಾರ ಆಸಕ್ತಿ.
ಇತ್ತೀಚೆಗೆ ಅವರ ಹೊಸ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಪೂಜೆ ಮಾಡಿಸಿದ ಒಬ್ಬ ಆಸಾಮಿ ಓಂ ಕರ್ನಾಟಕಾಯ ನಮಃ ಓಂ ಇಂಡಿಯಾಯ ನಮಃ ಎಂದು ಮಂತ್ರ ಹೇಳಿದ್ದನ್ನು ಕೇಳಿ ಮಕ್ಸೂದ್ ಬೆಚ್ಚಿಬಿದ್ದಿದ್ದರಂತೆ.
ಇಸ್ಲಾಂ ಎಂದರೇನು? ರಂಜಾನ್ ವೈಶಿಷ್ಟ್ಯ ಏನು? ಎಂದು ಮುಂತಾದ ನಮ್ಮ ಪ್ರಶ್ನೆಗಳಿಗೆ ಅವರು ಕೊಟ್ಟ ಉತ್ತರಗಳ ಸಾರಾಂಶ ಹೀಗಿದೆ.












Click it and Unblock the Notifications