ಗೌರಿಯರಿಂದ ಗೌರಿ-ಗಣೇಶ ಹಬ್ಬ: ಝೀ ಕನ್ನಡ ವಾಹಿನಿ

ಆ ದಿನ ರಜೆಯ ಮಜಕ್ಕಾಗಿ ಕಾಯುತ್ತಿರುವ ಜನರಿಗೆ ಟಿವಿಯಲ್ಲಿ ಬರುವ ಕಾರ್ಯಕ್ರಮಗಳಂತೂ ಹಬ್ಬದೂಟದಷ್ಟೇ ಖುಷಿ ಕೊಡುವ ಸಂಗತಿ. ಮನೆಯವರೆಲ್ಲಾ ಒಟ್ಟಾಗಿ ಕುಳಿತು ಊಟಮಾಡುತ್ತಾ, ಹರಟೆಹೊಡೆಯುತ್ತಾ ಟಿವಿ ನೋಡುವುದೆಂದರೆ ಎಲ್ಲಿಲ್ಲದ ಹಿಗ್ಗು.
ಟಿವಿ ಚಾನೆಲ್ ಗಳಿಗೆ ಈ ವಿಷಯ ಚೆನ್ನಾಗಿ ಗೊತ್ತಿದೆ. ಆದಿನ ವಿಶಿಷ್ಠ ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆ ನೀಡವ ವಿಷಯದಲ್ಲಿ ಚಾನೆಲ್ ಗಳಲ್ಲಿ ಬಹಳಷ್ಟು ಪೈಪೋಟಿ ಇದೆ. ಹಾಗಾಗಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವೇ ಟಿವಿಯಿಂದ ಹರಿದು ಬರುತ್ತದೆ. ಮನರಂಜನೆಗೆ ಮೀಸಲಾಗಿರುವ ಝೀ ಕನ್ನಡ ಚಾನೆಲ್ ನಲ್ಲಿ ಪ್ರತಿವರ್ಷವೂ ಒಳ್ಳೊಳ್ಳೆಯ ಕಾರ್ಯಕ್ರಮಗಳೇ ಇರುತ್ತವೆ.
ಬರಲಿರುವ ಈ ಗೌರಿ-ಗಣೇಶ ಹಬ್ಬದಂದು ಝೀ ಕನ್ನಡ ವಾಹಿನಿಯಿಂದ ಪ್ರಸಾರವಾಗಲಿರುವ ವಿಶೇಷ ಕಾರ್ಯಕ್ರಮಗಳು ಹೀಗಿವೆ ನೋಡಿ...
ಬುಧವಾರ 31/8/2011: ಬೆಳಗ್ಗೆ 7:30 ಕ್ಕೆ ಗೌರಿ ಪೂಜೆ ವಿಶೇಷ
ಗೌರಿ ಪೂಜೆಯ ವಿಧಿವಿಧಾನಗಳ ಸವಿವರ. ಟಿ.ವಿ. ನೋಡ್ಕೊಂಡು ಪೂಜೆ ಮಾಡಬಹುದು.
ಮಧ್ಯಾಹ್ನ 2:00 ಗಂಟೆಗೆ: ನಮ್ಮ ಗೌರಿಯರ ಹಬ್ಬದ ಸಂಭ್ರಮ
ಝೀ ಕನ್ನಡ ವಾಹಿನಿಯ ಧಾರಾವಾಹಿಗಳ ನಾಯಕಿಯರು ಗೌರಿ ಪೂಜೆ ಮಾಡಿ ಸಂಭ್ರಮಿಸುತ್ತಾರೆ. ಬಾಗಿನ ನೀಡುತ್ತಾರೆ.
ಗುರುವಾರ 1/9/2011: ಬೆಳಗ್ಗೆ 8:00 ಕ್ಕೆ
ಬೃಹತ್ ಬ್ರಹ್ಮಾಂಡ ಗಣೇಶ ವಿಶೇಷ
ಗಣೇಶನ ವಿವಿಧ ರೂಪಗಳ ಸಾಂಕೇತಿಕತೆ, ಆರಾಧನಾ ವಿಧಾನಗಳು, ಫಲಾಫಲಗಳ ವಿಶೇಷ ಮಾಹಿತಿ.
ಬೆಳಗ್ಗೆ 10:00 ಕ್ಕೆ
ಚಿ|ಸೌ| ಸಾವಿತ್ರಿ ಗೌರಿ ಗಣೇಶ ವಿಶೇಷ
ಸಾವಿತ್ರಿ ಮನೆಯಲ್ಲಿ ಗಣೇಶ ಹಬ್ಬ. ಗಂಡಸರ ಕೆಲಸ ಎಲ್ಲ ಹೆಂಗಸರು ಮಾಡ್ತಾರೆ. ಹೆಂಗಸರ ಕೆಲಸ ಎಲ್ಲ ಗಂಡಸರು ಮಾಡ್ತಾರೆ!
ಬೆಳಗ್ಗೆ 11:00 ಕ್ಕೆ: ಕಾಮಿಡಿ ಎಕ್ಸ್ ಪ್ರೆಸ್
ಕನ್ನಡದ ಪ್ರಸಿದ್ಧ ಹಾಸ್ಯಗಾರರಿಂದ ನಗೆಹೊನಲು
ಮಧ್ಯಾಹ್ನ 02:00 ಕ್ಕೆ: ಸಿದ್ಧಿವಿನಾಯಕ ಎನಿಮೇಟೆಡ್ ಸಿನಿಮಾ
ಶ್ರೀ ಮಹಾಗಣೇಶನ ಪುರಾಣ ಕಥನ
ರಾತ್ರಿ 10:00 ಕ್ಕೆ: ಪಾಂಡುರಂಗ ವಿಠಲ- ಪಾರ್ವತಿ ಪರಮೇಶ್ವರ
ಗಣೇಶ ಹಬ್ಬದ ವಿಶೇಷ, ಮೊದಲ ಬಾರಿಗೆ ಎರಡು ಹಾಸ್ಯಧಾರಾವಾಹಿಗಳ ಎಲ್ಲ ಕಲಾವಿದರು ಒಂದೇ ಸಂಚಿಕೆಯಲ್ಲಿ.
31 ಹಾಗೂ 1 (ಬುಧವಾರ & ಗುರುವಾರ) ಎರಡೂ ದಿನ ಮದ್ಯಾನ್ಹ 01:00 ಕ್ಕೆ ಒಗ್ಗರಣೆ ಡಬ್ಬಿ
ವಿಶೇಷ ಅಡುಗೆ ವಿಶೇಷ ವ್ಯಕ್ತಿಗಳೊಂದಿಗೆ
ಗಣೇಶ ಹಬ್ಬದ ಸಂಭ್ರಮದ ಜೊತೆಯಲ್ಲಿ ಝೀ ಕನ್ನಡದ ವಿಶೇಷ ಕಾರ್ಯಕ್ರಮಗಳನ್ನು ಆನಂದಿಸಿ!












Click it and Unblock the Notifications