ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾನತೆಯ ಬೆಳಕು

|
Google Oneindia Kannada News

Raghavendra, Udupi
ಕತ್ತಲೆ ಮಾಯೆ ಅಳಿಸಲು ಬಂದ ಜ್ಞಾನದ ಬೆಳಕು
ಅಜ್ಞಾನದಾಗರವ ತೊಳೆಯಲು ಬಂದ ಸುಜ್ಞಾನದ ಬೆಳಕು
ಮನಸ್ಸಿನ ಮೂಲೆಯ ಆವರಿಸಲು ಬಂದ ನೆಮ್ಮದಿಯ ಬೆಳಕು

ಶತಶತಮಾನದ ಬೆಳಕು, ಹೊಸಹೊಸ ಕನಸ ಹಚ್ಚಿದ ಬೆಳಕು
ಬಾನ ಬಯಲ ಸೀಮೆಯಲ್ಲಿ ಕುಣಿಯುವ ಬಣ್ಣಗಳ ಬೆಳಕು
ಬೇಧ ಭಾವ ಮಾಡದೇ ಚೆಲ್ಲುವ ಸಮಾನತೆಯ ಬೆಳಕು

ಮನೆಮಂದಿಗೆಲ್ಲ ನಗುವ ಹಂಚಲು ಬರುವ ಬೆಳಕು
ಊರೆಲ್ಲಾ ಬೆಳಗಲು ಮುಂದಾಗುವ ಆಕಾಶದ ಬೆಳಕು
ಕಹಿಯ ಸುಟ್ಟು , ಕಷ್ಟ ಕಳೆದು, ಮನವ ಬೆಳಗುವ ಬೆಳಕು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X