Get Updates
Get notified of breaking news, exclusive insights, and must-see stories!

ನಿಮ್ಮ ಪ್ರೀತಿ ಪಾತ್ರರಿಗೆ ದಸರಾ, ವಿಜಯ ದಶಮಿ ಶುಭಾಶಯ ಹೀಗೆ ತಿಳಿಸಿ

ದೇಶದಾದ್ಯಂತ ಭಾನುವಾರ ವಿಜೃಂಭಣೆ ಮತ್ತು ಭಕ್ತಿಭಾವದಿಂದ ದಸರಾ ಮತ್ತು ವಿಜಯದಶಮಿ ಆಚರಿಸಲಾಗುತ್ತಿದೆ. ದುರ್ಗಾಪೂಜೆ ಮತ್ತು ನವರಾತ್ರಿ ನಂತರ ಬರುವ ದಿನವು ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿದ ದಿನ. ಹಾಗಾಗಿ ನವರಾತ್ರಿ ಸಮಯದಲ್ಲಿ ದುರ್ಗಾದೇವಿಯನ್ನು ಒಂಬತ್ತು ಅವತಾರಗಳಲ್ಲಿ ಪೂಜಿಸಲಾಗುತ್ತದೆ.

ರಾವಣನ ಮೇಲೆ ಭಗವಾನ್ ರಾಮನ ವಿಜಯ ಮತ್ತು ಮಹಿಷಾಸುರನ ವಿರುದ್ಧ ದುರ್ಗಾ ದೇವಿಯ ವಿಜಯವನ್ನು ಸಂಭ್ರಮಿಸಲು ವಿಜಯದಶಮಿ ಆಚರಿಸಲಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಭೀತಿಯಿಂದ ಅದ್ಧೂರಿ ದುರ್ಗಾಪೂಜಾ ಆಚರಣೆಗೆ ತಡೆ ನೀಡಲಾಗಿದೆ. ಕೋಲ್ಕತ್ತಾದಲ್ಲಿ ಕೆಲವು ಪೆಂಡಾಲ್‌ಗಳಲ್ಲಿ ನಡೆಯುವ ಪೂಜೆಯಲ್ಲಿ ಕಡಿಮೆ ಸಂಖ್ಯೆಯ ಜನರು ಭಾಗವಹಿಸಲು ಅನುಮತಿ ನೀಡಲಾಗಿದೆ.

Happy Dasara Wishes, Images, Quotes, Greetings, Whatsapp & Facebook Status Messages in kannada

ನವರಾತ್ರಿ ಹಬ್ಬ ನಾಡಿನಾದ್ಯಂತ ಜನರು ಸಂಭ್ರಮಿಸುವ ಹಬ್ಬ. ಋಣಾತ್ಮಕ ಶಕ್ತಿಯನ್ನು ನಿವಾರಿಸಿ, ಧನಾತ್ಮಕ ಶಕ್ತಿಯನ್ನು ತುಂಬುವ ಶಕ್ತಿರೂಪಿಣಿ ದುರ್ಗಾಮಾತೆಯ ಆರಾಧನಾ ಮಹೋತ್ಸವವೇ ನವದಿನಗಳು ಆಚರಿಸಲ್ಪಡುವ ನವರಾತ್ರಿ.

ನವರಾತ್ರಿಯ ಒಂಭತ್ತು ದಿನಗಳು ನವದುರ್ಗೆಯನ್ನು ಇಟ್ಟು ಪೂಜಿಸಲಾಗುತ್ತದೆ. ದಸರಾ ಉತ್ಸವದ ಹತ್ತನೇ ದಿನ ವಿಜಯದಶಮಿ. ದಸರಾ ಎಂದೇ ಜನಪ್ರಿಯವಾಗಿರುವ ಶಕ್ತಿ ಪೂಜೆಯ ಶರನ್ನವರಾತ್ರಿಗಳ ನಂತರ ಒಂಭತ್ತು ದಿನಗಳ ನವರಾತ್ರಿ ಸಂಭ್ರಮದ ಬಳಿಕ ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ.

ಭಾರತದ ಇತರ ಹಲವು ರಾಜ್ಯಗಳಲ್ಲಿ, ಮಹಿಷಾಸುರ ರಾಕ್ಷಸನ ವಿರುದ್ಧ ದುರ್ಗಾ ದೇವಿಯು ಹೋರಾಡಿ ವಿಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಪುರಾಣಗಳ ಪ್ರಕಾರ, ಮಹಿಷಾಸುರನು ಅಮರನಾಗಲು ತೀವ್ರ ತಪಸ್ಸು ಮಾಡಿದನು. ಹೇಗಾದರೂ, ಬ್ರಹ್ಮ ದೇವರು ಅವನಿಗೆ ಅದು ಸಾಧ್ಯವಿಲ್ಲ ಎಂದು ಹೇಳಿದಾಗ, ಸೊಕ್ಕಿನ ರಾಕ್ಷಸನು ಅವನ ಕೋರಿಕೆಯನ್ನು ಬದಲಾಯಿಸಿದನು, ಬದಲಾಗಿ, ಅವನನ್ನು ಕೊಲ್ಲಬೇಕಾದರೆ, ಅದು ಮಹಿಳೆಯಿಂದ ಆಗಬೇಕೆಂದು ವರವನ್ನು ಬಯಸಿದನು. ಆಳವಾಗಿ ಪೂರ್ವಾಗ್ರಹ ಪೀಡಿತನಾದ ಮಹಿಷಾಸುರನು ತನ್ನನ್ನು ಕೊಲ್ಲುವಷ್ಟು ಬಲಶಾಲಿ ಮಹಿಳೆ ಜನಿಸಲು, ಇರಲು ಸಾಧ್ಯವಿಲ್ಲ ಎನ್ನುವ ಕುರುಡು ನಂಬಿಕೆಯನ್ನು ಹೊಂದಿದ್ದನು.

ದಂತಕಥೆಯ ಪ್ರಕಾರ ರಾವಣನು ತಾಯಿ ಚಂಡಿ ದೇವಿಯನ್ನು ಮೆಚ್ಚಿಸಲು ಆರಾಧಿಸುತ್ತಿದ್ದನು. ಆದರೆ ಪೂಜೆಯ ಸಮಯದಲ್ಲಿ, ಅವರು ಸಹಸ್ರ ಚಂಡಿ ಪಾಠದ ಮೊದಲ ಮಂತ್ರವಾದ 'ಹರಿಣಿ' ಎನ್ನುವ ಪದವನ್ನು ಹರಿಣಿ ಎಂದು ಹೇಳುವ ಬದಲು 'ಕರಿಣಿ' ಎಂದು ಓದಿದರು. ಇದರಲ್ಲಿ, ಮಂತ್ರದ ಅರ್ಥವು 'ಹ' ಬದಲಿಗೆ 'ಕ' ಪಠಣದಿಂದ ಬದಲಾಯಿತು. ಈ ಕಾರಣದಿಂದ ತಾಯಿ ಚಂಡಿಯ ತ್ಯಾಗ ಯಶಸ್ವಿಯಾಗಲಿಲ್ಲ ಮತ್ತು ರಾವಣನು ಮರ್ಯಾದಾ ಪುರುಷೋತ್ತಮನ ಕೈಯಲ್ಲಿ ಸತ್ತನು.

ನಿಮ್ಮ ಪ್ರೀತಿಪಾತ್ರರಿಗೆ ನೀವು ಕಳುಹಿಸಬಹುದಾದ ಕೆಲವು ವಿಜಯದಶಮಿ ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ:
-ತಾಯಿ ಚಾಮುಂಡೇಶ್ವರಿ ಸರ್ವರಿಗೂ ಶುಭವನ್ನುಂಟು ಮಾಡಲಿ

-ನಾಡಹಬ್ಬ ದಸರಾ ಶುಭಾಶಯಗಳು, ಕನ್ನಡಾಂಬೆ ಭುವನೇಶ್ವರಿ ಕೃಪೆ ನಿಮಗಿರಲಿ

-ನಾಡಹಬ್ಬ ದಸರಾ ನಿಮ್ಮ ಬಾಳಲ್ಲಿ ಸಂಪತ್ತು,ನೆಮ್ಮದಿ, ಆರೋಗ್ಯ ತರಲಿ ದಸರಾ ಹಬ್ಬದ ಶುಭಾಶಯಗಳು

-ನವರಾತ್ರಾಧಿಪತಿಯಾದ, ನವನವೋನ್ಮೇಷಶಾಲಿನಿಯಾದ, ಸಮಸ್ತ ಮನುಕುಲದ ಮಾತೆಯಾದ, ನವದುರ್ಗೆಯ ಸಿದ್ಧಿ- ಅನುಗ್ರಹಗಳು ಎಲ್ಲರಿಗೂ ಲಭಿಸಲೆಂಬ ಶುಭಾಶೀರ್ವಾದಗಳು
-ನಾಡಹಬ್ಬ -ದಸರಾ, ನವರಾತ್ರಿಯ ವಿಶೇಷ ಶುಭಾಷಯಗಳು

-ಭವದ ಕತ್ತಲೆ ಕಳೆದು, ಮನದ ಸಂಕಟ ಅಳಿಸಿ, ಭುವಿದಿವಿಗಳ ಬದುಕಿನುಸಿರ ಬೆಳಗಿಸಲಿ, ಸತ್ಯದ ದಿವ್ಯ ಪ್ರಭೆಯಲ್ಲಿ ಜಗ ಝಗಮಗಿಸಲೆಂದು ಗುರುವಿನ ಆಶೀರ್ವಾದವಾಗಲಿ

- ಶ್ರೀರಾಮ ನಿಮ್ಮ ಯಶಸ್ಸಿನ ಹಾದಿಯನ್ನು ಬೆಳಗಿಸುತ್ತಿರಲಿ ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ನೀವು ವಿಜಯ ಸಾಧಿಸಲಿ. ದಸರಾ ಹಬ್ಬದ ಶುಭಾಶಯ!

- ದುರ್ಗಾದೇವಿಯು ನಿಮ್ಮ ಎಲ್ಲ ಅಡೆತಡೆಗಳನ್ನು ನಿವಾರಿಸಲಿ! ಹ್ಯಾಪಿ ದಸರಾ!

- ನಿಮ್ಮಲ್ಲಿರುವ ರಾಕ್ಷಸನು ಯಾವಾಗಲೂ ಸೋಲನುಭವಿಸಲಿ ಮತ್ತು ದೇವತೆ ನಿಮಗೆ ಒಳಿತು ಮಾಡಲಿ. ಹ್ಯಾಪಿ ದಸರಾ!

- ಹ್ಯಾಪಿ ವಿಜಯದಶಮಿ! ರಾವಣನ ಪ್ರತಿರೂಪದೊಂದಿದೆ ಎಲ್ಲಾ ನಕಾರಾತ್ಮಕತೆ ಸುಟ್ಟುಹಾಕಿ ಮತ್ತು ಒಳ್ಳೆಯ ಆಲೋಚನೆಗಳು ಮಾತ್ರ ನಿಮ್ಮನ್ನು ಸುತ್ತುವರಿಯಲಿ.

- ನಿಮ್ಮೊಳಗಿನ ರಾವಣನನ್ನು ನೀವು ಜಯಿಸಿ. ಹ್ಯಾಪಿ ವಿಜಯದಶಮಿ!

-ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು

-ದಸರಾ ಹಬ್ಬದ ಶುಭಾಶಯಗಳು ಚಾಮುಂಡೇಶ್ವರಿ ದೇವಿ ನಿಮಗೆ ಐಶ್ವರ್ಯ, ಆರೋಗ್ಯ ನೀಡಿ ಅನುಗ್ರಹಿಸಲಿ.

-ದುರ್ಗಾ ಮಾತೆ ನಿಮ್ಮ ಬದುಕಿನ ಹಾದಿಯಲ್ಲಿ ನಗುವನ್ನು ತುಂಬಿರಲಿ, ನಾಡ ಹಬ್ಬ ದಸರಾದ ಶುಭಾಶಯಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+