ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡಹಬ್ಬ ದಸರೆಗೆ ಹೆಗ್ಗಡೆ ಅವರಿಂದ ಚಾಲನೆ

By Mahesh
|
Google Oneindia Kannada News

Veerendra Heggade
ಮೈಸೂರು, ಅ.8: ಇಂದು ಬೆಳಗ್ಗೆ 8:31ರಿಂದ 9:01ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಈ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಸತ್ಯನಾರಾಯಣ ಉಪಸ್ಥಿತರಿದ್ದರು.

ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಅ.11 ರಂದು ವಿಶ್ವಾಸ ಮತ ಗಳಿಸುವೆ. ಬಿಜೆಪಿ ಸರ್ಕಾರ ಸುಭದ್ರವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಶರನ್ನವರಾತ್ರಿ ಇಂದಿನಿಂದ ಆರಂಭಗೊಂಡು ಅ.17 ರ ವಿಜಯದಶಮಿರಂದು ಸಂಪನ್ನವಾಗಲಿದೆ.

ದಸರಾ ಕಾರ್ಯಕ್ರಮಗಳ ವಿವರ:

ಬೆಳಗ್ಗೆ 10 ಗಂಟೆಗೆ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ರಾಜ್ಯ ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಗೋವಿಂದ ಎಂ. ಕಾರಜೋಳ ಮತ್ತು ಚಲನಚಿತ್ರ ನಟ ರಮೇಶ್ ಚಾಲನೆ ನೀಡಿದರು.

ಬೆಳಗ್ಗೆ 10:30 ಗಂಟೆಗೆ ದಸರಾ ವಸ್ತು ಪ್ರದರ್ಶನಕ್ಕೆ ಅರಮನೆ ಆವರಣದಲ್ಲಿ ರಾಜ್ಯ ಪ್ರವಾಸೋದ್ಯಮ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಜಿ. ಜನಾರ್ದನರೆಡ್ಡಿ ಚಾಲನೆ ನೀಡುವರು.

ಬೆಳಗ್ಗೆ 11:30 ಗಂಟೆಗೆ ದಸರಾ ಪ್ರವಾಸೋದ್ಯಮ ಕಾರ್ಯಕ್ರಮಕ್ಕೆ ಅರಮನೆ ಆವರಣದಲ್ಲಿ ರಾಜ್ಯ ಪ್ರವಾಸೋದ್ಯಮ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಜನಾರ್ದನ ರೆಡ್ಡಿ ಚಾಲನೆ ನೀಡುವರು.

ಮಧ್ಯಾಹ್ನ 12:30 ಗಂಟೆಗೆ ದಸರಾ ಛಾಯಾಚಿತ್ರ ಪ್ರದರ್ಶನಕ್ಕೆ ಅರಮನೆ ಬದರಿ ಹಾಲ್‌ನಲ್ಲಿ ಫ್ರಾನ್ಸ್ ದೇಶದ ಖ್ಯಾತ ಇತಿಹಾಸ ತಜ್ಞ ರಾದ ವಸುಂಧರಾ ಸಿಲಿಯೋಸ ಮತ್ತು ಪೀರ್ ಫಿಲ್ವಿನ್ ಸಿಲಿಯೋನ ದಂಪತಿಗಳು ಚಾಲನೆ ನೀಡುವರು.

ಮಧ್ಯಾಹ್ನ 2:45 ಗಂಟೆಗೆ ಕಾಡಾ ಕಚೇರಿ ಆವರಣದಲ್ಲಿ ದಸರಾ ಆಹಾರ ಮೇಳಕ್ಕೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರ ಸಚಿವ ವಿ.ಸೋಮಣ್ಣ ಚಾಲನೆ ನೀಡುವರು.

ಮಧ್ಯಾಹ್ನ 3:30 ಗಂಟೆಗೆ ಮೈಸೂರು ದೊಡ್ಡಕೆರೆ ಮೈದಾನದ ವಸ್ತು ಪ್ರದರ್ಶನ ಆವರಣದಲ್ಲಿರುವ ಡಿ. ದೇವರಾಜ ಅರಸು ವಿವಿದೋದ್ಧೇಶ ಕ್ರೀಡಾಂಗಣ ದಲ್ಲಿ ದಸರಾ ಕುಸ್ತಿ ಪಂದ್ಯಾವಳಿಗೆ ರಾಜ್ಯ ಸಮೂಹ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ, ಸಣ್ಣ ಉಳಿತಾಯ ಮತ್ತು ಲಾಟರಿ ಸಚಿವ ರೇವೂ ನಾಯಕ್ ಬೆಳಮಗಿ ಚಾಲನೆ ನೀಡುವರು.

ಮಧ್ಯಾಹ್ನ 4:00 ಗಂಟೆಗೆ ಕರ್ಜನ್ ಪಾರ್ಕ್ ಆವರಣದಲ್ಲಿ ದಸರಾ ಫಲಪುಷ್ಪ ಪ್ರದರ್ಶನಕ್ಕೆ ರಾಜ್ಯ ಸಕ್ಕರೆ ಮತ್ತು ತೋಟಗಾರಿಕೆ ಸಚಿವ ಎಸ್.ಎ. ರವೀಂದ್ರನಾಥ್ ಚಾಲನೆ ನೀಡುವರು.

ಮಧ್ಯಾಹ್ನ 4:30ಕ್ಕೆ ರಂಗಾಯಣ ಆವರಣದಲ್ಲಿ ದಸರಾ ರಂಗಾಯಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ ಚಾಲನೆ ನೀಡುವರು.

ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ ಚಾಲನೆ ನೀಡುವರು.

ಸಂಜೆ 6 ಗಂಟೆಗೆ ಮೈಸೂರು ಅರಮನೆ ಆವರಣ ದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಚಲನಚಿತ್ರ ರಂಗದ ಹಿನ್ನೆಲೆ ಗಾಯಕ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಚಾಲನೆ ನೀಡುವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X