ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಪ್ರಚಾರ : ಕಲಾ ಜಾಥಾಕ್ಕೆ ಚಾಲನೆ

By Mahesh
|
Google Oneindia Kannada News

ಮೈಸೂರು, ಸೆ. 27: ರಾಜ್ಯಾದ್ಯಂತ ಮೈಸೂರು ದಸರಾ ಮಹೋತ್ಸವಕ್ಕೆ ಪ್ರಚಾರ ನೀಡುವ ಸಲುವಾಗಿ ವಿಶೇಷವಾಗಿ ಸಿದ್ದಪಡಿಸಲಾದ 4 ವಾಹನಗಳು ಹಾಗೂ ಕಲಾವಿದರ ತಂಡವನ್ನು ಒಳಗೊಂಡ ದಸರಾ ವಾಹಿನಿಗೆ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಮೈಸೂರು ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷ ಎಸ್.ಎ. ರಾಮದಾಸ್ ಚಾಲನೆ ನೀಡಿದರು.ಉಪಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಹರ್ಷಗುಪ್ತ, ಪೋಲೀಸ್ ಆಯುಕ್ತರು ಸುನಿಲ್ ಅಗರವಾಲ್, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೈಸೂರು ಅರಮನೆ ಮುಂಭಾಗ ವರ್ಣಮಯ ಚಾಲನೆ ಪಡೆದುಕೊಂಡ ಜಾಥಾ, ಡೊಳ್ಳುಕುಣಿತ, ನಗಾರಿ, ಪೂಜಾ ಕುಣಿತ, ಕಂಸಾಳೆ ಕಲಾವಿದರ ಆಕರ್ಷಕ ಪ್ರದರ್ಶನದೊಡನೆ ಜನಮನ ಸೆಳೆಯಿತು. ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳೂ ಸಹ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿದವು.

ಜನತಾ ದಸರಾವಾಗಲಿ: ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ರಾಮದಾಸ್, ರಾಜ್ಯದ ಎಲ್ಲಾ ಭಾಗಗಳ ಜನರು ದಸರಾದಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಅವರಿಗೆ ಆಮಂತ್ರಣ ನೀಡಲು ಈ ಕಲಾ ವಾಹಿನಿ ನಾಲ್ಕು ದಿಕ್ಕುಗಳಲ್ಲಿ ಹೊರಟಿದೆ ಎಂದು ಹೇಳಿದರು.

ಇಂದಿನಿಂದ ಒಂದು ವಾರಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಜಾಥಾ ಸಂಚರಿಸಲಿದ್ದು, ವಾಹನದ ಜೊತೆಗಿರುವ ಕಲಾವಿದರ ಜತೆಗೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ತಂಡಗಳು ಜತೆಗೂಡಿ ಪ್ರಮುಖ ರಸ್ತೆಗಳಲ್ಲಿ ಪ್ರಚಾರ ನಡೆಸಲಿವೆ.

ಮೊದಲನೇ ತಂಡ ತಂಡ ಸಂಚರಿಸುವ ಮಾರ್ಗ:
* ದಿನಾಂಕ 26ರಂದು ಮೈಸೂರು, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ, ಸುಳ್ಯಾ, ಪುತ್ತೂರು, ಧರ್ಮಸ್ಥಳ.
* ದಿನಾಂಕ 27ರಂದು ಧರ್ಮಸ್ಥಳ, ಬೆಳ್ತಂಗಡಿ, ಮಂಗಳೂರು, ಸುರತ್ಕಲ್, ಉಡುಪಿ, ಬ್ರಹ್ಮಾವರ, ಕುಂದಾಪುರ, ಕೊಲ್ಲೂರು.
* ದಿನಾಂಕ 28 ರಂದು ಕೊಲ್ಲೂರು, ಬೈಂದೂರು, ಮುರಡೇಶ್ವರ, ಕುಮಟ, ಗೋಕರ್ಣ, ಅಂಕೋಲ, ಕಾರವಾರ.
* ದಿನಾಂಕ 29 ರಂದು ಕಾರವಾರ, ಬೆಳಗಾಂ, ಬೈಲಹೊಂಗಲ, ಕಿತ್ತೂರು, ಧಾರವಾಡ, ಹುಬ್ಬಳ್ಳಿ, ಹಾವೇರಿ, ಬ್ಯಾಡಗಿ, ಹರಿಹರ, ದಾವಣಗೆರೆ.
* ದಿನಾಂಕ 30 ರಂದು ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ಶಿರಾ ಚಿಕ್ಕನಾಯಕನಹಳ್ಳಿ, ಕಿಬ್ಬನಹಳ್ಳಿ, ತುರುವೆಕೆರೆ, ತಿಪಟೂರು, ಅರಸೀಕೆರೆ.
* ಅ.1 ರಂದು ಅರಸೀಕೆರೆ, ಹಳೇಬೀಡು, ಬೇಲೂರು, ಹಾಸನ, ಹೊಳೆನರಸೀಪುರ, ಕೆ.ಆರ್.ನಗರಗಳಲ್ಲಿ ಪ್ರಚಾರ ನೀಡಿ ಮೈಸೂರು ತಲುಪಲಿದೆ.

ಎರಡನೇ ತಂಡ ಸಂಚರಿಸುವ ಮಾರ್ಗ:
* ದಿನಾಂಕ 26 ರಂದು ಮೈಸೂರು, ನಂಜನಗೂಡು, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಮಳವಳ್ಳಿ, ಮಂಡ್ಯ.
* ದಿನಾಂಕ 27 ರಂದು ಮಂಡ್ಯ, ಮದ್ದೂರು, ರಾಮನಗರ, ಕನಕಪುರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ.
* ದಿನಾಂಕ 28 ರಂದು ಬೆಂಗಳೂರು, ಹೊಸಕೋಟೆ, ಕೋಲಾರ, ಬಂಗಾರಪೇಟೆ, ಕೆಜಿಎಫ್, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ ಹಾಗೂ ಮುಳಬಾಗಿಲು.
* ದಿನಾಂಕ 29 ರಂದು ಮುಳಬಾಗಿಲು, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು.
* ದಿನಾಂಕ 30 ರಂದು ತುಮಕೂರು, ಗುಬ್ಬಿ, ನಿಟ್ಟೂರು, ಕಡಬ, ಮಾಯಸಂದ್ರ, ಚುಂಚನಗಿರಿ.
* ಅ.1ಚುಂಚನಗಿರಿ, ನಾಗಮಂಗಲ, ಮೇಲುಕೋಟೆ, ಶ್ರವಣಬೆಳಗೊಳ, ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ರಂಗನತಿಟ್ಟು ಮಾರ್ಗವಾಗಿ ಸಂಚರಿಸಿ ಮೈಸೂರು ತಲುಪಲಿದೆ.

ಮೂರನೇ ತಂಡ ಸಂಚರಿಸುವ ಮಾರ್ಗ:
* ದಿನಾಂಕ 26ರಂದು ಮೈಸೂರು, ಕಡೂರ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ.
* ದಿನಾಂಕ 27 ರಂದು ಶಿವಮೊಗ್ಗ, ಶಿಕಾರಿಪುರ, ಶಿರಾಳಕೊಪ್ಪ, ಹಿರೇಕೆರೂರು, ಗದಗ ಜಿಲ್ಲೆ.
* ದಿನಾಂಕ 28 ರಂದು ಗದಗ, ಪಟ್ಟದಕಲ್ಲು, ಐಹೊಳೆ, ಬಾದಾಮಿ, ಬಾಗಲಕೋಟೆ.
* ದಿನಾಂಕ 29 ರಂದು ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ.
* ದಿನಾಂಕ 30 ರಂದು ಗುಲ್ಬರ್ಗಾ, ಜೇವರ್ಗಿ, ಶಹಾಪುರ, ಸುರಪುರ, ಲಿಂಗಸಗೂರು, ಗಂಗಾವತಿ, ಹಂಪಿ.
* ಅ.1ರಂದು ಹಂಪಿ, ಬಳ್ಳಾರಿ, ಹಿರಿಯೂರು, ಹುಳಿಯಾರು, ತಿಪಟೂರು ಮಾರ್ಗವಾಗಿ ಮೈಸೂರು ತಲುಪಲಿದೆ.

ನಾಲ್ಕನೇ ತಂಡ ಸಂಚರಿಸುವ ಮಾರ್ಗ:
* ದಿನಾಂಕ26 ರಂದು ಮೈಸೂರು, ಬನ್ನೂರು, ಸೋಮನಾಥಪುರ, ತಲಕಾಡು, ಟಿ.ನರಸೀಪುರ, ಸುತ್ತೂರು.
* ದಿನಾಂಕ 27ರಂದು ಸುತ್ತೂರು, ವರುಣಾ, ಮೈಸೂರು, ಇಲವಾಲ, ಹಂಪಾಪುರ, ಸರಗೂರು, ಬೀಚನಹಳ್ಳಿ.
* ದಿನಾಂಕ 28 ರಂದು ಬೀಚನಹಳ್ಳಿ, ಹೆಚ್.ಡಿ.ಕೋಟೆ, ಅಣ್ಣೂರು, ಹುಣಸೂರು, ದರ್ಗಾ (ರತ್ನಪುರಿ), ಕಂಪ್ಲಾಪುರ, ಪಿರಿಯಾಪಟ್ಟಣ ಹಾಗೂ ಬೈಲುಕುಪ್ಪೆ.
* ದಿನಾಂಕ 29 ರಂದು ಬೈಲುಕುಪ್ಪೆ, ಬೆಟ್ಟದಪುರ, ಚುಂಚನಕಟ್ಟೆ, ಮಿರ್ಲೆ ಮತ್ತು ಕೆ.ಆರ್.ನಗರ.
* ದಿನಾಂಕ 30ರಂದು ಕೆ.ಆರ್.ನಗರ, ಬೇರ್ಯ, ಹಂಪಾಪುರ, ಬೋಳನಹಳ್ಳಿ, ಬಿಳಿಕೆರೆ, ಇಲವಾಲ, ಜಯಪುರ, ಶ್ರೀರಾಂಪುರ (ಹೆಚ್.ಡಿ.ಕೋಟೆ ರಸ್ತೆ).
* ಅ.1 ರಂದು ಬೋಗಾದಿ, ಹೂಟಗಳ್ಳಿ, ವಿಜಯನಗರ 1ನೇ ಹಂತ, 2ನೇ ಹಂತ, ಸರಸ್ವತಿಪುರಂ, ತೊಣಚಿಕೊಪ್ಪಲು, ಗೋಕುಲಂ, ವಿವೇಕಾನಂದ ಸರ್ಕಲ್, ಕುವೆಂಪುನಗರ, ಬಂಡೀಪಾಳ್ಯ, ಕಲ್ಯಾಣಗಿರಿ, ಆಲನಹಳ್ಳಿ, ಸಿದ್ಧಾರ್ಥನಗರ, ನಜರ್‌ಬಾದ್, ಇಟ್ಟಿಗೆಗೂಡು, ಗುಂಡೂರಾವ್‌ನಗರ, ವಿದ್ಯಾರಣ್ಯಪುರಂ, ಅಶೋಕಪುರಂ, ಜಯನಗರ, ಕೆ.ಜಿ.ಕೊಪ್ಪಲು ಮಾರ್ಗವಾಗಿ ಅರಮನೆ ಆವರಣವನ್ನು ತಲುಪಲಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X