ನಾಲ್ವಡಿ ಒಡೆಯರ ದಸರಾ

ಈ ಎಲ್ಲವನ್ನೂ ನೋಡಲು ಅವರಿಗೆ ಸಿಗುತ್ತಿದ್ದುದು ವರ್ಷದಲ್ಲಿ ಒಂದೇ ಅವಕಾಶ....

ಆಗ, ಈಗಿನಂತೆ ಸಿನಿಮಾ ಮಂದಿರಗಳಾಗಲೀ, ಹೆಚ್ಚಿನ ನಾಟಕ ಮಂದಿರಗಳಾಗಲೀ ಇರಲಿಲ್ಲ. ಜನರಿಗೆ ಇಂತಹ ನೃತ್ಯ, ಸಂಗೀತ, ಜಾನಪದ ಕ್ರೀಡೆ - ನೃತ್ಯಗಳನ್ನು ಬೇಕಾದಾಗ ನೋಡುವ ಭಾಗ್ಯ ಇರಲಿಲ್ಲ. ಈ ಎಲ್ಲವನ್ನೂ ನೋಡಲು ಅವರಿಗೆ ಸಿಗುತ್ತಿದ್ದುದು ವರ್ಷದಲ್ಲಿ ಒಂದೇ ಅವಕಾಶ. ಅದು ದಸರೆಯಲ್ಲಿ ಮಾತ್ರ. ಹೀಗಾಗಿ ಮುಂಗಾರಿನ ಮಳೆಗೆ ತಮ್ಮ ಹೊಲವನ್ನು ಉತ್ತಿ, ಬಿತ್ತಿ, ಸುಗ್ಗಿಗಾಗಿ ಕಾಯುವ ಮಧ್ಯೆ ಆಶ್ವಯುಜದಲ್ಲಿ ಬಿಡುವಾಗಿರುತ್ತಿದ್ದ ನಾಡಿನ ಜನತೆಯೆಲ್ಲಾ ತಮ್ಮ ನಿತ್ಯದ ಜಂಜಾಟ ಮರೆತು ಮನರಂಜನೆ ಪಡೆಯಲಿ ಎಂದು ನಾಡಿನ ಪ್ರಭುಗಳು ಈ ಅದ್ದೂರಿಯ ಉತ್ಸವ ನಡೆಸುತ್ತಿದ್ದರು.

ನಾಡಿನ ಮೂಲೆ ಮೂಲೆಯ ಹಳ್ಳಿಯಿಂದ ಬರುತ್ತಿದ್ದ ಜನರಿಗೆ ತಮ್ಮ ರಾಜರನ್ನು ನೋಡುವ ಸೌಭಾಗ್ಯವೂ ಈ ಸಂದರ್ಭದಲ್ಲಿ ದೊರಕುತ್ತಿತ್ತು. ಎತ್ತರವಾದ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತು ಸಾಗುತ್ತಿದ್ದ ಒಡೆಯರನ್ನು ಕಣ್ಣಾರೆ ಕಂಡವರು, ತಮ್ಮ ಜನ್ಮ ಸಾರ್ಥಕ ವಾಯಿತು ಎನ್ನುತ್ತಿದ್ದರು. ಈ ಸಂದರ್ಭದಲ್ಲಿ ಆಯುಧಗಳು, ಚದುರಂಗ ದಳದ ಬಲ ಪ್ರದರ್ಶನ ಜನರಿಗೆ ತಮ್ಮ ದೊರೆಗಳ ಸೇನಾ ಬಲದ ಸಾಮರ್ಥ್ಯ ತಿಳಿಯುವ ಅವಕಾಶ ಕಲ್ಪಿಸಿಕೊಡುತ್ತಿತ್ತು.

ವರ್ಣನೆ : ಮೈಸೂರಿಗೆ ಬಂದು ದಸರಾ ಮಹೋತ್ಸವವನ್ನು ಕಣ್ಣಾರೆ ಕಂಡು ತಮ್ಮೂರಿಗೆ ಹಿಂತಿರುಗುತ್ತಿದ್ದ ಮಂದಿ ವಾರಗಟ್ಟಲೇ ತಾವು ಮೈಸೂರಿನಲ್ಲಿ ನೋಡಿದ ಆ ವೈಭವದ ಬಗ್ಗೆ ವರ್ಣಿಸುತ್ತಿದ್ದರು. ಜನ ಮೈಸೂರು ದಸರೆಗೆ ಹೋಗಿ ಬಂದ ಜನರ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದುದೂ ಉಂಟು. ಅವರ ಸುತ್ತ ಸಂಜೆಯ ವೇಳೆ ಗುಂಪು ಕಟ್ಟಿ ಕುಳಿತ ಜನ, ಹರಿಕತೆಯಂತೆ ಮೈಸೂರು ದಸರೆಯ ವರ್ಣನೆಯನ್ನು ಕೇಳುತ್ತಿದ್ದರು. ಹರ್ಷೋಲ್ಲಾಸಗಳಿಂದ ಅವರು ನೋಡಿದ ದಸರೆಯ ಕಾರ್ಯಕ್ರಮಗಳ ಬಗ್ಗೆ ಕೇಳಿಯೇ ತೃಪ್ತಿ ಪಡುತ್ತಿದ್ದರು.

ಸೂರ್ಯಾಸ್ತಮಾನದ ಕಾಲದಲ್ಲಿ ತಂಪನೆಯ ಹವೆಯಲ್ಲಿ ಪಟ್ಟದಾನೆಯ ಮೇಲೆ ಚಿನ್ನದಂಬಾರಿಯಲ್ಲಿ ಕುಳಿತು ಮಹಾರಾಜರು ಸಾಗುವಾಗ ಅಸ್ತಮಿಸುವ ಸೂರ್ಯ ಕಿರಣಗಳು, ಚಿನ್ನದಂಬಾರಿಯ ಮೇಲೆ ಬಿದ್ದು ಮೂಡುತ್ತಿದ್ದ ಆ ಪ್ರಭಾವಳಿ ದೇವೇಂದ್ರನೇ ಧರೆಗಿಳಿದಂತೆ ಕಾಣುವಂತೆ ಮಾಡುತ್ತಿದ್ದವು. ಆ ವೈಭವ ವರ್ಣನಾತೀತ.

ದಸರೆಯ ಕಾಲದಲ್ಲಿ ದೀಪಗಳಿಂದ ಕಂಗೊಳಿಸುತ್ತಿದ್ದ ಮೈಸೂರು ಅರಮನೆಯ ಸೊಗಸೇ ಸೊಗಸು. ದಸರೆಯ ಕಾಲದಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ಉನ್ನತ ಅಧಿಕಾರಿಗಳೂ ಮೈಸೂರು ಅರಮನೆಗೆ ಬಂದು ಪ್ರಭುಗಳಿಗೆ ತಮ್ಮ ಗೌರವ ಅರ್ಪಿಸುತ್ತಿದ್ದರು. ಜಂಬೂಸವಾರಿಯ ಸಮಯದಲ್ಲಿ ನಾಡಿನ ಜನರೆಲ್ಲ ಸಾಲುಗಟ್ಟಿ ನಿಂತು ತಮ್ಮ ಗೌರವ ಸಲ್ಲಿಸುತ್ತಿದ್ದರು. ಮೆರವಣಿಗೆಯ ಕೊನೆಯಲ್ಲಿ ನಡೆಯುತ್ತಿದ್ದ ಪಂಜಿನ ಕವಾಯಿತು ನೋಡಲು ಜನ ಕಾಲ್ನಡಿಗೆಯಲ್ಲಿಯೇ ಬರುತ್ತಿದ್ದರು. ದಸರೆ ಮುಗಿದ ನಂತರವೂ ಪ್ರವಾಸಿಗರು, ನಾಡಿನ ಜನರು ಮೈಸೂರಿನಲ್ಲಿ ಬೀಡುಬಿಟ್ಟು, ತಮಗೆ ಬೇಗಾದ ವಸ್ತುಗಳನ್ನು ಖರೀದಿಸಿ, ನಂತರ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದರು. ಈ ವೈಭವ ಕಾಣಲು ಲಕ್ಷಾಂತರ ಜನರು ಸೇರುತ್ತಿದ್ದರು. ಈಗಲೂ ದಸರೆ ನಡೆಯುತ್ತದೆ. ಜನ ಬರುತ್ತಾರೆ. ಆದರೆ, ಇಂದಿನ ದಸರೆಗೂ ಅಂದಿನ ದಸರೆಗೂ ಅಜಗಜಾಂತರ.

ಮುಖಪುಟ / ಮೈಸೂರು ದಸರಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+