ಕ್ರಿಸ್‌ಮಸ್ ಪ್ಲಮ್ ಕೇಕ್‌ಗೆ ಸಾಂಪ್ರದಾಯಿಕ ಟಚ್, ಮಾಡುವ ವಿಧಾನ
ಬೆಂಗಳೂರು, ಡಿಸೆಂಬರ್ 19: ಕೊರೊನಾ ಸೋಂಕು ವಿಶ್ವವ್ಯಾಪಿ ಹರಡಿರುವ ಕಾರಣ, ಕ್ರಿಸ್‌ಮಸ್ ಹಬ್ಬ ಪ್ರತಿವರ್ಷದಂತೆ ಅದ್ಧೂರಿಯಾಗಿರದಿದ್ದರೂ ಚೆಂದವಾಗಿ ಆಚರಿಸಲು ಮುಂದಾಗಿದ್ದಾರೆ.
ಅಲಂಕಾರ ಪ್ರತಿ ವರ್ಷದಂತೆ ಇದ್ದರೂ, ಪಾರ್ಟಿ, ಔಟಿಂಗ್ ಎಂದು ಹೋಗದೆ ಮನೆಯಲ್ಲಿಯೇ ಆಚರಿಸಲು ಬಹುತೇಕ ಮಂದಿ ಮುಂದಾಗಿದ್ದಾರೆ.
ಈ ಬಾರಿ ಕ್ರಿಸ್‌ಮಸ್ ಕೇಕ್‌ಗಳಿಗೆ ಆರ್ಡರ್ ಕೊಡದೆ ಹೆಚ್ಚಿನ ಮಂದಿ ತಾವೇ ಕೇಕ್ ತಯಾರಿಸುತ್ತಿದ್ದು, ಅದಕ್ಕೆ ಸಾಂಪ್ರದಾಯಿಕ ಟಚ್ ನೀಡಿದ್ದಾರೆ.

ಕ್ರಿಸ್‌ಮಸ್ ಎಂದರೆ ಸಾಕು ತಿಂಡಿ ತಿನಿಸುಗಳದ್ದೇ ಕಾರುಬಾರು, ವಿವಿಧ ಡ್ರೈ ಫ್ರುಟ್‌ಗಳು ಮತ್ತು ಕೇಕ್ ಮೇಲ್ಭಾಗದಲ್ಲಿ ಚೆರಿಯಿಂದ ಅಲಂಕೃತವಾದ ಈ ಪ್ಲಮ್ ಕೇಕ್ ಸ್ವಾದಿಷ್ಟ ಮತ್ತು ರುಚಿಕರವಾಗಿರುತ್ತದೆ.
ಮನೆಯಲ್ಲೇ ತಯಾರಿಸಬಹುದಾದ ಪ್ಲಮ್ ಕೇಕ್ ರೆಸೆಪಿ:
ಸಿದ್ಧತೆ ಸಮಯ: 15 ನಿಮಿಷಗಳು
ತಯಾರಿ ಸಮಯ: 40 ನಿಮಿಷಗಳು
ಪ್ಲಮ್ ಕೇಕ್‌ಗೆ ಬೇಕಾಗುವ ಸಾಮಾಗ್ರಿಗಳು:
1.ಮೈದಾ - 1 ಕಪ್
2. ವಾಲ್‌ನಟ್ಸ್ ಕತ್ತರಿಸಿದ್ದು - (2ಟೀ. ಸ್ಪೂನ್)
3. ಬೇಕಿಂಗ್ ಪೌಡರ್ - 1/2 ಟೀ ಸ್ಪೂನ್
4. ರೈಸಿನ್ಸ್ - 3 ಟೀ.ಸ್ಪೂನ್
5. ಬ್ರೌನ್ ಶುಗರ್- 1 ಕಪ್
6. ವೆನಿಲ್ಲಾ ಎಸೆನ್ಸ್ - 3 - 4 ಡ್ರಾಪ್ಸ್
7.ಮೊಟ್ಟೆಗಳು-3
8.ಬೆಣ್ಣೆ-1/2 ಕಪ್
9. ಲಿಂಬೆ ತಿರುಳಿನ ಹುಡಿ- 1 ಟೀ.ಸ್ಪೂನ್
10. ಚೆರಿ- ತುಂಡರಿಸಿದ್ದು ಅಲಂಕಾರಕ್ಕಾಗಿ
ಮಾಡುವ ವಿಧಾನ: 1. ಓವನ್ ಅನ್ನು 160 ಡಿಗ್ರಿ ಉಷ್ಣತೆಯಲ್ಲಿ ಬಿಸಿ ಮಾಡಿ.
2. ಮೈದಾ ಹಾಗೂ ಬೇಕಿಂಗ್ ಪೌಡರ್ ಅನ್ನು ಜರಡಿ ಹಿಡಿಯಿರಿ.
3. ಇದೀಗ ವಾಲ್‌ನಟ್‌ಗಳು, ರೈಸಿನ್ಸ್‌ಗಳನ್ನು ಚೆನ್ನಾಗಿ ಮಿಶ್ರ ಮಾಡಿ.
4. ಇನ್ನೊಂದು ಪಾತ್ರೆಯಲ್ಲಿ ಬೆಣ್ಣೆ ಮತ್ತು ಬ್ರೌನ್ ಶುಗರ್ ಅನ್ನು ಚೆನ್ನಾಗಿ ಕಲಸಿಕೊಳ್ಳಿ. ವೆನಿಲ್ಲಾ ಎಸೆನ್ಸ್, ಮೊಟ್ಟೆಗಳು ಮತ್ತು ಲಿಂಬೆ ತಿರುಳಿನ ಹುಡಿಯನ್ನು ಸೇರಿಸಿ.
5. ಜರಡಿಯಾಡಿಸಿದ ಹುಡಿಯನ್ನು ನಿಧಾನವಾಗಿ ಹಾಕಿ ಮತ್ತು ಮಿಶ್ರ ಮಾಡಿ.
6. ಬಟರ್‌ನೊಂದಿಗೆ ಕೇಕ್ ಟಿನ್ ಅನ್ನು ಗ್ರೀಸ್ ಮಾಡಿ ನಂತರ ಮಿಶ್ರಣವನ್ನು ಅದಕ್ಕೆ ಹಾಕಿ.
7. 15-20 ನಿಮಿಷಗಳ ಕಾಲ ಬೇಯಿಸಿ. ನಂತರ ಆರಲು ಬಿಡಿ. ಕ್ರಿಸ್‌ಮಸ್ ಪ್ಲಮ್ ಕೇಕ್ ತಿನ್ನಲು ಸಿದ್ಧವಾಗಿದೆ. ಕೇಕ್ ಅನ್ನು ತುಂಡುಗಳನ್ನಾಗಿ ಮಾಡಿ ಮತ್ತು ಕೇಕ್‌ನ ಮೇಲೆ ತುಂಡರಿಸಿದ ಚೆರಿಗಳನ್ನು ಆಲಂಕಾರಿಕವಾಗಿ ಬಳಸಿ. ಮಿಶ್ರಣವನ್ನು ತಯಾರಿಸುವಾಗ ಕೂಡ ನೀವು ಚೆರಿಗಳನ್ನು ಬಳಸಬಹುದು. ನೀವು ಮಿಶ್ರಣಕ್ಕೆ ಚೆರಿಗಳನ್ನು ಸೇರಿಸುತ್ತೀರಿ ಎಂದಾದರೆ, ಚರಿಗಳನ್ನು ಸಣ್ಣದಾಗಿ ತುಂಡರಿಸುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ಲಮ್ ಕೇಕ್ ತಿನ್ನಲು ಸಿದ್ಧವಾಗಿದೆ. ಕೇಕ್ ಅನ್ನು ತುಂಡುಗಳನ್ನಾಗಿ ಮಾಡಿ ಮತ್ತು ಕೇಕ್‌ನ ಮೇಲೆ ತುಂಡರಿಸಿದ ಚೆರ್ರಿಗಳನ್ನು ಆಲಂಕಾರಿಕವಾಗಿ ಬಳಸಬಹುದು.












Click it and Unblock the Notifications