Zee Opinion Poll: ಪಂಜಾಬ್‌ನಲ್ಲಿ ಮುಂದಿನ ಸರ್ಕಾರ ಯಾವುದು?
ಚಂಡೀಗಢ, ಫೆಬ್ರವರಿ 03: ಪಂಜಾಬ್‌ನಲ್ಲಿ ಇನ್ನು ಕೆಲವೇ ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರವನ್ನು ನಡೆಸುತ್ತಿದೆ. ಈ ನಡುವೆ ಹಲವಾರು ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟ ಮಾಡಿದೆ. Zee News ಕೂಡಾ ಪಂಜಾಬ್ ವಿಧಾನಸಭೆ ಚುನಾವಣೆಗಾಗಿ ಸಮೀಕ್ಷೆಯನ್ನು ಮಾಡಿ, ಪ್ರಕಟ ಮಾಡಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಪಂಜಾಬ್, ಉತ್ತರಾಖಂಡ ಮತ್ತು ಯುಪಿಯ ಚುನಾವಣಾ ಪೂರ್ವ ಸಮೀಕ್ಷೆಯನ್ನು ಝೀ ನ್ಯೂಸ್ ಈಗಾಗಲೇ ಪ್ರಕಟ ಮಾಡಿದೆ. ಯುಪಿ, ಉತ್ತರಾಖಂಡ ಪ್ರದೇಶವಾರು ಅಭಿಪ್ರಾಯ ಸಂಗ್ರಹಗಳನ್ನು ಕೂಡಾ ವರದಿ ಮಾಡಿದೆ. ಈಗ ಪಂಜಾಬ್‌ನ ಪ್ರದೇಶವಾರು ಅಭಿಪ್ರಾಯ ಸಂಗ್ರಹವನ್ನು ಹೆಚ್ಚು ವಿವರವಾಗಿ ವರದಿ ಮಾಡಿದೆ. ಪಂಜಾಬ್ ಅನ್ನು ಒಟ್ಟು ಮೂರು ಮಾಜಾ, ದೋಬಾ ಮತ್ತು ಮಾಲ್ವಾ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಮೂರು ಕ್ಷೇತ್ರಗಳಲ್ಲಿ ಒಟ್ಟು 117 ವಿಧಾನಸಭಾ ಸ್ಥಾನಗಳಿವೆ. ಈ ಸ್ಥಾನಗಳ ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನರ ಅಭಿಪ್ರಾಯ ಸಂಗ್ರಹವನ್ನು ಮಾಡಲಾಗಿದೆ. ಸಮೀಕ್ಷೆಯನ್ನು 10 ಡಿಸೆಂಬರ್ 2021 ರಿಂದ 15 ಜನವರಿ 2022 ರವರೆಗೆ ಮಾಡಲಾಗಿದೆ. ಹಾಗಾದರೆ Zee Opinion Poll ಪ್ರಕಾರ ಪಂಜಾಬ್‌ನಲ್ಲಿ ಮುಂದಿನ ಸರ್ಕಾರವನ್ನು ಯಾವ ಪಕ್ಷ ರಚನೆ ಮಾಡಲಿದೆ ಎಂದು ತಿಳಿಯಲು ಮುಂದೆ ಓದಿ...

ಮಾಝಾ ಕ್ಷೇತ್ರ: ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಮಾಝಾ ಕ್ಷೇತ್ರದಲ್ಲಿ ಕಾಂಗ್ರೆಸ್ 9-10 ಸ್ಥಾನಗಳನ್ನು ಪಡೆಯಬಹುದು. ಶಿರೋಮಣಿ ಅಕಾಲಿದಳ 9-10 ಸ್ಥಾನಗಳನ್ನು ಪಡೆಯಬಹುದು. ಆಮ್ ಆದ್ಮಿ ಪಕ್ಷ 5-6 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಜೆಪಿ 1-2 ಸ್ಥಾನ ಪಡೆಯುವ ಸಾಧ್ಯತೆ ಇದೆ. ಇನ್ನುಳಿದಂತೆ ಇತರೆ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಯಾವುದೇ ಸ್ಥಾನವನ್ನು ಪಡೆಯುವ ಸಾಧ್ಯತೆ ಇಲ್ಲ ಎಂದು ಝೀ ಚುನಾವಣಾ ಪೂರ್ವ ಸಮೀಕ್ಷೆ ಹೇಳುತ್ತದೆ. 2017 ರಲ್ಲಿ ಶಿರೋಮಣಿ ಅಕಾಲಿದಳಕ್ಕೆ 2 ಸ್ಥಾನಗಳು ಲಭಿಸಿವೆ. ಆಮ್ ಆದ್ಮಿ ಪಕ್ಷಕ್ಕೆ ಒಂದೇ ಒಂದು ಸ್ಥಾನ ಸಿಕ್ಕಿಲ್ಲ. ಬಿಜೆಪಿ 1 ಸ್ಥಾನದಲ್ಲಿ ಗೆಲುವು ಪಡೆದಿದೆ. ಕಾಂಗ್ರೆಸ್ 22 ಸ್ಥಾನ ಗಳಿಸಿದೆ. ಮಾಝಾ 2017ರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಶೇ.46, ಶಿರೋಮಣಿ ಅಕಾಲಿದಳ ಶೇ.25ರಷ್ಟು ಮತವನ್ನು ಪಡೆದಿದೆ. ಆಮ್ ಆದ್ಮಿ ಪಕ್ಷ ಶೇ.14, ಬಿಜೆಪಿ ಶೇ.10, ಇತರರು ಶೇ. 5ರಷ್ಟು ಮತವನ್ನು ಪಡೆದಿದ್ದಾರೆ. 2022ರಲ್ಲಿ ಶೇಕಡ 33ರಷ್ಟು ಮತಗಳನ್ನು ಕಾಂಗ್ರೆಸ್ ಪಡೆಯುವ ಸಾಧ್ಯತೆ ಇದೆ. ಶಿರೋಮಣಿ ಅಕಾಲಿದಳ ಶೇ.31ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಆಮ್ ಆದ್ಮಿ ಪಕ್ಷ ಶೇ 26ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಜೆಪಿ ಶೇ 6ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಇತರರು ಶೇಕಡಾ 4 ರಷ್ಟು ಮತಗಳನ್ನು ಪಡೆಯಬಹುದು.

ಮಾಝಾ ಕ್ಷೇತ್ರದಲ್ಲಿ ನೆಚ್ಚಿನ ಸಿಎಂ ಅಭ್ಯರ್ಥಿ ಯಾರು?
ಮಾಝಾ ಕ್ಷೇತ್ರದಲ್ಲಿ ಶೇಕಡ 5 ರಷ್ಟು ಜನರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಇಷ್ಟಪಡುತ್ತಾರೆ. ಶೇಕಡ 7ರಷ್ಟು ಜನರು ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗಲು ಬಯಸುತ್ತಾರೆ. ಶೇಕಡ ಶೇ.25ರಷ್ಟು ಜನ ಭಗವಂತ್ ಮಾನ್ ಸಿಎಂ ಆಗಬೇಕು ಎಂದು ಇಷ್ಟಪಡುತ್ತಾರೆ. ಶಿರೋಮಣಿ ಅಕಾಲಿದಳದ ಸುಖಬೀರ್ ಬಾದಲ್ ಸಿಎಂ ಆಗಬೇಕು ಎಂದು ಶೇಕಡ 21ರಷ್ಟು ಜನರು ಬಯಸಿದ್ದಾರೆ. ಇನ್ನು ಶೇಕಡ 32ರಷ್ಟು ಜನರು ಕಾಂಗ್ರೆಸ್ ಸರ್ಕಾರ ಹಾಲಿ ಸಿಎಂ ಚರಣ್‌ಜೀತ್ ಸಿಂಗ್ ಚನ್ನಿ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದಾರೆ. ಇನ್ನು ಮಾಝಾ ಕ್ಷೇತ್ರದಲ್ಲಿ ಶೇ.10 ರಷ್ಟು ಜನರು ಅರವಿಂದ್ ಕೇಜ್ರಿವಾಲ್ ಸಿಎಂ ಆಗಬೇಕು ಎಂದು ಬಯಸಿದ್ದಾರೆ.

ದೋಬಾ ಕ್ಷೇತ್ರ: ಶೇಕಡವಾರು ಅಂಕಿಅಂಶ
ದೋಬಾ ಕ್ಷೇತ್ರದಲ್ಲಿ 2017ರಲ್ಲಿ ಕಾಂಗ್ರೆಸ್ ಶೇ.37, ಶಿರೋಮಣಿ ಅಕಾಲಿದಳ ಶೇ.21, ಆಮ್ ಆದ್ಮಿ ಪಕ್ಷ ಶೇ.24, ಬಿಜೆಪಿ ಶೇ.9, ಇತರೆ ಶೇ.9 ಮತಗಳನ್ನು ಪಡೆದಿದೆ. 2022ರಲ್ಲಿ ಕಾಂಗ್ರೆಸ್ ಶೇ 30ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಶಿರೋಮಣಿ ಅಕಾಲಿದಳ ಶೇ.33ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಆಮ್ ಆದ್ಮಿ ಪಕ್ಷ 25% ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಶೇ 7ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಇತರರು ಶೇಕಡಾ 5 ರಷ್ಟು ಮತಗಳನ್ನು ಪಡೆಯಬಹುದು.

ದೋಬಾ ಕ್ಷೇತ್ರದಲ್ಲಿ ನೆಚ್ಚಿನ ಸಿಎಂ ಅಭ್ಯರ್ಥಿ ಯಾರು?
ದೋಬಾ ಕ್ಷೇತ್ರದಲ್ಲಿ ಶೇಕಡ 4 ರಷ್ಟು ಜನರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಆಗಬೇಕು ಎಂದು ಇಷ್ಟಪಡುತ್ತಾರೆ. ಈ ನಡುವೆ ಶೇಕಡ 4 ರಷ್ಟು ಜನರು ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಾರೆ. ಶೇಕಡ ಶೇ.23ರಷ್ಟು ಜನ ಭಗವಂತ್ ಮಾನ್ ಸಿಎಂ ಆಗಬೇಕು ಎಂದು ಇಷ್ಟಪಡುತ್ತಾರೆ. ಶಿರೋಮಣಿ ಅಕಾಲಿದಳದ ಸುಖಬೀರ್ ಬಾದಲ್ ಸಿಎಂ ಆಗಬೇಕು ಎಂದು ಶೇಕಡ 22ರಷ್ಟು ಜನರು ಬಯಸಿದ್ದಾರೆ. ಇನ್ನು ಶೇಕಡ 35ರಷ್ಟು ಜನರು ಕಾಂಗ್ರೆಸ್ ಸರ್ಕಾರ ಹಾಲಿ ಸಿಎಂ ಚರಣ್‌ಜೀತ್ ಸಿಂಗ್ ಚನ್ನಿ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದಾರೆ. ಇನ್ನು ಮಾಝಾ ಕ್ಷೇತ್ರದಲ್ಲಿ ಶೇ.12 ರಷ್ಟು ಜನರು ಅರವಿಂದ್ ಕೇಜ್ರಿವಾಲ್ ಸಿಎಂ ಆಗಬೇಕು ಎಂದು ಬಯಸಿದ್ದಾರೆ.

ಮಾಲ್ವಾ ಕ್ಷೇತ್ರ: ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
2017ರಲ್ಲಿ ಮಾಲ್ವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.37, ಶಿರೋಮಣಿ ಅಕಾಲಿದಳ ಶೇ.26, ಆಮ್ ಆದ್ಮಿ ಪಕ್ಷ ಶೇ.27, ಬಿಜೆಪಿ ಶೇ.3, ಇತರೆ ಶೇ.7 ಮತಗಳನ್ನು ಪಡೆದಿದೆ. 2022ರಲ್ಲಿ ಕಾಂಗ್ರೆಸ್ ಶೇ 29ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಶಿರೋಮಣಿ ಅಕಾಲಿದಳ ಶೇ.26ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ. ಆಮ್ ಆದ್ಮಿ ಪಕ್ಷ 36% ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಶೇ 4ರಷ್ಟು ಮತ ಗಳಿಸುವ ಸಾಧ್ಯತೆ ಇದೆ. ಇತರರು ಶೇಕಡಾ 5ರಷ್ಟು ಮತಗಳನ್ನು ಪಡೆಯಬಹುದು. 2017ರಲ್ಲಿ ಮಾಲ್ವಾ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿದಳಕ್ಕೆ 8 ಸ್ಥಾನಗಳು ಲಭಿಸಿವೆ. ಆಮ್ ಆದ್ಮಿ ಪಕ್ಷಕ್ಕೆ 18 ಸ್ಥಾನ ಗಳಿಸಿದೆ. ಬಿಜೆಪಿ 2 ಸ್ಥಾನದಲ್ಲಿ ಗೆಲುವು ಪಡೆದಿದೆ. ಕಾಂಗ್ರೆಸ್ 40 ಸ್ಥಾನ ಗಳಿಸಿದೆ.

ಮಾಲ್ವಾ ಕ್ಷೇತ್ರ: ಯಾರು ನೆಚ್ಚಿನ ಸಿಎಂ ಅಭ್ಯರ್ಥಿ?
ಮಾಲ್ವಾ ಕ್ಷೇತ್ರದಲ್ಲಿ ಶೇಕಡ 8ರಷ್ಟು ಜನರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಆಗಬೇಕು ಎಂದು ಇಷ್ಟಪಡುತ್ತಾರೆ. ಈ ನಡುವೆ ಶೇಕಡ 5ರಷ್ಟು ಜನರು ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಾರೆ. ಶೇಕಡ ಶೇ.24ರಷ್ಟು ಜನ ಭಗವಂತ್ ಮಾನ್ ಸಿಎಂ ಆಗಬೇಕು ಎಂದು ಇಷ್ಟಪಡುತ್ತಾರೆ. ಶಿರೋಮಣಿ ಅಕಾಲಿದಳದ ಸುಖಬೀರ್ ಬಾದಲ್ ಸಿಎಂ ಆಗಬೇಕು ಎಂದು ಶೇಕಡ 22ರಷ್ಟು ಜನರು ಬಯಸಿದ್ದಾರೆ. ಇನ್ನು ಶೇಕಡ 31ರಷ್ಟು ಜನರು ಕಾಂಗ್ರೆಸ್ ಸರ್ಕಾರ ಹಾಲಿ ಸಿಎಂ ಚರಣ್‌ಜೀತ್ ಸಿಂಗ್ ಚನ್ನಿ ಮುಖ್ಯಮಂತ್ರಿ ಆಗಬೇಕು ಎಂದು ಬಯಸಿದ್ದಾರೆ. ಇನ್ನು ಮಾಝಾ ಕ್ಷೇತ್ರದಲ್ಲಿ ಶೇ.10ರಷ್ಟು ಜನರು ಅರವಿಂದ್ ಕೇಜ್ರಿವಾಲ್ ಸಿಎಂ ಆಗಬೇಕು ಎಂದು ಬಯಸಿದ್ದಾರೆ. ಮಾಲ್ವಾ ಕ್ಷೇತ್ರದಲ್ಲಿ 2022ರಲ್ಲಿ ಕಾಂಗ್ರೆಸ್ 19-21 ಸ್ಥಾನಗಳನ್ನು ಪಡೆಯಬಹುದು. ಶಿರೋಮಣಿ ಅಕಾಲಿದಳ 13-14 ಸ್ಥಾನಗಳನ್ನು ಪಡೆಯಬಹುದು. ಆಮ್ ಆದ್ಮಿ ಪಕ್ಷ 28-30 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಬಿಜೆಪಿ 2-3 ಸ್ಥಾನ ಪಡೆಯುವ ಸಾಧ್ಯತೆ ಇದೆ. ಇನ್ನುಳಿದಂತೆ ಇತರೆ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು 2-4 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಝೀ ಚುನಾವಣಾ ಪೂರ್ವ ಸಮೀಕ್ಷೆ ಹೇಳುತ್ತದೆ. ಒಟ್ಟಾಗಿ ಪಂಜಾಬ್‌ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. (ಒನ್‌ಇಂಡಿಯಾ ಸುದ್ದಿ)











Click it and Unblock the Notifications