Year End Special 2024: ಜನರು ಅತಿ ಹೆಚ್ಚು ಪ್ರವಾಸ ಕೈಗೊಂಡ ಪ್ರಮುಖ ತಾಣಗಳು

2024ನೇ ವರ್ಷ ಅಂತ್ಯವಾಗುತ್ತಾ ಬಂದಿದೆ. ಈ ವರ್ಷಾಂತ್ಯದಲ್ಲಿ ಇನ್ನೂ ಪ್ರವಾಸ ಕೈಗೊಳ್ಳುವ ಜನರ ಸಂಖ್ಯೆಯೂ ಹೆಚ್ಚಿದೆ. ಭಾರತ ಮತ್ತು ವಿಶ್ವದ ವಿವಿಧ ಸ್ಥಳಗಳಿಗೆ ಈ ವರ್ಷ ಜನರು ಪ್ರವಾಸ ಕೈಗೊಂಡು ಸಂತಸಗೊಂಡಿದ್ದಾರೆ. ಇಂತಹ ಟಾಪ್ ಪ್ರವಾಸಿ ತಾಣಗಳ ಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಗೂಗಲ್ ಸರ್ಚ್‌ ಮೂಲಕ, ಟ್ರಾವೆಲ್ ಏಜೆನ್ಸಿಗಳ ಮೂಲಕ ಮಾಹಿತಿ ಸಂಗ್ರಹ ಮಾಡಿ, ಈ ವರ್ಷ ಭಾರತೀಯರು ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡ ಸ್ಥಳಗಳನ್ನು ಪಟ್ಟಿ ಮಾಡಲಾಗಿದೆ.

ಮೇಕ್ ಮೈ ಟ್ರಿಪ್ ಇತ್ತೀಚಿನ ವರದಿಯ ಪ್ರಕಾರ 2024ರಲ್ಲಿ ಭಾರತದಲ್ಲಿ ಜನರು ಅತಿ ಹೆಚ್ಚು ಪ್ರವಾಸ ಕೈಗೊಂಡ ರಾಜ್ಯ ಗೋವಾ. ಟ್ರಾವೆಲ್ ಸರ್ಚ್ & ಬುಕ್ಕಿಂಗ್ ಟ್ರೆಂಡ್ ಹೆಸರಿನಲ್ಲಿ ವರದಿಯನ್ನು ಮೇಕ್ ಮೈ ಟ್ರಿಪ್ ಬಿಡುಗಡೆಗೊಳಿಸಿದೆ. ಇದರಲ್ಲಿ ದೇಶ ಮತ್ತು ವಿದೇಶದ ವಿವಿಧ ಪ್ರವಾಸಿ ತಾಣಗಳನ್ನು ಪಟ್ಟಿ ಮಾಡಿದೆ.

Yearender 2024 Holiday Travel Trends Tops Charts

ಈ ವರ್ಷ ಜನರು ಕೇವಲ ಕಡಲ ತೀರಗಳನ್ನು ಮಾತ್ರ ಹುಡುಕಿ ಪ್ರವಾಸ ಮಾಡಿಲ್ಲ. ಮನಾಲಿ, ವಾರಣಾಸಿ, ಮಸ್ಸೂರಿ, ಉದಯ್‌ಪುರ್‌ ನಂತಹ ಪ್ರದೇಶಗಳಿಗೆ ಸಹ ಹೆಚ್ಚಾಗಿ ಭೇಟಿ ನೀಡಿದ್ದಾರೆ. ಈ ವರ್ಷ ಉದಯ್‌ಪುರ್‌ ಬಗ್ಗೆ ಹುಡುಹಾಡಿದ ಜನರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಎರಡು ಪಟ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.

2024ರಲ್ಲಿ ಸಾಲು ಸಾಲು ರಜೆಗಳು ಹೆಚ್ಚಿದ್ದವು. ಆದ್ದರಿಂದ ವಿವಿಧ ಪ್ರದೇಶಗಳನ್ನು ಜನರು ಆಯ್ಕೆ ಮಾಡಿಕೊಂಡು ಪ್ರವಾಸ ಕೈಗೊಂಡಿದ್ದಾರೆ. ಡಿಸೆಂಬರ್ 21 ರಿಂದ 25ರ ತನಕದ ಸಾಲು ಸಾಲು ವರ್ಷಾಂತ್ಯದ ರಜೆಯಲ್ಲಿಯೂ ಹಲವು ತಾಣಗಳನ್ನು ಜನರು ಬುಕ್ ಮಾಡಿಕೊಂಡಿದ್ದಾರೆ. ಹೊಸ ವರ್ಷಾಚರಣೆ ಮಾಡಲು ವಿದೇಶದ ಹಲವು ಸ್ಥಳಗಳನ್ನು ಸಹ ಜನರು ಹುಡುಕಿದ್ದಾರೆ.

ಭಾರತೀಯರು ಹುಡುಕಿದ ವಿದೇಶದ ಪ್ರವಾಸಿ ತಾಣದಲ್ಲಿ ಮಲೇಷ್ಯಾ, ಅಜೆರ್ಬೈಜಾನ್ ಸೇರಿವೆ. ಉಳಿದಂತೆ ಜಪಾನ್, ವಿಯೇಟ್ನಾಂ, ಟರ್ಕಿಗೆ ಸಹ ಹಲವಾರು ಜನರು ಭೇಟಿ ನೀಡಿದ್ದು, ಟಾಪ್‌ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಈ ಸ್ಥಳಗಳು ಸೇರಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಜೆರ್ಬೈಜಾನ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ.

ಭಾರತದ ಟಾಪ್ ಪ್ರವಾಸಿ ತಾಣಗಳು: 2024ರಲ್ಲಿ ಭಾರತದಲ್ಲಿ ಪ್ರವಾಸಿಗರು ಭೇಟಿ ನೀಡಿದ ಟಾಪ್ ಪ್ರವಾಸಿ ತಾಣಗಳಲ್ಲಿ ಗೋವಾ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಮುಂಬೈ, ದೆಹಲಿ, ಜೈಪುರ, ಮನಾಲಿ, ಪುರಿ, ಬೆಂಗಳೂರು, ಮುನ್ನಾರ್, ವಾರಣಾಸಿ, ಲೋನೋವಾಲಾ, ಮಹಾಬಲೇಶ್ವರ, ಹೈದರಾಬಾದ್, ಊಟಿ, ಕೋಲ್ಕತ್ತಾ, ಕೊಡಗು, ಮಸ್ಸೂರಿ, ಪುದುಚೇರಿ, ಶಿಮ್ಲಾ ಸೇರಿವೆ.

ಈ ವರ್ಷ ಭಾರತದಲ್ಲಿ ನೈಋತ್ಯ ಮುಂಗಾರು ಸಮಯದಲ್ಲಿ ಉತ್ತಮ ಮಳೆಯಾಗಿದೆ. ಅಲ್ಲದೇ ಸಾಲು ಸಾಲು ರಜೆಗಳು ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಸಿಕ್ಕಿದೆ. ಆದ್ದರಿಂದ ಜನರು ಹೆಚ್ಚಾಗಿ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಪ್ರವಾಸ ಕೈಗೊಂಡಿದ್ದಾರೆ.

2024ರಲ್ಲಿ ಅತಿ ಹೆಚ್ಚು ಪ್ರವಾಸಕ್ಕೆ ಬುಕ್ ಆದ ದಿನಗಳು ಡಿಸೆಂಬರ್ 21 ಶನಿವಾರ, 22 ಭಾನುವಾರ, 23 ಸೋಮವಾರ, 24 ಮಂಗಳವಾರ ಮತ್ತು 25ರ ಬುಧವಾರ ಎಂದು ಮೇಕ್ ಮೈ ಟ್ರಿಪ್ ಹೇಳಿದೆ. ವರ್ಷಾಂತ್ಯ ವಾರದ ಮಧ್ಯದಲ್ಲಿ ಬಂದಿರುವ ಕಾರಣ ಈಗ ಸಿಕ್ಕಿರುವ ವಾರಾಂತ್ಯದ ರಜೆಯಲ್ಲಿಯೇ ಹೆಚ್ಚಿನ ಜನರು ಪ್ರವಾಸ ಕೈಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+