Year Ender 2024: 2023ರಲ್ಲಿ ದಾಖಲೆ ಬರೆದು 2024ರಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳದ ತಾರೆಯರು
2024ನೇ ವರ್ಷ ಶೀಘ್ರದಲ್ಲೇ ಕೊನೆಗೊಳ್ಳಲಿದೆ. 2025ರ ಹೊಸ ವರ್ಷಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. 2024ರ ವರ್ಷ ಅನೇಕ ಬಾಲಿವುಡ್ ತಾರೆಯರಿಗೆ ಉತ್ತಮವಾಗಿದ್ದರೆ ಇನ್ನೂ ಕೆಲವರಿಗೆ ಉತ್ತಮವಾಗಿರಲಿಲ್ಲ. ಯಾಕೆಂದರೆ 2023ರಲ್ಲಿ ದಾಖಲೆ ಬರೆದ ಅದೆಷ್ಟೋ ತಾರೆಯರು 2024ರಲ್ಲಿ ತೆರೆಯ ಮೇಲೆ ಕಾಣಿಸಿಕೋಲ್ಳಲೇ ಇಲ್ಲ. ಅವರ ಒಂದೇ ಒಂದು ಚಿತ್ರವೂ ಬಿಡುಗಡೆಯಾಗಲಿಲ್ಲ. ಹಾಗಾದರೆ 2024ರಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳದ ಆ ನಟರು ಯಾರು? ಸಂಪೂರ್ಣ ಪಟ್ಟಿ ಇಲ್ಲಿದೆ.
ಸಲ್ಮಾನ್ ಖಾನ್
ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ಕೊನೆಯದಾಗಿ ಟೈಗರ್ 3 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಆದರೆ 2024 ರಲ್ಲಿ ಅವರ ಒಂದೇ ಒಂದು ಚಿತ್ರವೂ ಬಿಡುಗಡೆಯಾಗಲಿಲ್ಲ. ಪ್ರಸ್ತುತ ನಟ ತಮ್ಮ ಮುಂಬರುವ ಚಿತ್ರ ಸಿಕಂದರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದು 2025 ರಲ್ಲಿ ಬಿಡುಗಡೆಯಾಗಲಿದೆ.

ಶಾರುಖ್ ಖಾನ್
ಶಾರುಖ್ ಖಾನ್ 2023ರಲ್ಲಿ ಪ್ರಾಬಲ್ಯ ಮೆರೆದಿದ್ದರು. ನಟನ ಮೂರು ಚಿತ್ರಗಳಾದ ಪಠಾಣ್, ಜವಾನ್ ಮತ್ತು ಡಂಕಿ ಬಿಡುಗಡೆಯಾದವು. ಈ ಮೂರೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಆದರೆ 2024 ರಲ್ಲಿ ಕಿಂಗ್ ಖಾನ್ ಅವರ ಒಂದೇ ಒಂದು ಚಿತ್ರವೂ ಬಿಡುಗಡೆಯಾಗಲಿಲ್ಲ. ಇದೀಗ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರ 'ಕಿಂಗ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಣಬೀರ್ ಕಪೂರ್
ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಚಿತ್ರ ಅನಿಮಲ್ 2023ರಲ್ಲಿ ಬಿಡುಗಡೆಯಾಯಿತು. ನಟನ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ 2024ರಲ್ಲಿ ಅವರ ಯಾವ ಚಿತ್ರವೂ ಬಿಡುಗಡೆಯಾಗಲಿಲ್ಲ. ಅನಿಮಲ್ ಚಿತ್ರದ ಸೀಕ್ವೆಲ್ ಗೆ ರಣಬೀರ್ ಕಪೂರ್ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇದಲ್ಲದೆ ಅವರು 'ರಾಮಾಯಣ' ಮತ್ತು 'ಲವ್ ಅಂಡ್ ವಾರ್' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಆಯುಷ್ಮಾನ್ ಖುರಾನಾ
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಯಾವಾಗಲೂ ಅಭಿಮಾನಿಗಳಿಗೆ ವಿಭಿನ್ನವಾದದ್ದನ್ನು ತರುತ್ತಾರೆ. ಈ ಕಾರಣಕ್ಕಾಗಿಯೇ ಅಭಿಮಾನಿಗಳು ಅವರ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಾರೆ. ಆದರೆ 2024 ರಲ್ಲಿ ಅವರ ಒಂದು ಚಿತ್ರವೂ ಬಿಡುಗಡೆಯಾಗಲಿಲ್ಲ. ಜೊತೆಗೆ ನಟ ತನ್ನ ಮುಂದಿನ ಯೋಜನೆಯನ್ನು ಇನ್ನೂ ಘೋಷಿಸಿಲ್ಲ.

ಸನ್ನಿ ಡಿಯೋಲ್
ಬಾಲಿವುಡ್ ನಟ ಸನ್ನಿ ಡಿಯೋಲ್ 2023 ರಲ್ಲಿ ಗದರ್ 2 ಚಿತ್ರದ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಮಡಿದ್ದರು. ಈಗ ಇವರು ಅಭಿನಯದ ಅನೇಕ ಚಿತ್ರಗಳಿವೆ. ಇತ್ತೀಚೆಗೆ ಅವರು ತಮ್ಮ ಮುಂದಿನ ಚಿತ್ರ ಬಾರ್ಡರ್ 2 ಅನ್ನು ಘೋಷಿಸಿದ್ದರು. ಆದರೆ ಇದು ಯಾವಾಗ ತೆರೆ ಕಾಣಲಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications