Get Updates
Get notified of breaking news, exclusive insights, and must-see stories!

Year Ender 2024: 2024ರ ನವೆಂಬರ್‌ನಲ್ಲಿ ಅತೀ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿ

Year Ender 2024: ಹೊಸವರ್ಷ ಅಂದರೆ 2025ಕ್ಕೆ ಕಾಲಿಡಲು ಕೆಲವೇ ವಾರಗಳಷ್ಟೇ ಬಾಕಿಯಿದೆ. ಇದಕ್ಕೂ ಮುನ್ನ ಇದರ ನಡುವೆ 2024ರಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಏನಲ್ಲಾ ಪ್ರಮುಖ ದಾಖಲೆಗಳು, ಘಟನೆಗಳು ನಡೆದಿವೆ ಎಂದು ನೋಡಬೇಕಾಗುತ್ತದೆ. ಆಟೋಮಯಬೈಲ್‌ ಕ್ಷೇತ್ರಕ್ಕೆ ಬಂದರೆ ವರ್ಷದ ನವೆಂಬರ್‌ನಲ್ಲಿ ಅತ್ಯಧಿಕವಾಗಿ ಮಾರಾಟವಾದ ಕಾರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹೊಸ ವರ್ಷವು ಸಮೀಪಿಸುತ್ತಿದೆ. ಆದ್ದರಿಂದ ಭಾರತೀಯ ವಾಹನ ತಯಾರಕರು ನವೆಂಬರ್‌, 2024ರಲ್ಲಿ ಎಷ್ಟು ಯಾವ ಕಂಪನಿಯ ಕಾರುಗಳನ್ನು ಹೆಚ್ಚು ಮಾರಾಟವಾಗಿವೆ ಎನ್ನುವ ಮಾಹಿತಿಯನ್ನು ಹೊರಹಾಕಿದ್ದಾರೆ. ಹಿಂದಿನ ವರ್ಷದ ನವೆಂಬರ್‌ಗೆ ಹೋಲಿಕೆ ಮಾಡಿ ಈ ವರ್ಷ ಯಾವ ಕಾರುಗಳು ಹೆಚ್ಚು ಮಾರಾಟವಾಗವೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.

Year Ender 2024 List of Top 10 Most-Selling Cars in November Know details

ನವೆಂಬರ್ 2024ರಲ್ಲಿ ಹೆಚ್ಚು ಮಾರಾಟವಾದ 10 ಕಾರುಗಳ ಪಟ್ಟಿ

1. Maruti Suzuki Baleno: ನವೆಂಬರ್ 2024ರಲ್ಲಿ ಈ ಕಂಪನಿಯ 16,293 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 12,961 ಕಾರುಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 3,332 ಹೆಚ್ಚು ಕಾರುಗಳು ಮಾರಾಟವಾಗಿವೆ.

2. Hyundai Creta: ನವೆಂಬರ್ 2024ರಲ್ಲಿ ಈ ಕಂಪನಿಯ 15,452 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 11,814 ಕಾರುಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 3,638 ಹೆಚ್ಚು ಕಾರುಗಳು ಮಾರಾಟವಾಗಿವೆ.

3. Tata Punch: ನವೆಂಬರ್ 2024ರಲ್ಲಿ ಈ ಕಂಪನಿಯ 15,435 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 14,383 ಕಾರುಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 1,052 ಹೆಚ್ಚು ಕಾರುಗಳು ಮಾರಾಟವಾಗಿವೆ.

4. Tata Nexon: ನವೆಂಬರ್ 2024ರಲ್ಲಿ ಈ ಕಂಪನಿಯ 15,329 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 14,916 ಕಾರುಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 413 ಹೆಚ್ಚು ಕಾರುಗಳು ಮಾರಾಟವಾಗಿವೆ.

5. Maruti Suzuki Ertega: ನವೆಂಬರ್ 2024ರಲ್ಲಿ ಈ ಕಂಪನಿಯ 15,150 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 12,857 ಕಾರುಗಳು ಮಾರಾಟವಾಗಿದ್ದವು. ಇದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 2,293 ಹೆಚ್ಚು ಕಾರುಗಳು ಮಾರಾಟವಾಗಿವೆ.

6. Maruti Suzuki Brezza: ನವೆಂಬರ್ 2024ರಲ್ಲಿ ಈ ಕಂಪನಿಯ 14,918 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 13,393 ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕಿಂತ ಈ ಬಾರಿ 1,525 ಹೆಚ್ಚು ಕಾರುಗಳು ಮಾರಾಟವಾಗಿವೆ.

7. Maruti Suzuki Fronx: ನವೆಂಬರ್ 2024ರಲ್ಲಿ ಈ ಕಂಪನಿಯ 14,882 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 9,867 ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕಿಂತ ಈ ಬಾರಿ 5,015 ಹೆಚ್ಚು ಕಾರುಗಳು ಮಾರಾಟವಾಗಿವೆ.

8. Maruti Suzuki Swift: ನವೆಂಬರ್ 2024ರಲ್ಲಿ ಈ ಕಂಪನಿಯ 14,737 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 15,311 ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಕಳೆದ ವರ್ಷಕ್ಕಿಂತ ಈ ಬಾರಿ 574 ಕಾರುಗಳು ಕಡಿಮೆ ಮಾರಾಟವಾಗಿವೆ.

9. Maruti Suzuki Wagon R: ನವೆಂಬರ್ 2024ರಲ್ಲಿ ಈ ಕಂಪನಿಯ 13,982 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 16,567 ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಕಳೆದ ವರ್ಷಕ್ಕಿಂತ ಈ ಬಾರಿ 2,585 ಕಾರುಗಳು ಕಡಿಮೆ ಮಾರಾಟವಾಗಿವೆ.

10. Mahindra Scorpio: ನವೆಂಬರ್ 2024ರಲ್ಲಿ ಈ ಕಂಪನಿಯ 12,704 ಕಾರುಗಳು ಮಾರಾಟವಾಗಿದ್ದರೆ, 2023ರ ನವೆಂಬರ್‌ನಲ್ಲಿ 12,185 ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಕಳೆದ ವರ್ಷಕ್ಕಿಂತ ಈ ಬಾರಿ 519 ಹೆಚ್ಚು ಕಾರುಗಳು ಮಾರಾಟವಾಗಿವೆ.

ಈ ಮಾಹಿತಿಯ ಪ್ರಕಾರ, ನವೆಂಬರ್ 2024ರಲ್ಲಿ ಮಾರುತಿ ಸುಜುಕಿಯು ತನ್ನ ವಿವಿಧ ಮಾದರಿಯ ಕಾರುಗಳನ್ನು ಹೆಚ್ಚು ಮಾರಾಟ ಮಾಡುವ ಮೂಲಕ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ. ಅದರಲ್ಲಿಯೂ ಬಲೆನೊ ಮೊದಲ ಸ್ಥಾನ, ನಂತರ ಎರ್ಟಿಗಾ, ಬ್ರೆಝಾ ಟಾಪ್ 10 ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇನ್ನು ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರಾ ತಮ್ಮ ವಿವಿಧ ಮಾದರಿಗಳ ಮಾರಾಟದಲ್ಲಿ ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ಬಾರಿ ಏರಿಕೆಯನ್ನು ಕಂಡಿವೆ.

ಹೆಚ್ಚು ಮಾರಾಟವಾದ 10 ಕಾರುಗಳ ದರ

1. ಮಾರುತಿ ಸುಜುಕಿ ಬಲೆನೊ: ಮಾರುತಿ ಸುಜುಕಿ ಬಲೆನೊ ನವೆಂಬರ್ 2024 ರಲ್ಲಿ ಹೆಚ್ಚು ಮಾರಾಟವಾಗಿರುವ ಕಾರುಗಳಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಈ ಕಾರಿನ ಮೂಲ ಬೆಲೆ ಎಕ್ಸ್ ಶೋರೂಂ ಬೆಲೆ ₹6.66 ಲಕ್ಷದಿಂದ ಪ್ರಾರಂಭವಾಗುತ್ತದೆ.

2. ಹುಂಡೈ ಕ್ರೆಟಾ: ಹ್ಯುಂಡೈ ಕ್ರೆಟಾ ಎರಡನೇ ಸ್ಥಾನದಲ್ಲಿದ್ದು, ಹಿಂದಿನ ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ಎಸ್‌ಯುವಿಯ ಮಾರಾಟವು 31% ರಷ್ಟು ಹೆಚ್ಚಾಗಿದೆ. E 1.5 ಪೆಟ್ರೋಲ್ ಮಾದರಿಯ ಕಾರಿನ ಎಕ್ಸ್ ಶೋ ರೂಂ ಬೆಲೆ ₹10.99 ಲಕ್ಷದಿಂದ ಪ್ರಾರಂಭವಾಗುತ್ತದೆ.

3. ಟಾಟಾ ಪಂಚ್: ಟಾಟಾ ಪಂಚ್ ನವೆಂಬರ್ 2024 ತಿಂಗಳ ಮಾರಾಟದ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಎಕ್ಸ್ ಶೋ ರೂಂ ಬೆಲೆ ₹6.12 ಲಕ್ಷದಿಂ ಆರಂಭವಾಗುತ್ತದೆ.

4. ಟಾಟಾ ನೆಕ್ಸನ್: ಟಾಟಾ ನೆಕ್ಸಾನ್ ನವೆಂಬರ್ 2024 ತಿಂಗಳ ಮಾರಾಟದ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ನವೆಂಬರ್ 2023ಕ್ಕೆ ಹೋಲಿಸಿದರೆ, ನವೆಂಬರ್ 2024ರಲ್ಲಿ ಟಾಟಾ ನೆಕ್ಸಾನ್ ಮಾರಾಟದಲ್ಲಿ 3%ರಷ್ಟು ಏರಿಕೆ ಕಂಡಿದೆ. ಬೇಸ್ ಸ್ಮಾರ್ಟ್ (O) 1.2 ಪೆಟ್ರೋಲ್ 5MT ಮಾದರಿಯ ನೆಕ್ಸಾನ್ ಎಕ್ಸ್ ಶೋರೂಂ ಬೆಲೆ ₹7.99 ಲಕ್ಷದಿಂದ ಪ್ರಾರಂಭವಾಗುತ್ತದೆ.

5. ಮಾರುತಿ ಸುಜುಕಿ ಎರ್ಟಿಗಾ: ಕಳೆದ ಎರಡು ತಿಂಗಳುಗಳಿಂದ ಹೆಚ್ಚು ಮಾರಾಟವಾಗುತ್ತಿರುವ ಕಾರಾಗಿರುವ ಎರ್ಟಿಗಾ 2024ರ ಮಾರಾಟದಲ್ಲಿ ಐದನೇ ಸ್ಥಾನದಲ್ಲಿದೆ. ಇದರ ಎಕ್ಸ್ ಶೋ ರೂಂ ಬೆಲೆ ₹8.69 ಲಕ್ಷದಿಂದ ಪ್ರಾರಂಭವಾಗುತ್ತದೆ.

6. ಮಾರುತಿ ಸುಜುಕಿ ಬ್ರೆಝಾ: ಮಾರುತಿ ಸುಜುಕಿಯು ನವೆಂಬರ್ 2024ರಲ್ಲಿ ಕಾರು ಮಾರಾಟದಲ್ಲಿ ಆರನೇ ಸ್ಥಾನದಲ್ಲಿದೆ. ಈ ಕಂಪನಿಯ ವಿವಿಧ ಮಾದರಿಯ ಕಾರುಗಳ ಎಕ್ಸ್‌ ಶೋರೂಂ ಬೆಲೆ ₹8.34 ಲಕ್ಷದಿಂದ ₹14.14 ಲಕ್ಷದವರೆಗೆ ಇದೆ.

7. ಮಾರುತಿ ಸುಜುಕಿ ಫ್ರಾಂಕ್ಸ್: ಮಾರುತಿ ಸುಜುಕಿಯ ಈ SUV ಮಾದರಿಯು ನವೆಂಬರ್, 2024ರಲ್ಲಿ ಕಾರು ಮಾರಾಟದಲ್ಲಿ ಏಳನೇ ಸ್ಥಾನದಲ್ಲಿದೆ. ಇದರಲ್ಲಿ ಡೆಲ್ಟಾ, ಸಿಗ್ಮಾ, ಡೆಲ್ಟಾ+, ಡೆಲ್ಟಾ+ (O), ಆಲ್ಫಾ ಮತ್ತು ಝೀಟಾ ಮಾದರಿಗಳನ್ನು ಕಾಣಬಹುದಾಗಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನ ಎಕ್ಸ್ ಶೋ ರೂಂ ಬೆಲೆ ₹7.51 ಲಕ್ಷದಿಂದ ಪ್ರಾರಂಭವಾಗುತ್ತದೆ.

8. ಮಾರುತಿ ಸುಜುಕಿ ಸ್ವಿಫ್ಟ್: ಮಾರುತಿ ಸುಜುಕಿ ಸ್ವಿಫ್ಟ್ 2024ರ ನವೆಂಬರ್‌ನಲ್ಲಿ ಕಾರು ಮಾರಾಟದಲ್ಲಿ ಎಂಟನೇ ಸ್ಥಾನದಲ್ಲಿದೆ. ನವೆಂಬರ್ 2023ಕ್ಕೆ ಹೋಲಿಸಿದರೆ ಈ ಬಾರಿ ಮಾರಾಟದಲ್ಲಿ 4% ರಷ್ಟು ಕಡಿಮೆಯಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ ₹6.49 ಲಕ್ಷದಿಂದ ಪ್ರಾರಂಭವಾಗುತ್ತದೆ.

9. ಮಾರುತಿ ಸುಜುಕಿ ವ್ಯಾಗನ್ ಆರ್: 2024ರ ನವೆಂಬರ್‌ನಲ್ಲಿ ಕಾರು ಮಾರಾಟದಲ್ಲಿ ಈ ಕಾರು ಒಂಬತ್ತನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಎಕ್ಸ್ ಶೋ ರೂಂ ಬೆಲೆ ₹5.54 ಲಕ್ಷದಿಂದ ಪ್ರಾರಂಭವಾಗುತ್ತದೆ.

10. ಮಹೀಂದ್ರ ಸ್ಕಾರ್ಪಿಯೋ: ನವೆಂಬರ್ 2024ರಲ್ಲಿ ಅತೀ ಹೆಚ್ಚು ಕಾರುಗಳ ಮಾರಾಟದಲ್ಲು ಮಹೀಂದ್ರಾ ಸ್ಕಾರ್ಪಿಯೊ ಟಾಪ್ 10ರ ಸ್ಥಾನವನ್ನು ಪಡೆದುಕೊಂಡಿದೆ. ಮಹೀಂದ್ರ ಸ್ಕಾರ್ಪಿಯೊ ಎಕ್ಸ್ ಶೋ ರೂಂ ಬೆಲೆ 13.61 ಲಕ್ಷದಿಂದ ಪ್ರಾರಂಭವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+