ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ದೂರಸಂಪರ್ಕ ದಿನ: ಇತಿಹಾಸ, ಮಹತ್ವ, ಕೋವಿಡ್ ಮಧ್ಯೆ ಇದರ ಪಾತ್ರ

|
Google Oneindia Kannada News

ಕೋವಿಡ್ ಲಾಕ್‌ಡೌನ್‌ಗಳ ಮಧ್ಯೆ, ಬರೋಬ್ಬರಿ ಎರಡು ಸುದೀರ್ಘ ವರ್ಷಗಳ ಕಾಲ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಕುಟುಂಬವನ್ನು ಬಿಟ್ಟು ದೂರ ಇರುವಂತಹ ಸಂದರ್ಭದಲ್ಲಿಇಡೀ ಪ್ರಪಂಚ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ನಮ್ಮ ಜೊತೆಯಾಗಿದ್ದವು. ನಮ್ಮವರು ಎನಿಸಿಕೊಂಡವರ ಜೊತೆಗೆ ಸದಾ ಸಂವಹನ ನಡೆಸುವುದಕ್ಕೆ ನಮಗೆ ಸಿಕ್ಕ ವರವಾಗಿದ್ದವು ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ಮೈಲಿಗಟ್ಟಲೇ ದೂರದಲ್ಲಿದ್ದ ನಮ್ಮ ಪ್ರೀತಿ ಪಾತ್ರರನ್ನು ತಲುಪುವುದಕ್ಕೆ ಟೆಲಿ ಕಮ್ಯುನಿಕೇಷನ್ ಒಂದೇ ದಾರಿಯಾಗಿತ್ತು.

ಸಮಾಜದಲ್ಲಿ ಸಂಹವನದ ಮಹತ್ವವನ್ನು ಅದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ದಿನಚಾರಣೆಯನ್ನು (World Tele Communication day) ಆಚರಿಸಲಾಗುತ್ತದೆ. 1865 ಮೇ 17ರಲ್ಲಿ ಅಂತಾರಾಷ್ಟ್ರೀಯ ಟೆಲಿಗ್ರಾಫ್‌ ಒಕ್ಕೂಟ ಆರಂಭವಾದ ನೆನಪಿನಲ್ಲಿ ಈ ದಿನವನ್ನು ವಿಶ್ವ ದೂರ ಸಂಪರ್ಕ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) 1876ರಲ್ಲಿ ದೂರವಾಣಿ, 1957ರಲ್ಲಿ ಚೊಚ್ಚಲ ಉಪಗ್ರಹ ಉಡಾವಣೆ ನಂತರ ಅಂತರ್ಜಾಲ ಅವಿಷ್ಕಾರದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ:

ಗುರಿ ಮತ್ತು ಉದ್ದೇಶ

ಗುರಿ ಮತ್ತು ಉದ್ದೇಶ

ದೂರಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸುವ ಮತ್ತು ಸಾಮಾಜಿಕ ಜೀವನದಲ್ಲಿ ಅದು ವಹಿಸುವ ಪ್ರಮುಖ ಪಾತ್ರದ ಅರಿವನ್ನು ಹೆಚ್ಚಿಸುವ ಗುರಿಯನ್ನು ಈ ದಿನ ಹೊಂದಿದೆ. ಜೊತೆಗೆ ಅಂತರ್ಜಾಲ , ಸಂಪರ್ಕ್‌ ಸೇರಿದಂತೆ ಹೊಸ ತಂತ್ರಜ್ಞಾನಗಳಿಂದ ಆಗುತ್ತಿರುವ ಸಾಮಾಜಿಕ ಮತ್ತು ಸಮುದಾಯದ ಬದಲಾವಣೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನಜಾಗೃತಿ ಮೂಡಿಸುವುದೇ ಉದ್ದೇಶವನ್ನು ಹೊಂದಿದೆ. ವಿಶ್ವ ದೂರಸಂಪರ್ಕ ದಿನವು ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ವಿಶ್ವ ದೂರಸಂಪರ್ಕ ದಿನಾಚರಣೆ 2022ರ ಪ್ರಮುಖ ವಿಷಯ

ವಿಶ್ವ ದೂರಸಂಪರ್ಕ ದಿನಾಚರಣೆ 2022ರ ಪ್ರಮುಖ ವಿಷಯ

ಪ್ರತಿ ವರ್ಷವೂ ವಿಶ್ವ ದೂರಸಂಪರ್ಕ ದಿನಚಾರಣೆಯನ್ನು ಒಂದು ವಿಶೇಷ ವಿಷಯವನ್ನಿಟ್ಟಿಕೊಂಡು ಆಚರಿಸಲಾಗುತ್ತದೆ. ಈ ಬಾರಿ 'ವಯಸ್ಸಾದ ವ್ಯಕ್ತಿಗಳಿಗೆ ಮತ್ತು ಆರೋಗ್ಯಕರ ಬಲವರ್ದನೆಗೆ ಡಿಜಿಟಲ್ ತಂತ್ರಜ್ಞಾನಳು' ಎಂಬುದರ ಆದರದ ಮೇಲೆ ಆಚರಿಸಲು ನಿರ್ಧರಿಸಲಾಗಿದೆ. ಈ ವರ್ಷದ ಥೀಮ್ ಮಾಹಿತಿ ತಂತ್ರಜ್ಞಾನಗಳ ಬಳಕೆ ಮತ್ತು ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಮಟ್ಟದಲ್ಲಿ ಆರೋಗ್ಯಕರ, ಸಂಪರ್ಕ ಮತ್ತು ಸ್ವತಂತ್ರವಾಗಿರಲು ಅವುಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುವುದಾಗಿದೆ. ಕಳೆದ ವರ್ಷ 'ಸವಾಲಿನ ಸಮಯದಲ್ಲಿ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸುವುದು' ಎಂಬ ವಿಷಯದೊಂದಿಗೆ ದೂರಸಂಪರ್ಕ ದಿನಚಾರಣೆಯನ್ನಾಚರಿಸಲಾಗಿತ್ತು.

2006 ರಲ್ಲಿ ವಿಶ್ವಸಂಸ್ಥೆಯಿಂದ ಅಧಿಕೃತ ಘೋಷಣೆ

2006 ರಲ್ಲಿ ವಿಶ್ವಸಂಸ್ಥೆಯಿಂದ ಅಧಿಕೃತ ಘೋಷಣೆ

1865 ರ ಮೇ 17ರಂದು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU)ನ ಸ್ಥಾಪನೆಯ ನೆನಪಿನಲ್ಲಿ ಈ ದಿನವನ್ನು ಆಚರಣೆಯ ಸ್ಮರಿಸಲಾಗುತ್ತಿದೆ. ಪ್ಯಾರಿಸ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಟೆಲಿಗ್ರಾಫ್ ಸಮಾವೇಶಕ್ಕೆ ಸಹಿ ಹಾಕಿದ ಸಂದರ್ಭವೂ ಇದಾಗಿದೆ.17 ಮೇ, 1969 ರಂದು, ವಿಶ್ವ ದೂರಸಂಪರ್ಕ ದಿನವನ್ನು ಮೊದಲು ಆಚರಿಸಲಾಯಿತು. 1865 ಮೇ 17ರಂದು ಅಂತಾರಾಷ್ಟ್ರೀಯ ಟೆಲಿಗ್ರಾಫ್ ಒಕ್ಕೂಟ 'ಐಟಿಯು' ಸ್ಥಾಪನೆಯಾದ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ.

2005ರಲ್ಲಿ ಟುನಿಸ್‌ ದೇಶದಲ್ಲಿ ನಡೆದ ವಿಶ್ವ ಮಾಹಿತಿ ಸೊಸೈಟಿಯ ಸಮಾವೇಶದಲ್ಲಿ ಸಂಪರ್ಕ ಕ್ಷೇತ್ರದಲ್ಲಿ ಆಗುತ್ತಿದ್ದ ವೇಗದ ಬೆಳವಣಿಗೆಗಳು ಹಾಗೂ ಮಾಹಿತಿ ಕ್ಷೇತ್ರಕ್ಕೆ ಅದರಿಂದ ಸಿಗುತ್ತಿದ್ದ ವಿಫುಲ ತಂತ್ರಜ್ಞಾನ ಪ್ರಯೋಜನಗಳನ್ನು ಗಮನಿಸಿದ ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಗೆ ಕರೆ ನೀಡಿತ್ತು. 2006 ಮಾರ್ಚ್‌ನಲ್ಲಿ ವಿಶ್ವಸಂಸ್ಥೆ ತನ್ನ ಸಾಮಾನ್ಯ ಅಧಿವೇಶನದಲ್ಲಿ ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸೊಸೈಟಿಯ ದಿನಾಚರಣೆಯನ್ನು ಆಚರಿಸಬೇಕೆಂದು ಘೋಷಿಸಿತು. ಆ ಘೋಷಣೆಯಂತೆ ಪ್ರತಿವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ಮತ್ತು ಮಾಹಿತಿ ಸಮಾಜ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ.

ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಮಹತ್ವ

ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ಮಹತ್ವ

ಪ್ರಸ್ತುತ ಜೀವನದಲ್ಲಿ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಿಟ್ಟು ಬದಕಲು ಸಾಧ್ಯವಿಲ್ಲ, ಅವುಗಳ ನಮ್ಮ ಜೀವನದ ಒಂದು ಭಾಗವಾಗಿವೆ ಮತ್ತು ನಮ್ಮ ಜೀವನವನ್ನು ಸುಲಭಗೊಳಿಸಿವೆ. ಆದರೆ ಅದು ನಮಗೆ ಸಂಪೂರ್ಣವಾಗಿ ಸಕಾರಾತ್ಮಕವಾಗಿವೆ ಎಂದು ಹೇಳಲಾಗುವುದಿಲ್ಲ. ಆದರೆ ತಂತ್ರಜ್ಞಾನ ಇಲ್ಲದಿದ್ದರೆ, ನಾವು ಇನ್ನೂ ಸಂವಹನದಕ್ಕಾಗಿ ಒಬ್ಬರಿಗೊಬ್ಬರು ಪತ್ರಗಳನ್ನು ಬರೆದುಕೊಂಡು ಇರಬೇಕಾಗಿತ್ತು, ಅದನ್ನು ಈ ಕಾಲಘಟ್ಟದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ.
ನಾವು ಡಿಜಿಟಲ್ ಯುಗದಲ್ಲಿ ವಾಸಿಸುತ್ತಿದ್ದೇವೆ ಮತ್ತು ಎಲೆಕ್ಟ್ರಾನಿಕ್ಸ್ ಇಲ್ಲದ ದಿನವನ್ನು ನಾವು ಊಹಿಸಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರು ಒಪ್ಪಿಕೊಳ್ಳಬೇಕಾಗಿದೆ.

ಕೋವಿಡ್‌ ಮಧ್ಯೆ ಇದರ ಪಾತ್ರ

ಕೋವಿಡ್‌ ಮಧ್ಯೆ ಇದರ ಪಾತ್ರ

ಕೋವಿಡ್‌ 19 ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವನ ಶೈಲಿ ಊಹಿಸಲಾರದಷ್ಟು ಬದಲಾಗಿತ್ತು. ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಎಲ್ಲಾ ಕ್ಷೇತ್ರದ ದೊಡ್ಡ ಉದ್ಯೋಗಿಗಳು, ರಾಜಕಾರಣಗಳು ಸೇರಿದಂತೆ ಹೀಗೆ ಎಲ್ಲರಿಗೂ ತಮ್ಮ ಕ್ಷೇತ್ರದಲ್ಲಿ ವ್ಯವಹರಿಸಲು ದೂರಸಂಪರ್ಕ ವ್ಯವಸ್ಥೆ ಪ್ರಮುಖ ಪಾತ್ರವಹಿಸಿತ್ತು. ಕೆಲವೇ ಕ್ಷೇತ್ರದಲ್ಲಿದ್ದ ವರ್ಕ್‌ ಫ್ರಮ್ ಹೋಮ್ ಎಂಬ ಕಾನ್ಸೆಪ್ಟ್‌ ಎಲ್ಲಾ ಕ್ಷೇತ್ರಕ್ಕೂ ಆಗಮಿಸಿತು. ವರ್ಚುವಲ್‌ ಮೀಟಿಂಗ್, ವರ್ಚುವಲ್ ಕಾರ್ಯಕ್ರಮಗಳು ಇಂದಿಗೂ ನಡೆಯುತ್ತಲೇ ಇವೆ. ಇದೆಲ್ಲವುಗಳು ದೂರಸಂಪರ್ಕ ಕ್ಷೇತ್ರದಲ್ಲಾಗಿರುವ ಕ್ರಾಂತಿಯನ್ನು ಸೂಚಿಸುತ್ತದೆ. ಈ ಕಾರಣದಿಂದ ಮನುಷ್ಯ ಇಂದು ತಂತ್ರಜ್ಞಾನವನ್ನು ಬಿಟ್ಟು ಬದುಕಲಾರ ಎಂದರೆ ಅತಿಶಯೋಕ್ತಿಯಲ್ಲ.

English summary
May 17 is celebrated as World Telecommunication and Information Society Day,Telecommunication Importance, commemorating the signing of the first International Telegraph Convention and the founding of the ITU
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X