ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ನಿರಾಶ್ರಿತರ ದಿನ- ಈ ವರ್ಷದ ಥೀಮ್ ಏನು? ಈವರೆಗೆ ನೆಲೆ ಕಳೆದುಕೊಂಡವರೆಷ್ಟು?

|
Google Oneindia Kannada News

ನವದೆಹಲಿ, ಜೂನ್ 20: ಇಂದು ವಿಶ್ವ ನಿರಾಶ್ರಿತರ ದಿನ (World Refugee Day) ಆಚರಿಸಲಾಗುತ್ತಿದೆ. ಯುದ್ಧ, ರಾಜಕೀಯ ಕ್ಷೋಭೆ, ಆರ್ಥಿಕ ಬಿಕ್ಕಟ್ಟು, ಹಿಂಸಾಚಾರ ಇತ್ಯಾದಿ ಬೇರೆ ಬೇರೆ ಕಾರಣಗಳಿಂದ ದಮನಕ್ಕೊಳಪಟ್ಟು ತಂತಮ್ಮ ದೇಶಗಳನ್ನು ತೊರೆದು ಬೇರೆ ದೇಶಗಳಲ್ಲಿ ಆಶ್ರಯಕ್ಕೆ ಎಡತಾಕುತ್ತಿರುವ ಲಕ್ಷಾಂತರ ಮಂದಿ ಇದ್ದಾರೆ. ಇವರ ಬಗ್ಗೆ ಸಂವೇದನಾಶೀಲತೆಯಿಂದ ನಡೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಜೂನ್ 20ರಂದು ವಿಶ್ವ ನಿರಾಶ್ರಿತರ ದಿನವನ್ನು ಒಂದು ವೇದಿಕೆಯಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ.

ಈ ವರ್ಷ ನಿರಾಶ್ರಿತರ ದಿನಕ್ಕೆ ಬಹಳ ಮಹತ್ವ ಇದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ಯುದ್ದದಿಂದಾಗಿ ಈ ವರ್ಷ ಜಾಗತಿಕವಾಗಿ ನಿರಾಶ್ರಿತರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಲು ಕಾರಣವಾಗಿದೆ. ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ ರಷ್ಯಾ ಆಕ್ರಮಣದ ಬಳಿಕ ಉಕ್ರೇನ್ ದೇಶದಿಂದ ಬರೋಬ್ಬರಿ 50 ಲಕ್ಷ ಜನರು ಯೂರೋಪ್‌ನ ಇತರ ದೇಶಗಳಲ್ಲಿ ಆಶ್ರಯ ಕೋರಿ ಹೋಗಿದ್ದಾರೆ.

ವಿಶ್ವ ಅಪ್ಪಂದಿರ ದಿನ 2022: ದಿನಾಂಕ, ಇತಿಹಾಸ ಮತ್ತು ಮಹತ್ವ ತಿಳಿಯಿರಿವಿಶ್ವ ಅಪ್ಪಂದಿರ ದಿನ 2022: ದಿನಾಂಕ, ಇತಿಹಾಸ ಮತ್ತು ಮಹತ್ವ ತಿಳಿಯಿರಿ

ಉಕ್ರೇನ್ ದೇಶದಲ್ಲಿ ಇರುವ ಜನಸಂಖ್ಯೆ ಕೇವಲ 4.2 ಕೋಟಿ ಮಾತ್ರ. ಅಂಥದ್ದರಲ್ಲಿ 50 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆಂದರೆ ಅದೆಷ್ಟು ಯುದ್ಧ ಸಂತ್ರಸ್ತರು ನಿರ್ಮಾಣವಾಗಿದ್ದಿರಬಹುದು. ಉಕ್ರೇನ್ ಜನಸಂಖ್ಯೆಯ ಶೇ. 10ಕ್ಕಿಂತಲೂ ಹೆಚ್ಚು ಮಂದಿ ದೇಶ ತೊರೆದು ನಿರಾಶ್ರಿತರಾಗಿದ್ದಾರೆ.

ನಿರಾಶ್ರಿತರ ದಿನ ಹುಟ್ಟಿದ್ದು ಹೇಗೆ?

ನಿರಾಶ್ರಿತರ ದಿನ ಹುಟ್ಟಿದ್ದು ಹೇಗೆ?

1951ರಲ್ಲಿ ನಿರಾಶ್ರಿತರ ಸ್ಥಿತಿಗತಿ ಸಂಬಂಧಿತ ಸಮಾವೇಶವನ್ನು ನಡೆಸಲಾಗಿತ್ತು. ಅದರ ವಜ್ರ ಮಹೋತ್ಸವ (50ನೇ ವಾರ್ಷಿಕೋತ್ಸವ) 2001 ಜೂನ್ 20ರಂದು ನಡೆಸಲಾಯಿತು. ಆ ದಿನವನ್ನು ವಿಶ್ವ ನಿರಾಶ್ರಿತರ ದಿನವಾಗಿ ಘೋಷಣೆ ಮಾಡಲಾಯಿತು. ಆಗಿನಿಂದ ಪ್ರತೀ ವರ್ಷ ಜೂನ್ 20ರಂದು ನಿರಾಶ್ರಿತರ ದಿನವಾಗಿ ಆಚರಿಸಲಾಗುತ್ತಿದೆ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮೊದಲು, ನಂತರ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳುವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮೊದಲು, ನಂತರ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು

ಈ ವರ್ಷದ ನಿರಾಶ್ರಿತರ ದಿನದ ಥೀಮ್

ಈ ವರ್ಷದ ನಿರಾಶ್ರಿತರ ದಿನದ ಥೀಮ್

ವಿಶ್ವಸಂಸ್ಥೆ ನಿರಾಶ್ರಿತರ ಉನ್ನತಾಯುಕ್ತರು (UNHCR- United Nations High Commissioner for Refugees) ಪ್ರತೀ ವರ್ಷವೂ ವಿಶ್ವ ನಿರಾಶ್ರಿತರ ದಿನಕ್ಕೆ ಬೇರೆ ಬೇರೆ ಥೀಮ್ ಅಥವಾ ಪರಿಕಲ್ಪನೆಯನ್ನು ನಿಗದಿ ಮಾಡುತ್ತಾರೆ. ನಿರಾಶ್ರಿತರ ಸಮಸ್ಯೆಯ ವಿವಿಧ ಮಗ್ಗುಲುಗಳ ಮೇಲೆ ಬೆಳಕು ಚೆಲ್ಲಲು ಇಂಥದ್ದೊಂದು ನಡಾವಳಿ ಮಾಡಿಕೊಂಡು ಬರಲಾಗುತ್ತಿದೆ.

'ಸುರಕ್ಷತೆಯ ಆಯ್ಕೆಯ ಹಕ್ಕು' (Right to Seek Safety) ಎಂಬುದು ಈ ವರ್ಷದ ನಿರಾಶ್ರಿತರ ದಿನದ ಥೀಮ್ ಆಗಿ ಆಯ್ಕೆ ಮಾಡಲಾಗಿದೆ. ನಿರಾಶ್ರಿತರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸುರಕ್ಷಿತ ಸ್ಥಳ ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿರುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವಸಂಸ್ಥೆಯ ಈ ಅಂಗ ಸಂಸ್ಥೆ ಈ ವರ್ಷ ಪ್ರಯತ್ನಿಸುತ್ತಿದೆ.

ಈವರೆಗೆ ನಿರಾಶ್ರಿತರಾದವರು ಎಷ್ಟು?

ಈವರೆಗೆ ನಿರಾಶ್ರಿತರಾದವರು ಎಷ್ಟು?

ಜನರು ನಿರಾಶ್ರಿತರಾಗಲು ಯುದ್ಧ, ಬಿಕ್ಕಟ್ಟು, ಹಿಂಸಾಚಾರ ಇತ್ಯಾದಿ ಹಲವು ಕಾರಣಗಳು ಇವೆ. ಈ ರೀತಿಯಾಗಿ ಈವರೆಗೂ ವಿಶ್ವಾದ್ಯಂತ 10 ಕೋಟಿಗೂ ಹೆಚ್ಚು ಮಂದಿ ತಮ್ಮ ಮನೆಮಠಗಳನ್ನು ತೊರೆದು ಹೋಗಿದ್ದಾರಂತೆ. ಅಂದರೆ ಇಡೀ ಮಾನವಕುಲದ ಶೇ. ಒಂದರಷ್ಟು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳುತ್ತದೆ.

"ಉಕ್ರೇನ್‌ನಲ್ಲಿ ಸಂಭವಿಸುತ್ತಿರುವ ಯುದ್ಧ, ಇಥಿಯೋಪಿಯಾ, ಬುರ್ಕೀನ ಫಾಸೊ, ಮಯನ್ಮಾರ್, ನೈಜೀರಿಯಾ, ಅಫ್ಘಾನಿಸ್ತಾನ, ಕಾಂಗೋ ಮೊದಲಾದ ದೇಶಗಳಲ್ಲಿ ನೆಲಸಿರುವ ತುರ್ತುಸ್ಥಿತಿಯು ಅಲ್ಲಿನ ಅನೇಕ ಜನರನ್ನು ದೇಶ ಬಿಟ್ಟು ಹೋಗುವಂತೆ ಮಾಡಿವೆ" ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಉನ್ನತ ಆಯುಕ್ತ ಫಿಲಿಪೋ ಗ್ರಾಂಡಿ ಹೇಳಿದ್ದಾರೆ.

ನಿರಾಶ್ರಿತರ ಮಾನಸಿಕ ಸ್ಥೈರ್ಯಕ್ಕೆ ಪ್ರಶಂಸೆ

ನಿರಾಶ್ರಿತರ ಮಾನಸಿಕ ಸ್ಥೈರ್ಯಕ್ಕೆ ಪ್ರಶಂಸೆ

ನಿರಾಶ್ರಿತರ ಸಮಸ್ಯೆಗಳಿಗೆ ಸರಕಾರಗಳು ಸೂಕ್ತ ಪರಿಹಾರ ಕಂದುಕೊಳ್ಳಬೇಕೆಂದು ನಿರಾಶ್ರಿತರ ಉನ್ನತ ಆಯುಕ್ತ ಫಿಲಿಪೋ ಗ್ರಾಂಡಿ ಕರೆ ನೀಡಿದ್ದಾರೆ. ಹಾಗೆಯೇ, ನಿರಾಶ್ರಿತರಿಗೆ ಪರಿಹಾರ ಕಲ್ಪಿಸುವುದಕ್ಕೆ ಕಷ್ಟಸಾಧ್ಯವಾಗುವ ರೀತಿಯಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದೆ ಎಂದೂ ಗ್ರಾಂಡಿ ಆತಂಕ ವ್ಯಕ್ತಪಡಿಸಿದ್ಧಾರೆ.

"ವಿಶ್ವ ನಿರಾಶ್ರಯ ದಿನವನ್ನು ಲಕ್ಷಾಂತರ ಮಂದಿ ನಿರಾಶ್ರಿತರ ಮಾನಸಿಕ ಸ್ಥೈರ್ಯಕ್ಕೆ ಪ್ರಶಂಸೆಯಾಗಿ ಆಚರಿಸುವ ಉದ್ದೇಶ ಇದೆ. ಇವರು ನೆಲೆ ಕಳೆದುಕೊಂಡರೂ ತಮ್ಮ ಹಾಗೂ ತಮ್ಮ ಕುಟುಂಬ ಮತ್ತು ಸಮುದಾಯಗಳ ಬದುಕುಗಳನ್ನು ಬೆಳಗಿಸಲು ಅವಿರತವಾಗಿ ಪ್ರಯತ್ನಿಸುತ್ತಿರುವ ಇವರ ಉತ್ಸಾಹವನ್ನು ಪ್ರಶಂಸಿಸಲೇ ಬೇಕು" ಎಂದು ಫಿಲಿಪೋ ಗ್ರಾಂಡಿ ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
World Refugee Day has been celebrating every year from 2001 to spread awareness about refugees who were forcebly displaced from their home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X