ಜಂಪಿಂಗ್ ಜಮಾನಾದಲ್ಲಿ 84 ವರ್ಷ ಒಂದೇ ಕಂಪನಿಯಲ್ಲಿ ದುಡಿದು ಗಿನ್ನಿಸ್ ದಾಖಲೆ!
ಇದು ಸಂಬಳ ಜಾಸ್ತಿ ಸಿಗುತ್ತೆ ಅಂದ್ರೆ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಜಂಪ್ ಮಾಡೋರ್ ಜಮಾನಾ. ಮೂರು ಕೊಟ್ರೆ ಒಂದು ಕಂಪನಿ, ಆರು ಕೊಟ್ರೆ ಮತ್ತೊಂದು ಕಂಪನಿ ಎನ್ನುವವರ ಮಧ್ಯೆ ಒಂದೇ ಕಂಪನಿಯಲ್ಲಿ 84 ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ಆ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಜಗತ್ತಿನಲ್ಲಿ ಇಂಥ ಜನರು ಸಿಗೋದು ತುಂಬಾ ಅಪರೂಪ. ಬ್ರೆಜಿಲ್ ಮೂಲದ ಇವರ ಹೆಸರು ವಾಲ್ಟರ್ ಅರ್ಥಮನ್. 100 ವರ್ಷ ವಯಸ್ಸಿನ ವಾಲ್ಟರ್ ಅರ್ಥಮನ್, ಕಳೆದ 2022ರ ಜನವರಿ 6ಕ್ಕೆ ಒಂದೇ ಟೆಕ್ಸಟೈಲ್ ಕಂಪನಿಯಲ್ಲಿ ಉದ್ಯೋಗವನ್ನು ಆರಂಭಿಸಿ 84 ವರ್ಷ 9 ದಿನಗಳಾಗುತ್ತದೆ. ಇದು ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸೇರ್ಪಡೆಯಾಗಿದೆ.
ಈ ಮೊದಲು 1938ರ ಜನವರಿ 17ರಂದು, ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದಲ್ಲಿನ ಜವಳಿ ಕಂಪನಿಯಲ್ಲಿ ಇಂಡಸ್ಟ್ರಿಯಾಸ್ ರೆನಾಕ್ಸ್ ಎಸ್‌ಎ (ಈಗ ರೆನಿಯಕ್ಸ್ ವ್ಯೂ ಎಂದು ಕರೆಯುವ) ಎಂದು ಕರೆಯಲಾಗುವ ಜವಳಿ ಕಂಪನಿಯಲ್ಲಿ 15 ವರ್ಷ ವಯಸ್ಸಿನವನಾಗಿದ್ದಾಗ ಓರ್ತ್‌ಮನ್ ಶಿಪ್ಪಿಂಗ್ ಸಹಾಯಕರಾಗಿ ಕೆಲಸ ಶುರು ಮಾಡಿದ್ದರು.

ಗಿನ್ನಿಸ್ ದಾಖಲೆ ಬರೆದ ಅರ್ಥಮನ್:
ಅವರ ಉತ್ಸಾಹ, ಶಿಸ್ತು ಮತ್ತು ಬದ್ಧತೆಯು ಅವರನ್ನು ಒಂದೇ ಕಂಪನಿಯಲ್ಲಿ ಮುಂದುವರಿಯುವುದಕ್ಕೆ ಪ್ರೇರೇಪಣೆಯನ್ನು ನೀಡಿತು. ಒಂದೇ ಕಂಪನಿಯಲ್ಲಿ ಸುದೀರ್ಘ ಅವಧಿಯವರೆಗೂ ಸಲ್ಲಿಸಿದ ಸೇವೆಯಿಂದ ಇಂದು ಅದೇ ವಾಲ್ಟರ್ ಅರ್ಥಮನ್ ಅವರ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ.
ಬದ್ಧತೆಯೇ ಗೆಲುವಿನ ಮಂತ್ರ ಎಂದ ವಾಲ್ಟರ್:
ಶಿಪ್ಪಿಂಗ್ ಸಹಾಯಕರಾಗಿ ಮೊದಲು ಉದ್ಯೋಗ ಆರಂಭಿಸಿದ ವಾಲ್ಟರ್ ಅರ್ಥಮನ್, ಕೆಲವೇ ದಿನಗಳಲ್ಲಿ ಮಾರಾಟ ವಿಭಾಗಕ್ಕೆ ಬಡ್ತಿ ಪಡೆದುಕೊಂಡರು. ತದನಂತರದಲ್ಲಿ ಅವರು ಯಶಸ್ವಿ ಮಾರಾಟ ವ್ಯವಸ್ಥಾಪಕರಾದರು. ಸುದೀರ್ಘ ಅವಧಿಯವರೆಗೂ ಉದ್ಯೋಗವನ್ನು ಹೊಂದಿರುವುದಕ್ಕೆ ತಮ್ಮ ದಿನಚರಿ, ಉದ್ದೇಶ ಮತ್ತು ಬದ್ಧತೆಯೇ ಕಾರಣ ಎಂಬುದು ಅರ್ಥಮನ್ ಅವರ ನಂಬಿಕೆಯಾಗಿದೆ.

ಕ್ಯಾಟರಿನಾದಲ್ಲಿರುವ ಬ್ರಸ್ಕ್ ಪಟ್ಟಣದಲ್ಲಿ ಜನನ:
ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದಲ್ಲಿರುವ ಬ್ರಸ್ಕ್ ಎಂಬ ಸಣ್ಣ ಪಟ್ಟಣದಲ್ಲಿ ವಾಲ್ಟರ್ ಅರ್ಥಮನ್ ಜನಿಸಿದರು. ಸಣ್ಣ ವಯಸ್ಸಿನಲ್ಲೇ ಉದ್ಯೋಗಕ್ಕೆ ಸೇರಿಕೊಂಡ ಇವರು ಸದಾ ಹೊಸತನದ ಮೇಲೆ ಆಸಕ್ತಿ ಹೊಂದಿರುವುದರ ಬಗ್ಗೆ ಹೇಳಿದರು. ತಾವು ಯಾವಾಗಲೂ ಹೊಸದುದರ ಬಗ್ಗೆ ತಿಳಿಯಲು ತುಂಬಾ ಉತ್ಸಾಹದಿಂದ ಇರುವುದಾಗಿ ಹೇಳಿದರು. ಕಳೆದ ಏಪ್ರಿಲ್ 19ರ 2022ರಂದು, ವಾಲ್ಟರ್ ಆರ್ಥಮನ್ 100 ವರ್ಷಗಳನ್ನು ಪೂರೈಸಿದರು. ಅವರು ತಮ್ಮ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ತಮ್ಮ ಶತಮಾನೋತ್ಸವವನ್ನು ಆಚರಿಸಿದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications