ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Rabies Day 2022- ಸೆ. 28ರಂದು ವಿಶ್ವ ರೇಬೀಸ್ ದಿನ ಆಚರಣೆ ಯಾಕೆ? ನಾಯಿ ಕಚ್ಚಿದಾಗ ಏನು ಮಾಡಬೇಕು?

|
Google Oneindia Kannada News

ಸೆಪ್ಟೆಂಬರ್ 28ರಂದು ವಿಶ್ವ ರೇಬೀಸ್ ದಿನವಾಗಿ ಆಚರಿಸಲಾಗುತ್ತದೆ. ರೇಬೀಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಸೋಂಕಿತ ನಾಯಿಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ ಸಾವಿಗೂ ಇದು ಕಾರಣವಾಗಬಹುದು.

ರೇಬೀಸ್ ರೋಗದ ಬಗ್ಗೆ ಅರಿವು ಮೂಡಿಸಲು ಸೆಪ್ಟೆಂಬರ್ 28 ಅನ್ನು ವಿಶ್ವ ರೇಬೀಸ್ ದಿನವಾಗಿ ಮುಡಿಪು ಮಾಡಲಾಗಿದೆ. ರೇಬೀಸ್ ರೋಗವನ್ನು ನಿರ್ಮೂಲನೆ ಮಾಡುವ ಕ್ರಮಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ.

ಮೈಸೂರಿನಲ್ಲಿ ಗಮನ ಸೆಳೆದ ವಿಶ್ವ ಪ್ರವಾಸೋದ್ಯಮ ಜಾಥಾ ಮೈಸೂರಿನಲ್ಲಿ ಗಮನ ಸೆಳೆದ ವಿಶ್ವ ಪ್ರವಾಸೋದ್ಯಮ ಜಾಥಾ

ರೇಬೀಸ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಹುಚ್ಚು ಎಂದರ್ಥ. ಸಂಸ್ಕೃತದ ರಭಸ್ ಪದಕ್ಕೂ ಇದನ್ನು ಹೋಲಿಸುತ್ತಾರೆ. ರೇಬೀಸ್ ಎಂಬ ವೈರಸ್‌ನ ಸೋಂಕಿನಿಂದ ಆಗುವ ಕಾಯಿಲೆ ಇದು.

World Rabies Day 2022: Know Its History, Significance in Kannada

ರೇಬೀಸ್ ಸೋಂಕಿತ ಪ್ರಾಣಿಗಳ ಮೂಲಕ ಮನುಷ್ಯರಿಗೆ ಇದು ಹರಡುತ್ತದೆ. ಮನುಷ್ಯರಿಗೆ ತಗುಲಿರುವ ಶೇ. 99ರಷ್ಟು ರೇಬೀಸ್ ಪ್ರಕರಣಗಳಿಗೆ ನಾಯಿ ಕಡಿತವೇ ಮೂಲವಾಗಿದೆ. ನಂತರದ ಸ್ಥಾನ ಬಾವಲಿಗಳದ್ದು. ಇದು ಯಾವುದೇ ಸೋಂಕಿತ ಪ್ರಾಣಿಯಿಂದ ಬೇಕಾದರೂ ಹರಡಬಲ್ಲುದು.

ಸೋಂಕಿತ ನಾಯಿಯ ನರ ಮತ್ತು ಎಂಜಿನಲ್ಲಿ ಈ ರೇಬೀಸ್ ವೈರಸ್ ಇರುತ್ತದೆ. ರೇಬೀಸ್ ಸೋಂಕಿತ ನಾಯಿಯ ವರ್ತನೆ ಹುಚ್ಚುಚ್ಚಾಗಿರುತ್ತದೆ. ಎಂಜಲು ಸೋರುತ್ತಿರುತ್ತದೆ. ಹೀಗಾಗಿ, ಅಂತಹ ನಾಯಿಗಳು ಕಂಡರೆ ಎಚ್ಚರ. ಸಾಧ್ಯವಾದರೆ ಸ್ಥಳೀಯ ಪಾಲಿಕೆ ಅಥವಾ ಆಡಳಿತದ ಗಮನಕ್ಕೆ ತರುವ ಪ್ರಯತ್ನ ಮಾಡಬೇಕು.

ಸೆಪ್ಟೆಂಬರ್ 28ರಂದು ರೇಬೀಸ್ ದಿನ ಯಾಕೆ?

ರೇಬೀಸ್ ರೋಗಕ್ಕೆ ಮೊದಲು ಲಸಿಕೆ ಅಭಿವೃದ್ಧಿಪಡಿಸಿದ್ದು ಫ್ರೆಂಚ್ ವಿಜ್ಞಾನಿ ಲೂಯಿಸ್ ಪ್ಯಾಷ್ಚರ್. ಅವರು ಸೆಪ್ಟೆಂಬರ್ 28ರಂದು ಸಾವನ್ನಪ್ಪಿದ್ದರು. ಅವರ ಜಯಂತಿಯ ದಿನವನ್ನು ವಿಶ್ವ ರೇಬೀಸ್ ದಿನವಾಗಿ ಆಚರಿಸುವ ಪರಿಪಾಟ ಪ್ರಾರಂಭವಾಗಿತ್ತು.

ಈಗ ಸಾಕಷ್ಟು ರೇಬೀಸ್ ಲಸಿಕೆ, ಚಿಕಿತ್ಸೆ ಲಭ್ಯ ಇದ್ದರೂ ವಿಶ್ವಾದ್ಯಂತ ಒಂದು ವರ್ಷದಲ್ಲಿ 59 ಸಾವಿರ ಜನರು ಈ ಕಾಯಿಲೆಯಿಂದ ಸಾಯುತ್ತಾರಂತೆ. ಆಫ್ರಿಕಾ ಮತ್ತು ಏಷ್ಯಾದಲ್ಲೇ ಅತಿ ಹೆಚ್ಚು ಸಾವುಗಳಾಗಿವೆ. ಇಲ್ಲಿ ಬೀದಿ ನಾಯಿಗಳು ಅತ್ಯಧಿಕ ಇರುವುದರಿಂದ ರೇಬೀಸ್‌ಗೆ ಬಲಿಯಾಗುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಿರುತ್ತದೆ.

ನಾಯಿಗೆ ಮೊದಲ ಲಸಿಕೆ ಹಾಕಿ:

ಸಾಮಾನ್ಯವಾಗಿ ಸಾಕು ನಾಯಿಗಳಿಗೆ ರೇಬೀಸ್ ಲಸಿಕೆ ಹಾಕಲಾಗುತ್ತದೆ. ಆದರೆ, ಬೀದಿ ನಾಯಿಗಳನ್ನು ಕೇಳುವವರು ಯಾರು? ಬಹುತೇಕ ಬೀದಿ ನಾಯಿಗಳಿಗೆ ಯಾವುದೇ ಲಸಿಕೆ ಸಿಗುವುದಿಲ್ಲ. ಹೀಗಾಗಿ ಇವರು ರೇಬೀಸ್ ಸೋಂಕಿಗೆ ಬೇಗ ತುತ್ತಾಗುತ್ತವೆ. ಇಂಥ ಸೋಂಕಿತ ನಾಯಿ ಮನುಷ್ಯರಿಗೆ ಕಚ್ಚಿದರೆ ರೇಬೀಸ್ ಸೋಂಕು ಹರಡುತ್ತದೆ.

World Rabies Day 2022: Know Its History, Significance in Kannada

ನಾಯಿ ಕಚ್ಚಿದಾಗ ಏನು ಮಾಡಬೇಕು?

ಒಂದು ನಾಯಿ ಕಚ್ಚಿದಾಗ ಈ ಕೆಳಗಿನ ಕ್ರಮಗಳನ್ನು ಫಸ್ಟ್ ಏಡ್ ಆಗಿ ಮಾಡಬೇಕು.
* ಗಾಯದ ಜಾಗವನ್ನು ಸೋಪಿನಿಂದ ಸ್ವಚ್ಛಗೊಳಿಸಿ. ಐದು ನಿಮಿಷ ಕಾಲ ನಲ್ಲಿ ನೀರು ಈ ಜಾಗದ ಮೇಲೆ ಬೀಳುವಂತೆ ನೋಡಿಕೊಳ್ಳಿ
* ರಕ್ತ ಸ್ರವಿಸುತ್ತಿದ್ದರೆ ಬಟ್ಟೆಯಿಂದ ಮೆದುವಾಗಿ ಅದುಮಿ ಕಡಿಮೆ ಮಾಡಿ.
* ಆಂಟಿ ಬಯೋಟಿಕ್ ಕ್ರೀಮ್ ಇದ್ದರೆ ಸವರಿ.
* ಸ್ಟಿರೈಲ್ ಬ್ಯಾಂಡೇಜ್ ಅನ್ನು ಗಾಯದ ಜಾಗಕ್ಕೆ ಹಾಕಿ.
* ವೈದ್ಯ ಬಳಿ ಹೋಗಿ

ಗಾಯದ ಮೇಲೆ ಹಾಕಲಾಗುವ ಬ್ಯಾಂಡೇಜನ್ನು ದಿನದಲ್ಲಿ 2-3 ಬಾರಿಯಾದರೂ ಬದಲಿಸಿ. ಬೀದಿ ನಾಯಿ ಕಚ್ಚಿದ್ದರೆ ವೈದ್ಯರು ಸಾಮಾನ್ಯವಾಗಿ ರೇಬೀಸ್ ವೈರಾಣು ಪತ್ತೆ ಪರೀಕ್ಷೆ ಮಾಡಿಸುತ್ತಾರೆ.

ಕಚ್ಚಿದ ನಾಯಿ ರೇಬೀಸ್ ಸೋಂಕು ಹೊಂದಿಲ್ಲದಿದ್ದರೂ ನಾಯಿ ಕಡಿತದಿಂದ ಬ್ಯಾಕ್ಟೀರಿಲ್ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ. ಗಾಯ ಹೆಚ್ಚು ಆಗಿದ್ದರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅಗತ್ಯತೆ ಇರುತ್ತದೆ. ಡಯಾಬಿಟಿಸ್ ಕಾಯಿಲೆ ಇದ್ದರೆ ಸೋಂಕಿನ ಅಪಾಯ ಹೆಚ್ಚಿರುತ್ತದೆ.

(ಒನ್ಇಂಡಿಯಾ ಸುದ್ದಿ)

English summary
September 28th is observed as World Rabies Day. More than 50000 people die from rabies infection. Most of the death is caused by dog bit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X