World Mosquito Day: ಸೊಳ್ಳೆ ದಿನ- ಭಾರತದ ನಂಟು, ರೋಮ್ ಪತನ ಇತ್ಯಾದಿ ಮಾಹಿತಿ
ಸೊಳ್ಳೆ ಎಂದ್ರೆ ಯಾರೆ ತಾನೆ ಭಯ, ಕಿರಿಕಿರಿ ಆಗಲ್ಲ. ಮಲಗಲು ಬಿಡದೆ ಕಿವಿ ಬಳಿ ಗುಂಯ್ ಅನ್ನೋ ಸೊಳ್ಳೆಯನ್ನ ಚಚ್ಚಿ ಸಾಯಿಸುವಷ್ಟು ಸಿಟ್ಟು ಬರುತ್ತೆ. ಆದರೆ, ನಿದ್ದೆಗೆಡಬೇಕು. ಮಸ್ಕ್ಯುಟೊ ರೆಪೆಲೆಂಟ್ ಹಾಕಿದರೂ ಕೆಲವೊಮ್ಮೆ ವರ್ಕೌಟ್ ಆಗಲ್ಲ.
ಸೊಳ್ಳೆ ನಮಗೆ ಕಿರಿಕಿರಿ ಮಾತ್ರವಲ್ಲ ಬಹಳ ಡೇಂಜರಸ್ ಕೂಡ ಹೌದು. ಮಲೇರಿಯಾದಿಂದ ಹಿಡಿದು ಹಲವು ರೋಗಗಳಿಗೆ ಸೊಳ್ಳೆ ನೇರವಾಗಿ ಮತ್ತು ಪರೋಕ್ಷವಾಗಿ ಕಾರಣವಾಗುತ್ತದೆ.
ಆಗಸ್ಟ್ 20 ವಿಶ್ವ ಸೊಳ್ಳೆ ದಿನ. ಈ ಸಂದರ್ಭದಲ್ಲಿ ಸೊಳ್ಳೆಯಿಂದ ಆಗುವ ಅಪಾಯ, ಹರಡುವ ರೋಗ ಇತ್ಯಾದಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಕುತೂಹಲವೆಂದರೆ, ವಿಶ್ವ ಸೊಳ್ಳೆ ದಿನದ ಆರಂಭಕ್ಕೆ ಭಾರತದ ನಂಟು ಇದೆ.
ವಿಶ್ವ ಸೊಳ್ಳೆ ದಿನದ ಇತಿಹಾಸ, ಮಹತ್ವ, ಸೊಳ್ಳೆಯಿಂದಾಗುವ ಅಪಾಯ, ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಮಲೇರಿಯಾ ರೋಗ ಇತ್ಯಾದಿ ವಿವರ ಇಲ್ಲಿದೆ.

ಸೊಳ್ಳೆ ದಿನದ ಇತಿಹಾಸ
ಬ್ರಿಟಿಷ್ ಸೇನೆ ಸರ್ಜನ್ ಸರ್ ರೊನಾಲ್ಡ್ ರಾಸ್ ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ ಮಲೇರಿಯಾಗೆ ಕಾರಣವಾಗುವ ಪ್ಯಾರಸೈಟ್ ಜೀವಿಯನ್ನು ಗುರುತಿಸಿದ್ದರು. ಸೋಂಕಿತ ವ್ಯಕ್ತಿಯ ದೇಹವನ್ನು ಸೊಳ್ಳೆ ಕಚ್ಚಿದಾಗ ಪ್ಯಾರಸೈಟ್ ಆ ವ್ಯಕ್ತಿಯಿಂದ ಸೊಳ್ಳೆಗೆ ವರ್ಗವಾಗುತ್ತದೆ. ನಂತರ ಆ ಸೊಳ್ಳೆ ಇನ್ನೊಬ್ಬ ವ್ಯಕ್ತಿಗೆ ಕಚ್ಚಿದಾಗ ಅದು ಆ ವ್ಯಕ್ತಿಗೆ ಹರಡುತ್ತದೆ. ಹೀಗೆ, ಮಲೇರಿಯಾ ಹೇಗೆ ಹರಡುತ್ತದೆ ಎಂಬುದನ್ನು ಸರ್ ರೊನಾಲ್ಡ್ ರಾಸ್ 1897ರಲ್ಲಿ ಪತ್ತೆ ಮಾಡಿದರು.
ಈ ಸಂಶೋಧನೆಯು ಮಲೇರಿಯಾ ವಿರುದ್ಧ ಹೋರಾಡಲು ಹೊಸ ಬಲ ಕೊಟ್ಟಿತ್ತು. ರೊನಾಲ್ ರಾಸ್ ಅವರಿಗೆ 1902ರಲ್ಲಿ ಔಷಧಶಾಸ್ತ್ರದಲ್ಲಿ ನೊಬೆಲ್ ಪಾರಿತೋಷಕ ಕೂಡ ಸಿಕ್ಕಿತು.
ಸರ್ ರೊನಾಲ್ಡ್ ರಾಸ್ 1902ರಲ್ಲೇ ವಿಶ್ವ ಸೊಳ್ಳೆ ದಿನ ಎಂದು ಮೊದಲ ಬಾರಿಗೆ ಘೋಷಿಸಿದರು. ಅಗಿನಿಂದಲೂ ಪ್ರತೀ ವರ್ಷ ಆ ದಿನದಂದು ಸೊಳ್ಳೆ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ.

ಮಲೇರಿಯಾದಿಂದ ಸಾವು
ಸೊಳ್ಳೆಯಿಂದ ಹರಡುವ ಮಲೇರಿಯಾ ರೋಗ ಮನುಷ್ಯನ ಇತಿಹಾಸದಲ್ಲೇ ಮಾರಕವಾಗಿರುವ ಕಾಯಿಲೆ. ಈಗಲೂ ಕೂಡ ಇದು ಪ್ರತೀ ವರ್ಷ 50 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಕೋವಿಡ್‌ನಿಂದ ಸಾಯುವವರಿಗಿಂತ ಹೆಚ್ಚು ಮಂದಿಯನ್ನು ಮಲೇರಿಯಾ ಕೊಲ್ಲುತ್ತದೆ.
ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಮಾತ್ರ ಮಲೇರಿಯಾ ಹರಡುತ್ತದೆ. ರಾತ್ರಿ 9ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೂ ಈ ಹೆಣ್ಣು ಅನಾಫಿಲಿಸ್ ಸೊಳ್ಳೆ ರಕ್ತದ ಬೇಟೆಯಾಡುತ್ತಿರುತ್ತದೆ. ಅದರ ಒಳಗಿರುವ ಮೊಟ್ಟೆಯ ಪೋಷಣೆಗಾಗಿ ರಕ್ತದ ಅಗತ್ಯ ಇರುತ್ತದೆ. ಹೀಗಾಗಿ, ಅದು ಮನುಷ್ಯ ಅಥವಾ ಪ್ರಾಣಿಯ ರಕ್ತ ಹೀರಲು ಬರುತ್ತದೆ. ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆ ಒಮ್ಮೆ ಕಚ್ಚಿದರೂ ಸಾಕು ಸೋಂಕು ಹರಡುವುದು ನಿಶ್ಚಿತ ಎನ್ನುತ್ತಾರೆ ತಜ್ಞರು.
ಮಲೇರಿಯಾಗೆ ಕಾರಣವಾಗುವ ಪ್ಯಾರಸೈಟ್ ಜೀವಿ 50 ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಅಸ್ತಿತ್ವದಲ್ಲಿತ್ತೆಂದು ಭಾವಿಸಲಾಗಿದೆ. ಚಿಂಪಾಂಜಿ ಅಥವಾ ಗೊರಿಲ್ಲಾದಲ್ಲಿ ಇದು ಮೊದಲು ಕಾಣಿಸಿರಬಹುದು ಎಂದು ನಂಬಲಾಗಿದೆ. ಮನುಷ್ಯ ಕೃಷಿ ಇತ್ಯಾದಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಬಳಿಕ ಸಂಖ್ಯೆ ಹೆಚ್ಚಳವಾಗಿತ್ತು.

ರೋಮ್ ಪತನ
ಕುತೂಹಲ ಎಂದರೆ ವಿಶ್ವ ಇತಿಹಾಸದ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದಾಗಿದ್ದ ರೋಮನ್ ಸಾಮ್ರಾಜ್ಯದ ಪತನಕ್ಕೆ ಇದೇ ಮಲೇರಿಯಾ ಕಾರಣವಾಗಿತ್ತೆನ್ನಲಾಗಿದೆ. ಆಫ್ರಿಕಾದಿಂದ ಇದು ಯೂರೋಪ್ ಖಂಡದ ರೋಮ್‌ಗೆ ಈ ರೋಗ ಹರಡಿತ್ತು. ಆಗ ರೋಮ್‌ನ ಜನಸಂಖ್ಯೆಯ ಬಹುಭಾಗ ಈ ರೋಗಕ್ಕೆ ಬಲಿಯಾಗಿ ಹೋಗಿತ್ತು. ಆಗ ಈ ಕಾಯಿಲೆಯನ್ನು ರೋಮನ್ ಫಿವರ್ ಎಂದೇ ಕರೆಯಲಾಗುತ್ತಿತ್ತು.

ಮಲೇರಿಯಾ ಹೆಸರು
ಮಲೇರಿಯಾ ಎಂಬುದು ಮಧ್ಯಪ್ರಾಚೀನ ಯುಗದ ಇಟಲಿ ಭಾಷೆಯ ಮಲ ಏರಿಯಾ (Mala Aria) ಎಂಬ ಪದಗಳಿಂದ ಉದ್ಭವವಾಗಿದೆ. ಮಲ ಏರಿಯಾ ಎಂದರೆ ಕೆಟ್ಟ ಗಾಳಿ ಎಂದರ್ಥ. 1768ರಲ್ಲಿ ಇಂಗ್ಲೀಷ್‌ನಲ್ಲಿ ಮೊದಲ ಬಾರಿಗೆ ಮಲೇರಿಯಾ ಪದ ಬಳಕೆಗೆ ಬಂದಿತು. ಮಲೇರಿಯಾ ಪದ ಬಳಕೆಗೆ ಮೊದಲು ಏಗ್ ಅಥವಾ ಮಾರ್ಷ್ ಫಿವರ್ ಎನ್ನಲಾಗುತ್ತಿತ್ತು.
ಸಾವಿರ ವರ್ಷಗಳ ಹಿಂದಿನವರೆಗೂ ಇದು ಯೂರೋಪ್‌ನ ಹಲವು ದೇಶಗಳಲ್ಲಿ ರುದ್ರ ತಾಂಡವ ಆಡಿತ್ತು. ಈಗ ಅಲ್ಲೆಲ್ಲಾ ಬಹುತೇಕ ನಿಯಂತ್ರಣಕ್ಕೆ ಬಂದಿದೆ.
ಅಫ್ರಿಕಾ ಖಂಡದಲ್ಲಿ, ಅದರಲ್ಲೂ ಸಹಾರಾ ಮರುಭೂಮಿ ಒಳಗೊಂಡಿರುವ ದೇಶಗಳಲ್ಲಿ ಅತಿ ಹೆಚ್ಚು ಮಲೇರಿಯಾ ಇದೆ. ವಿಶ್ವದ ಶೇ. 95ರಷ್ಟು ಮಲೇರಿಯಾ ಪ್ರಕರಣಗಳು ಈ ಭಾಗದಲ್ಲೇ ಕಾಣಿಸಿಕೊಳ್ಳುತ್ತವೆ. ಶೇ. 3ರಷ್ಟು ಮಲೇರಿಯಾ ಪ್ರಕರಣಗಳು ಭಾರತದಲ್ಲಿ ಇವೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಮಲೇರಿಯಾ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ.
(ಒನ್ಇಂಡಿಯಾ ಸುದ್ದಿ)
-
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ












Click it and Unblock the Notifications