World Cancer Day 2022: ವಿಶ್ವ ಕ್ಯಾನ್ಸರ್ ದಿನ; ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ
ಇಂದು ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು, ಬದಲಾವಣೆಯನ್ನು ಪ್ರೇರೇಪಿಸಲು ಮತ್ತು ಕ್ಯಾನ್ಸರ್‌ನ ಜಾಗತಿಕ ಪರಿಣಾಮವನ್ನು ಕಡಿಮೆ ಮಾಡಲು ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವದಾದ್ಯಂತ ಜನರು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುತ್ತಾರೆ. ಕ್ಯಾನ್ಸರ್ ಸುತ್ತಲಿನ ತಪ್ಪುಗ್ರಹಿಕೆಗಳು ಮತ್ತು ಅದಕ್ಕೆ ಸಂಬಂಧಿಸಿದ ಪೂರ್ವಾಗ್ರಹಗಳನ್ನು ಕಡಿಮೆ ಮಾಡುವುದು, ಜೊತೆಗೆ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವಲ್ಲಿ ಜನರಿಗೆ ಸಹಾಯ ಮಾಡುವುದು ಇದರ ಗುರಿಯಾಗಿದೆ. ಇದು ಕ್ಯಾನ್ಸರ್ ರೋಗಿಗಳು ಮತ್ತು ಬದುಕುಳಿದವರ ಜೀವನದ ಸುಧಾರಣೆಯಲ್ಲಿ ಪ್ರಭಾವ ಬೀರಲು ಅವಕಾಶವನ್ನು ನೀಡುತ್ತದೆ. ಯೂನಿಯನ್ ಆಫ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC) ವಿಶ್ವ ಕ್ಯಾನ್ಸರ್ ದಿನವನ್ನು "ಜಾಗತಿಕ ಏಕೀಕರಣ ಉಪಕ್ರಮ" ಎಂದು ಘೋಷಿಸಿದೆ.
ಕ್ಯಾನ್ಸರ್ ಬಗ್ಗೆ ಅರಿವು: ವಿಶ್ವ ಕ್ಯಾನ್ಸರ್ ದಿನದ 2022 ರ ಥೀಮ್ 'ಕ್ಲೋಸ್ ದಿ ಕೇರ್ ಗ್ಯಾಪ್' ಆಗಿದೆ. ಇದು ಜಗತ್ತಿನಾದ್ಯಂತ ಕ್ಯಾನ್ಸರ್ ಆರೈಕೆಯಲ್ಲಿನ ಅಸಮಾನತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಗುರುತಿಸುವುದಾಗಿದೆ. ಈ ಥೀಮ್ ಕ್ಯಾನ್ಸರ್ ಆರೈಕೆಯಲ್ಲಿ ಜಾಗತಿಕ ಅಸಮಾನತೆಗಳನ್ನು ಗುರುತಿಸುವ ಸುತ್ತ ಕೆಲಸ ಮಾಡುತ್ತದೆ. ಇದು ಕೆಲವು ಆರ್ಥಿಕವಾಗಿ ಹಿಂದುಳಿದ ಜನರಿಗೆ ಅಗತ್ಯ ಆರೋಗ್ಯ ಸೇವೆಗಳು ಮತ್ತು ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುತ್ತದೆ. ಮೂರು ವರ್ಷಗಳ ಈ ಅವಧಿಯಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ, ಅದರ ಚಿಕಿತ್ಸೆಯ ಬಗ್ಗೆ ತಿಳಿಸುವ ಉದ್ದೇಶ ಹೊಂದಿದೆ. ಜತೆಗೆ ಜಾಗತಿಕವಾಗಿ ಇರುವ ಅಸಮಾನೆತೆಯನ್ನು ಹೋಗಲಾಡಿಸಿ ಕ್ಯಾನ್ಸರ್ ರೋಗಿಗಳಲ್ಲಿ ಜೀವನೋತ್ಸಾಹ ತುಂಬುವ ಗುರಿ ಹೊಂದಿದೆ.

ಚಿಕಿತ್ಸೆಯ ಬಗ್ಗೆ ಜಾಗೃತಿ
2000ನೇ ಇಸದಲ್ಲಿ, ಕ್ಯಾನ್ಸರ್ ವಿರುದ್ಧ ಮೊದಲ ವಿಶ್ವ ಸಮ್ಮಿಟ್ ನಲ್ಲಿ ವಿಶ್ವ ಕ್ಯಾನ್ಸರ್ ದಿನವು ಹುಟ್ಟಿಕೊಂಡಿತು. ಈ ಶೃಂಗಸಭೆಯು ಪ್ಯಾರಿಸ್ ನಲ್ಲಿ ನಡೆಯಿತು ಮತ್ತು ಇದನ್ನು ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿ) ಸ್ಥಾಪಿಸಿತ್ತು. ಅಂದಿನಿಂದ ಪ್ರತಿ ವರ್ಷ, ಪ್ರಪಂಚದಾದ್ಯಂತ ಜನರು ಕ್ಯಾನ್ಸರ್ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ವಿಭಿನ್ನ ಥೀಮ್‌ನೊಂದಿಗೆ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುತ್ತಾರೆ.

ಕ್ಯಾನ್ಸರ್ ಮುಕ್ತ ಭಾರತ
ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೋಗಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವುದು ದಿನದ ಮುಖ್ಯ ಗುರಿಯಾಗಿದೆ. ಜಾಗತಿಕವಾಗಿ ಸಾವಿನ ಎರಡನೇ ಪ್ರಮುಖ ಕಾರಣ ಕ್ಯಾನ್ಸರ್. ಶ್ವಾಸಕೋಶ, ಸ್ತನ, ಗರ್ಭಕಂಠ, ತಲೆ ಮತ್ತು ಕುತ್ತಿಗೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (CRC) ಭಾರತೀಯ ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಕ್ಯಾನ್ಸರ್‌ಗಳಾಗಿವೆ. ವಿಶ್ವ ಕ್ಯಾನ್ಸರ್ ದಿನದಂದು, ಪ್ರತಿಯೊಬ್ಬರೂ ಕ್ಯಾನ್ಸರ್ ಮುಕ್ತ ಆರೋಗ್ಯಕರ ಮತ್ತು ಪ್ರಕಾಶಮಾನವಾದ ಜಗತ್ತನ್ನು ಸಾಧಿಸಲು ಒಟ್ಟಾಗಿ ಕೈಜೋಡಿಸುತ್ತಾರೆ. ಈ ದಿನದಂದು, ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತದೆ. ಅಲ್ಲಿ ಕ್ಯಾನ್ಸರ್ ಮತ್ತು ಅದರ ಆರಂಭಿಕ ಪತ್ತೆ, ಚಿಕಿತ್ಸೆ ಮತ್ತು ಹೆಚ್ಚಿನದನ್ನು ಕುರಿತು ಜನರಿಗೆ ಶಿಕ್ಷಣ ಮತ್ತು ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತದೆ.
ಪ್ರತಿ 10 ಮಂದಿ ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ವಾರ್ಷಿಕವಾಗಿ 16 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಜಾಗತಿಕವಾಗಿ ಪ್ರತಿ ವರ್ಷ 6 ಜನರಲ್ಲಿ 1 ಜನರು ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ತಿಳಿಸಿದೆ. ಇದರೊಂದಿಗೆ ಮಾರಣಾಂತಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.

ಕ್ಯಾನ್ಸರ್ ಲಕ್ಷಣಗಳೇನು?
ಕ್ಯಾನ್ಸರ್ ಬೆಳೆಯಲು ಬಲವಾದ ಕಾರಣವಿಲ್ಲ. ಆದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ವಿಷಕಾರಿ ಜೀವನಶೈಲಿಯ ಅಭ್ಯಾಸಗಳಂತಹ ಕೆಲವೊಂದು ಅಂಶಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲೇಬೇಕು. ತಂಬಾಕಿನಲ್ಲಿ ಕಂಡುಬರುವ ನಿಕೋಟಿನ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಹಲವಾರು ವರದಿಗಳು ಹೇಳುತ್ತವೆ.ಸಂರಕ್ಷಕಗಳು, ಕೀಟನಾಶಕಗಳು ಮತ್ತು ಇತರ ಹಾನಿಕಾರಕ ಪದಾರ್ಥಗಳೊಂದಿಗೆ ಸರ್ವ್ ಮಾಡಿದ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಉಂಟುಮಾಡುತ್ತವೆ. ಇಂತಹ ಆಹಾರಗಳನ್ನು ತ್ಯಜಿಸುವುದರಿಂದ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಮಾಡಬಹುದು. ಕೆಲವು ಕ್ಯಾನ್ಸರ್‌ಗಳು ಸಾಮಾಜಿಕ ಜೀವನದ ಮೇಲೆ ಪ್ರಭಾವ ಬೀರಿದರೆ, ಕೆಲವು ವಿಧದ ಕ್ಯಾನ್ಸರ್‌ಗಳು ಅನುವಂಶೀಯವಾಗಿರುತ್ತವೆ.

ತೀವ್ರ ಕಾಯಿಲೆಯನ್ನು ಉಂಟು ಮಾಡಬಹುದು
ಕುಟುಂಬದಲ್ಲಿ ದೋಷಪೂರಿತವಾಗಿರುವ ಜೀನ್‌ಗಳು ಇದ್ದರೆ ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು.ವಿಕಿರಣವು ಕಣಗಳನ್ನು ಬೇರ್ಪಡಿಸಬಹುದು ಮತ್ತು ಜೀವಕೋಶಗಳಲ್ಲಿ ಡಿಎನ್‌ಎ ಹಾನಿಯನ್ನು ಉಂಟು ಮಾಡಬಹುದು, ಇದು ಕ್ಯಾನ್ಸರ್ ನಂತಹ ತೀವ್ರ ಕಾಯಿಲೆಯನ್ನು ಉಂಟು ಮಾಡಬಹುದು. ಕಡಿಮೆ ಅಥವಾ ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿಯನ್ನು ನಡೆಸುವುದರಿಂದ ಕ್ಯಾನ್ಸರ್‌ನಂತಹ ದೀರ್ಘಕಾಲೀನ ಕಾಯಿಲೆಗೆ ಕಾರಣವಾಗಬಹುದು. ವ್ಯಾಯಾಮ, ನೃತ್ಯ, ಏರೋಬಿಕ್ಸ್ ಮುಂತಾದ ದೈಹಿಕ ಚಟುವಟಿಕೆಗಳತ್ತ ಗಮನ ಹರಿಸಿ. ಜಗತ್ತಿನಲ್ಲಿ ಹಲವಾರು ಬಗೆಯ ಕ್ಯಾನ್ಸರ್‌ಗಳು ಇರುವ ಕಾರಣ, ಒಂದೊಂದು ಬಗೆಯ ಕ್ಯಾನ್ಸರ್‌ನ ಲಕ್ಷಣಗಳು ಬದಲಾಗುತ್ತವೆ. ಆದರೆ, ಕೆಲವು ವಿಧದ ಕ್ಯಾನ್ಸರ್‌ಗಳು ಸಾಮಾನ್ಯ ಚಿಹ್ನೆಗಳನ್ನು ಹೊಂದಿದ್ದು, ಅವುಗಳು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.












Click it and Unblock the Notifications