ವಿಶ್ವ ಪ್ರಾಣಿ ಕಲ್ಯಾಣ ದಿನ: ಇತಿಹಾಸ, ಮಹತ್ವ, ಉದ್ದೇಶದ ಬಗ್ಗೆ ಮಾಹಿತಿ

ಪ್ರತಿ ವರ್ಷವೂ ಅಕ್ಟೋಬರ್‌ 4 ರಂದು ವಿಶ್ವ ಪ್ರಾಣಿಗಳ ದಿನ ಅಥವಾ ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಪ್ರಾಣಿ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ಸಾರಲಾಗುತ್ತದೆ. ಪ್ರಾಣಿಗಳ ಸಂರಕ್ಷಣೆಯನ್ನು ಖಾತ್ರಿ ಪಡಿಸಲು, ಪ್ರಾಣಿಗಳ ಸಂರಕ್ಷಣಾ ಕಾರ್ಯವನ್ನು ನಡೆಸುವುದು, ಪ್ರಾಣಿಗಳಿಗಳ ಸಂರಕ್ಷಣೆಗೆ ಧನ ಸಂಗ್ರಹ ಮಾಡುವುದು, ಪ್ರಾಣಿಗಳ ಉಳಿವಿನ ಪ್ರಮುಖ ಗುರಿಯನ್ನು ಜನರಿಗೆ ಸಾರುವುದು ಈ ಪ್ರಾಣಿಗಳ ದಿನದ ಮುಖ್ಯ ಉದ್ದೇಶ.

ಪ್ರತಿ ವರ್ಷ ಅಕ್ಟೋಬರ್‌ 4 ರಂದು ಆಚರಿಸಲಾಗುವ ವಿಶ್ವ ಪ್ರಾಣಿಗಳ ದಿನ ಅಥವಾ ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಪ್ರಾಣಿ ಪ್ರೇಮಿಗಳ ದಿನ ಎಂದು ಕೂಡಾ ಕರೆಯಲಾಗುತ್ತದೆ. ಪ್ರಾಣಿಗಳ ಪೋಷಕ ಸಂತ ಎಂದೇ ಪ್ರಸಿದ್ಧವಾದ ಫ್ರಾನ್ಸಿಸ್ ಆಫ್ ಅಸ್ಸಿಸಿ ಹಬ್ಬದ ದಿನವನ್ನು ವಿಶ್ವ ಪ್ರಾಣಿಗಳ ದಿನವಾಗಿ ಆಚರಣೆ ಮಾಡಲಾಗುತ್ತದೆ.

"ಗ್ರಹದ ಸಂರಕ್ಷಕರಾಗಿ, ಎಲ್ಲಾ ಜಾತಿಗಳೊಂದಿಗೆ ದಯೆ, ಪ್ರೀತಿ ಮತ್ತು ಸಹಾನುಭೂತಿಯಿಂದ ವ್ಯವಹರಿಸುವುದು ನಮ್ಮ ಜವಾಬ್ದಾರಿ. ಈ ಪ್ರಾಣಿಗಳು ಮಾನವ ಕ್ರೌರ್ಯದಿಂದ ಬಳಲುತ್ತಿದೆ ಎಂಬುವುದು ಜನರಿಗೆ ಅರ್ಥವಾಗುವುದಿಲ್ಲ. ದಯವಿಟ್ಟು ಈ ಹುಚ್ಚುತನವನ್ನು ನಿಲ್ಲಿಸಲು ಸಹಾಯ ಮಾಡಿ," ಎಂದು ಅಮೆರಿಕದ ನಟ ರಿಚರ್ಡ್ ಗೇರೇ ಹೇಳಿದ್ದಾರೆ.

 ವಿಶ್ವ ಪ್ರಾಣಿಗಳ ದಿನದ ಉದ್ದೇಶವೇನು?

ವಿಶ್ವ ಪ್ರಾಣಿಗಳ ದಿನದ ಉದ್ದೇಶವೇನು?

ವಿಶ್ವದಾದ್ಯಂತ ಪ್ರಾಣಿಗಳ ಜೀವನದಲ್ಲಿ ಗುಣಮಟ್ಟವನ್ನು ಅಧಿಕಗೊಳಿಸುವುದು, ಪ್ರಾಣಿಗಳ ಸುರಕ್ಷತೆಯ ಖಾತ್ರಿ ಪಡಿಸುವುದು ಈ ವಿಶ್ವ ಪ್ರಾಣಿಗಳ ದಿನದ ಪ್ರಮುಖ ಉದ್ದೇಶವಾಗಿದೆ. "ವಿಶ್ವ ಪ್ರಾಣಿಗಳ ದಿನವು ಪ್ರಾಣಿಗಳ ಕಲ್ಯಾಣ ಕಾರ್ಯದ ಚಳುವಳಿಗೆ ಬಲ ತುಂಬುತ್ತದೆ. ವಿಶ್ವವು ಎಲ್ಲಾ ಪ್ರಾಣಿಗಳಿಗೆ ಉತ್ತಮ ಪ್ರದೇಶವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಈ ವಿಶ್ವ ಪ್ರಾಣಿ ದಿನವು ಸಹಕಾರಿ ಆಗಲಿದೆ," ಎಂದು ವಿಶ್ವ ಪ್ರಾಣಿ ದಿನದ ವೆಬ್‌ಸೈಟ್‌ ಹೇಳಿದೆ. "ಈ ವಿಶ್ವ ಪ್ರಾಣಿ ದಿನವನ್ನು ಎಲ್ಲಾ ದೇಶಗಳಲ್ಲಿ ಆಚರಣೆ ಮಾಡಲಾಗುತ್ತದೆ. ಯಾವುದೇ ರಾಷ್ಟ್ರೀಯತೆ, ಧರ್ಮ, ನಂಬಿಕೆ, ರಾಜಕೀಯ ಸಿದ್ಧಾಂತವು ಈ ವಿಶ್ವ ಪ್ರಾಣಿ ದಿನದ ಆಚರಣೆಗೆ ಅಡ್ಡಿಯಾಗುವುದಿಲ್ಲ. ಪ್ರಾಣಿಗಳನ್ನು ಕೂಡಾ ಒಂದು ಜೀವಿಯಂತೆ ಕಾಣುವ ಒಂದು ಸುಂದರ ವಾತಾವರಣ ಸೃಷ್ಟಿಗೆ ನಾವು ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ, ಜನರಲ್ಲಿ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಶಿಕ್ಷಣ ನೀಡುತ್ತೇವೆ," ಎಂದು ಕೂಡಾ ವೈಬ್‌ಸೈಟ್‌ನಲ್ಲಿ ವಿಶ್ವ ಪ್ರಾಣಿಗಳ ದಿನದ ಉದ್ದೇಶವೇನು ಉಲ್ಲೇಖ ಮಾಡಿ ಬರೆಯಲಾಗಿದೆ.

 ವಿಶ್ವ ಪ್ರಾಣಿಗಳ ದಿನದ ಇತಿಹಾಸ ತಿಳಿಯಿರಿ

ವಿಶ್ವ ಪ್ರಾಣಿಗಳ ದಿನದ ಇತಿಹಾಸ ತಿಳಿಯಿರಿ

1925 ವಿಶ್ವ ಪ್ರಾಣಿಗಳ ದಿನ ಮೊದಲ ಬಾರಿಗೆ ಆರಂಭವಾಯಿತು. ಸಿನಾಲಜಿಸ್ಟ್ (ನಾಯಿಗಳ ಆರೈಕೆ ಮತ್ತು ತರಬೇತಿಯಲ್ಲಿ ಪರಿಣತಿ ಹೊಂದಿದವರು) ಹೆನ್ರಿಕ್ ಜಿಮ್ಮರ್ಮನ್ ಇದರ ಮೊದಲ ಕಾರ್ಯಕ್ರಮವನ್ನು 1925 ರ ಮಾರ್ಚ್ 24 ರಂದು ಬರ್ಲಿನ್‌ನ ಕ್ರೀಡಾ ಅರಮನೆಯಲ್ಲಿ ಆಯೋಜನೆ ಮಾಡಿದರು. ಈ ಕಾರ್ಯಕ್ರಮಕ್ಕೆ ಸುಮಾರು ಐದು ಸಾವಿರ ಮಂದಿ ಭಾಗಿಯಾದರು. ನಿಜವಾಗಿ ಈ ಕಾರ್ಯಕ್ರಮವು ಅಕ್ಟೋಬರ್‌ 4 ರಂದು ಆಯೋಜನೆ ಮಾಡಲಾಗಿತ್ತು. ಆ ದಿನ ಪ್ರಾಣಿಗಳ ಪೋಷಕ ಸಂತ ಎಂದೇ ಪ್ರಸಿದ್ಧವಾದ ಫ್ರಾನ್ಸಿಸ್ ಆಫ್ ಅಸ್ಸಿಸಿ ಹಬ್ಬದ ದಿನವಾದ ಕಾರಣ ಆಯೋಜನೆ ಮಾಡಲಾಗಿತ್ತು. ಆದರೆ ಅಂದು ಕಾರ್ಯಕ್ರಮ ಕಲೆವು ಕಾರಣಗಳಿಂದ ರದ್ದಾಗಿದ್ದು ಮಾರ್ಚ್ 24 ರಂದು ನಡೆಸಲಾಗಿದೆ. ಆದರೆ ಆ ನಂತರದ ವರ್ಷಗಳಲ್ಲಿ ಅಕ್ಟೋಬರ್‌ 4 ರಂದೇ ವಿಶ್ವ ಪ್ರಾಣಿಗಳ ದಿನವಾಗಿ ಆಚರಣೆ ಮಾಡಲು ಆರಂಭ ಮಾಡಲಾಯಿತು. ಈಗ ಈ ಒಂದು ದಿನದ ಆಚರಣೆಯು ವಿಶ್ವದಲ್ಲಿ ಎಲ್ಲಾ ಪ್ರಾಣಿ ಪರ ಚಳುವಳಿಗಾರರನ್ನು ಒಟ್ಟುಗೂಡಿಸಿದೆ. ಪ್ರಸ್ತುತ ವಿಶ್ವ ಪ್ರಾಣಿಗಳ ದಿನದ ಜಾಗತಿಕ ಆಚರಣೆಯನ್ನು ಯುಕೆ ಮೂಲದ ಪ್ರಾಣಿ ಕಲ್ಯಾಣ ದತ್ತಿ ಸಂಸ್ಥೆ ನೇಚರ್ ವಾಚ್ ಫೌಂಡೇಶನ್ ಮುನ್ನಡೆಸುತ್ತಿದೆ.

 ವಿಶ್ವ ಪ್ರಾಣಿಗಳ ದಿನದ ಮಹತ್ವ

ವಿಶ್ವ ಪ್ರಾಣಿಗಳ ದಿನದ ಮಹತ್ವ

"ಪ್ರಾಣಿಗಳ ಉತ್ತಮ ಭವಿಷ್ಯಕ್ಕಾಗಿ ವಿಶ್ವದಲ್ಲಿನ ಎಲ್ಲಾ ಪ್ರಾಣಿ ಪ್ರಿಯರನ್ನು ಒಂದುಗೂಡಿಸುವಲ್ಲಿ ಈ ವಿಶ್ವ ಪ್ರಾಣಿಗಳ ದಿನವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಯುಕೆ ಯ worldanimalday.org.uk ಪ್ರಕಾರ, "ಸಾಮಾಜಿಕ ಚಳುವಳಿಗಳು ಯಾವಾಗಲೂ ಸಾಮಾನ್ಯ ಜನರ ಗಮನವನ್ನು ರಾಜಕೀಯ ಮತ್ತು ಸಾಮಾಜಿಕ ನ್ಯಾಯ ಮತ್ತು ಸುಧಾರಣೆಗಾಗಿ ಇತರ ಪ್ರಮುಖ ವಿಷಯಗಳತ್ತ ಸೆಳೆಯಲು ಪ್ರಮುಖ ಸಾಧನವಾಗಿದೆ," ಎಂದು ಹೇಳಿದೆ.

 ವಿಶ್ವ ಪ್ರಾಣಿಗಳ ದಿನ: ಇಲ್ಲಿದೆ ಪ್ರಮುಖ ಸಂದೇಶ

ವಿಶ್ವ ಪ್ರಾಣಿಗಳ ದಿನ: ಇಲ್ಲಿದೆ ಪ್ರಮುಖ ಸಂದೇಶ

"ಕ್ರೀಡೆಗಾಗಿ, ಆನಂದಕ್ಕಾಗಿ, ಸಾಹಸಕ್ಕಾಗಿ ಮತ್ತು ಚರ್ಮ ಮತ್ತು ತುಪ್ಪಳಗಳಿಗಾಗಿ ಪ್ರಾಣಿಗಳನ್ನು ಕೊಲ್ಲುವುದು ಅಸಹ್ಯಕರ ಮತ್ತು ದುಃಖಕರವಾದ ವಿದ್ಯಮಾನವಾಗಿದೆ. ಇಂತಹ ಕ್ರೂರ ಕೃತ್ಯಗಳಲ್ಲಿ ಭಾಗಿಯಾದವರು ಬಳಿಕ ನೀಡಲು ಯಾವುದೇ ಸಮರ್ಥನೆ ಇಲ್ಲ," ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ. "ಸಾಕುಪ್ರಾಣಿಗಳು ಮಾನವೀಕರಣವಾಗುತ್ತಿದೆ. ಎಲ್ಲಾ ಜೀವನವನ್ನು ಸಂರಕ್ಷಿಸುವ ಮತ್ತು ಪೋಷಿಸುವ ಮತ್ತು ಕಾಳಜಿ ವಹಿಸುವ ಜವಾಬ್ದಾರಿ ನಮ್ಮದು ಆಗಿದೆ ಎಂದು ಸಾಕುಪ್ರಾಣಿಗಳು ನಮಗೆ ನೆನಪಿಸುತ್ತದೆ," ಎಂದು ಅಮೆರಿಕದ ನಟ, ಸಾಮಾಜಿಕ ಕಾರ್ಯಕರ್ತ ಜೇಮ್ಸ್ ಕ್ರೋಮ್‌ವೆಲ್ ಅಭಿಪ್ರಾಯಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+