• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?

By ವಿಕಾಸ್ ನಂಜಪ್ಪ
|
   Tipu Jayanthi 2018 : ಟಿಪ್ಪು ಜಯಂತಿ ಆಚರಣೆ ಅಗತ್ಯವೇನು? | Oneindia Kannada

   ನೈಸರ್ಗಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿರುವ ಶಾಂತಿಯ ಬೀಡು ಕೊಡಗಿನಲ್ಲಿ ಮತ್ತೆ ಆತಂಕ ಎದುರಾಗಿದೆ. ಟಿಪ್ಪು ಜಯಂತಿಯ ಹೆಸರಿನಲ್ಲಿ ವಿಕೃತ ಮನಸುಗಳು ಗಲಭೆ ಮಾಡದಿದ್ದರೆ ಸಾಕು ಎಂದು ಇಗ್ಗುತಪ್ಪನನ್ನು ಬೇಡಿಕೊಳ್ಳುತ್ತಿದ್ದಾರೆ. ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆದಿದೆ. ಮತ್ತೊಮ್ಮೆ ಕೊಡಗು, ಚಿತ್ರದುರ್ಗ, ಅವಿಭಜಿತ ಕೊಡಗು ಜಿಲ್ಲೆಗಳಲ್ಲಿ ಟಿಪ್ಪು ವಿರೋಧಿ ಪ್ರತಿಭಟನೆ, ಆಕ್ರೋಶ ಕಾಣಬಹುದಾಗಿದೆ.

   ಮತಾಂಧ, ದೇಶ ವಿರೋದಿ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನ ಜನ್ಮದಿನಾಚರಣೆ ಆಚರಿಸುವುದನ್ನು, ಆ ನೆಪದಲ್ಲಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದನ್ನು, ಸ್ವಾರ್ಥ ರಾಜಕೀಯಕ್ಕಾಗಿ ಟಿಪ್ಪುವನ್ನು ವೈಭವೀಕರಿಸುವುದನ್ನು ತಡೆಯಬೇಕೆಂದು ಹಿಂದೂ ಪರ ಸಂಘಟನೆಗಳು ಕೋರಿವೆ. ಇದಕ್ಕೆ ಭಾರತೀಯ ಜನತಾ ಪಕ್ಷದ ಬೆಂಬಲವಿದೆ.

   ಇನ್ನೊಂದೆಡೆ, ಟಿಪ್ಪು ಜಯಂತಿ ಈ ಬಾರಿ ಒಳಾಂಗಣಕ್ಕೆ ಸೀಮಿತವಾಗಿದ್ದು, ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆಯಾ ಜಿಲ್ಲಾಡಳಿತ ಮುಂದಾಗಿವೆ. ಇದಕ್ಕಾಗಿ ನಿಷೇಧಾಜ್ಞೆ ಕೂಡಾ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಮೈತ್ರಿ ಸರ್ಕಾರದಲ್ಲೆ ಬಿರುಕು ಮೂಡಿಸಿರುವ ಟಿಪ್ಪು ಜಯಂತಿ, ವಿವಾದ, ಟಿಪ್ಪು ಬಗ್ಗೆ ಕೊಡವರು, ಕ್ಯಾಥೋಲಿಕರಿಗೆ ಇರುವ ಸಿಟ್ಟು, ಅಸಹನೆ ಕುರಿತಂತೆ ಮುಂದೆ ಓದಿ...

   ಇಸ್ಲಾಂ ಧರ್ಮದಲ್ಲಿ ವ್ಯಕ್ತಿ, ಮೂರ್ತಿ ಪೂಜೆ ಸಲ್ಲ

   ಇಸ್ಲಾಂ ಧರ್ಮದಲ್ಲಿ ವ್ಯಕ್ತಿ, ಮೂರ್ತಿ ಪೂಜೆ ಸಲ್ಲ

   ಕೊಡವ ಮಾಪಿಳ್ಳೆ ಸಮುದಾಯದ ಪ್ರಮುಖರಾದ ಇಬ್ರಾಹಿಂ ಮಾತನಾಡಿ, ಇಸ್ಲಾಂ ಧರ್ಮದಲ್ಲಿ ಯಾವುದೇ ಮೂರ್ತಿ ಪೂಜೆ, ವ್ಯಕ್ತಿ ಪೂಜೆ, ಜಯಂತಿ ಆಚರಿಸುವ ಪದ್ಧತಿ ಇಲ್ಲ. ಕೊಡವ ಮಾಪಿಳ್ಳೆ ಸಮುದಾಯವಾದ ನಾವು ಹಿಂದೆ ಕೊಡವರಾಗಿದ್ದೆವು. ಟಿಪ್ಪು ಸುಲ್ತಾನ್ ನಮ್ಮನ್ನು ಬಲಾತ್ಕಾರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ್ದಾನೆ. ಈ ಬಗ್ಗೆ ನಮಗೆ ಹಾಗೂ ನಮ್ಮ ಹಿರಿಯರಲ್ಲಿ ನೋವು ಹೆಪ್ಪುಗಟ್ಟಿದೆ. ಟಿಪ್ಪು ಜಯಂತಿಯನ್ನು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಮಾಪಿಳ್ಳೆ ಸಮುದಾಯ ವಿರೋಧಿಸುತ್ತದೆ.

   ಕೊಡವರ ಪಾಲಿಗೆ ಟಿಪ್ಪು ನಂಬಿಕೆ ದ್ರೋಹಿ

   ಕೊಡವರ ಪಾಲಿಗೆ ಟಿಪ್ಪು ನಂಬಿಕೆ ದ್ರೋಹಿ

   ಟಿಪ್ಪು ನಂಬಿಕೆ ದ್ರೋಹಿಯಾಗಿದ್ದು, ಸಂಧಾನದ ಹೆಸರಿನಲ್ಲಿ ಕೊಡವರ ಸ್ನೇಹ ಬೆಳೆಸಿ, ಸಾವಿರಾರು ಹಿಂದೂಗಳನ್ನು ಒತ್ತೆಯಾಳಾಗಿ ಹಿಡಿದು ತಂದು ಶ್ರೀರಂಗಪಟ್ಟಣದಲ್ಲಿ ಬಲಾತ್ಕಾರವಾಗಿ ಇಸ್ಲಾಮಿಗೆ ಮತಾಂತರಗೊಳಿಸಿರುತ್ತಾನೆ. ಈತನ ದಾಳಿಗೆ ಸಿಲುಕಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಮೂಡಲಬಾಗಿಲು ಆಂಜನೇಯ ದೇವಸ್ಥಾನ ಮಸೀದಿಯಾಗಿ ಪರಿವರ್ತನೆಯಾಗಿರುವುದನ್ನು ನಾವಿಂದು ಕಾಣಬಹುದು. ಕೊಡಗಿನಲ್ಲಿ ಟಿಪ್ಪು ಸುಲ್ತಾನ್ ನೆಡೆಸಿದ ದಾಳಿಗೆ ಸಂಬಂಧಿಸಿದಂತೆ ಕೊಡಗಿನ ಗೆಜೇಟಿಯರ್ ಹಾಗೂ ಕೊಡಗಿನ ಇತಿಹಾಸಕಾರ ಐ. ಮಾ. ಮುತ್ತಣ್ಣನವರು ಬರೆದಿರುವ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ

   ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಸಾರಲು ಜಯಂತಿ

   ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎಂದು ಸಾರಲು ಜಯಂತಿ

   ಕರ್ನಾಟಕದಲ್ಲಿ ಕೆಲ ವರ್ಷಗಳಲ್ಲಿ ತಲೆ ಎತ್ತಿರುವ ದೇಶದ್ರೋಹಿ ಹಾಗೂ ಸಮಾಜ ಘಾತುಕ ಶಕ್ತಿಗಳ ಗುಂಪೊಂದು ಟಿಪ್ಪು ಸುಲ್ತಾನನ್ನು ವೈಭವೀಕರಿಸುವ ಯತ್ನದಲ್ಲಿ ತೊಡಗಿದ್ದು, ಸ್ವಾರ್ಥ ರಾಜಕೀಯಕ್ಕಾಗಿ ಮುಸ್ಲಿಂರೊಂದಿಗೆ ಟಿಪ್ಪುವನ್ನು ಸಮೀಕರಿಸುವ ಯತ್ನ ನಡೆಸಿದ್ದು, ಆ ಹಿನ್ನಲೆಯಲ್ಲಿ ಸರಕಾರ ಟಿಪ್ಪುಸುಲ್ತಾನ್ ದಿನಾಚರಣೆ ಆಚರಿಸಲು ನಿರ್ಧರಿಸಿದ್ದು, ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಪ್ರೇಮಿ, ಸರ್ವಧರ್ಮ ಸಹಿಷ್ಣು ಎಂದು ಸಾರಲು ಈ ಜಯಂತಿ, ಆಚರಣೆ ಇತ್ಯಾದಿ.

   ಹಲವೆಡೆ ನಿಷೇಧಾಜ್ಞೆ, ಆತಂಕದ ಸ್ಥಿತಿ

   ಹಲವೆಡೆ ನಿಷೇಧಾಜ್ಞೆ, ಆತಂಕದ ಸ್ಥಿತಿ

   ಟಿ.ಶೆಟ್ಟಿಗೇರಿ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ಮಾತನಾಡಿ ಕೊಡಗಿನ ದೇವಟ್ ಪರಂಬುವಿನಲ್ಲಿ ಕೊಡವ ಜನಾಂಗದ ಸುಮಾರು 80 ಸಾವಿರ ಜನರನ್ನು ಮೋಸದಿಂದ ಟಿಪ್ಪು ಹತ್ಯೆ ಮಾಡಿದ್ದಾನೆ. ಈ ಎಲ್ಲಾ ವಿಚಾರಗಳು ಇತಿಹಾಸದಲ್ಲಿ ದಾಖಲಾಗಿದೆ ಹೀಗಿರುವಾಗ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

   English summary
   It is that time of the year and the debate on Tipu Sultan is back. Despite protests from a large section of the people, especially in Kodagu and Mangalore, the government has for the past couple of years gone ahead with the celebrations of Tipu Jayanti.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more