ಬೀಜಿಂಗ್, ಶಾಂಘೈನಲ್ಲಿಲ್ಲ ಕೊರೊನಾ ರಣಕೇಕೆ: ಹಿಂದಿದೆ ಚೀನಾ ಮಾಸ್ಟರ್ ಪ್ಲಾನ್?

ವುಹಾನ್ ನ ಸಮುದ್ರಾಹಾರದ ಮಾರುಕಟ್ಟೆಯಲ್ಲಿ ಮೊದಲು ಕಾಣಿಸಿಕೊಂಡಿದ್ದ ನೋವೆಲ್ ಕೊರೊನಾ ವೈರಸ್ ವಿರುದ್ಧ ಇದೀಗ ಇಡೀ ವಿಶ್ವ ಸೆಣಸಾಡುತ್ತಿದೆ. ವುಹಾನ್ ನಲ್ಲಿ ಜನ್ಮ ತಾಳಿದ ನೋವೆಲ್ ಕೊರೊನಾ ವೈರಸ್, ಚೀನಾ ಗಡಿ ದಾಟಿ ಪ್ರಪಂಚದ ಹಲವು ರಾಷ್ಟ್ರಗಳಿಗೆ ಲಗ್ಗೆ ಇಟ್ಟಿದೆ.

ದೂರದ ಅಮೇರಿಕಾ, ಇಟಲಿ, ಸ್ಪೇನ್ ನಲ್ಲಿ ಸಾವಿರಾರು ಜನರ ಜೀವ ತೆಗೆಯುತ್ತಿರುವ ಕೊರೊನಾ ವೈರಸ್, ಚೀನಾದ ರಾಜಧಾನಿ ಬೀಜಿಂಗ್ ಮತ್ತು ಪ್ರಮುಖ ನಗರ ಶಾಂಘೈನಲ್ಲಿ ಅಷ್ಟು ಪರಿಣಾಮ ಬೀರದಿರುವುದೇ ಸೋಜಿಗ.!

ಹೌದು, ನೋವೆಲ್ ಕೊರೊನಾ ವೈರಸ್ ತವರು ವುಹಾನ್ ನಿಂದ ಬೀಜಿಂಗ್ ಗೆ 1152 ಕಿ.ಮೀ ಅಂತರವಿದೆ. ಇನ್ನೂ ವುಹಾನ್ ನಿಂದ ಶಾಂಘೈ 839 ಕಿ.ಮೀ ದೂರದಲ್ಲಿದೆ. ಹಾಗ್ನೋಡಿದ್ರೆ, ಚೀನಾದಲ್ಲಿ ಜನಸಂದಣಿ ಹೆಚ್ಚಿರುವುದು ಬೀಜಿಂಗ್ ಮತ್ತು ಶಾಂಘೈನಲ್ಲಿ. ಹೀಗಿದ್ದರೂ, ಈ ಎರಡು ನಗರಗಳಲ್ಲಿ ಕೊರೊನಾ ವೈರಸ್ ತನ್ನ ಕರಾಳ ಮುಖವನ್ನ ತೋರಿಸಲೇ ಇಲ್ಲ.! ಇದರ ಹಿಂದೆ ಚೀನಾದ ಮಾಸ್ಟರ್ ಪ್ಲಾನ್ ಏನಾದರೂ ಇದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.

''ಕೊರೊನಾ ಕುರಿತಾಗಿ ಚೀನಾ ಸುಳ್ಳು ಹೇಳಿದ್ರಿಂದ, ಇಡೀ ಜಗತ್ತಿಗೆ ಸಂಕಷ್ಟ ಎದುರಾಗಿದೆ. ಕೋವಿಡ್-19 ಸೋಂಕಿತರು ಮತ್ತು ಮೃತರ ಅಸಲಿ ಸಂಖ್ಯೆಯನ್ನೂ ಚೀನಾ ಮುಚ್ಚಿಡುತ್ತಿದೆ'' ಎಂಬ ಆಪಾದನೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬೀಜಿಂಗ್ ಮತ್ತು ಶಾಂಘೈನಲ್ಲಿ ಕೊರೊನಾ 'ಕಂಟ್ರೋಲ್' ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕಟು ವಾಸ್ತವ.!

ಕಟು ವಾಸ್ತವ.!

ವಿಶ್ವದ ಬಹುಪಾಲು ದೇಶಗಳಲ್ಲಿ ಡೆಡ್ಲಿ ಕೊರೊನಾ ವೈರಸ್ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕೊರೊನಾದಿಂದಾಗಿ ಹಲವು ದೇಶಗಳು ಸ್ಮಶಾನ ಸದೃಶ್ಯವಾಗಿದೆ. ಈ ಮಧ್ಯೆ ಕಣ್ಣರಳಿಸುವ ವಿಚಾರ ಏನಂದ್ರೆ, ಚೀನಾದ ರಾಜಧಾನಿ ಬೀಜಿಂಗ್ ಮತ್ತು ಫೈನಾನ್ಶಿಯಲ್ ಹಬ್ ಶಾಂಘೈ ನಲ್ಲಿ ಮಾತ್ರ ಕೊರೊನಾ ವೈರಸ್ ಆಟ ಅಷ್ಟೊಂದು ನಡೆಯಲೇ ಇಲ್ಲ ಎಂಬುದು ಕಲ್ಪನೆಯಲ್ಲ. ಕಟು ವಾಸ್ತವ.!

ಸೋಂಕಿತ ಪ್ರಕರಣಗಳು ಎಷ್ಟು.?

ಸೋಂಕಿತ ಪ್ರಕರಣಗಳು ಎಷ್ಟು.?

ಬೀಜಿಂಗ್ ಮತ್ತು ಶಾಂಘೈನಲ್ಲಿ ಇಲ್ಲಿಯವರೆಗೂ ಎಷ್ಟು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂಬ ಖಚಿತ ಮಾಹಿತಿ ಲಭ್ಯವಿಲ್ಲ. ಆದ್ರೆ, ವರದಿಯೊಂದರ ಪ್ರಕಾರ, ಬೀಜಿಂಗ್ ನಲ್ಲಿ 569+ ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇನ್ನೂ ಶಾಂಘೈನಲ್ಲಿ 468+ ಜನರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು.

ಸಾವಿನ ಸಂಖ್ಯೆ.?

ಸಾವಿನ ಸಂಖ್ಯೆ.?

ಅಸಲಿಗೆ, ಬೀಜಿಂಗ್ ಮತ್ತು ಶಾಂಘೈನಲ್ಲಿ ಜನಸಂದಣಿ ಹೆಚ್ಚು. ಆದರೂ, ಈ ಎರಡು ನಗರಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಲಿಲ್ಲ. ಹಾಗೇ, ಸಾವಿನ ಸಂಖ್ಯೆ ಕೂಡ ಎರಡಂಕಿ ದಾಟಲಿಲ್ಲ. ಅತ್ತ ಕೊರೊನಾ ವೈರಸ್ ತವರು ವುಹಾನ್ ನಲ್ಲಿ ಕೊರೊನಾ ತಾಂಡವವಾಡುತ್ತಿದ್ದರೆ, ಇತ್ತ ಬೀಜಿಂಗ್ ಮತ್ತು ಶಾಂಘೈನಲ್ಲಿ ಅದರ ಪ್ರಭಾವ ಬೀರಲಿಲ್ಲ ಎಂಬುದೇ ಅಚ್ಚರಿಯ ಸಂಗತಿ.

ವುಹಾನ್ ನಲ್ಲಿ ಸಾವಿನ ಸಂಖ್ಯೆ ಎಷ್ಟು.?

ವುಹಾನ್ ನಲ್ಲಿ ಸಾವಿನ ಸಂಖ್ಯೆ ಎಷ್ಟು.?

ನೋವೆಲ್ ಕೊರೊನಾ ವೈರಸ್ ಜನ್ಮಸ್ಥಳ ವುಹಾನ್ ನಲ್ಲಿ 2500+ ಮಂದಿ ಕೋವಿಡ್-19 ನಿಂದ ಮೃತಪಟ್ಟಿದ್ದಾರೆ ಎಂದು ಚೀನಾ ಸರ್ಕಾರ ಹೇಳಿದೆ. ಆದ್ರೆ, ಅಲ್ಲಿನ ನಿವಾಸಿಗಳ ಪ್ರಕಾರ, ವುಹಾನ್ ನಗರವೊಂದರಲ್ಲೇ 42 ಸಾವಿರ ಮಂದಿ ಕೋವಿಡ್-19 ನಿಂದಾಗಿ ಜೀವ ಬಿಟ್ಟಿದ್ದಾರೆ.!

ಬೀಜಿಂಗ್, ಶಾಂಘೈನಲ್ಲಿ ಸೋಂಕು ಕಮ್ಮಿ ಯಾಕೆ.?

ಬೀಜಿಂಗ್, ಶಾಂಘೈನಲ್ಲಿ ಸೋಂಕು ಕಮ್ಮಿ ಯಾಕೆ.?

ವುಹಾನ್ ನಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆಯೇ, ಲಾಕ್ ಡೌನ್ ಮಾಡಲು ಸರ್ಕಾರ ಮುಂದಾಯಿತು. ವುಹಾನ್ ನಗರ ಸಂಪೂರ್ಣ ಸ್ತಬ್ಧವಾಯಿತು. ಚೀನಾದ ಆಂತರಿಕ ಸಾರಿಗೆ ವ್ಯವಸ್ಥೆ ಬಂದ್ ಆಯ್ತು. ಆದ್ರೆ, ವಿದೇಶಿ ಸಂಚಾರಕ್ಕೆ ಮಾತ್ರ ನಿರ್ಬಂಧ ಇರಲಿಲ್ಲ. ಹೀಗಾಗಿ, ಕೊರೊನಾ ವೈರಸ್ ಚೀನಾದ ರಾಜಧಾನಿ ಬೀಜಿಂಗ್, ಶಾಂಘೈ ಸೇರಿದಂತೆ ಬೇರೆ ಬೇರೆ ನಗರಗಳಿಗೆ ಹೆಚ್ಚಾಗಿ ಹಬ್ಬಲಿಲ್ಲ. ಬದಲಾಗಿ, ಬೇರೆ ಬೇರೆ ದೇಶಗಳಿಗೆ ವ್ಯಾಪಿಸಿತು.

ಇದು ಹೊಸ ರಣತಂತ್ರ.?

ಇದು ಹೊಸ ರಣತಂತ್ರ.?

ವಿಶ್ವದಲ್ಲಿ ಮೇಲುಗೈ ಸಾಧಿಸಲು, ಸೂಪರ್ ಪವರ್ ಆಗಲು ಹೊರಟಿರುವ ಚೀನಾ, ಕೊರೊನಾ ವೈರಸ್ ಮೂಲಕ ಹೊಸ ರಣತಂತ್ರ ರೂಪಿಸಿದೆ. 'ತಾವೇ ಬಲಿಪಶು' ಎಂಬುದನ್ನು ತೋರಿಸಿಕೊಳ್ಳಲು ಚೀನಾ ವುಹಾನ್ ನಲ್ಲಿನ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಬಲಿ ನೀಡಿ, ಬಳಿಕ ಇಡೀ ವಿಶ್ವವನ್ನು ಐಸಿಯುಗೆ ತಳ್ಳಿತು. ಆದ್ರೆ, ತನ್ನ ಬಿಸಿನೆಸ್ ಹಬ್ ಗಳಾದ ಬೀಜಿಂಗ್ ಮತ್ತು ಶಾಂಫೈ ನಗರಗಳನ್ನು ಕೊರೊನಾದಿಂದ ಬಚಾವ್ ಮಾಡಿಕೊಂಡು ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಲು ಚೀನಾ ಅಣಿಯಾಗಿದೆ ಎಂಬುದು ಮತ್ತೊಂದು ವಾದ.

ಈಗ ಹೊಸ ತಲೆಬಿಸಿ

ಈಗ ಹೊಸ ತಲೆಬಿಸಿ

ಕೊರೊನಾ ವೈರಸ್ ಸೋಂಕು ಹಿಡಿತದಲ್ಲಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಇದೀಗ ಚೀನಾದಲ್ಲಿ ಹೊಸ ತಲೆಬಿಸಿ ಶುರುವಾಗಿದೆ. ಬೀಜಿಂಗ್, ಶಾಂಘೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಥಳೀಯಕ್ಕಿಂತ 'ಆಮದು' ಸೋಂಕಿನ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದೆ. ವಿದೇಶಗಳಿಂದ ಬರುತ್ತಿರುವವರಿಂದ ಬೀಜಿಂಗ್ ಮತ್ತು ಶಾಂಘೈನಲ್ಲಿ ಸೋಂಕು ಜಾಸ್ತಿಯಾಗುತ್ತಿದೆ. ಹೀಗೇ ಮುಂದುವರೆದರೆ, ಚೀನಾದಲ್ಲಿ ಕೋವಿಡ್-19 ರೋಗ ಎರಡನೇ ಅಲೆ ಏಳುವ ಸಾಧ್ಯತೆ ಇದೆ.

ಹಲವರಿಗೆ ಲಕ್ಷಣ ಇಲ್ಲ!

ಹಲವರಿಗೆ ಲಕ್ಷಣ ಇಲ್ಲ!

ಮತ್ತೊಂದು ಆತಂಕಕಾರಿ ವಿಷಯ ಏನಂದರೆ, ಚೀನಾದ ಹಲವು ನಗರಗಳಲ್ಲಿ ಸಾವಿರಾರು ಮಂದಿಗೆ ಕೋವಿಡ್-19 ಪಾಸಿಟಿವ್ ಇದ್ದರೂ, ರೋಗ ಲಕ್ಷಣಗಳು ಕಂಡು ಬರುತ್ತಿಲ್ಲ. ಅಂಥವರನ್ನು ಸೋಂಕಿತರ ಪಟ್ಟಿಯಲ್ಲಿ ಚೀನಾ ಸೇರಿಸುತ್ತಿಲ್ಲ. ಇತ್ತ ಲಾಕ್ ಡೌನ್ ತೆರವು ಮಾಡಿರುವುದರಿಂದ, ಜನ ಓಡಾಡಲು ಆರಂಭಿಸಿದ್ದಾರೆ. ರೋಗ ಲಕ್ಷಣ ಇಲ್ಲದವರು ಜನಸಂದಣಿಯಲ್ಲಿ ಸೋಂಕನ್ನು ಹರಡಿದರೆ, ಚೀನಾಗೆ ಮತ್ತೆ ಅಪಾಯ ಕಟ್ಟಿಟ್ಟಬುತ್ತಿ.!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+