ತಾಲಿಬಾನ್ ಆಡಳಿತ ಕಿತ್ತೆಸೆದ ಅಮೆರಿಕ..! ಹೇಗಿತ್ತು 20 ವರ್ಷಗಳ ಭೀಕರ ಸಂಘರ್ಷ..?

ಅಮೆರಿಕ ಪರೋಕ್ಷವಾಗಿ ಉಗ್ರವಾದ ಬೆಂಬಲಿಸಿತ್ತು. ಆದ್ರೆ ಅದೇ ತಪ್ಪು ಕಡೆಗೆ ಅಮೆರಿಕ ಎಂಬ ದೈತ್ಯ ರಾಷ್ಟ್ರಕ್ಕೆ ಸರಿಯಾದ ಪೆಟ್ಟನ್ನೇ ಕೊಟ್ಟಿತ್ತು. 1980ರಲ್ಲಿ ಸೋವಿಯತ್ ರಷ್ಯಾ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದ ನಂತರ ಸ್ಥಳೀಯ ಹೋರಾಟಗಾರರಿಗೆ ಅಮೆರಿಕ ಪರೋಕ್ಷವಾಗಿ ಮದ್ದು, ಗುಂಡು ನೀಡಿದ ಆರೋಪವಿತ್ತು. ಈ ತಪ್ಪೇ ಮುಂದೆ ಅಮೆರಿಕ ಬುಡಕ್ಕೆ ಬಾಂಬ್ ಇಟ್ಟಿದ್ದು. 1989ರವರೆಗೆ ರಷ್ಯಾ ವಿರುದ್ಧ ಹೋರಾಟ ನಡೆಸಿದ್ದವರು ಮುಂದೆ ಅಫ್ಘಾನಿಸ್ತಾನದ ಅಧಿಕಾರ ಪಡೆಯಲು ಯತ್ನಿಸಿದ್ದರು.

ಸತತ ಕಿತ್ತಾಟದ ಬಳಿಕ 1996ರಲ್ಲಿ ತಾಲಿಬಾನ್ ಅಧಿಕಾರ ಪಡೆಯಿತು. ಹೀಗೆ ಮೊದಲ ಬಾರಿಗೆ ಅಧಿಕಾರ ಪಡೆದ ನಂತರ ತೆಪ್ಪಗೆ ತನ್ನ ಕೆಲಸ ನೋಡಿಕೊಂಡು ಕೂರಲಿಲ್ಲ.

ಉಗ್ರರಿಗೆ ತಾಲಿಬಾನ್ ನೆರವು ನೀಡುವ ಕೆಲಸ ಮಾಡುತ್ತಿದೆ ಎಂಬ ಆರೋಪವಿತ್ತು. ಹೀಗಿದ್ದಾಗಲೇ 2001ರ ಸೆಪ್ಟೆಂಬರ್ 11ರಂದು ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ಅವಳಿ ಕಟ್ಟಡಗಳ ಮೇಲೆ ಅಲ್ ಕೈದಾ ಉಗ್ರರು ದಾಳಿ ಮಾಡಿ ಕೆಡವಿದರು. ಅಲ್ಲಿಂದಲೇ ಶುರುವಾಗಿದ್ದು ನೋಡಿ ಅಸಲಿ ಹೈಡ್ರಾಮಾ.

ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ನಡೆದ ದಾಳಿಗೆ ಸೇಡು ತೀರಿಸಿಕೊಳ್ಳಲು ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ನಿರ್ಧಾರ ಕೈಗೊಂಡರು. ಭಯೋತ್ಪಾನೆ ಎದುರಿಸಲು ಜಂಟಿ ನಿರ್ಣಯಕ್ಕೆ ಬುಷ್‌ ಸಹಿಯನ್ನೂ ಹಾಕಿಬಿಟ್ಟರು.

ಈ ಮಧ್ಯೆ ತಾಲಿಬಾನ್ ಅಲ್‌ ಕೈದಾ ಉಗ್ರರ ಪರ ಮಾತನಾಡುತ್ತಿದೆ ಎಂದು ಆರೋಪಿಸಿ ಅಫ್ಗಾನಿಸ್ತಾನದ ಮೇಲೆ ಭೀಕರ ದಾಳಿಗೆ ಬುಷ್ ಸಹಿ ಹಾಕಿದರು. ಹೀಗೆ ಬರೋಬ್ಬರಿ 20 ವರ್ಷಗಳ ಹಿಂದೆ ಹೊತ್ತಿಕೊಂಡ ಬೆಂಕಿ ಕೆಂಡವಾಗೇ ಕಾವು ಉಳಿಸಿಕೊಂಡಿತ್ತು. ಆದ್ರೆ ಈಗ 20 ವರ್ಷಗಳ ಕೆಂಡಕ್ಕೆ ಪೆಟ್ರೋಲ್ ಬಿದ್ದಂತಾಗಿ ಮತ್ತೆ ಬೆಂಕಿ ಹೊತ್ತಿದೆ.

 ವಿಶ್ವ ವ್ಯಾಪಾರ ಕೇಂದ್ರ

ವಿಶ್ವ ವ್ಯಾಪಾರ ಕೇಂದ್ರ

ನ್ಯೂಯಾರ್ಕ್‌ನಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಮೇಲಿನ ದಾಳಿಯಲ್ಲಿ ಸುಮಾರು 3 ಸಾವಿರ ಜನರು ಮೃತಪಟ್ಟು, 6 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಒಟ್ಟು 4 ವಿಮಾನ ಅಪಹರಿಸಿದ್ದ 19 ಅಲ್‌ ಕೈದಾ ಉಗ್ರರ ಗ್ಯಾಂಗ್ 110 ಮಹಡಿಗಳ ಅವಳಿ ಗೋಪುರಗಳಿಗೆ ನುಗ್ಗಿಸಿತ್ತು. ಘೋರ ದುರಂತ ನಡೆದ ಬಳಿಕ ಉಗ್ರರ ಬೆನ್ನುಬಿದ್ದ ಅಮೆರಿಕ ಪಡೆಗಳಿಗೆ ಒಸಾಮಾ ಬಿನ್ ಲಾಡೆನ್‌ ಸಿಗಲೇ ಇಲ್ಲ. ಪಾಕಿಸ್ತಾನ-ಅಮೆರಿಕ ಸಂಬಂಧ ಚೆನ್ನಾಗಿದ್ದ ಕಾರಣ ಅಮೆರಿಕ ಪಾಕ್ ಮೇಲೆ ದಾಳಿ ನಡೆಸಲಿಲ್ಲ. ಆದರೆ ಆಗ ಅಫ್ಘಾನ್ ಆಳುತ್ತಿದ್ದವರು ತಾಲಿಬಾನ್ ಮುಖಂಡರು. ಹೀಗಾಗಿ ತನ್ನ ಮಾತು ಕೇಳದ ತಾಲಿಬಾನ್ ವಿರುದ್ಧ ಅಮೆರಿಕ ರೊಚ್ಚಿಗೆದ್ದಿತ್ತು.

 ತಾಲಿಬಾನ್ ಪಡೆಗಳ ವಿರುದ್ಧ ಅಫ್ಗಾನಿಸ್ತಾನದಲ್ಲಿ ಸಮರ

ತಾಲಿಬಾನ್ ಪಡೆಗಳ ವಿರುದ್ಧ ಅಫ್ಗಾನಿಸ್ತಾನದಲ್ಲಿ ಸಮರ

2001ರ ಅಕ್ಟೋಬರ್ 7ರಂದು ಬ್ರಿಟಿಷ್ ಮಿಲಿಟರಿ ಸಹಾಯದೊಂದಿಗೆ ಅಮೆರಿಕ ಸೇನೆ ತಾಲಿಬಾನ್ ಪಡೆಗಳ ವಿರುದ್ಧ ಅಫ್ಗಾನಿಸ್ತಾನದಲ್ಲಿ ಸಮರ ಆರಂಭಿಸಿತು. ಭೀಕರ ಬಾಂಬ್ ದಾಳಿಗೆ ತಾಲಿಬಾನ್ ಬೆಚ್ಚಿಬಿತ್ತು. ಅಮೆರಿಕ ತನ್ನ ಕಾರ್ಯಾಚರಣೆಯನ್ನು ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್' ಎಂದು ಕರೆದಿತ್ತು. ಕೆನಡಾ ಬೆಂಬಲದ ಜೊತೆಗೆ ಆಸ್ಟ್ರೇಲಿಯಾ, ಜರ್ಮನಿ ಹಾಗೂ ಫ್ರಾನ್ಸ್ ಕೂಡ ಸಪೋರ್ಟ್ ಮಾಡಿದ್ದವು. ನೋಡ ನೋಡುತ್ತಲೇ ಈ ಕಾಳಗ ಭೀಕರ ಸ್ವರೂಪ ಪಡೆದುಕೊಂಡಿತ್ತು. 2001ರ ನವೆಂಬರ್ 9ರಂದು ಮಜರ್-ಇ-ಷರೀಫ್‌ನಲ್ಲಿ ತಾಲಿಬಾನ್ ಅಮೆರಿಕ ಪಡೆಗಳಿಗೆ ಶರಣಾಯಿತು. 2001ರ ನವೆಂಬರ್ 11ರಂದು ಬಾಮಿಯಾನ್ ನಗರವನ್ನು ತಾಲಿಬಾನ್ ಕಳೆದುಕೊಂಡರೆ ನವೆಂಬರ್ 12ರಂದು ಹೆರಾತ್, ನವೆಂಬರ್ 13ರಂದು ಕಾಬೂಲ್ ನಗರಗಳಲ್ಲಿ ತಾಲಿಬಾನ್ ಹಿಡಿತ ಕೊನೆಯಾಯಿತು. ಇನ್ನು ಅಂತಿಮವಾಗಿ 2001ರ ನವೆಂಬರ್ 14ರಂದು ಜಲಾಲಾಬಾದ್ ನಗರ ಕೂಡ ತಾಲಿಬಾನ್ ಕೈಬಿಟ್ಟು ಹೋಯಿತು.

 ಸಾವಿರಾರು ಜನ ಅಸುನೀಗಿದ್ದರು

ಸಾವಿರಾರು ಜನ ಅಸುನೀಗಿದ್ದರು

ಬಿಲದಲ್ಲಿ ಅಡಗಿದ್ದ ಲಾಡೆನ್‌ ಬೇಟೆಗೆ ಅಮೆರಿಕ ರಣತಂತ್ರದೊಂದಿಗೆ 2001ರ ಡಿಸೆಂಬರ್ 3ರಂದು ಮಿತ್ರಪಡೆ ಜೊತೆ ದಾಳಿ ಆರಂಭಿಸಿತ್ತು. 2 ವಾರ ನಡೆದ ಈ ಭೀಕರ ಯುದ್ದದಲ್ಲಿ ಸಾವಿರಾರು ಜನ ಅಸುನೀಗಿದ್ದರು. ದಾಳಿ ಆರಂಭವಾಗಿ 2 ವಾರ ಕಳೆದರು ಲಾಡೆನ್‌ ಕೈಗೆ ಸಿಗಲೇ ಇಲ್ಲ. ಆತ ಪಾಕಿಸ್ತಾನಕ್ಕೆ ಓಡಿಹೋಗಿದ್ದ ಎನ್ನಲಾಗಿತ್ತು. ಇದಾದ ಬಳಿಕ ಅಂದ್ರೆ 2001ರ ಡಿಸೆಂಬರ್ 5ರಂದು ವಿಶ್ವಸಂಸ್ಥೆ ನಾರ್ದರ್ನ್ ಅಲಯನ್ಸ್ ಹಾಗೇ ಅಫ್ಘಾನ್‌ನ ರಾಜಕೀಯ ಬಣಗಳನ್ನು ಜರ್ಮನಿಗೆ ಆಹ್ವಾನಿಸಿಲಾಗಿತ್ತು. ಹಮೀದ್ ಕರ್ಜೈರನ್ನು ಅಫ್ಗಾನಿಸ್ತಾನದ ಮಧ್ಯಂತರ ಆಡಳಿತದ ಮುಖ್ಯಸ್ಥನಾಗಿ ನೇಮಿಸಲಾಯಿತು. ಅಲ್ಲಿಂದ ಅಮೆರಿಕದ ಮಾತು ಕೇಳುವ ಅಧ್ಯಕ್ಷ ಯುದ್ಧಪೀಡಿತ ಅಫ್ಘಾನ್‌ನ ಅಧಿಕಾರ ಪಡೆದರು. ಡಿಸೆಂಬರ್ 9ರಂದು ಅಧಿಕೃತವಾಗಿ ತಾಲಿಬಾನ್ ಆಡಳಿತ ಕೊನೆಯಾಗಿತ್ತು.

 ಲಾಡೆನ್‌ನಷ್ಟು ಕಾಡಿದವರು ಯಾರೂ ಇಲ್ಲ

ಲಾಡೆನ್‌ನಷ್ಟು ಕಾಡಿದವರು ಯಾರೂ ಇಲ್ಲ

ಬಹುಶಃ ಇಡೀ ಅಮೆರಿಕ ಇತಿಹಾಸದಲ್ಲಿ ಲಾಡೆನ್‌ನಷ್ಟು ಕಾಡಿದವರು ಯಾರೂ ಇಲ್ಲ. ಏಕೆಂದರೆ ತನ್ನ ನೆಲಕ್ಕೆ ಬಂದು ದಾಳಿ ನಡೆಸಿದ ಶತ್ರುಗಳನ್ನ ಅಮೆರಿಕ ಹಿಂದೆಂದೂ ಕಂಡಿರಲಿಲ್ಲ. ಹೊರಗಿನ ಶತ್ರುಗಳನ್ನ ಅಲ್ಲೆ ಮುಗಿಸಿ ಹಾಕುತ್ತಿತ್ತು ಅಮೆರಿಕ. ಆದರೆ ಲಾಡೆನ್ & ಗ್ಯಾಂಗ್ 3 ಸಾವಿರ ಅಮೆರಿಕನ್ನರ ಸಾವಿಗೆ ಕಾರಣವಾಗಿತ್ತು. ಅದು ಅಮೆರಿಕದ ನೆಲಕ್ಕೆ ನುಗ್ಗಿ ಇಷ್ಟು ಜನರನ್ನ ಕೊಂದಿದ್ದರು. ಹೀಗೆ 10 ವರ್ಷಗಳಿಂದಲೂ ಅಮೆರಿಕಕ್ಕೆ ಬೇಕಾಗಿದ್ದ ಉಗ್ರ ಒಸಾಬಾ ಬಿನ್ ಲಾಡೆನ್‌ನ ಪಾಕಿಸ್ತಾನದಲ್ಲಿ ಹುಡುಕಲಾಯಿತು. ಆತನ ಕಥೆ ಮುಗಿಸಿದ ಅಮೆರಿಕ, ತನ್ನ ಸೇಡು ತೀರಿತು ಎಂದು ಎದೆಯುಬ್ಬಿಸಿತ್ತು. 2011ರ ಮೇ 1ರಂದು ತನ್ನ ಮನೆಯಲ್ಲೇ ಉಗ್ರ ಲಾಡೆನ್ ಉಸಿರು ಬಿಟ್ಟಿದ್ದ. ಆತನ ಜೊತೆಗೆ ಆತನ ಸಹಚರರು ಕೂಡ ಪ್ರಾಣ ಕಳೆದುಕೊಂಡಿದ್ದರು.

 ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳ ಮೇಲೆ ನಡೆದ ದಾಳಿ

ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳ ಮೇಲೆ ನಡೆದ ದಾಳಿ

ಹೌದು, ಈ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಆದರೆ ಇದಕ್ಕೆ ಹಲವು ಆಯಾಮಗಳ ಉತ್ತರ ಇದ್ದರೂ ಸಿಂಪಲ್ಲಾಗಿ ಒಂದು ವಿವರಣೆ ನೀಡಬಹುದು. 2001ರ ಸೆಪ್ಟೆಂಬರ್ 11ರಂದು ವರ್ಲ್ಡ್‌ ಟ್ರೇಡ್‌ ಸೆಂಟರ್‌ ಕಟ್ಟಡಗಳ ಮೇಲೆ ನಡೆದ ದಾಳಿ ಬಳಿಕ ಅಮೆರಿಕ ಅಫ್ಘಾನ್ ನೆಲಕ್ಕೆ ಬಂದಿತ್ತು. ತಾಲಿಬಾನ್ ಪಡೆಗಳ ಆಡಳಿತವನ್ನ ಕೊನೆಗೊಳಿಸಿ, ತನ್ನ ಮಾತು ಕೇಳುವವರಿಗೆ ಅಧಿಕಾರ ಕೊಡಿಸಿತ್ತು ಅಮೆರಿಕ. ಒಟ್ಟು 20 ವರ್ಷದ ಅವಧಿಗಾಗಿ ಅಮೆರಿಕದಿಂದ ಸೇನೆ ನಿಯೋಜನೆ ಮಾಡಲಾಗಿತ್ತು. ಈ ಅವಧಿ ಇದೇ ಆಗಸ್ಟ್ 31ರಂದು ಕೊನೆಯಾಗಲಿದ್ದು, ಈ ಕಾರಣಕ್ಕೇ ಅಮೆರಿಕ ತನ್ನ ಸೇನೆಯನ್ನ ವಾಪಸ್ ಕರೆಸಿಕೊಂಡಿದೆ. ಆದರೆ ಅಮೆರಿಕ ತನ್ನ ಸೇನೆ ವಾಪಸ್ ಕರೆಸಿಕೊಂಡಿದ್ದೇ ತಡ, ತಾಲಿಬಾನ್ ಪಡೆಗಳು ಮತ್ತೆ ಅಫ್ಘಾನ್ ನೆಲವನ್ನ ತಮ್ಮ ವಶಕ್ಕೆ ಪಡೆದುಕೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+