ಜುಲೈ 25ರಂದು ಮಾತ್ರ ಭಾರತದಲ್ಲಿ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಏಕೆ?
ಭಾರತದಲ್ಲಿ ತುರ್ತು ಪರಿಸ್ಥಿತಿಯ ನಂತರ ಎಲ್ಲಾ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭವನ್ನು ಜುಲೈ 25ರಂದು ಮಾತ್ರ ಆಯೋಜಿಸಲಾಗಿದೆ. ದೇಶದ 15ನೇ ಹಾಗೂ 2ನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 1977ರಿಂದ ಜುಲೈ 25ರಂದು ದೇಶದ ರಾಷ್ಟ್ರಪತಿಗಳ ಪ್ರಮಾಣ ವಚನ ಸಮಾರಂಭ ಏಕೆ ನಡೆಯುತ್ತದೆ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.
ಹೌದು ಪ್ರತಿ 5 ವರ್ಷಗಳಿಗೊಮ್ಮೆ ಜುಲೈ 25 ರಂದು ದೇಶವು ಹೊಸ ಅಧ್ಯಕ್ಷರನ್ನು ಪಡೆದುಕೊಳ್ಳತ್ತಾರೆ ಆದ್ದರಿಂದ ಜುಲೈ 25ರ ದಿನವನ್ನು ಭಾರತಕ್ಕೆ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನವದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಬೆಳಗ್ಗೆ 10.15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಿದ್ದು, ನೂತನ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸಿಜೆಐ ಎನ್. ವಿ.ರಮಣ ದ್ರೌಪದಿ ಅವರು ಮುರ್ಮು ಅವರಿಗೆ ಪ್ರಮಾಣ ವಚನ ಬೋಧಿಸಿದರು, ಬಳಿಕ ಅವರಿಗೆ ಅಂತರ ಸೇವಾ ಗೌರವಗಳು ನೀಡಲಾಯಿತು. ಇದೆ ಸಮಯದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ 21ಗನ್ ಸೆಲ್ಯೂಟ್ ನೀಡಿ ಗೌರವ ನೀಡಲಾಗಿದೆ ನಂತರ ಅವರು ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರಾಷ್ಟ್ರಪತಿಯ ಪ್ರಮಾಣ ವಚನ ಸ್ವೀಕಾರಿಸುವ ಇತಿಹಾಸ
ಇತಿಹಾಸದ ಬಗ್ಗೆ ಮಾತನಾಡುತ್ತಾ ಹೊದರೆ, ಜುಲೈ 25 ರಂದು ದೇಶದ ಆರನೇ ರಾಷ್ಟ್ರಪತಿಯಾಗಿ ನೀಲಂ ಸಂಜೀವ ರೆಡ್ಡಿ ಅವರು ಪ್ರಮಾಣವಚನ ಸ್ವೀಕರಿಸಿದರು, ನಂತರ ಜುಲೈ 25ರಂದು ಎಲ್ಲಾ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸುದ್ದಾರೆ. 1977ರಿಂದ 9 ರಾಷ್ಟ್ರಪತಿಗಳು ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದೇ ರೀತಿ ದ್ರೌಪದಿ ಮುರ್ಮು 10ನೇ ರಾಷ್ಟ್ರಪತಿಯಾಗಿ ಈ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಧಿಕಾರ ಪೂರ್ಣಗೊಳಿಸಿದ ಕೋವಿಂದ್ 9ನೇ ರಾಷ್ಟ್ರಪತಿ
ಭಾರತದಲ್ಲಿ ತುರ್ತು ಪರಿಸ್ಥಿತಿಯ ನಂತರ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಿದ 8 ರಾಷ್ಟ್ರಪತಿಗಳು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಮತ್ತೊಂದೆಡೆ, ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಮ್‌ನಾಥ್ ಕೋವಿಂದ್ ಇಂದು 9ನೇ ರಾಷ್ಟ್ರಪತಿಯಾಗಿದ್ದರು. ಮೊದಲ ಬಾರಿಗೆ ನೀಲಂ ಸಂಜೀವ ರೆಡ್ಡಿ ಅವರು 25 ಜುಲೈ 1977ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿಯಿಂದ ಹಿಡಿದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವರೆಗೆ 9 ರಾಷ್ಟ್ರಪತಿಗಳು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ಜುಲೈ 25ಕ್ಕೆ ಪ್ರಮಾಣ ವಚನ ಸ್ವೀಕರಿಸಿದ ರಾಷ್ಟ್ರಪತಿಗಳು
ನೀಲಂ ಸಂಜೀವ ರೆಡ್ಡಿ (25 ಜುಲೈ, 1977ರಿಂದ 25 ಜುಲೈ, 1982)
ಗಿಯಾನಿ ಜೈಲ್ ಸಿಂಗ್ (25 ಜುಲೈ, 1982ರಿಂದ 25 ಜುಲೈ, 1987)
ರಾಮಸ್ವಾಮಿ ವೆಂಕಟರಾಮನ್ (25 ಜುಲೈ, 1987ರಿಂದ 25 ಜುಲೈ, 1992)
ಶಂಕರ್ ದಯಾಳ್ ಶರ್ಮಾ (25 ಜುಲೈ, 1992ರಿಂದ 25 ಜುಲೈ 1997)
ಕೆ.ಆರ್. ನಾರಾಯಣನ್ (25 ಜುಲೈ, 1997ರಿಂದ 25 ಜುಲೈ, 2002)
ಎಪಿಜೆ ಅಬ್ದುಲ್ ಕಲಾಂ (25 ಜುಲೈ, 2002ರಿಂದ 25 ಜುಲೈ, 2007)
ಪ್ರತಿಭಾ ಪಾಟೀಲ್ (25 ಜುಲೈ, 2007 ರಿಂದ 25 ಜುಲೈ, 2012)
ಪ್ರಣಬ್ ಮುಖರ್ಜಿ (25 ಜುಲೈ, 2012ರಿಂದ 25 ಜುಲೈ, 2017)
ರಾಮನಾಥ್ ಕೋವಿಂದ್ (25 ಜುಲೈ, 2017 ರಿಂದ 25 ಜುಲೈ, 2022)
ಈಗ ದ್ರೌಪದಿ ಮುರ್ಮು (25 ಜುಲೈ, 2022 ರಿಂದ .......................)

ಅಧ್ಯಕ್ಷರ ಅವಧಿ ಮುಗಿದ ತಕ್ಷಣ, ಪ್ರಮಾನ ವಚನ
ಅಧ್ಯಕ್ಷರಿಲ್ಲದ ಸಂದರ್ಭದಲ್ಲಿ ಭಾರತದ ಇತಿಹಾಸದಲ್ಲಿ ಈ ರೀತಿ ಆಗಿರಲಿಲ್ಲ. ಅಧ್ಯಕ್ಷರ ಅವಧಿ ಮುಗಿದ ತಕ್ಷಣ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಲಾಗುತ್ತದೆ. ಜುಲೈ 21ರಂದು ಎಣಿಕೆಯಾದ 15ನೇ ಅಧ್ಯಕ್ಷೀಯ ಚುನಾವಣೆಗೆ ಜುಲೈ 18 ರಂದು ಮತದಾನ ನಡೆಯಿತು. ಇಂದು ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications