Xavier: ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುವ ಈ ಮೀಮ್ ಸ್ಟಾರ್ ಕ್ಸೇವಿಯರ್ ನಿಜ ಹೆಸರೇನು?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ನೋಡಿದ್ರು ಒಂದು ಮೀಸೆ ಹೊತ್ತ ಮುಖ ಕಾಣಿಸುತ್ತಲೆ ಇರುತ್ತದೆ. ಮೀಮ್ಸ್ ಸ್ಟಾರ್ ಆಗಿರುವ ಈ ವ್ಯಕ್ತಿಯ ಹೆಸರು ಕ್ಸೇವಿಯರ್. ಕಾಮಿಡಿ ಮೀಮ್‌ಗಳಲ್ಲಿ ಕ್ಸೇವಿಯರ್ ಅಂಕಲ್ ಎಂಬ ಹೆಸರಿನಿಂದ ಬರುವ ಪೋಸ್ಟ್‌ಗಳು ಸಕತ್ ನಗು ಉಕ್ಕಿಸುತ್ತವೆ. ಕೆಲವೊಮ್ಮೆ ನಗು ಮುಖದಿಂದ... ಕೆಲವೊಮ್ಮೆ ಗಂಭೀರವಾದ ಮುಖದೊಂದಿಗೆ ಕಾಣಿಸಿಕೊಳ್ಳುತ್ತಾರೆ.
ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಾದರೆ ಸಾಕು, ಕ್ಸೇವಿಯರ್ ಎಂಬ ವ್ಯಕ್ತಿ ಪೋಸ್ಟ್ ಮಾಡಿದ ಮೀಮ್‌ಗಳನ್ನು ನೀವು ನೋಡಿಯೇ ನೋಡಿರುತ್ತಿರಿ. ಫೇಸ್‌ಬುಕ್, ಟ್ವಿಟರ್, ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಎಲ್ಲಾ ಕಡೆ ಕಾಣಿಸಿಕೊಂಡೆ ಕಾಣಿಸಿಕೊಳ್ಳುತ್ತಾರೆ. ಆದರೆ, ನಿಜವಾದ ಕ್ಸೇವಿಯರ್ ಯಾರು ಎಂಬ ಬಗ್ಗೆ ಹಲವರಿಗೆ ಸಕತ್ ಕುತೂಹಲ ಕೂಡ ಇದೆ. ಹೀಗಾಗಿ ಈ ಬರಹದಲ್ಲಿ ಅವರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇವೆ.

ಮೀಮ್ ಸ್ಟಾರ್ ಕ್ಸೇವಿಯರ್ ಯಾರು?
ಕ್ಸೇವಿಯರ್ ಅವರ ಫೇಸ್‌ಬುಕ್ ಪ್ರೊಫೈಲ್ ಫೋಟೋ ನಿಜವಾಗಿಯೂ ಪಕಾಲು ಪಾಪಿಟೊ ಎಂಬ ವ್ಯಕ್ತಿಯ ಪ್ರೊಫೈಲ್ ಫೋಟೋ. ಅವರು ಇಷ್ಟೊಂದು ಪ್ರಸಿದ್ಧರಾಗಲು ಕಾರಣ ಅವರ ಹಾಸ್ಯಪ್ರಜ್ಞೆ. ನಿಜವಾಗಿ ಅವರ ಹೆಸರು ಕ್ಸೇವಿಯರ್, ಪಕಾಲು ಪಾಪಿಟೊ ಎರಡು ಅಲ್ಲ. ಅವರ ನಿಜವಾದ ಹೆಸರು ಓಂ ಪ್ರಕಾಶ್ ಅಟಾ.
ಓಂ ಪ್ರಕಾಶ್ ಅಟಾ. ಅವರು ಅಕ್ಟೋಬರ್ 22, 1968 ರಂದು ಜನಿಸಿದರು. ಕಾನ್ಪುರದ ಐಐಟಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಮಾಹಿತಿಯಿದೆ. ಐಐಟಿಯ ಭೌತಶಾಸ್ತ್ರ ವಿಭಾಗದಲ್ಲಿ ತಾಂತ್ರಿಕ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರೇ ಪಕಾಲು ಪಾಪೀಟೋ ಎಂಬ ಕಾಲ್ಪನಿಕ ಗುಮಾಸ್ತ ಪಾತ್ರವನ್ನು ಸೃಷ್ಟಿಸಿದ್ದಾರೆ.
ಅವರು ರಚಿಸಿದ ಕಾಮಿಕ್ ಮೀಮ್‌ಗಳಿಂದ ಓಂ ಪ್ರಕಾಶ್ ಅಟಾ ಸಕತ್ ಫೇಮಸ್ ಆದರು. ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್ ಅನುಯಾಯಿಗಳು ಮತ್ತು ಟ್ವಿಟರ್‌ನಲ್ಲಿ 3 ಲಕ್ಷ ಅನುಯಾಯಿಗಳಿದ್ದಾರೆ. ಪಕಾಲೋ ಪಾಪಿಟೋ ಅಮೆರಿಕದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಂತೆ ನಟಿಸುತ್ತಾರೆ. ಆದರೆ ಆತ ನಿಜವಾಗಿ ಭಾರತೀಯ.

ನೋ ಯುವರ್ ಮೀಮ್ಸ್ ವೆಬ್‌ಸೈಟ್ ಪ್ರಕಾರ, ಪಕಾಲು ಪಾಪಿಟೊ ಜುಲೈ 12, 2013 ರಂದು ಟ್ವಿಟರ್ ಖಾತೆಯನ್ನು ತೆರೆದ, 'ಹಲೋ ಟ್ವಿಟರ್ ಐ ಆಮ್ ಸಿಂಗಲ್' ಎಂದು ಮೊದಲ ಟ್ವೀಟ್ ಮಾಡಿದ್ದರು. ಎರಡು ವರ್ಷಗಳಲ್ಲಿ 17 ಸಾವಿರ ಮಂದಿ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. 6 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 7,39,000 ಅನುಯಾಯಿಗಳಿದ್ದರು. ಪಕಾಲು ಪಾಪಿಟೊ 2015 ರಲ್ಲಿ ಹೆಚ್ಚು ಖ್ಯಾತಿ ಗಳಿಸಿದರು. ಆದರೆ, ಟ್ವೀಟ್‌ಗಳು ಟ್ವಿಟರ್ ನಿಯಮಗಳಿಗೆ ವಿರುದ್ಧವಾಗಿದ್ದ ಕಾರಣ ಟ್ವಿಟರ್ 2018 ರಲ್ಲಿ ಅವರ ಖಾತೆಯನ್ನು ಸ್ಥಗಿತಗೊಳಿಸಿತು.
2013 ರಂದು ಓಂ ಪ್ರಕಾಶ್ ಅವರು ಫೇಸ್‌ಬುಕ್‌ಗೂ ಎಂಟ್ರಿಯಾಗಿದ್ದರು. ಆದರೆ, ಅದನ್ನು ಕೂಡ ಸ್ಥಗಿತ ಮಾಡಲಾಗಿದೆ. ಇದಾದ ಬಳಿಕ Xavier ಮತ್ತು pakalupapitow ಹೆಸರಿನಲ್ಲಿ ಅನೇಕ ನಕಲಿ ಖಾತೆಗಳು ತೆರೆಯಲಾಗಿದೆ. ಈಗಲೂ ಸೋಶಿಯಲ್ ಮಿಡಿಯಾಗಳಲ್ಲಿ ಹುಡುಕಿದರೇ ಸಾಕಷ್ಟು ನಕಲಿ ಖಾತೆಗಳು ಸಿಗುತ್ತವೆ. ಅದರ ನಂತರ ಕ್ಸೇವಿಯರ್ ಮತ್ತು ಕ್ಸೇವಿಯರ್ ಅಂಕಲ್ ಸೇರಿ ಕೆಲವು ಫೇಸ್‌ಬುಕ್, ಇನ್‌ಸ್ಟಾ, ಟ್ವಿಟರ್ ಖಾತೆಗಳು ಹುಟ್ಟಿಕೊಂಡವು. ಕ್ಸೇವಿಯರ್ ಮೀಮ್‌ಗಳು ಈಗ ಹೆಚ್ಚು ವೈರಲ್ ಆಗುತ್ತಿವೆ. ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟರ್ ಹೀಗೆ ಎಲ್ಲೆಲ್ಲೂ ಕ್ಸೇವಿಯರ್ ಹೆಸರಿನ ಮೀಮ್ ಗಳು ಕಾಣಿಸುತ್ತವೆ.
-
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ












Click it and Unblock the Notifications