ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಪ್ರಕರಣದಲ್ಲಿ ಸಿಲುಕಿರುವ ಡಾ. ಶಿವಮೂರ್ತಿ ಮುರುಘಾಶರಣರ ಬಗ್ಗೆ ಪರಿಚಯ

|
Google Oneindia Kannada News

ಚಿತ್ರದುರ್ಗದ ಮುರುಘಾ ಮಠದ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿನಿಯವರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಹಾವೇರಿಯ ಬಂಕಾಪುರದ ಬಳಿಕ ಪೊಲೀಸರು ಮುರುಘಾಮಠ ಶ್ರೀಗಳನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದರೆ, ಈ ಬಗ್ಗೆ ಮಠದ ಆವರಣದಲ್ಲೇ ಖುದ್ದು ಮುರುಘಾ ಶರಣರು ಸ್ಪಷನೆ ನೀಡಿ, ನೆಲದ ಕಾನೂನು ಗೌರವಿಸಬೇಕಿದೆ.

ಚಿತ್ರದುರ್ಗದಲ್ಲಿರುವ ಮೂಲ ಮಠದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ಮಕ್ಕಳಿಗೆ ಸ್ವಾಮಿಗಳು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಇದೆ. ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಈ ಹೆಣ್ಮಕ್ಕಳು ಎಲ್ಲವನ್ನೂ ವಿವರಿಸಿದ್ದಾರೆನ್ನಲಾಗಿದೆ.

ಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; ಸಂಧಾನ ಸಭೆ ವಿಫಲಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ; ಸಂಧಾನ ಸಭೆ ವಿಫಲ

ಸ್ವಾಮೀಜಿ ವಿರುದ್ಧ ಆರೋಪ ಮಾಡಿರುವ ಹೆಣ್ಮಕ್ಕಳು ಹೇಳುವ ಪ್ರಕಾರ, ಬೃಹನ್ಮಠದಲ್ಲೇ ಕಳೆದ 2-3 ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಸ್ವಾಮೀಜಿ ಕಿರುಕುಳ ತಾಳಲಾಗದೇ ಈ ಮಕ್ಕಳು ದೂರು ಕೊಡಲು ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಕೆಲವರ ಸಲಹೆ ಮೇರೆಗೆ ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸುತ್ತಾರೆ. ಅಲ್ಲಿ ಎಲ್ಲಾ ಘಟನೆಯ ವಿವರವನ್ನು ಮಕ್ಕಳು ಒದಗಿಸಿದ್ದಾರೆನ್ನಲಾಗಿದೆ.

Know Who Is Dr Shivamurthy Murughasharana the Swamiji Accused of Sexual Harassment

ಅನೇಕ ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡಿದ್ದ ಮುರುಘಾಶ್ರೀಗಳು ಈ ವಿವಾದಕ್ಕೆ ಸಿಲುಕಿರುವುದು ಅವರ ಭಕ್ತರಿಗೆ ಆಘಾತಕಾರಿ ಎನಿಸಿದೆ. ಡಾ. ಶಿವಮೂರ್ತಿ ಮುರುಘಾಶರಣರು ಯಾರು? ಅವರ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ.

ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣ: ದೌರ್ಜನ್ಯಕ್ಕೊಳಗಾದ ಮಕ್ಕಳು ಬೆಂಗಳೂರಿಗೆ ಬಂದಿದ್ದೇಕೆ?ಮುರುಘಾ ಶರಣರ ಮೇಲೆ ಪೋಕ್ಸೋ ಪ್ರಕರಣ: ದೌರ್ಜನ್ಯಕ್ಕೊಳಗಾದ ಮಕ್ಕಳು ಬೆಂಗಳೂರಿಗೆ ಬಂದಿದ್ದೇಕೆ?

ಮುರುಘಾಶರಣರು ಯಾರು?

1958, ಏಪ್ರಿಲ್ 11ರಂದು ಚಿತ್ರದುರ್ಗದ ಗೋದಬನಹಾಳ ಗ್ರಾಮದಲ್ಲಿ ಜನಿಸಿದ ಡಾ. ಶ್ರೀ ಮುರುಘಾ ಶರಣರು ಚಿತ್ರದುರ್ಗದಲ್ಲಿ ಶಾಲಾ ಶಿಕ್ಷಣ ಪೂರೈಸಿದರೆ ಮೈಸೂರು ವಿವಿಯಲ್ಲಿ ಪದವಿ ಪಡೆದರು. ಇವರ ಆಧ್ಯಾತ್ಮಿಕತೆ, ಬುದ್ಧವಂತಿಕೆಯು ಅಂದಿನ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳಿಗೆ ಮೆಚ್ಚುಗೆಯಾಗುತ್ತದೆ. ತಮ್ಮ ಉತ್ತರಾಧಿಕಾರಿ ಎಂದು ಶಿವಮೂರ್ತಿಯನ್ನು ಘೋಷಿಸಿದರು.

ನಂತರ ಹಾವೇರಿಯ ಮುರುಘರಾಜೇಂದ್ರ ಮಠ ಸೇರಿ ವಿವಿಧ ಶಾಖಾ ಮಠಗಳಲ್ಲಿ ಶಿವಮೂರ್ತಿಗಳಿಗೆ ತರಬೇತಿ ನೀಡಲಾಗುತ್ತದೆ. ನಂತರ, ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು 1991 ಜನವರಿ 31ರಂದು ಮುರುಘಾಮಠದ ಪೀಠವೇರುತ್ತಾರೆ. ಮುರುಘಾ ಮಠ ಲಿಂಗಾಯತರ ಒಂದು ಪ್ರಮುಖ ವಿರಕ್ತ ಮಠವಾಗಿದೆ.

Know Who Is Dr Shivamurthy Murughasharana the Swamiji Accused of Sexual Harassment

ವೈಚಾರಿಕತೆಗೆ ಹೆಸರುವಾಸಿ

ಡಾ. ಶಿವಮೂರ್ತಿ ಮುರುಘಾಶರಣರು ಧಾರ್ಮಿಕ ಮುಖಂಡರಾದರೂ ವೈಚಾರಿಕ ಚಿಂತನೆಗೆ ಹೆಸರುವಾಸಿ. ಜಾತಿ ವ್ಯವಸ್ಥೆ ವಿರುದ್ಧ ಕೆಲಸ ಮಾಡಿದ್ದಾರೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಟ್ಟವರು. ಸಮಾಜವನ್ನು ಅನಿಷ್ಠವಾಗಿ ಕಾಡುತ್ತಿರುವ ಜಾತಿ ವ್ಯವಸ್ಥೆ, ಮೂಢನಂಬಿಕೆ ಇತ್ಯಾದಿಯನ್ನು ಅವರು ಬಹಿರಂಗವಾಗಿ ಟೀಕಿಸುತ್ತಿದ್ದರು.

ತಮ್ಮ ಮಠದಲ್ಲಿ ಸರ್ವಜನಾಂಗಕ್ಕೂ ಅವರು ಸಹಾಯ ಮಾಡುತ್ತಿದ್ದರು. ಜಾತಿಭೇದ ಇಲ್ಲದೇ ಅನಾಥ ಮಕ್ಕಳಿಗೆ ಮಠ ಸಹಾಯ ಮಾಡಿದೆ. ಮುರುಘಾಶರಣರು ಅನೇಕ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ್ದಾರೆ. ವಿಧವಾ ಮರುವಿವಾಹಗಳಿಗೆ ಪ್ರೋತ್ಸಾಹ ನೀಡಿದ್ದಾರೆ.

ಸಮಾಜದಲ್ಲಿ ಪ್ರಭಾವಶಾಲಿ

ಡಾ. ಶಿವಮೂರ್ತಿ ಮುರುಘಾಶರಣರು ಸಮಾಜದಲ್ಲಿ ಬಹಳ ಪ್ರಭಾವಶಾಲಿ ಎನಿಸಿದ್ದಾರೆ. ಲಿಂಗಾಯತ ಸಮುದಾಯವಷ್ಟೇ ಅಲ್ಲ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮೊದಲಾದ ಅನೇಕ ಜಿಲ್ಲೆಗಳಲ್ಲಿ ಶಾಖಾ ಮಠಗಳಿವೆ. ಮುರುಘಾ ಮಠದ ಭಕ್ತರು ಲಕ್ಷಗಟ್ಟಲೆ ಇದ್ದಾರೆ. ಶರಣರ ಮಾತುಗಳೆಂದರೆ ವೇದವಾಕ್ಯವೆಂಬಂತೆ ಜನರು ಆಲಿಸುತ್ತಾರೆ.

ರಾಜಕೀಯವಾಗಿಯೂ ಮುರುಘಾಶ್ರೀಗಳು ಪ್ರಮುಖ ಶಕ್ತಿಕೇಂದ್ರವಾಗಿದ್ದಾರೆ. ಬಹುತೇಕ ಎಲ್ಲಾ ರಾಜಕೀಯ ನಾಯಕರು ಮುರುಘಾಮಠಕ್ಕೆ ಭೇಟಿ ನೀಡದೇ ಚುನಾವಣೆಗೆ ಅಡಿ ಇಡಲ್ಲ ಎನ್ನುವ ಮಟ್ಟಕ್ಕೆ ಶ್ರೀಗಳ ಪ್ರಭಾವ ಇದೆ. ಯಡಿಯೂರಪ್ಪರಿಂದ ಹಿಡಿದು ರಾಹುಲ್ ಗಾಂಧಿ, ನರೇಂದ್ರ ಮೋದಿ, ಮೋಹನ್ ಭಾಗವತ್‌ವರೆಗೂ ವಿವಿಧ ಸ್ತರಗಳ ನಾಯಕರು ಮಠಕ್ಕೆ ಭೇಟಿ ಶ್ರೀಗಳ ಆಶೀರ್ವಾದ ಪಡೆಯುವುದನ್ನು ಮರೆಯುವುದಿಲ್ಲ.

ಮಠದ ಶಿಕ್ಷಣ ಸಂಸ್ಥೆಗಳು

ಮುರುಘಾಮಠ ರಾಜ್ಯದ ವಿವಿಧೆಡೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಈ ಮೂಲಕ ಬಡವರು ಹಾಗೂ ಸಮಾಜದ ಎಲ್ಲಾ ವರ್ಗದವರಿಗೂ ಉತ್ತಮ ಶಿಕ್ಷಣ ನೀಡುತ್ತಿದೆ.

ಚಿತ್ರದುರ್ಗ: ಎಸ್‌ಜೆಎಂ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಎಸ್‌ಜೆಎಂ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಸ್‌ಜೆಎಂ ಫಾರ್ಮಸಿ ಕಾಲೇಜು, ಎಸ್‌ಜೆಎಂ ಪಾಲಿಕೆಕ್ನಿಕ್ ಚಳ್ಳಕೆರೆ, ಅರುಣೋದಯ ಶಾಲೆ ಹೊಳಲ್ಕೆರೆ, ಬಸವೇಶ್ವರ ಮೆಡಿಕಲ್ ಕಾಲೇಜು.

ದಾವಣಗೆರೆ: ರುದ್ರೇಶ್ವರ ಶಾಲೆ ಹೆಬ್ಬಾಳು, ಎಸ್‌ಜೆಎಂ ಎಚ್‌ಪಿಎಸ್ ಹೈಸ್ಕೂಲು, ಎಸ್‌ಜೆಎಂ ಬಾಲಕಿಯರ ಶಾಲೆ ರಾಣೆಬೆನ್ನೂರು

(ಒನ್ಇಂಡಿಯಾ ಸುದ್ದಿ)

English summary
Dr. Shivamurthy Murugha Swamiji has caught in a sexual assault case. Swamiji is known as a person with progressive thinking. Here is his details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X