Smartphone: ನಥಿಂಗ್‌ 3 ಫೋನ್‌ ಬಿಡುಗಡೆ ಯಾವಾಗ? ಏನೆಲ್ಲಾ ಇರಲಿದೆ ವೈಶಿಷ್ಟ್ಯ?

ನಥಿಂಗ್ಸ್ ಫೋನ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಗುರುತನ್ನು ಹೊಂದಿದೆ. ನಥಿಂಗ್‌ 2 ಎ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ. ಈಗ ಮತ್ತೊಂದು ಫೋನ್‌ ರಿಲೀಸ್‌ ಮಾಡಲು ನಥಿಂಗ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಮಿಡ್‌ ರೇಂಜ್‌ನಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದಿರುವ ನಥಿಂಗ್‌ ಮತ್ತೊಮ್ಮೆ ಈ ಸೆಗ್ಮೆಂಟ್‌ನಲ್ಲಿ ಸದ್ದು ಮಾಡಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

ನಥಿಂಗ್‌ 3 ಮಾರುಕಟ್ಟೆಗೆ ರಿಲೀಸ್ ಮಾಡಲು ಕೆಲಸವನ್ನು ಆರಂಭಿಸಿದ್ದು, ಈ ವರ್ಷದ ಮಧ್ಯದಲ್ಲಿ ಫೋನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ. ಈ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 2 ರ ಅಪ್‌ಡೇಟ್ ವರ್ಷನ್‌ ಆಗಿರಲಿದೆ. ಈ ಹ್ಯಾಂಡ್‌ಸೆಟ್‌ನ ಬಿಡುಗಡೆಯ ಟೈಮ್‌ಲೈನ್ ಅನ್ನು ಕಂಪನಿಯು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

When is Nothing 3 phone release What will be the feature

ನಥಿಂಗ್ ಫೋನ್ 3 ಜುಲೈನಲ್ಲಿ ಬಿಡುಗಡೆಯಾಗಲಿದೆ ಎಂದು ಊಹಿಸಬಹುದು. ನಥಿಂಗ್ ಫೋನ್ 3 ನ ವೈಶಿಷ್ಟ್ಯಗಳು ಅಥವಾ ವಿಶೇಷಣಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಅದರ ಪ್ರೊಸೆಸರ್‌ನ ವಿವರಗಳು ಮತ್ತು ಭಾರತದಲ್ಲಿ ಅದರ ಬೆಲೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಬೆಲೆ ಎಷ್ಟಿರಬಹುದು ಗೊತ್ತಾ?

ಉದ್ಯಮದ ಮೂಲಗಳನ್ನು ಉಲ್ಲೇಖಿಸಿ 91ಮೊಬೈಲ್ಸ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಥಿಂಗ್ ಫೋನ್ 3 ಕ್ವಾಲ್‌ಕಾಮ್‌ನ ಹೊಸ ಸ್ನಾಪ್‌ಡ್ರಾಗನ್ 8s ಜನರೇಷನ್ 3 ಎಸ್‌ಓಸಿ ಪ್ರೊಸೆಸರ್ ಅನ್ನು ಹೊಂದಿರಬಹುದು.

ಈ ಸ್ಮಾರ್ಟ್‌ಫೋನ್ ಬೆಲೆ ಎಷ್ಟಾಗಬಹುದು?

ನಥಿಂಗ್‌ ಬಜೆಟ್ ಫ್ರೆಂಡ್ಲಿ ಫೋನ್ ನಿರ್ಮಿಸುವಲ್ಲಿ ತೊಡಗಿದೆ. ನಥಿಂಗ್ 3 ಬೆಲೆ 40,000 ರಿಂದ 45,000 ರೂಪಾಯಿಗಳ ನಡುವೆ ಇರಬಹುದೆಂದು ವರದಿಯಲ್ಲಿ ಹೇಳಲಾಗಿದೆ.

ಕಂಪನಿಯು ಇದೀಗ ಪ್ರೀಮಿಯಂ ಹ್ಯಾಂಡ್‌ಸೆಟ್ ವಿಭಾಗವನ್ನು ಪ್ರವೇಶಿಸಲು ಯೋಜಿಸುತ್ತಿಲ್ಲ. 20,000 ರೂ.ನಿಂದ 40,000 ರೂ.ಗಳ ಬೆಲೆಯ ಒಳಗೆ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಂಪನಿಯು ಯೋಜಿಸಿದೆ.

ನಥಿಂಗ್ ಬ್ರ್ಯಾಂಡ್ ತನ್ನ ಕೊನೆಯ ಎರಡು ಪ್ರಮುಖ ಹ್ಯಾಂಡ್‌ಸೆಟ್‌ಗಳಾದ ನಥಿಂಗ್ ಫೋನ್ 2 ಮತ್ತು ಫೋನ್ 1 ಅನ್ನು ವಿಶೇಷ ಮ್ಯಾಸ್ಕಾಟ್‌ನೊಂದಿಗೆ ಬಿಡುಗಡೆ ಮಾಡಿತ್ತು. ಇತ್ತೀಚೆಗೆ ನಥಿಂಗ್ ತನ್ನ ಮ್ಯಾಸ್ಕಾಟ್ ಅನ್ನು ಬಹಿರಂಗಪಡಿಸುವ ಮೂಲಕ ಹೊಸ ಮುಂಬರುವ ಉತ್ಪನ್ನವನ್ನು ಗ್ರಾಹಕರಿಗೆ ಪರಿಚಯಿಸಿದೆ.

ನಥಿಂಗ್‌ 3 ಸಹ ಕಂಪನಿಯ ಟ್ರೆಡ್‌ ಮಾರ್ಕ್‌ ಟ್ರಾನ್ಸಪರೆನ್ಸಿಯನ್ನು ಹೊತ್ತು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ನಥಿಂಗ್‌ ಫೋನ್‌ ಹೆಚ್ಚಾಗಿ ಎರಡು ಬಣ್ಣಗಳಲ್ಲಿ ಬರುತ್ತದೆ. ಈ ಕಂಪನಿ ಈಗ ಮತ್ತೊಂದು ಬಣ್ಣದೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲದೆ ಮಿಡ್ಲ್‌ ರೇಂಜ್‌ನ್ನೇ ಟಾರ್ಗೆಟ್‌ ಮಾಡಿರುವ ಕಂಪನಿ, ಈ ಸೆಗ್ಮೆಂಟ್‌ನಲ್ಲಿ ತನ್ನ ಛಾಪು ಮೂಡಿಸಿವು ಕಾರ್ಯವನ್ನು ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

ನಥೀಂಗ್ 2ನಲ್ಲಿ ಏನಿದೆ?

ನಥಿಂಗ್‌ ಫೋನ್ 2 ನಲ್ಲಿ, ಕಂಪನಿಯು ಕ್ವಾಲ್‌ ಕಾಮ್‌ ಸ್ನ್ಯಾಪ್‌ ಡ್ರ್ಯಾಗನ್‌ 8+ ಜನರೇಶನ್‌ 1 ಎಸ್‌ಒಸಿ ಹೊಂದಿದೆ. ಅಲ್ಲದೆ, 45W ವೈರ್ಡ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಅಲ್ಲದೆ ಮೊಬೈಲ್‌ನಲ್ಲಿ 4,700mAh ಬ್ಯಾಟರಿಯನ್ನು ನೀಡಲಾಗಿದೆ. ಈ ಸ್ಮಾರ್ಟ್‌ ಫೋನ್‌ 6.7 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. 50-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ನೀಡಲಾಗಿದ್ದು. ಫ್ರಂಟ್ ಕ್ಯಾಮೆರಾ 32 ಮೆಗಾಪಿಕ್ಸೆಲ್ ಹೊಂದಿದೆ. ಈ ಫೋನ್ ಮೂರು ರೂಪಾಂತರದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+