• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Rapid Antibody ಟೆಸ್ಟಿಂಗ್ ಅಂದ್ರೇನು.? ಅದರ ಕಾರ್ಯ ವಿಧಾನ ಹೇಗೆ.?

|

ನವದೆಹಲಿ, ಏಪ್ರಿಲ್ 9: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಹೆಣಗಾಡುತ್ತಿದೆ. ವಿಶ್ವದಾದ್ಯಂತ 15 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, ಭಾರತದಲ್ಲಿ 5935 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ.

ಭಾರತದಲ್ಲಿ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಕೋವಿಡ್-19 ಗಾಗಿ ಹೊಸ ಪರೀಕ್ಷಾ ಮಾರ್ಗಸೂಚಿಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೊರಡಿಸಿದೆ.

ಸೂಪರ್ ಸುದ್ದಿ: ಎರಡು ದಿನಗಳಲ್ಲಿ ಕೊರೊನಾನ ಕೊಲ್ಲುತ್ತೆ ಈ ಔಷಧಿ.!

ಕೋವಿಡ್-19 ಹಾಟ್ ಸ್ಪಾಟ್ ಎಂದು ಗುರುತಿಸಿರುವ ಪ್ರದೇಶಗಳಲ್ಲಿ ವಾಸಿಸುವವರ ಮೇಲೆ Rapid Antibody ಟೆಸ್ಟಿಂಗ್ ಮಾಡಲು ಅವಕಾಶ ನೀಡಲಾಗಿದೆ. ಅಷ್ಟಕ್ಕೂ, ಈ Rapid Antibody ಟೆಸ್ಟಿಂಗ್ ಅಂದ್ರೇನು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...

ಪಿ.ಸಿ.ಆರ್ ಟೆಸ್ಟ್

ಪಿ.ಸಿ.ಆರ್ ಟೆಸ್ಟ್

ಪ್ರಸ್ತುತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪಿ.ಸಿ.ಆರ್ (Polymerase Chain Reaction) ಪರೀಕ್ಷಾ ಮಾದರಿಯನ್ನು ಅನುಸರಿಸುತ್ತಿದೆ. ಈ ಪರೀಕ್ಷಾ ಮಾದರಿಯಲ್ಲಿ ಗಂಟಲು ಅಥವಾ ಮೂಗಿನ ದ್ರವವನ್ನು ಪಡೆದು ಕೊರೊನಾ ವೈರಸ್ ಅನ್ನು ಪತ್ತೆಹಚ್ಚಬಹುದಾಗಿದೆ. ಇದೀಗ ಭಾರತದಲ್ಲಿರುವ ಕೋವಿಡ್-19 ಹಾಟ್ ಸ್ಪಾಟ್ ಗಳಲ್ಲಿ ವಾಸಿಸುವವರ ಮೇಲೆ Rapid Antibody ಟೆಸ್ಟಿಂಗ್ ಮಾಡಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತನ್ನ ಮಧ್ಯಂತರ ಸಲಹೆಯಲ್ಲಿ ಶಿಫಾರಸ್ಸು ಮಾಡಿದೆ.

ವ್ಯತ್ಯಾಸ ಏನು.?

ವ್ಯತ್ಯಾಸ ಏನು.?

ಗಂಟಲು ಅಥವಾ ಮೂಗಿನ ದ್ರವವನ್ನು ಪಡೆದು ಮಾಡಲಾಗುವ ಪಿ.ಸಿ.ಆರ್ ಪರೀಕ್ಷೆಯ ಫಲಿತಾಂಶ ಸಿಗಬೇಕು ಅಂದ್ರೆ 5-6 ಗಂಟೆ ಕಾಯಬೇಕು. ಆದ್ರೆ, Rapid Antibody ಟೆಸ್ಟಿಂಗ್ ಮೂಲಕ ಫಲಿತಾಂಶ ಬಹುಬೇಗ ಲಭ್ಯವಾಗಲಿದೆ. ರಕ್ತದ ಮಾದರಿಯನ್ನು ಪಡೆದು ಮಾಡಲಾಗುವ Rapid Antibody ಟೆಸ್ಟಿಂಗ್ ಫಲಿತಾಂಶ 15-30 ನಿಮಿಷಗಳ ಒಳಗೆ ಲಭಿಸುತ್ತದೆ.

ಬೆಚ್ಚಿ ಬೀಳಿಸುವ ಸಂಗತಿ ಬಾಯ್ಬಿಟ್ಟ ಏಮ್ಸ್ ನಿರ್ದೇಶಕ: ಸಮುದಾಯಕ್ಕೆ ಹಬ್ಬುತ್ತಿದೆ ಕೊರೊನಾ!

ಫಲಿತಾಂಶದ ನಿಖರತೆ.?

ಫಲಿತಾಂಶದ ನಿಖರತೆ.?

ಪಿ.ಸಿ.ಆರ್ ಟೆಸ್ಟ್ ನಿಂದ ಲಭ್ಯವಾಗುವ ಫಲಿತಾಂಶಕ್ಕೆ ಹೋಲಿಸಿದರೆ Rapid Antibody ಟೆಸ್ಟ್ ಗಳಿಂದ ಬರುವ ಫಲಿತಾಂಶ ನಿಖರವಾಗಿರುವುದಿಲ್ಲ. Rapid Antibody ಟೆಸ್ಟ್ ಗಳು ಫಾಲ್ಸ್ ಪಾಸಿಟಿವ್ ಗಿಂತ ಫಾಲ್ಸ್ ನೆಗೆಟಿವ್ ಹೆಚ್ಚಾಗಿ ತೋರಿಸುವ ಕಾರಣ, ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪಿ.ಸಿ.ಆರ್ ಟೆಸ್ಟ್ ಗಳನ್ನೇ ಶಿಫಾರಸ್ಸು ಮಾಡಿದೆ.

ಭಾರತದಲ್ಲಿ Rapid Antibody ಟೆಸ್ಟ್ ಮುಖ್ಯವೇ.?

ಭಾರತದಲ್ಲಿ Rapid Antibody ಟೆಸ್ಟ್ ಮುಖ್ಯವೇ.?

Rapid Antibody ಟೆಸ್ಟಿಂಗ್ ನಲ್ಲಿ ಫಲಿತಾಂಶ ವೇಗವಾಗಿ ಲಭ್ಯವಾಗುವುದರಿಂದ ಸೋಂಕಿತರನ್ನು ಬೇಗ ಪತ್ತೆಹಚ್ಚಲು ಸಹಕಾರಿಯಾಗುತ್ತದೆ. ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ Rapid Antibody ಟೆಸ್ಟಿಂಗ್ ಒದಗಿಸುವಂತೆ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ಒತ್ತಾಯಿಸಿದೆ ಎನ್ನಲಾಗಿದೆ.

ಖರೀದಿ ಮಾಡಿದ್ಯಾ ಭಾರತ.?

ಖರೀದಿ ಮಾಡಿದ್ಯಾ ಭಾರತ.?

ವರದಿಗಳ ಪ್ರಕಾರ, ಯು.ಎಸ್.ಎ, ಚೀನಾ ಮತ್ತು ದಕ್ಷಿಣ ಕೊರಿಯಾದಿಂದ ಸುಮಾರು ಐದು ಲಕ್ಷ Rapid Antibody ಟೆಸ್ಟಿಂಗ್ ಕಿಟ್ ಗಳನ್ನು ಭಾರತ ಖರೀದಿ ಮಾಡಿದ್ದು, ಅದರಲ್ಲಿ ಡಜನ್ ಗಟ್ಟಲೆ ಕಿಟ್ ಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಪ್ರೂವ್ ಮಾಡಿದ್ಯಂತೆ.

English summary
What is Rapid Antibody Test.? How does it help fighting Covid-19 in India.?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X