Walking 10,000 Steps: ದಿನಕ್ಕೆ 10 ಸಾವಿರ ಸ್ಟೆಪ್ಸ್ ವಾಕ್ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ?
ವಾಕಿಂಗ್ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು. ನಿರಂತವಾಗಿ ವಾಕಿಂಗ್ ಮಾಡುವವರ ವಯಸ್ಸು ಮಾಡದವರ ವಯಸ್ಸಿಗ್ಗಿಂತ ಎರಡು ವರ್ಷ ಹೆಚ್ಚುತ್ತದೆ ಎಂದು ಅಧ್ಯಯನ ವರದಿಗಳು ಹೇಳುತ್ತವೆ. ಈಗಂತೂ ಎಲ್ಲರಿಗೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರುವುದರಿಂದ ಪ್ರತಿಯೋಬ್ಬರು ಒಂದಿಲ್ಲ ಒಂದು ವ್ಯಾಯಾಮ ಮಾಡುತ್ತಲೇ ಇರುತ್ತಾರೆ.
ಹೆಚ್ಚು ಆಯಾಸದಾಯಕ ವಲ್ಲದ ವ್ಯಾಯಮವನ್ನು ಹೆಚ್ಚಾಗಿ ಜನ ಮೈಗೂಡಿಸಿಕೊಂಡಿರುತ್ತಾರೆ. ಇನ್ನು ಈಗ ವಾಕ್ ಮಾಡುವಾಗ ಜನ ತಾವು ಎಷ್ಟು ನಡೆದೆವು ಎಂಬುದನ್ನು ಲೆಕ್ಕಾಚಾರ ಹಾಕಿಕೊಳ್ಳಲು ಹಲುವ ಆಪ್ ಹಾಗೂ ರಿಸ್ಟ್ ವಾಚ್ ಬಳಸುತ್ತಾರೆ. ಇದರ ಸಹಾಯದಿಂದ ತಾವು ಒಂದು ದಿನಕ್ಕೆ ಎಷ್ಟು ದೂರ ವಾಕಿಂಗ್ ಮಾಡಿದೆವು ಎಂಬುದು ಅವರಿಗೆ ತಿಳಿಯುತ್ತದೆ. ಇನ್ನು ಈ ವಾಕಿಂಗ್ ದೂರವನ್ನು ಕ್ರಮೇಣ ಹೆಚ್ಚು ಮಾಡುತ್ತಲೇ ಹೋಗಬೇಕು. ಹೀಗೆ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಲಾಭ ಸಿಗುತ್ತದೆ.

ಹೆಚ್ಚಿನ ಜನ 10 ಸಾವಿರ ಸ್ಟೆಪ್ಸ್ ನಡೆಯಲು ಪ್ರಯತ್ನ ಪಡುತ್ತಾರೆ. 10 ಸಾವಿರ ಸ್ಟೆಪ್ಸ್ ನಡೆದಾಗ ಎಷ್ಟು ಕಿಲೋಮೀಟರ್ ಆಗುತ್ತದೆ ಎಂಬುದು ನಿಮ್ಮ ತೂಕ, ಎತ್ತರ ಹಾಗೂ ಇಡುವ ಹೆಜ್ಜೆಗಳ ಮೇಲೆ ಅವಲಂಬಿತವಾಗುತ್ತದೆ. 10 ಸಾವಿರ ಸ್ಟೆಪ್ಸ್ ವಾಕ್ ಮಾಡುವುದರಿಂದ ದೇಹದ ಮೇಲೆ ಆಗುವು ಪರಿಣಾಮಗಳೇನು ಎಂದು ತಿಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡಬಹುದು.
ವಾಕ್ ಮಾಡಿ ಉತ್ತಮ ದೇಹ ಹೊಂದಿ
ನಮ್ಮ ಪೂರ್ವಜರು ವಾಹನದ ಮೇಲೆ ಹೆಚ್ಚಿನ ಅವಲಂಬಿತರಾಗದೆ, ಕಾಲ್ನಡಿಗಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದರು. ಇದರಿಂದ ಅವರ ಆರೋಗ್ಯ ತುಂಬ ವರ್ಷಗಳ ವರೆಗೆ ಚೆನ್ನಾಗಿ ಇರುತ್ತಿತ್ತು. ಈಗಿನ ಜನ ಸಹ ಆ ಉಪಯೋಗವನ್ನು ಪಡೆಯಲು ದಿನಂಪ್ರತಿ ಪಾರ್ಕ್‌ಗಳಲ್ಲಿ ಬೆಳಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ಒಂದು ಗಂಟೆ ವಾಕ್ ಮಾಡುವುದನ್ನು ನಾವು ಕಾಣಬಹುದು. ಹಾಗಿದ್ದರೆ ಹತ್ತು ಸಾವಿರ ಸ್ಟೆಪ್ಸ್ ದಿನಕ್ಕೆ ನಡೆಯುವುದರಿಂದ ಏನೆಲ್ಲಾ ಲಾಭಗಾಳಗುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಕೊಬ್ಬು ಕರಗಿಸಲು ವ್ಯಾಯಾಮ ಸುಲಭ ವ್ಯಾಯಮ
ನಿಯಮಿತ ವಾಕ್ ಮಾಡುವುದರಿಂದ ಹೃದಯ ಸಂಬಂಧಿ ಫಿಟ್ನೆಸ್ ಅನ್ನು ಹೆಚ್ಚಿಸುತ್ತದೆ, ಸ್ನಾಯುವಿನ ಶಕ್ತಿ ಮತ್ತು ಸಹಿಷ್ಣುತೆ ಸುಧಾರಿಸುತ್ತದೆ ಮತ್ತು ಫಿಟ್ನೆಸ್ ಕಂಡೀಷನಿಂಗ್ ಅನ್ನು ಸುಧಾರಿಸುತ್ತದೆ. ಇದರಿಂದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ.
ತೂಕ ಇಳಿಸಲು ವಾಕಿಂಗ್ ಬೆಸ್ಟ್ ವ್ಯಾಯಾಮ. 10,000 ಹೆಜ್ಜೆಗಳನ್ನು ನಡೆಯುವುದರಿಂದ ನೀವು 300 ರಿಂದ 400 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಇದು ನಿಮ್ಮ ಕೊಬ್ಬನ್ನು ಸುಡುತ್ತದೆ ಮತ್ತು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವ ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮದುಮೇಹ ಬರದಂತೆ ತಡೆಯಲು ಸಹಾಯಕ
ದಿನವೂ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ಕೀಲುಗಳು ನೋವಿನಿಂದ ಪರಿಹಾರವನ್ನು ಪಡೆಯಬಹುದು. ತಜ್ಞರ ಪ್ರಕಾರ, ಈ ವ್ಯಾಯಾಮವು ಪ್ರತಿಯೊಂದು ವರ್ಗಕ್ಕೂ ಪ್ರಯೋಜನಕಾರಿಯಾಗಿದೆ. ನಿಮ್ಮ ಶಕ್ತಿಯ ಮಟ್ಟವನ್ನು ವೃದ್ಧಿಸಲು ವಾಕಿಂಗ್ ಸಹಾಯಕ. ಇದು ದೇಹದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ನಿಮ್ಮ ಮೆದುಳು ಮತ್ತು ಸ್ನಾಯುಗಳು ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುತ್ತವೆ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಬಯಸಿದರೆ ನಿಯಮಿತವಾಗಿ ವಾಕ್ ಮಾಡುವುದು ಬೆಸ್ಟ್. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ಇದು ನಿಮ್ಮ ದೇಹವು ರಕ್ತದಿಂದ ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಸರಿಸಲು ಸಹಾಯ ಮಾಡುತ್ತದೆ.
ವಾಕಿಂಗ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಚಯಾಪಚಯ ಕ್ರಿಯೇಯನ್ನು ಉತ್ತೇಜಿಸುತ್ತದೆ. ಇದು ಪೋಷಕಾಂಶಗಳ ಉತ್ತಮ ಹೀರಿಕೊಳ್ಳುವಿಕೆಗೆ ಕಾರಣವಾಗುತ್ತದೆ. ಊಟದ ನಂತರ ವಾಕ್ ಮಾಡುವುದು ತುಂಬ ಒಳ್ಳೆಯದು. ಇದು ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಾಕಿಂಗ್ ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ, ತ್ರಾಣವನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ಶಕ್ತಿಯನ್ನು ನೀಡುತ್ತದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications