ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಂದ ವೀಕೆಂಡ್‌ಗೆ ಒಂದು ದಿನದ ಟ್ರಿಪ್ ಹೋಗಬೇಕೆ..? ಸಮೀಪದ ಐದು ಸ್ಥಳಗಳ ಪಟ್ಟಿ ಇಲ್ಲಿದೆ

ವಾರಾಂತ್ಯದಲ್ಲಿ ಇರೋ ಒಂದೆರಡು ದಿನದಲ್ಲೇ ಇಲ್ಲೆ ಅಕ್ಕ ಪಕ್ಕ ಟ್ರೀಪ್ ಹೋಗಬೇಕು ಅಂತಿದ್ದಿರಾ..? ಹಾಗಿದ್ರೆ ಬೆಂಗಳುರಿನ ಸಮೀಪವೇ ಇರುವ ಐದು ಸ್ಥಳಗಳ ಬಗ್ಗೆ ತಿಳಿಸಿಕೊಡ್ತಿವಿ ಮುಂದೆ ಓದಿ.

|
Google Oneindia Kannada News

ಬೆಂಗಳೂರು, ಜನವರಿ. 27: ಸಿಲಿಕಾನ್ ಸಿಟಿಯಲ್ಲಿದ್ದು, ವಾರಾಂತ್ಯದಲ್ಲಿ ಹೊರಗೆ ಹೋಗಲು ಬಯಸುತ್ತಿದ್ದಿರಾ..? ಇರುವ ಒಂದೆರಡು ದಿನ ರಜೆಯಲ್ಲೆ ಸ್ವಲ್ಪ ದೂರದಲ್ಲಿರುವ ಒಂದು ದಿನದಲ್ಲಿ ಹೋಗಿ ಬರುಲು ಅಗುವ ಸ್ಥಳಗ ಆಯ್ಕೆಯಲ್ಲಿದ್ದರೆ ಇಲ್ಲಿದೆ ಪರಿಹಾರ.

ನೀವು ಪ್ರಕೃತಿ ಪ್ರಿಯರಾಗಿದ್ದು, ಬೆಂಗಳೂರಿನ ಟ್ರಾಫಿಕ್‌ನಿಂದ ತಪ್ಪಿಸಿಕೊಂಡು, ಇಲ್ಲಿ ಹತ್ತಿರದಲ್ಲಿರುವ ನೈಸರ್ಗಿಕ ಸೌಂದರ್ಯವನ್ನು ಸವಿಯುವ ಮನಸ್ಸಿದ್ದರೇ ಸಾಕು. ಉದ್ಯಾನನಗರಿಯ ಸುತ್ತಮುತ್ತಲಿನ ಅತ್ಯಂತ ರಮಣೀಯ ಸ್ಥಳಗಳ ಆಯ್ಕೆ ನಿಮ್ಮ ಮುಂದಿದೆ. ಐದು ಉತ್ತಮ ಸ್ಥಳಗಳ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.

Green Peas Health Benefits: ಚಳಿಗಾಲದಲ್ಲಿ ಹೇರಳವಾಗಿ ದೊರೆಯುವ ಹಸಿ ಬಟಾಣಿಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?Green Peas Health Benefits: ಚಳಿಗಾಲದಲ್ಲಿ ಹೇರಳವಾಗಿ ದೊರೆಯುವ ಹಸಿ ಬಟಾಣಿಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?

*ಸಾವನದುರ್ಗ ಬೆಟ್ಟ*

ಬೆಂಗಳೂರಿಗರ ನೆಚ್ಚಿನ ಟ್ರೆಕ್ಕಿಂಗ್ ತಾಣ, ಇದು ಅರ್ಕಾವತಿ ನದಿಗೆ ಸಮೀಪದಲ್ಲಿದೆ. ಈ ಏಕಶಿಲೆಯ ಬೆಟ್ಟವು ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದೆ . ನಿಮಗೆ ಬೆಟ್ಟ ಹತ್ತುವ ಉತ್ಸಾಹವಿದ್ದರೇ ಸಾಕು. ಪ್ರಕೃತಿ ಜೊತೆಗೆ ವೈವಿದ್ಯಮಯ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು. ಪಕ್ಷಿಗಳಳು, ರಣಹದ್ದುಗಳು, ಸೋಮಾರಿ ಕರಡಿಗಳು ಮತ್ತು ಕೆಲವೊಮ್ಮೆ ಚಿರತೆಗಳ ನೆಲೆಯಾಗಿರುವ ಈ ಸ್ಥಳ. ವಿಭಿನ್ನ ಅನುಭವ ನೀಡುವುದು ಖಚಿತ.

Want to go Road Trip Near Bengaluru, Here The Details

*ರಂಗನತಿಟ್ಟು ಪಕ್ಷಿಧಾಮ*

ಕಾವೇರಿ ನದಿಯ ದಡದಲ್ಲಿರುವ ಈ ಅಭಯಾರಣ್ಯವನ್ನು ಯುನೆಸ್ಕೋ 2022 ರಲ್ಲಿ ಸಂರಕ್ಷಿತ ರಾಮ್ಸಾರ್ ತಾಣವೆಂದು ಗೊತ್ತುಪಡಿಸಿದೆ. ಪ್ರಸಿದ್ಧ ಪಕ್ಷಿಶಾಸ್ತ್ರಜ್ಞ ಸಲೀಂ ಅಲಿ 1940 ರಲ್ಲಿ ಇದನ್ನು ಸಂರಕ್ಷಿತ ಸ್ಥಳವನ್ನಾಗಿ ಮಾಡಲು ರಾಜರಲ್ಲಿ ಮನವಿ ಮಾಡಿದ್ದರಯ. ನೀವು ಪಕ್ಷಿ ಪ್ರಿಯರಾಗಿದ್ದರೇ ಇಲ್ಲಿ ಹಲವಾರು ಅಪರೂಪದ ಮತ್ತು ಆಸಕ್ತಿದಾಯಕ ಪಕ್ಷಿಗಳನ್ನು ಕಾಣಬಹುದು. ಐತಿಹಾಸಿಕ ಪಟ್ಟಣವಾದ ಶ್ರೀರಂಗಪಟ್ಟಣದಿಂದ ಇದು ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ.

*ರಾಮನಗರ*

ಬೆಟ್ಟಗಳಿಂದ ಸುತ್ತುವರೆದಿರುವ ಹಲವಾರು ಪ್ರಸಿದ್ಧ ಬೆಟ್ಟಗಳ ತಾಣವಾಗಿರುವ ರಾಮನಗರ ಮತ್ತೊಂದು ಅದ್ಭುತ ಸ್ಥಳ. ಇನ್ನು ನೀವು ಸೂಪರ್‌ಹಿಟ್ ಬಾಲಿವುಡ್ ಸಿನಿಮಾ ಶೋಲೆಯ ಅಭಿಮಾನಿಯಾಗಿದ್ದರೆ ನೀವು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಏಕೆಂದರೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಇಲ್ಲೇ ಚಿತ್ರೀಕರಿಸಲಾಗಿದೆ. ಈ ಪ್ರದೇಶದಲ್ಲಿನ ಬೆರಗುಗೊಳಿಸುವ ರಾಮಗಿರಿ ಬೆಟ್ಟಗಳು, ಈಗ ಕೆಲವೊಮ್ಮೆ ಪ್ರೀತಿಯಿಂದ ಶೋಲೆ ಬೆಟ್ಟಗಳು ಎಂದು ಕರೆಯಲ್ಪಡುವ ಇವುಗಳು ಟ್ರೆಕ್ಕಿಂಗ್ ಮತ್ತು ಕ್ಲೈಂಬಿಂಗ್‌ಗೆ ಉತ್ತಮ ತಾಣಗಳಾಗಿವೆ. ಪ್ರಸಿದ್ಧ ಮೈಸೂರು ರೇಷ್ಮೆಯ ಮೂಲವಾಗಿರುವ ಇದನ್ನು ರೇಷ್ಮೇನಗರಿ ಎಂದು ಕರೆಯಲಾಗುತ್ತದೆ.

Want to go Road Trip Near Bengaluru, Here The Details

*ಅಂತರಗಂಗೆ*

ಬೆಂಗಳೂರಿನಿಂದ ಕೇವಲ 70 ಕಿಲೋಮೀಟರ್ ದೂರದಲ್ಲಿರುವ ಇದು ಜನಪ್ರಿಯ ಟ್ರೆಕ್ಕಿಂಗ್ ತಾಣವಾಗಿದೆ. ಅಂತರಗಂಗೆ ಬೆಟ್ಟವನ್ನು ದಕ್ಷಿಣ ಕಾಶಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ದೇವಾಲಯದಲ್ಲಿ ಬಸವನ ಬಾಯಿಯಿಂದ ನಿರಂತರವಾಗಿ ಹರಿಯುವ ನೆಲದಡಿಯ ನೀರು ಮೀರುವ ಒಂದು ಕೊಳ ಇದೆ. ಹಲವರು ದಕ್ಷಿಣ ಕಾಶಿ ಅಂತರಗಂಗೆಯಲ್ಲಿ ನೆಲೆಸಿರುವ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿಯನ್ನು ನೋಡಿ ದೇವರ ದರ್ಶನ ಪಡೆಯಲು ಬಂದರೆ, ಮತ್ತೊಂದಷ್ಟು ಜನರು ಇಲ್ಲಿರುವ ಪ್ರಕೃತಿ ಸೌಂದರ್ಯವನ್ನು ಸವಿದು, ಸುಂದರ ಬೆಟ್ಟಗುಡ್ಡಗಳ ನಡುವೆ ಒಂದಷ್ಟು ಕಾಲ ಕಳೆದು ಹೋಗುತ್ತಾರೆ. ಈ ಪರ್ವತದ ಸುತ್ತ ತೇರಹಳ್ಳಿ, ಪಾಪನಾಯಕನ ಹಳ್ಳಿ, ಕೆಂಚೇಗೌಡನ ಹಳ್ಳಿ ಮತ್ತು ಹಲವಾರು ಇತರದ ಏಳು ಹಳ್ಳಿಗಳಿವೆ.

*ಮಂಚನಬೆಲೆ ಅಣೆಕಟ್ಟು*

ಸುಂದರವಾದ ಅರ್ಕಾವತಿ ನದಿಯ ಮೇಲೆ ಮಂಚನಬೆಲೆ ಅಣೆಕಟ್ಟು ಇದೆ. ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇದನ್ನು ಮಂಚನಬೆಲೆ ಹಾಗು ಮಂಚಿನಬೆಲೆ ಎಂದು ಸಹ ಕರೆಯಲಾಗುತ್ತದೆ. ಬೆಂಗಳೂರಿಂದ 40 ಕಿಮೀ ದೂರವಿರುವ ಈ ಸ್ಥಳಕ್ಕೆ ಮಾಗಡಿ ರಸ್ತೆಯ ಮೂಲಕ ಹೋಗಬಹುದು. ಪಕ್ಷಿಗಳನ್ನು ನೋಡಲು ಬಯಸುವವರು ಮತ್ತು ಬೋಟಿಂಗ್ ಮಾಡಲು ಬಯಸುವವರಿಗೂ ಇದು ಸೂಕ್ತ ಸ್ಥಳ.

English summary
Weekend trips: 5 Road trips near Bengaluru for nature lovers. what you know about Savandurga Hills, Manchanabele Dam, Anthargange, Ramanagara, Ranganathittu Bird Sanctuary. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X