ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಆತಂಕಮಯ ರೀತಿಯಲ್ಲಿ ಒತ್ತಡವನ್ನು ಹೇರುವ ತಂತ್ರ

By ಡಾ. ಹೆಚ್.ಸಿ.ಮಹದೇವಪ್ಪ
|
Google Oneindia Kannada News

ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದು ಹಾಕುವುದಕ್ಕಾಗಿ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಕಾರ್ಡ್ ಅನ್ನು ಜೋಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಇದೊಂದು ಅಸಮರ್ಪಕ ಕ್ರಮವಾಗಿದೆ.

ಪ್ರಜಾಪ್ರಭುತ್ವವನ್ನು ನಿರ್ಧರಿಸುವ ಚುನಾವಣೆಯಲ್ಲಿ ಪಾಲ್ಗೊಳ್ಳಲು ಕಡ್ಡಾಯವಾಗಿರುವ ಮತದಾರರ ಗುರುತಿನ ಚೀಟಿಯ ವಿಷಯದಲ್ಲಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿರುವ ಸರ್ಕಾರವು ಚುನಾವಣಾ ವರ್ಷದಲ್ಲಿ ಆಧಾರ್ ಜೋಡಿಸಬೇಕೆಂಬ ಅಸಮರ್ಪಕ ಕೆಲಸಕ್ಕೆ ಕೈ ಹಾಕಿದ್ದು ಇದು ಪ್ರಜೆಯೊಬ್ಬರ ಸಂವಿಧಾನಾತ್ಮಕ ಹಕ್ಕಿನ ಸ್ಪಷ್ಟ ಉಲ್ಲಂಘನೆ ಆಗಿದೆ.

UMANG ಅಪ್ಲಿಕೇಶನ್‌ನಲ್ಲಿ ಈಗ 127 ಇಲಾಖೆಯ ಸರ್ಕಾರಿ ಸೌಲಭ್ಯಗಳು; ಹೇಗೆ ತಿಳಿಯಿರಿUMANG ಅಪ್ಲಿಕೇಶನ್‌ನಲ್ಲಿ ಈಗ 127 ಇಲಾಖೆಯ ಸರ್ಕಾರಿ ಸೌಲಭ್ಯಗಳು; ಹೇಗೆ ತಿಳಿಯಿರಿ

ವೋಟರ್ ಐಡಿಗೆ ಆಧಾರ್ ಜೋಡಿಸುವ ವಿಷಯದಲ್ಲಿ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರು ಜನ ಸಾಮಾನ್ಯರನ್ನು "ಆಧಾರ್ ಕಾರ್ಡ್ ಜೋಡಿಸುವುದು ಕಡ್ಡಾಯ ಮತ್ತು ಆಧಾರ್ ಕಾರ್ಡ್ ಜೋಡಿಸುವುದು ಐಚ್ಛಿಕ" ಎಂದು ಗೊಂದಲ ಮೂಡಿಸುತ್ತಿದ್ದಾರೆ.

Voter Card Linked With Aadhaar Card: Scientifically Not Correct, Said Dr. H C Mahadevappa

ಈ ಗೊಂದಲದಿಂದ ಎಷ್ಟೋ ಜನ "ನಮ್ಮ ಆಧಾರ್ ಜೋಡಣೆ ಆಗಿಲ್ಲ, ನಮಗೆ ಮತ ಹಾಕಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೂ ಬರುವಂತಹ ಸಾಧ್ಯತೆಯಿದ್ದು, ಇದು ಚುನಾವಣಾ ಪ್ರಕ್ರಿಯೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ".

ವೋಟರ್ ಐಡಿಯ ಜೊತೆಗೆ ಆಧಾರ್ ಕಾರ್ಡ್‌ನ್ನು ಜೋಡಿಸಬೇಕು ಎಂದು ಸರ್ಕಾರದವರು ಹೇಳುತ್ತಿದ್ದಾರೆಯೇ ವಿನಃ, ಆಧಾರ್ ಕಾರ್ಡ್ ಜೋಡಿಸದಿದ್ದರೆ ಏನಾಗುತ್ತದೆ ಎಂಬುದರ ಬಗ್ಗೆ ಜನರಿಗೆ ಹೇಳುತ್ತಿಲ್ಲ. ಹೀಗಾಗಿ ಇದು ಒಂದು ರೀತಿಯಲ್ಲಿ ಆತಂಕಮಯ ರೀತಿಯಲ್ಲಿ ಒತ್ತಡವನ್ನು ಹೇರುವ ತಂತ್ರವಾಗಿದೆ.

Voter Card Linked With Aadhaar Card: Scientifically Not Correct, Said Dr. H C Mahadevappa

ಆಧಾರ್ ಕಾರ್ಡ್ ವೋಟರ್ ಐಡಿಯಲ್ಲಿಯ ನಕಲಿ ಹೆಸರನ್ನು ತೆಗೆದು ಹಾಕುತ್ತದೆಯೇ? ವೋಟರ್ ಐಡಿಯಲ್ಲಿರುವ ನಕಲಿ ಹೆಸರನ್ನು ತೆಗೆದು ಹಾಕಲು ಆಧಾರ್ ಕಾರ್ಡ್ ಜೋಡಿಸಬೇಕು ಎಂದು ಹೇಳಲಾಗುತ್ತಿದೆ. ಆದರೆ ದುರಾದೃಷ್ಟವೆಂದರೆ ಕಳೆದ ಬಾರಿಯ ಮಹಾ ಲೆಕ್ಕ ಪರಿಶೋಧಕರ ವರದಿಯ ಪ್ರಕಾರ ಭಾರತದಲ್ಲಿ ಸುಮಾರು 5 ಲಕ್ಷದಷ್ಟು ನಕಲಿ ಆಧಾರ್ ಕಾರ್ಡ್ ಗಳು ಪತ್ತೆಯಾಗಿದೆ.

ಹೀಗಿರುವಾಗ ಯಾವ ಆಧಾರದ ಮೇಲೆ ವೋಟರ್ ಐಡಿಗೆ ಆಧಾರ್ ಕಾರ್ಡ್ ಅನ್ನು ಜೋಡಿಸಬೇಕು ಎಂದು ಸರ್ಕಾರ ಜನರಿಗೆ ಹೇಳುತ್ತಿದೆ?

English summary
Voter Card Linked With Aadhaar Card: Scientifically Not Correct, Said Dr. H C Mahadevappa. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X