Smartphone: ಪದೆ ಪದೆ ಫೋನ್ ಚೇಂಜ್ ಮಾಡುವ ಕಿರಿಕಿರಿಗೆ ಗುಡ್‌ಬೈ: ಭರ್ಜರಿ ಬ್ಯಾಟರಿ ವೈಶಿಷ್ಟ್ಯಗಳೊಂದಿಗೆ ಬರಲಿದೆ Vivo V30e
ಮಾರುಕಟ್ಟೆಗೆ ದಿನವೂ ಒಂದಿಲ್ಲಾ ಒಂದು ಕಂಪನಿಯ ಫೋನ್‌ಗಳು ಬಿಡುಗಡೆ ಮಾಡುತ್ತವೆ. ಕಂಪನಿಗಳು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ವಿವಿಧ ಬಗೆಯ ಫೋನ್‌ಗಳನ್ನು ಲಾಂಚ್ ಮಾಡುತ್ತಿರುತ್ತವೆ. ಬಜೆಟ್ ಫ್ರೆಂಡ್ಲಿ ಸೆಗ್ಮೆಂಟ್ ನಿಂದ, ಮಿಡ್ ಬಜೆಟ್, ಪ್ರೀಮಿಯಂ ರೇಂಜಿನ ಫೋನ್‌ಗಳು ಮಾರುಕಟ್ಟೆಯಲ್ಲಿ ದಿನವೂ ಧೂಳೆಬ್ಬಿಸುತ್ತವೆ. ಇದೇ ಸಾಲಿಗೆ ಸೇರಲು ಇನ್ನೊಂದು ಫೋನ್ ಬರಲಿದೆ.
ಫೋನ್ ಲಾಂಚ್ ಆಗುವ ಮುನ್ನವೇ ಅದರ ವಿಶಿಷ್ಠ್ಯತೆಗಳನ್ನು ತಿಳಿದು ಗ್ರಾಹಕರು ಈಗ ತಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ನ್ನು ತೆಗೆದುಕೊಳ್ಳಬೇಕು ಎಂಬುದನ್ನು ಡಿಸೈಡ್ ಮಾಡುತ್ತಾರೆ. ಅವರ ಅಗತ್ಯಕ್ಕೆ ತಕ್ಕಂತೆ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯಇರುತ್ತವೆ. ಈಗಂತೂ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಚೀನಾ ಕಂಪನಿಗಳು ಸಹ, ದಿನವೂ ಒಂದೊಂದು ಫೋನ್ ಬಿಡುಗಡೆ ಮಾಡುತ್ತವೆ. ಕಾಣಲು ಆಕರ್ಷಕವಾಗಿರುವ ಈ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ಸಹ ಬೇರೆ ಕಂಪನಿಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ. ಈಗ ಚೀನಾ ಮೂಲದ ವಿವೋ ಮತ್ತೊಂದು ಫೋನ್ ಬಿಡುಗಡೆ ಮಾಡಲು ಮುಹೂರ್ತ ಫೀಕ್ಸ್ ಮಾಡಿದೆ.

ಬ್ಯಾಟರಿ ಕಾರ್ಯಕ್ಷಮತೆ ಹೇಗಿರಲಿದೆ?
Vivo ನ ಹೊಸ ಸ್ಮಾರ್ಟ್‌ಫೋನ್ Vivo V30e ಬಿಡುಗಡೆಗೆ ಸಿದ್ಧವಾಗಿದೆ. ಫೋನ್ ಮುಂದಿನ ತಿಂಗಳು 2 ಮೇ 2024 ರಂದು ಮಾರುಕಟ್ಟೆಗೆ ಬರಲಿದೆ. ಈ ಸ್ಮಾರ್ಟ್‌ಫೋನ್ Vivo V29eನ ಅಪ್‌ಡೇಟ್ ವರ್ಷನ್ ಅಂದರೂ ತಪ್ಪಿಲ್ಲ. ಪ್ರಮುಖ ವಿಷಯವೆಂದರೆ ಫೋನ್ 4 ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯು ತಿಳಿಸಿದೆ. ಫೋನ್‌ನ ಬ್ಯಾಟರಿಯು 4 ವರ್ಷಗಳ ವರೆಗೆ ಉತ್ತಮವಾಗಿ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಫೋನ್ Snapdragon 6 Gen 1 ಪ್ರೊಸೆಸರ್ ಹೊಂದಿರಲಿದೆ. ಸ್ಮಾರ್ಟ್ ಫೋನ್‌ನಲ್ಲಿ 5500mAh ಬ್ಯಾಟರಿ ಬೆಂಬಲವನ್ನು ಹೊಂದಿರಲಿದೆ. ಈ ಫೋನ್ ಡಿಸ್ ಪ್ಲೇ ಕರ್ವ್ ಆಗಿರಲಿದೆ. ಫೋನ್‌ನ ಬ್ಯಾಟರಿ 4 ವರ್ಷಗಳವರೆಗೆ ಕೆಡುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.
ಡಿಸ್‌ಪ್ಲೇ ಹೇಗಿದೆ?
ವಿವೋ ವಿ 30 ಇ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಬರುತ್ತದೆ. ಫೋನ್ ಹಿಂಬಾಗದಲ್ಲಿ ಎರಡು ಕ್ಯಾಮೆರಾ ಹಾಗೂ ಫ್ಲ್ಯಾಶ್ ಲೈಟ್ ಸೌಲಭ್ಯವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿರಲಿದ್ದು, ಸೆಲ್ಫಿ ಹಾಗೂ ವಿಡಿಯೋಗಳಿಗಾಗಿ ಉತ್ತಮ ಮಟ್ಟದ ಕ್ಯಾಮೆರಾ ನೀಡಲಿದೆ. ಆಂಡ್ರಾಯ್ಡ್ 14 ಸಾಫ್ಟ್‌ವೇರ್ ನವೀಕರಣದೊಂದಿಗೆ ಬರುತ್ತದೆ. ಫೋನ್‌ನಲ್ಲಿ 8GB RAM ನ ಬೆಂಬಲವನ್ನು ಹೊಂದಿರಲಿದೆ. ವಿವೋ ವಿ 30 ಇ 6.78 ಇಂಚಿನ ಫುಲ್ ಎಚ್ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 120 Hz ರಿಫ್ರೆಶ್ ರೇಟ್ ಹೊಂದಿದೆ. ಈ ಫೋನಿಗೆ ಅಲ್ಲದೆ 2400 x1080 ಪಿಕ್ಸೆಲ್ ರೆಸಲ್ಯೂಶನ್ ನೀಡಲಾಗಿದೆ.

ಅಂದಾಜು ಬೆಲೆ ಎಷ್ಟು?
ಕಳೆದ ವರ್ಷ ರಿಲೀಸ್ ಆಗಿದ್ದ Vivo v29e ಸ್ಮಾರ್ಟ್‌ಫೋನ್ ಬೆಲೆ 25,999 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತ್ತು. ಈ ಫೋನಿನ್ ಅಪ್‌ಗ್ರೇಡ್ ವರ್ಷನ್‌ನ್ನು ಸಹ ಇದೇ ಬಜೆಟ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. Vivo V30e ಸ್ಮಾರ್ಟ್‌ಫೋನ್ ಮೇ 2 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಫೋನ್ ವೆಲ್ವೆಟ್ ರೆಡ್ ಮತ್ತು ಸಿಲ್ಕ್ ಬ್ಲೂ ಬಣ್ಣದಲ್ಲಿ ಬರಲಿದೆ.












Click it and Unblock the Notifications