Get Updates
Get notified of breaking news, exclusive insights, and must-see stories!

Vivo: ವಿವೋ ಕಂಪನಿಯ ಎರಡು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡಲು ತಯಾರಿ

ಭಾರತದ ಮೊಬೈಲ್‌ ಮಾರ್ಕೆಟ್‌ ಸೈಜ್‌ ಬೇರೆ ದೇಶಗಳಿಗೆ ಕಂಪೇರ್ ಮಾಡಿದರೆ ದೊಡ್ಡದಿದೆ. ನಮ್ಮ ದೇಶದ ಗ್ರಾಹಕರನ್ನು ಟಾರ್ಗೆಟ್‌ ಅದೆಷ್ಟೋ ಮೊಬೈಲ್‌ ಕಂಪನಿಗಳು ತಮ್ಮ ಪ್ರಡಕ್ಟ್‌ ಸೇಲ್‌ ಮಾಡುತ್ತವೆ. ಅದರಲ್ಲೂ ಇಲ್ಲಿನ ಯುವಕರನ್ನು ಗುರಿಯಾಗಿಸಿ ಹಲವು ಕಂಪನಿಯ ಮೊಬೈಲ್‌ಗಳು ಮಾರುಕಟ್ಟೆಗೆ ತಮ್ಮ ಫೋನ್‌ ಲಾಂಚ್‌ ಮಾಡುತ್ತವೆ. ಈ ಸಾಲಿನಲ್ಲಿ ಚೀನಾ ಮೂಲದ ಮೊಬೈಲ್‌ ಕಂಪನಿಗಳ ಪಾತ್ರವೂ ದೊಡ್ಡದಿದೆ.

ಚೀನಾ ಮೂಲದ ವಿವೋ ಸದ್ದಿಲ್ಲದೆ ವಿವೋ ಫೋನ್‌ ಲಾಂಚ್ ಮಾಡಿದೆ. ಬಜೆಟ್‌ ಫ್ರೆಂಡ್ಲಿ ಸೆಗ್ಮೆಟ್‌ನಲ್ಲಿ ಈ ಕಂಪಬಿ ಮತ್ತೆರಡು ಫೋನ್ ಲಾಂಚ್ ಮಾಡಿದೆ. Vivo S ಸರಣಿಯ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಸಖತ್‌ ಸ್ಟೈಲಿಶ್‌ ಆಗಿದ್ದು, ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತವೆ. ಇನ್ನು ವಿವೋ ತನ್ನ ಪ್ಲಿಪ್‌ ಫೋನ್‌ನ್ನು ಇನ್ನೆನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

Vivo Launches Mid-Budget S19 and S19 Pro Smartphones with 80W Fast Charging and 50MP Selfie Camera

ಈ ಫೋನಿನ ವೈಶಿಷ್ಟ್ಯಗಳೇನು?

Vivo S19 ಸರಣಿಯು ಸ್ಮಾರ್ಟ್‌ಫೋನ್‌ 6.78-ಇಂಚಿನ ಅಮ್ಲೋಡ್‌ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಹೊಂದಿದ್ದು, 4,500 nits ವರೆಗಿನ ಗರಿಷ್ಠ ಹೊಳಪನ್ನು ಹೊರ ಸೂಸುತ್ತದೆ. ಈ ಸರಣಿಯ ಪ್ರೊ ಫೋನ್‌ ಕರ್ವಡ್‌ ಡಿಸ್‌ಪ್ಲೇ ಹೊಂದಿದೆ. Vivo S19 ಕ್ವಾಲಕಂ ಸ್ನ್ಯಾಪ್‌ ಡ್ರ್ಯಾಗನ್‌ 7 ಜನರೇಷನ್‌ 3 ಪ್ರೊಸೆಸರ್ ಹೊಂದಿದ್ದರೆ, S19 Pro ಮೀಡಿಯಾ ಟೆಕ್ ಡೈಮೆನ್ಸಿಟಿ 9200+ ಹೊಂದಿದೆ.

ಎಷ್ಟು mAh ಬ್ಯಾಟರಿ ನೀಡಲಾಗಿದೆ?

Vivo S19 6000mAh ನ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿದ್ದು, S19 Pro 5,500mAh ಬ್ಯಾಟರಿಯನ್ನು ಹೊಂದಿರುತ್ತದೆ. ಫೋನ್ 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದೆ. ಈ ಎರಡೂ ಫೋನ್‌ಗಳಿಗೆ ಐಪಿ ರೇಟಿಂಗ್ ನೀಡಲಾಗಿದೆ. S19 IP64 ರೇಟಿಂಗ್ ಅನ್ನು ಹೊಂದಿದೆ, ಆದರೆ S19 Pro IP68 ಮತ್ತು IP69K ರೇಟಿಂಗ್ ಅನ್ನು ಹೊಂದಿದೆ.

ಕ್ಯಾಮೆರಾ ಹೇಗಿದೆ?

Vivo ನ ಈ ಎರಡೂ ಫೋನ್‌ಗಳ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಇವುಗಳು ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಇದ್ದು, ಸೆಕಂಡರಿ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಹೊಂದಿರುತ್ತದೆ. ಇದು ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 50MP ಕ್ಯಾಮೆರಾವನ್ನು ಹೊಂದಿದೆ. ಈ ಎರಡೂ ಫೋನ್‌ಗಳು Android 14 ತಂತ್ರಜ್ಞಾನವನ್ನು ಬೆಂಬಲಿಸುತ್ತವೆ.

ಈ ಫೋನಿನ ಬೆಲೆ ಎಷ್ಟು?

ಈಗ ಮಾರುಕಟ್ಟೆಗೆ ಬಿಡುಗಡೆ ಆಗಿರುವ ವಿವೋ ಎಸ್‌ ಸರಣಿಯ ಫೋನ್‌ಗಳಿಗೆ, Vivo S19 ಮತ್ತು Vivo S19 Pro ಎಂದು ಹೆಸರಿಡಲಾಗಿದೆ. ಈ ಫೋನ್‌ಗಳು ನಾಲ್ಕು ರೂಪಾಂತರಗಳಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆಯಲಿದೆ. Vivo S19 ಫೋನ್‌ಗಳ ಆರಂಭಿಕ ಬೆಲೆ 28 ಸಾವಿರದಿಂದ ಆರಂಭವಾಗಿ, 38 ಸಾವಿರದ ವರೆಗೆ ಇದೆ. ಈ ಫೋನ್‌ಗಳು 8GB RAM + 256GB, 12GB RAM + 256GB, 16GB RAM + 256GB ಮತ್ತು 16GB RAM + 512GBನಲ್ಲಿ ಲಭ್ಯ

Vivo S19 Pro ಮೂರು ರೂಪಾಂತರಗಳ ಫೋನಿನ ಆರಂಭಿಕ ಬೆಲೆ 38,600 ರಿಂದ ಪ್ರಾರಭವಾಗಿ 47 ಸಾವಿರದ ವರೆಗೆ ಲಭ್ಯ ಈ ಎರಡೂ ಫೋನ್‌ಗಳು ಮೂರು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+