Get Updates
Get notified of breaking news, exclusive insights, and must-see stories!

Bengaluru in 2024: ಹೊಸ ವರ್ಷದ ಆಚರಣೆ ಮಾಡಲು ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ನೀಡಿ...

ಹೊಸ ವರ್ಷ ಬಂತು. ಬಹುತೇಕ ಜನ 2024 ಅನ್ನು ಬರ ಮಾಡಿಕೊಳ್ಳಲು ಭರ್ಜರಿ ತಯಾರಿ ಮಾಡ್ತಾಯಿದ್ದಾರೆ. ವಿದೇಶ ಪ್ರವಾಸ, ಸ್ನೇಹಿತರೊಂದಿಗೆ ಔಟಿಂಗ್, ಗೆಟ್ ಟು ಗೆದರ್, ಪಾರ್ಟಿ, ಫಂಕ್ಷನ್, ಪಬ್, ಕ್ಲಬ್ ಅಂತ ನಾನಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೊಸ ವರ್ಷವನ್ನು ಸಂತೋಷದಿಂದ ಬರ ಮಾಡಿಕೊಳ್ಳಲು ಕಾತುರದಿಂದ ಕಾಯ್ತಾಯಿದ್ದಾರೆ. ಆದರೆ ಕೆಲವರಿಗೆ ಕೆಲ ಸ್ಥಳಗಳಿಗೆ ಹೋಗಲು ಈ ಸಂದರ್ಭದಲ್ಲಿ ಸಾಧ್ಯವಾಗಿಲ್ಲದೇ ಇರಬಹುದು.

ಹೊಸ ವರ್ಷವನ್ನು ಮನೆಯಲ್ಲೇ ಕುಳಿತು ಯಾವುದೇ ಆಚರಣೆ ಇಲ್ಲದೆ ಬರಮಾಡಿಕೊಳ್ಳಲು ಕೊಂಚ ಬೇಸರ ತರಬಹುದು. ಹೊಸ ವರ್ಷದ ಆಚರಣೆ ಮಾಡಲು ಮನಸ್ಸಿದ್ದರೆ ಕೆಲ ಸ್ಥಳಗಳಿಗೆ ಹೋಗಬಹುದು. ಅಂತಹ ಬೆಂಗಳೂರಿನ ಕೆಲ ಸ್ಥಳಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಅವುಗಳ ಬಗ್ಗೆ ಸದ್ಯ ತಿಳಿಯೋಣ.

Visit these places in Bengaluru to celebrate New Year

ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆಯನ್ನು ಕ್ರಿಸ್ಮಸ್‌ನಿಂದಲೇ ಆರಂಭಿಸಲಾಗುತ್ತದೆ. ಬೆಂಗಳೂರಿನ ಪ್ರಮುಖ ಬೀದಿಗಳು ಹೊಸ ವರ್ಷದ ಆಚರಣೆಗೆ ಈಗಾಗಲೇ ಸಿದ್ಧವಾಗಿವೆ. ನಗರದ ಕೆಲ ಪ್ರಮುಖ ಸ್ಥಳಗಳಲ್ಲಿ ಜನ ಒಟ್ಟಾಗಿ ಸೇರಿ ಹೊಸ ವರ್ಷವನ್ನು ಸಂಭ್ರಮಿಸುವ ಮೂಲಕ ಬರಮಾಡಿಕೊಳ್ಳುತ್ತಾರೆ. ಕೆಲವೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹಾಗಾದರೆ ಬೆಂಗಳೂರಿನ ಯಾವ ಸ್ಥಳಗಳಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸಬಹುದು. ಇಲ್ಲಿದೆ ಮಾಹಿತಿ.

ಹೊಸ ವರ್ಷಕ್ಕೆ ಬೆಂಗಳೂರಿನ ಈ ಸ್ಥಳಗಳಿಗೆ ಭೇಟಿ ನೀಡಿ: -

1.ಎಂಜಿ ರೋಡ್:

ಮಹತ್ಮಾ ಗಾಂಧಿ ರಸ್ತೆ ಬೆಂಗಳೂರಿನಲ್ಲಿ ಹೊಸ ವರ್ಷದಂದು ಹೊಸದಾಗಿ ಕಾಣಿಸುವ ಪ್ರಮುಖ ಸ್ಥಳ. ಬಹುತೇಕ ಜನ ಹೊಸ ವರ್ಷವನ್ನು ಇಲ್ಲಿ ಆಚರಿಸಲು ಬಯಸುತ್ತಾರೆ. ಇಲ್ಲಿನ ಬೀದಿಗಳು ದೀಪಾಲಂಕಾರಗೊಂಡಿರುತ್ತವೆ. ಮಧ್ಯ ರಾತ್ರಿವರೆಗೂ ಈ ಸ್ಥಳದಲ್ಲಿ ಜನ ಸಾಗರವೇ ನೆರೆದಿರುತ್ತದೆ. ಹೊಸ ವರ್ಷದ ಆಚರಣೆ ಜನವರಿ ಹಿಂದಿನ ರಾತ್ರಿ 12 ಗಂಟೆಗೆ ಶುರುವಾಗುತ್ತದೆ. ಅದಾಗ್ಯೂ ಅಲ್ಲಿನ ಹೊಸ ವರ್ಷದ ಆಚರಣೆಯನ್ನು ಕಣ್ತುಂಬಿಕೊಳ್ಳಲು ಬೇಗ ಹೋಗಿ ನೋಡಿಕೊಂಡು ಬರಬಹುದು.

Visit these places in Bengaluru to celebrate New Year

2. ಚರ್ಚ್ ಸ್ಟ್ರೀಟ್:

ಚರ್ಚ್ ಸ್ಟ್ರೀಟ್ಸ್‍ನಲ್ಲಿ ಹೊಸ ವರ್ಷದ ಆಚರಣೆಯನ್ನು ಕಣ್ತುಂಬಿಕೊಳ್ಳಬಹುದು. ಬಗೆ ಬಗೆಯ ಲೈಟ್ಸ್‌ಗಳು ಕಂಗೊಳಿಸುವ ಅಂಗಡಿ ಮುಗ್ಗಟ್ಟುಗಳನ್ನು ಕಾಣಬಹುದು. ನಿತ್ಯ ನೂರಾರು ಜನ ಭೇಟಿ ನೀಡುವ ಈ ಪ್ರಮುಖ ಬೀದಿಗಳಲ್ಲಿ ವಿಶೇಷ ದಿನಗಳಲ್ಲಿ ಪ್ರಮುಖವಾಗಿ ಹೊಸ ವರ್ಷದಲ್ಲಿ ನೂರಾರು ಜನ ಸೇರಿರುತ್ತಾರೆ. ಪಬ್, ಕ್ಲಬ್‌ ಹೆಚ್ಚಾಗಿರುವ ಈ ಸ್ಥಳದಲ್ಲಿ ಹಾಡು ಕುಣಿತವೂ ಇರುತ್ತದೆ. ಬೀದಿಗಳಲ್ಲಿ ಸೌಂಡ್‌ ಸ್ಪೀಕರ್ ಅಳವಡಿಸಲಾಗಿರುತ್ತದೆ. ವಿದೇಶದಿಂದಲೂ ಈ ಸ್ಥಳಕ್ಕೆ ಜನ ಭೇಟಿ ನೀಡಿರುತ್ತಾರೆ.

3. ಬ್ರಿಗೇಡ್:

ಎಂಜಿ ರೋಡ್, ಚರ್ಚ್ ಸ್ಟ್ರೀಟ್ಸ್ ನಂತೆ ಬ್ರಿಗೇಟ್ ರಸ್ತೆಯಲ್ಲೂ ಹೊಸ ವರ್ಷದಲ್ಲಿ ಮಾಯಾಲೋಕವೇ ಸೃಷ್ಟಿಯಾಗಿರುತ್ತದೆ. ಜನ ಸಂಖ್ಯೆ ಹೆಚ್ಚಾಗಿರುವ ಈ ಸ್ಥಳದಲ್ಲಿ ಶಾಪಿಂಗ್ ಮಳಿಗೆಗಳು ಹೆಚ್ಚು. ಹೊಸ ವರ್ಷವನ್ನು ಇಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಕ್ರಿಸ್ಮಸ್‌ನಿಂದಲೇ ಇಲ್ಲಿನ ರಸ್ತೆಗಳನ್ನು ಅಲಂಕರಿಸಲಾಗಿರುತ್ತದೆ. ರಾತ್ರಿ ಒಂಬತ್ತು ಗಂಟೆಯ ನಂತರ ಇಲ್ಲಿ ಹೆಚ್ಚಿನ ಜನ ಸೇರುತ್ತಾರೆ. ಸಾರ್ವಜನಿಕವಾಗಿ ಹಾಡು ಕುಣಿತ ಇವೆಲ್ಲವೂ ಇರುವುದರಿಂದ ಜನ ತಮ್ಮವರೊಂದಿಗೆ, ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಾರೆ. ಇನ್ನೂ ಜನವರಿ ಒಂದಕ್ಕೆ ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಬಹುದು.

4. ವಿಧಾನಸೌಧ:

ಹೊಸ ವರ್ಷದಂದು ವಿಧಾನಸೌಧ ಲೈಟಿಂಗ್ ನಿಂದ ಕಂಗೊಳಿಸುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ನೀವು ನಿಮ್ಮ ಕುಟುಂಬಸ್ಥರೊಂದಿಗೆ ಸಂಜೆ ಹೊತ್ತು ಭೇಟಿ ನೀಡಬಹುದು. ಇಲ್ಲಿ ನೀವು ಫೋಟೋ ಶೂಟ್ ಕೂಡ ಮಾಡಬಹುದು. ಅದಕ್ಕೂ ಮುನ್ನ ವಿಧಾನಸೌಧ ಪಕ್ಕದಲ್ಲಿ ಇರುವ ಕಬ್ಬನ್‌ ಪಾರ್ಕ್‌ಗೂ ಭೇಟಿ ನೀಡಬಹುದು.

5. ಬನ್ನೇರ್‌ಘಟ್ಟ, ನಂದಿ ಬೆಟ್ಟ

ಇನ್ನೂ ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರೊಂದಿಗೆ ಕಾಲ ಕಳೆಯಲು ಬನ್ನೇರ್‌ಘಟ್ಟಕ್ಕೆ ಹೋಗಬಹುದು. ಅವರ ಸಂತೋಷದಲ್ಲಿ ನಿಮ್ಮ ಖುಷಿಯನ್ನು ಕಾಣಬಹುದು. ಜೊತೆಗೆ ನಂದಿ ಬೆಟ್ಟಕ್ಕೂ ಈ ದಿನ ಭೇಟಿ ನೀಡುವ ಮೂಲಕ ನೀವು ನಿಮ್ಮವರೊಂದಿಗೆ ಕಾಲ ಕಳೆಯಬಹುದು.

6. ಮಾಲ್‌ಗಳು

ಇದಲ್ಲದೆ ಬೆಂಗಳೂರಿನ ಮಂತ್ರಿ ಮಾಲ್ ಹಾಗೂ ಓರಾಯನ್, ಸೆಟ್ರಲ್ ಮಾಲ್ ಇನ್ನಿತರ ಮಾಲ್‌ಗಳಲ್ಲಿ ಹೊಸ ವರ್ಷಕ್ಕಾಗಿನೇ ಕೆಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಮಾಲ್‌ಗಳಲ್ಲಿ ಮಾತ್ರವಲ್ಲದೆ ವಿಠಲ್‌ಮಲ್ಯ ರಸ್ತೆ (ಯುಬಿಸಿಟಿ ರಸ್ತೆ), ಇನ್ನಿತರ ಮೈದಾನಗಳಲ್ಲಿ, ಹಾಸ್ಯ ಕಾರ್ಯಕ್ರಮಗಳು ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಇಂತಹ ಸ್ಥಳಗಳಿಗೆ ನೀವು ಸೇಫ್ ಆಗಿ ಹೋಗಿ ಹೊಸ ವರ್ಷವನ್ನು ಎಂಜಾಯ್ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+