ಅಂತರಾಷ್ಟ್ರೀಯ ಬಾಹ್ಯಾಕಾಶ ನೌಕೆಯಲ್ಲಿ ತೇಲುತ್ತಿರುವ ಫಿಜ್ಜಾ ಸವಿದು ಸಂಭ್ರಮಿಸಿದ ಗಗನಯಾತ್ರಿಗಳು!
ನವದೆಹಲಿ, ಆಗಸ್ಟ್ 30: ಭೂಮಿಯಲ್ಲಿ ಅದೆಷ್ಟೋ ಮಂದಿ ಫಿಜ್ಜಾವನ್ನು ಸವಿದು ಸಂಭ್ರಮಿಸುತ್ತಾರೆ, ಪಾರ್ಟಿ ಮಾಡುತ್ತಾರೆ. ಆದರೆ ವಿಡಿಯೋವೊಂದು ಬಾಹ್ಯಾಕಾಶದಲ್ಲಿ ತೇಲುತ್ತಿರುವ ಫಿಜ್ಜಾ ತಿನ್ನುವುದನ್ನು ತೋರಿಸಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನೌಕೆಯಲ್ಲಿ ತೇಲುತ್ತಿರುವ ಫಿಜ್ಜಾವನ್ನು ಸವಿದು ಗಗನಯಾತ್ರಿಗಳು ಸಂಭ್ರಮಿಸಿದ್ದಾರೆ.
ಬಾಹ್ಯಾಕಾಶ ಪ್ರವಾಸೋದ್ಯಮವು ಇತ್ತೀಚೆಗೆ ಅಧಿಕ ಜನರ ಗಮನ ಸೆಳೆಯುತ್ತಿದೆ. ಈ ಬಾಹ್ಯಾಕಾಶ ಪ್ರವಾಸವು ಆವಿಷ್ಕಾರದ ರೋಮಾಂಚನವನ್ನು ಮತ್ತು ಉತ್ಸಾಹವನ್ನು ಮೂಡಿಸುತ್ತದೆ. ಆದರೆ ಈ ಬಾಹ್ಯಾಕಾಶ ಪ್ರವಾಸವು ಹಲವಾರು ಸವಾಲುಗಳನ್ನು ಕೂಡಾ ಹೊಂದಿದೆ. ನಮ್ಮ ಜೀವ ರಕ್ಷಣೆಯ ಭಯದ ಜೊತೆಗೆ, ನಮಗೆ ಕಡಿಮೆ ಆಹಾರ ಸಂಗ್ರಹ ಮಾಡಲಾಗುವುದ ಕೂಡಾ ಒಂದು ಸವಾಲು. ಈ ನಡುವೆ ಗಗನ ಯಾತ್ರಿಗಳ ಒಂದು ಗುಂಪು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತೇಲುತ್ತಿರುವ ಫಿಜ್ಜಾವನ್ನು ತಿನ್ನುತ್ತಾ ಸಂಭ್ರಮಿಸಿದೆ.
ಗಗನಯಾತ್ರಿ ಥಾಮಸ್ ಪೆಸ್ಕೆಟ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ಒಂದು ನಿಮಿಷದ ವಿಡಿಯೋದಲ್ಲಿ, ಆರು ಜನರನ್ನು ಒಳಗೊಂಡ ಗಗನಯಾತ್ರಿಗಳ ಗುಂಪು ಅಂತರಾಷ್ಟ್ರೀಯ ಬಾಹ್ಯಾಕಾಶ ನೌಕೆಯ ಒಳಗೆ ತೇಲುತ್ತಿರುವ ಫಿಜ್ಜಾವನ್ನು ತಿನ್ನುತ್ತಿರುವುದನ್ನು ತೋರಿಸಿದೆ. ಹಾಗೆಯೇ ಬಾಹ್ಯಾಕಾಶ ನೌಕೆಯಲ್ಲಿ ತಮ್ಮಲ್ಲಿ ಇರುವ ನಿಯಮಿತ ವಸ್ತುಗಳನ್ನು ಮಾತ್ರ ಬಳಸಿಕೊಂಡು ಈ ಆರು ಗಗನಯಾತ್ರಿಗಳು ಫಿಜ್ಜಾವನ್ನು ತಯಾರಿ ಮಾಡುತ್ತಿರುವುದನ್ನು ಕೂಡಾ ಈ ವಿಡಿಯೋವು ತೋರಿಸಿದೆ.

"ಸ್ನೇಹಿತರೊಂದಿಗೆ ತೇಲುತ್ತಿರುವ ಫಿಜ್ಜಾ ರಾತ್ರಿಗಳು, ಇದು ಭೂಮಿಯಲ್ಲಿ ಶನಿವಾರ ಕಳೆದಂತೆ ಭಾಸವಾಯಿತು. ಉತ್ತಮ ಅಡುಗೆಗಾರ ತನ್ನ ಅಡುಗೆಯ ಗುಟ್ಟನ್ನು ಎಂದಿಗೂ ಹೇಳುವುದಿಲ್ಲ ಎಂದು ಹೇಳುತ್ತಾರೆ. ಆದರೆ ನಾನು ಮಾಡಿರುವ ವಿಡಿಯೋದಲ್ಲಿ ನೀವು ಯಾರು ಉತ್ತಮ ಫಿಜ್ಜಾ ಮಾಡಿದ್ದಾರೆ ಎಂದು ಹೇಳಬಹುದು. ಆದರೆ ಫಿಜ್ಜಾದಲ್ಲಿ ಮಾತ್ರ ಅನಾನಸ್ ಹಣ್ಣು ಬಳಕೆ ಇಟಲಿಯಲ್ಲಿ ಗಂಭೀರವಾದ ಅಪರಾಧ," ಎಂದು ತಮಾಷೆಯಾಗಿ ಗಗನಯಾತ್ರಿ ಥಾಮಸ್ ಪೆಸ್ಕೆಟ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ ಈ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.
ಈ ವಿಡಿಯೋವು ವೈರಲ್ ಆಗಿದ್ದು ಸುಮಾರು 702,819 ಜನರು ವೀಕ್ಷಣೆ ಮಾಡಿದ್ದಾರೆ. ಹಾಗೆಯೇ 137,977 ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಈ ವಿಡಿಯೋವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ ಹಾಗೂ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ಗುರುತ್ವಾಕರ್ಷಣೆಯು, ಅಸಮಾನ್ಯ" ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ನೆಟ್ಟಿಗರು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ಫಿಜ್ಜಾ ಮೇಲೆ ಕೆಳಗೆ ಆದಾಗ ಅದರ ಮೇಲೆ ಹಾಕಿದ ಟಾಪಿಂಗ್‌ಗಳು ಮಾತ್ರ ಹೇಗೆ ಹಾಗೆಯೇ ಫಿಜ್ಜಾದ ಮೇಲೆ ಉಳಿದುಕೊಳ್ಳುತ್ತಿದೆ? ಇದು ನಿಗೂಢ," ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. "ಬಾಹ್ಯಾಕಾಶದಲ್ಲಿ ಫಿಜ್ಜಾ, ತುಂಬಾ ಅದ್ಭುತವಾಗಿದೆ. ಬಾಹ್ಯಾಕಾಶದಲ್ಲಿ ಫಿಜ್ಜಾ ಮಾಡುವ ಚಾಲೆಂಜ್‌ಗಳು ಕೂಡಾ ಬರಬಹುದು. ಇದನ್ನು ನೋಡುವುದು ಸಂತೋಷವಾಗಿದೆ," ಎಂದು ಇನ್ನೋರ್ವ ನೆಟ್ಟಿಗರು ಹೇಳಿದ್ದಾರೆ.
ರಿಚರ್ಡ್ ಬ್ರಾನ್ಸನ್ ಸಿಬ್ಬಂದಿಯೊಂದಿಗೆ ಬಾಹ್ಯಾಕಾಶದ ಅಂಚಿಗೆ ಹಾರಿದ ಒಂಬತ್ತು ದಿನಗಳ ನಂತರ, ಪ್ರವಾಸಿಗರು ಬಾಹ್ಯಾಕಾಶ ಪ್ರವಾಸೋದ್ಯಮದ ಹೊಸ ಯುಗವನ್ನು ಘೋಷಿಸಿದ್ದರು. ಜೆಫ್ ಬೆಜೋಸ್ ಕೂಡಾ ಈ ಪ್ರವಾಸೋದ್ಯಮಕ್ಕೆ ಸೇರಿದ್ದಾರೆ. ಈಗ ಬಾಹ್ಯಾಕಾಶ ಪ್ರವಾಸೋದ್ಯಮವು ಭಾರೀ ಚರ್ಚೆಯಲ್ಲಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications