Viral of Osama Bin Lager: ಕುಖ್ಯಾತ ಉಗ್ರನ ಹೆಸರಿನ ಬಿಯರ್‌ಗೆ ಭಾರೀ ಕ್ರೇಜ್-ಬೇಡಿಕೆ
ಕುಕೃತ್ಯಗಳ ಮೂಲಕ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ಭಯೋತ್ಪಾದಕ ನಾಯಕರಲ್ಲಿ ಒಬ್ಬನಾಗಿದ್ದ 'ಒಸಾಮಾ ಬಿನ್ ಲಾಡೆನ್' ಹೆಸರಿನ ಬಿಯರ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಬಿಯರ್‌ಗೂ ಬೇಡಿಕೆಯು ಹೆಚ್ಚಾಗುತ್ತಿದೆ. ಇದಕ್ಕೆ ವ್ಯಾಪಕ ವಿರೋಧವು ಕೇಳಿ ಬಂದಿದೆ.
ಒಬ್ಬ ಭಯೋತ್ಪಾದಕ ಹೆಸರಿನ ಬೀಯರ್ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಮತ್ತು ಉತ್ಪಾದಿಸುತ್ತಿರುವ Mitchell Brewing Co. ಉದ್ಯೋಗಿಗಳಿಗೆ ದೂರವಾಣಿ ಸಂಪರ್ಕ ಕಡಿತಗೊಳಿಸುವಂತೆ ಆಗ್ರಹ ಕೇಳಿ ಬಂದಿದೆ. ಅವರಿಗೆ ಸಂಬಂಧಿಸಿದ ವೆಬ್‌ಸೈಟ್ ಅನ್ನು ಸ್ಥಗಿತಗೊಳಿಸಲು ಒತ್ತಾಯಿಸಿದ್ದಾರೆ.

ಸದ್ಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹೆಸರಿನ 'ಒಸಾಮಾ ಬಿನ್ ಲಾಗರ್' (Osama Bin Lager) ಬಿಯರ್ ಪೋಟೋಗಳು ವೈರಲ್ ಆಗಿದೆ. ಇದು ಯುನೈಟೆಡ್ ಕಿಂಗ್‌ಡಮ್ ಈ ಬಿಯರ್ ಉತ್ಪಾದಿಸಲಾಗಿದೆ ಎಂದು BBC ಸಂಸ್ಥೆ ವರದಿ ಮಾಡಿದೆ.
ಇದು ರಿಫ್ರೆಶರ್ ಲಾಗರ್ ಎಂದ ಕಂಪನಿ
ಉತ್ಪಾದಕ ಮಿಚೆಲ್ ಬ್ರೇವಿಂಗ್ ಕೋ. ಕಂಪನಿಯು ತನ್ನ ವೆಬ್‌ಸೈಟ್ ನಲ್ಲಿ ಈ ಬಿಯರ್ ಒಂದು ಅತ್ಯಂತ ಜನಪ್ರಿಯ ಉತ್ಪಾದನೆ ಹಾಗೂ ಸಿಟ್ರಸ್ ರುಚಿಯೊಂದಿಗೆ ನಿಮಗೆ ರಿಫ್ರೆಶ್ ಲಾಗರ್ ಆಗಿದೆ. ಈ ಬಿಯರ್ ಲೇಬಲ್ 2011 ರಲ್ಲಿ ಕೊಲ್ಲಲ್ಪಟ್ಟ ಅಲ್ ಖೈದಾ ನಾಯಕನ ಕಾರ್ಟೂನ್ ವ್ಯಂಗ್ಯಚಿತ್ರವನ್ನು ಪ್ರದರ್ಶಿಸುತ್ತದೆ ಎಂದು ಮಾಹಿತಿ ನೀಡಿದೆ.
ಲಾಗರ್ ಬಿಯರ್ ಮಾರಾಟದ ಈ ದಂಪತಿಗಳು ಬ್ರೂವರಿ ಮತ್ತು ಪಬ್ ನಡೆಸುವ ಜೊತೆಗೆ ಬಿಲ್ಲಿಂಗ್‌ಹೇ, ಲಿಂಕನ್‌ಶೈರ್ ಆಧಾರತ ಕಿಮ್ ಜೊಂಗ್ ಅಲೆ ಮತ್ತು ಪುಟಿನ್ ಅವರ ಪೋರ್ಟರ್ ಅನ್ನು ಸಹ ಮಾಡುತ್ತದೆ. ಈ ಬಗ್ಗೆ ಸ್ವತಃ ಮಾಲೀಕರಾದ ಲ್ಯೂಕ್ ಮತ್ತು ಕ್ಯಾಥರೀನ್ ಮಿಚೆಲ್. ಲ್ಯೂಕ್ ಮಿಚೆಲ್ ಇಬ್ಬರು ಮಾಹಿತಿ ನೀಡಿದ್ದಾರೆ.

ಬಿಯರ್ ಕ್ರೇಜ್ ಹೆಚ್ಚುತ್ತಿದೆ
ಒಸಾಮಾ ಬಿನ್ ಲಾಗರ್ ಸೇರಿದಂತೆ ಹಲವು ಬಿಯರ್ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಸಾವಿಗಟ್ಟಲೇ ಜನರಿಂದ ಲಾಗರ್ ಬಿಯರ್‌ಗೆ ಬೇಡಿಕೆ ಬಂದಿದೆ. ಬಿಯರ್ ಕ್ರೇಜ್ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಿಂದ ಆರ್ಡರ್‌ಗೆ ಪೋನ್‌ಗಳು ಬರುತ್ತಲೇ ಇವೆ ಎಂದರು.
ಈ ಬಿಯರ್ ಹೆಸರು ಕೇಳಿದವರು ಕೆಲವರು ನಕ್ಕಿದ್ದಾರೆ. ಇನ್ನೂ ಒಂದಷ್ಟು ಜನರು ಈ ಬಿಯರ್ ಹೆಸರು ಯಾರಿಗಾದರೂ ನೋಯಿಸಬಹುದು ಎಂದು ಭಾವಿಸುತ್ತಾರೆ. ನಮಗೆ ತಿಳಿದಿರುವಂತೆ ಈವರೆಗೆ ಈ ಬಿಯರ್ ಹೆಸರಿನಿಂದ ಯಾರಿಗೂ ನೋವಾಗಿಲ್ಲ ಎಂದು ಮಾಲೀಕರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಒಸಾಮಾ ಬಿನ್ ಲಾಗರ್‌ನ ಪ್ರತಿ ಬ್ಯಾರೆಲ್ ನಲ್ಲಿನ ಬ್ರೂವರಿ ಮಾರಾಟದಲ್ಲಿ ಬರುವ ಹತ್ತು ಯುರೋಗಳನ್ನು (ಆರ್ಥಿಕ ಸಹಾಯ) ಭಯೋತ್ಪಾದಕ ದಾಳಿ ತುತ್ತಾಗಿರುವ 9/11 ಸಂತ್ರಸ್ತರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications