ವಿಡಿಯೋ: ಸಾಕು ನಾಯಿಗೆ ಸೀಮಂತ- ಬೀದಿ ಶ್ವಾನಗಳಿಗೆ ಹಬ್ಬದೂಟ
ಸಾಕು ಪ್ರಾಣಿಗಳನ್ನು ಹೆಚ್ಚಿನ ಕುಟುಂಬಗಳು ಮನೆಯ ಸದಸ್ಯರಂತೆ ಕಾಣುವುದಿದೆ. ಮನೆಯ ಇತರ ಸದಸ್ಯರಂತೆ ಸಾಕು ಪ್ರಾಣಿಗಳ ಹುಟ್ಟುಹಬ್ಬ, ಸೀಮಂತ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಮಾತ್ರವಲ್ಲದೆ ರಕ್ಷಾ ಬಂಧನದ ಹಬ್ಬದಂದು ರಾಖಿ ಕಟ್ಟಲಾಗುತ್ತದೆ. ಈ ಹಿಂದೆಯೂ ಕೂಡ ಕುಟುಂಬವೊಂದು ತಮ್ಮ ನಾಯಿಯನ್ನು ಮೆರವಣಿಗೆ ಮಾಡಿ ಅದಕ್ಕೆ ವಿಧಿವತ್ತಾಗಿ ಮದುವೆ ಮಾಡಿಸಿತ್ತು. ನಾಯಿ ಮದುವೆಯ ವಿಡಿಯೋ ವೈರಲ್ ಆದ ನಂತರ ಇದೀಗ ಮತ್ತೊಂದು ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮಹಿಳೆ ಹೆಣ್ಣು ನಾಯಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಇದೇ ಸಂಭ್ರಮದಲ್ಲಿ ಬೀದಿ ನಾಯಿಗಳಿಗೆ ಊಟ ಬಡಿಸಿದ್ದಾರೆ. ಈ ವಿಡಿಯೋ ವೈರಲ್ ಆದ ತಕ್ಷಣ ಹಲವಾರು ಶ್ವಾನ ಪ್ರೇಮಿಗಳು ಮಹಿಳೆಯನ್ನು ಶ್ಲಾಘಿಸುತ್ತಿದ್ದಾರೆ. ಇತರರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ವಿಡಿಯೋದಲ್ಲಿ ಮಹಿಳೆ ತನ್ನ ಹೆಣ್ಣು ನಾಯಿಗೆ ಸೀಮಂತ ಮಾಡಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ ನಾಯಿಗೆ ಸೀಮಂತ ಕಾರ್ಯದ ನಂತರ ಬೀದಿ ನಾಯಿಗಳಿಗೂ ಹಬ್ಬದೂಟ ಬಡಿಸಿದ್ದಾರೆ. ಮೊದಲು ಮಹಿಳೆ ನಾಯಿಗೆ ಸೀರೆ ಹೊದಿಸಿ, ಹೂವಿನ ಹಾರ ಹಾಕಿ, ಕುಂಕುಮ ಹಚ್ಚಿ, ಬಳೆಗಳನ್ನು ತೊಡಿಸುತ್ತಾರೆ. ಕುತೂಹಲಕಾರಿ ವಿಷಯ ಅಂದರೆ ಸೀಮಂತವನ್ನು ನಾಯಿ ತುಂಬಾ ಶಾಂತವಾಗಿ ಮಾಡಿಸಿಕೊಂಡಿದೆ.
'ನನ್ನ ಕ್ಯೂಟಿಗೆ ಸೀಮಂತ ಕಾರ್ಯ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಬಳಿಕ ಮಹಿಳೆ ಬೀದಿ ನಾಯಿಗೆ ಪ್ಲೇಟ್ ಸಿದ್ಧಪಡಿಸಿ ನಾಯಿಗಳಿಗೆ ಆಹಾರ ನೀಡಲು ತೆಗೆದುಕೊಂಡು ಹೋಗಿರುವುದು ಕಂಡು ಬಂದಿದೆ. ರಸ್ತೆಯ ನಾಯಿಗಳು ಬಹಳ ಸಂತೋಷದಿಂದ ತಿಂದಿವೆ.

ವಿಡಿಯೊ ವೈರಲ್ ಆದ ಬಳಿಕ 4.9 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ನವೆಂಬರ್ 20 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊ 4.9 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಈ ಬಗ್ಗೆ ಜನ ಪ್ರೀತಿಯ ಸುರಿಮಳೆ ಸುರಿಸುತ್ತಿದ್ದಾರೆ. ವಿಡಿಯೋ ನೋಡಿದ ಜನರು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ಕಂಡ ಸಂತೋಷದ ದೃಶ್ಯವಿದು. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ," ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ನಿಮ್ಮ ಆಲೋಚನೆಗಳು ಮತ್ತು ಕೆಲಸವು ಕಲ್ಪನೆಗೆ ಮೀರಿದೆ... ನಾಯಿಗಳ ಮೇಲಿನ ನಿಮ್ಮ ಪ್ರೀತಿಯನ್ನು ನಾನು ಪ್ರಶಂಸಿಸುತ್ತೇನೆ" ಎಂದು ಬರೆದಿದ್ದಾರೆ. ಮತ್ತೊಬ್ಬರು 'ನನಗೆ ನಿಮ್ಮ ನಾಯಿ ಮೇಲಿನ ಪ್ರೀತಿ ಮೆಚ್ಚುಗೆಯಾಗಿದೆ' ಎಂದು ಬರೆದಿದ್ದಾರೆ.

ಮೂರನೆಯವರು ಹೃದಯದ ಎಮೋಜಿಯೊಂದಿಗೆ "ನೀವು ನನ್ನನ್ನು ಅಳುವಂತೆ ಮಾಡಿದ್ದೀರಿ... ಬೀದಿನಾಯಿಗಳಿಗೆ ಆಹಾರ ನೀಡುವುದು ಬಹುದೊಡ್ಡ ವಿಚಾರ. ನಾನು ಇಂದು ಇಂಟರ್ನೆಟ್‌ನಲ್ಲಿ ನೋಡಿದ ಅತ್ಯುತ್ತಮ ದೃಶ್ಯವಿದು. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ" ಎಂದು ಬರೆದಿದ್ದಾರೆ.












Click it and Unblock the Notifications